Diganth: ಪ್ರಾಣವನ್ನೇ ತೆಗೆದು ಬಿಡುತ್ತೆ ಡೆಡ್ಲಿ ಸೋಮರ್ ಸಾಲ್ಟ್​​​! ಅಷ್ಟೆಲ್ಲಾ ಕಲಿತಿದ್ದ ನಟ ದಿಗಂತ್​​ ಎಡವಿದ್ದೆಲ್ಲಿ?

ಗೋವಾದ ಆಸ್ಪತ್ರೆಯೊಂದರಲ್ಲಿ ನಟ ದಿಗಂತ್​ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏರ್​ ಆ್ಯಂಬುಲೆನ್ಸ್​ ಮೂಲಕ ಏರ್​​ ಲಿಫ್ಟ್​ ಮಾಡಲಾಗಿತ್ತು. ಸೋಮರ್ ಸಾಲ್ಟ್​ ಮಾಡುವುದು ತಮಾಷೆಯ ಮಾತಲ್ಲ.

ನಟ ದಿಗಂತ್​

ನಟ ದಿಗಂತ್​

  • Share this:
ಸ್ಯಾಂಡಲ್​ವುಡ್ (Sandalwood)​ ದೂದ್​ಪೇಡ ದಿಗಂತ್ (Diganth)​​ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ. ಗೋವಾದಲ್ಲಿ ಫ್ಯಾಮಿಲಿ ಜೊತೆ ಎಂಜಾಯ್​  ಮಾಡುತ್ತಿದ್ದಾಗ ದಿಗಂತ್ ಸೋಮರ್ ಸಾಲ್ಟ್​ ಮಾಡಿದ್ದಾರೆ. ಈ ವೇಳೆ ಬಿದ್ದು ಅವರ ಕುತ್ತಿಗೆಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಕುಟುಂಬಸ್ಥರ ಜೊತೆಯಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ ನಟ ದಿಗಂತ್​ ಕುತ್ತಿಗೆಗೆ ಬಲವಾದ ಏಟನ್ನು ಮಾಡಿಕೊಂಡಿದ್ದಾರೆ. ಗೋವಾದ ಸಮುದ್ರ ತೀರದಲ್ಲಿ ಸೋಮರ್ ಸಾಲ್ಟ್ ಮಾಡುವಾಗ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ದಿಗಂತ್​ ಕತ್ತಿಗೆ ಬಲವಾದ ಏಟು ಬಿದ್ದಿರುವ ಬಗ್ಗೆ ಕುಟುಂಬಸ್ಥರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಗೋವಾದ ಆಸ್ಪತ್ರೆಯೊಂದರಲ್ಲಿ ನಟ ದಿಗಂತ್​ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏರ್​ ಆ್ಯಂಬುಲೆನ್ಸ್​ ಮೂಲಕ ಏರ್​​ ಲಿಫ್ಟ್​ ಮಾಡಲಾಗಿತ್ತು. ಸೋಮರ್ ಸಾಲ್ಟ್​ ಮಾಡುವುದು ತಮಾಷೆಯ ಮಾತಲ್ಲ.

ಪ್ರಾಣವನ್ನೇ ತೆಗೆದುಬಿಡುತ್ತೆ ಡೆಡ್ಲಿ ಸೋಮರ್ ಸಾಲ್ಟ್​!

ಸರಿಯಾಗಿ ಸೋಮರ್ ಸಾಲ್ಟ್ ​​ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದನ್ನು ಎಲ್ಲೆಂದೆರಲ್ಲಿ ಮಾಡುವುದು ನಿಜಕ್ಕೂ ಡೇಂಜರ್​​. ಅದರಲ್ಲೂ ಎಲ್ಲಾ ಚೆನ್ನಾಗಿ ಕಲಿತಿದ್ದ ದಿಗಂತ್​ ಅವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋವಾ ಟ್ರಿಪ್​ಗೆ ತೆರಳಿದ್ದು. ಇಲ್ಲಿ ಸಮುದ್ರ ತೀರದಲ್ಲಿಸೋಮರ್ ಸಾಲ್ಟ್​ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ . ಒಂದೇ ಒಂದು ಚೂರು ಕೂಡ ಎಡವಿದರು  ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾಣಕ್ಕೆ ಕುತ್ತು ತರುತ್ತೆ ಈ ಸೋಮರ್ ಸಾಲ್ಟ್​ ಈ ಹಿಂದೆ ಸೋಮರ್ ಸಾಲ್ಟ್ ಮಾಡಲು ಹೋದ ಯುವಕನೊಬ್ಬ ಮೃತಪಟ್ಟಿದ್ದ.

2019 ಜೂನ್​ 20ರಂದು ಯುವಕ ಸಾವು!

ಟಿಕ್​ಟಾಕ್​ ಗಿಳಿಗೆ ಬಿದ್ದಿದ್ದ ರಾಜ್ಯದ ಯುವಕನೊಬ್ಬ ಇದೇ ರೀತಿ ಸೋಮರ್ ಸಾಲ್ಟ್​ ಮಾಡಲು ಹೋಗಿ ಪ್ರಾಣ ಬಿಟ್ಟಿದ್ದ. ಕರ್ನಾಟಕದ ವ್ಯಕ್ತಿಯೊಬ್ಬ ಜಂಪಿಂಗ್ ಸಮಯದಲ್ಲಿ ಸಮತೋಲನ ಕಳೆದುಕೊಂಡಿದ್ದರಿಂದ ಕುತ್ತಿಗೆಗೆ ಪೆಟ್ಟು ಬಿದ್ದು ಪ್ರಾಣ ಬಿಟ್ಟಿದ್ದ. ಬೆನ್ನು ಹುರಿ ಮುರಿದು ಪ್ರಾಣಬಿಟ್ಟಿದ್ದ. ಈಗ ಅದೇ ರೀತಿಯ ಪೆಟ್ಟು ಬಿದ್ದಿದೆ. ನಟ ದಿಗಂತ್​ಗೂ ಸ್ಪೈನಲ್​ ಕಾರ್ಡ್​ಗೆ ಇಂಜುರಿಯಾಗಿದೆ. ಅಪರೇಷನ್​ ಮಾಡಲೇಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ನಟ ದಿಗಂತ್​ಗೆ ಗಂಭೀರ ಪೆಟ್ಟು; ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?

ಈ ಹಿಂದೆ ಕಣ್ಣಿಗೂ ಹಾನಿ ಮಾಡಿಕೊಂಡಿದ್ದ ದಿಗಂತ್​!

ಕೆಲವು  ವರ್ಷಗಳ ಹಿಂದೆ ವಿದೇಶದಲ್ಲಿ ದಿಗಂತ್ ಚಿತ್ರವೊಂದರ ಚಿತ್ರೀಕರಣ ನಡೆಸುವಾಗ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣೊಂದಕ್ಕೆ ಹಾನಿಯಾಗಿತ್ತು. ಸ್ವತಃ ದಿಗಂತ್ ಅವರೇ ಈ ಘಟನೆಯನ್ನು ತಿಳಿಸಿದ್ದರು. ಕಣ್ಣಿಗೆ ಬಿದ್ದ ಗಾಯ ದಿಗಂತ್ ವೃತ್ತಿ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು. ಬಾಲಿವುಡ್‌ನಲ್ಲಿ ದೊಡ್ಡ ಕನಸುಗಳನ್ನು ಹೊಂದಿದ್ದ ನಟನಿಗೆ ಬಿಟೌನ್ ಬಾಗಿಲು ಮುಚ್ಚುವಂತಾಯಿತು. ದಿಗಂತ್ ಕಣ್ಣು ಕಳೆದುಕೊಂಡು ಬಿಟ್ಟರು, ಅವರ ಬಲಗಣ್ಣು ಕಾಣುವುದಿಲ್ಲ ಎನ್ನುವ ಮಟ್ಟಿಗೆ ಆತಂಕ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ದಿಗಂತ್ ಕಣ್ಣಿಗೆ ಏನಾಗಿತ್ತು? ದಿಗಂತ್​​ಗೆ ಅಪಾಯಗಳು ಬರುತ್ತಲೆ ಇವೆ ಏಕೆ?

'ವೆಡ್ಡಿಂಗ್ ಪುಲಾವ್' ಎಂಬ ಹಿಂದಿ ಚಿತ್ರದ ಬಳಿಕ ದಿಗಂತ್ ಕೈಗೆತ್ತಿಕೊಂಡು ಇನ್ನೊಂದು ಸಿನಿಮಾ 'ಟಿಕೆಟ್ ಟು ಬಾಲಿವುಡ್'. ಈ ಚಿತ್ರದ ಶೂಟಿಂಗ್ ವೇಳೆ ನಾಯಕಿ ಎಸೆದ ಚೂರಿ ದಿಗಂತ್ ಕಣ್ಣಿಗೆ ಬಿದ್ದ ಪರಿಣಾಮ ದೃಷ್ಟಿ ಕಳೆದುಕೊಂಡರು ಎಂಬ ಸುದ್ದಿ ಹೊರಬಿದ್ದಿತ್ತು. ಇದಾದ ನಂತರ ನಟ ದಿಗಂತ್​ ಅವರ ಒಂದು ಕಣ್ಣಿನ ದೃಷ್ಟಿ ಕಡಿಮೆಯಾಗಿದೆಯಂತೆ
Published by:Vasudeva M
First published: