Vikram Movie: ವಿಶೇಷಚೇತನ ಹುಡುಗ ವಿಕ್ರಮ್ ಚಿತ್ರದ 'ಪಾತಾಳ ಪಾತಾಳ' ಹಾಡನ್ನು ಹೇಗೆ ಹಾಡಿದ್ದಾನೆ ನೋಡಿ!

'ಪಾತಾಳ ಪಾತಾಳ' ಹಾಡು ಒಂದು ಒಳ್ಳೆಯ ಕಾರಣದಿಂದ ಸುದ್ದಿಯಲ್ಲಿದೆ ಎಂದು ಹೇಳಬಹುದು. ಏನಪ್ಪಾ ಅದು ಒಳ್ಳೆಯ ಕಾರಣ ಅಂತ ನೀವು ಕೇಳಬಹುದು. ಇಲ್ಲೊಬ್ಬ ವಿಕಲಚೇತನ ಹುಡುಗ ನೀರು ತರುವ ಪ್ಲಾಸ್ಟಿಕ್ ಬಿಂದಿಗೆಯ ಮೇಲೆ ತನ್ನ ಕೈಗಳಿಂದ ಬೀಟ್ ಗಳನ್ನು ಹಾಕುತ್ತಾ ಈ ಹಾಡನ್ನು ಹಾಡಿದ್ದಾನೆ ನೋಡಿ.

ಪಾತಾಳ ಪಾತಾಳ ಹಾಡನ್ನು ಹಾಡಿದ ವ್ಯಕ್ತಿ

ಪಾತಾಳ ಪಾತಾಳ ಹಾಡನ್ನು ಹಾಡಿದ ವ್ಯಕ್ತಿ

  • Share this:
ತಮಿಳಿನ ಖ್ಯಾತ ನಟರಾದ ಕಮಲ್ ಹಾಸನ್ (Kamal Haasan) ಅವರ ಚಿತ್ರದ ಹಾಡುಗಳು ಎಂದರೆ ಮೊದಲಿನಿಂದಲೂ ತುಂಬಾನೇ ಫೇಮಸ್ ಎಂದು ಹೇಳಿದರೆ ತಪ್ಪಾಗಲ್ಲ. ಏಕೆಂದರೆ ಕಮಲ್ ಅಭಿನಯದ ಅನೇಕ ಚಿತ್ರಗಳಲ್ಲಿ (Movie) ಅನೇಕ ಹಾಡುಗಳು ತುಂಬಾನೇ ದೊಡ್ಡ ಮಟ್ಟದ ಹಿಟ್ ಆಗಿದ್ದನ್ನು ಮತ್ತು ಜನರು ಆ ಹಾಡುಗಳ ಸಂಗೀತವನ್ನು (Song) ಬಾಯಲ್ಲಿ ಹೇಳುವುದನ್ನು ನಾವು ನೋಡುತ್ತೇವೆ. ಇತ್ತೀಚಿಗಷ್ಟೇ ದೇಶಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ (Box Office) ಭಾರಿ ಹಣ ಗಳಿಸುತ್ತಿರುವ ವಿಕ್ರಮ್ (Vikram) ಚಿತ್ರದಲ್ಲಿನ ಒಂದು ಹಾಡು ಮಾತ್ರ ತುಂಬಾನೇ ಸುದ್ದಿ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಮೇ ತಿಂಗಳಲ್ಲಿ ಈ ಚಿತ್ರದಲ್ಲಿ ‘ಪಾತಾಳ ಪಾತಾಳ’ ಹಾಡನ್ನು ಬರೆದಿರುವ ನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿ ಸುದ್ದಿಯಾಗಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ.

ಭಾರಿ ಸುದ್ದಿಯಲ್ಲಿರುವ ವಿಕ್ರಮ್ ಸಿನೆಮಾದ 'ಪಾತಾಳ ಪಾತಾಳ' ಹಾಡು
'ಪಾತಾಳ ಪಾತಾಳ' ಎನ್ನುವ ಹಾಡಿನ ಸಾಹಿತ್ಯದಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ಅವರ ವಿರುದ್ಧ ದೂರು ದಾಖಲು ಮಾಡಿದ್ದರು. ಆದರೆ ಇದೀಗ ಈ ಹಾಡು ಒಂದು ಒಳ್ಳೆಯ ಕಾರಣದಿಂದ ಸುದ್ದಿಯಲ್ಲಿದೆ ಎಂದು ಹೇಳಬಹುದು. ಏನಪ್ಪಾ ಅದು ಒಳ್ಳೆಯ ಕಾರಣ ಅಂತ ನೀವು ಕೇಳಬಹುದು.

ಇದನ್ನೂ ಓದಿ: Viral Video: ಮಹಿಳೆ ಮೇಲೆ ಆನೆ ಮರಿ ದಾಳಿ! ಮುಂದೇನಾಯ್ತು?

ಇಲ್ಲೊಬ್ಬ ವಿಕಲಚೇತನ ಹುಡುಗ ನೀರು ತರುವ ಪ್ಲಾಸ್ಟಿಕ್ ಬಿಂದಿಗೆಯ ಮೇಲೆ ತನ್ನ ಕೈಗಳಿಂದ ಬೀಟ್‍ಗಳನ್ನು ಹಾಕುತ್ತಾ ಈ ಹಾಡನ್ನು ಹಾಡಿದ್ದಾನೆ ನೋಡಿ. ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಸಹ ನಟಿಸಿದ್ದಾರೆ. ತಮಿಳಿನ ವಿಕ್ರಮ್ ಚಿತ್ರದ 'ಪಾತಾಳ ಪಾತಾಳ' ಹಾಡು ಬಿಡುಗಡೆಯಾದಾಗಿನಿಂದಲೂ ಸಿನಿಪ್ರೇಮಿಗಳು ಮತ್ತು ಸಂಗೀತ ಪ್ರೇಮಿಗಳ ಹೃದಯವನ್ನು ಬಡಿದೆಬ್ಬಿಸಿದೆ. ಈಗ, ವಿಕಲಚೇತನ ವ್ಯಕ್ತಿಯ ಹಾಡಿನ ನಿರೂಪಣೆಯು ಸೋಷಿಯಲ್ ಮೀಡಿಯಾನಲ್ಲಿಯೂ ಕೂಡಾ ಜನರ ಹೃದಯಗಳನ್ನು ಗೆದ್ದಿದೆ ಎಂದು ಹೇಳಬಹುದು.

ವಿಡಿಯೋದಲ್ಲಿ ಏನಿದೆ?
ನಟ ಕಮಲ್ ಹಾಸನ್ ಅವರ ಅಭಿಮಾನಿಗಳ ಪುಟವಾದ ‘ಕಮಲ್ ಹಾಸನ್ ಟೀಮ್ ಆನ್‌ಲೈನ್‌’ ನಲ್ಲಿ ಈ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಒಂದು ನಿಮಿಷದ ಅವಧಿಯ ಈ ಕ್ಲಿಪ್‍ನಲ್ಲಿ ವ್ಯಕ್ತಿಯೊಬ್ಬ ಈ ಹಾಡನ್ನು ತುಂಬಾನೇ ಭಾವಪೂರ್ಣವಾಗಿ ಹಾಡುತ್ತಿರುವುದನ್ನು ನೋಡಬಹುದು. ತೆಂಗಿನ ಮರಗಳ ಹಿನ್ನೆಲೆಯಲ್ಲಿ ಹಚ್ಚ ಹಸಿರಿನ ಮೈದಾನದಲ್ಲಿ ಕುಳಿತು ಅದ್ಭುತವಾದ ಬೀಟ್‌ಗಳನ್ನು ಬಾರಿಸಲು ಪ್ಲಾಸ್ಟಿಕ್ ಬಿಂದಿಗೆಯನ್ನು ಸಹ ಬಳಸಿರುವುದನ್ನು ನಾವು ಇದರಲ್ಲಿ ನೋಡಬಹುದಾಗಿದೆ.

ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ
ಈ ಕ್ಲಿಪ್ ಅನ್ನು ಸೋಮವಾರ ಟ್ವಿಟ್ಟರ್‍‍ನಲ್ಲಿ ಹಂಚಿಕೊಂಡಾಗಿನಿಂದಲೂ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಇದು ಗಳಿಸಿದೆ.

ಇದನ್ನೂ ಓದಿ: Vikrant Rona: ಸ್ಯಾಂಡಲ್​ವುಡ್​ ಸ್ಟಾರ್ಸ್ ಜೊತೆ ಸೊಂಟ ಬಳುಕಿಸಿದ ರಕ್ಕಮ್ಮ​! ಕ್ರೇಜಿಸ್ಟಾರ್, ಶಿವಣ್ಣ ಸ್ಟೆಪ್ಸ್​ ಮಾತ್ರ ಟಾಪ್​ ಕ್ಲಾಸ್​

ಈ ಕ್ಲಿಪ್‍ನಲ್ಲಿ ಹಾಡನ್ನು ಹಾಡಿನ ವ್ಯಕ್ತಿಯ ಆ ಸಂಗೀತ ಸಂಯೋಜನೆ ಮತ್ತು ಹಾಡು ಆನ್‌ಲೈನ್‌ನಲ್ಲಿ ಅನೇಕರ ಮನಸ್ಸನ್ನು ಗೆದ್ದಿದೆ ಎಂದು ಹೇಳಬಹುದು. ಕಮಲ್ ಅವರನ್ನು ಟ್ಯಾಗ್ ಮಾಡುವಾಗ ಅನೇಕರು ಆ ವ್ಯಕ್ತಿಯನ್ನು ತುಂಬಾನೇ ಹೊಗಳಿದ್ದಾರೆ. "ವಾವ್ ಅದ್ಭುತ ಪ್ರತಿಭೆ. ಒಳ್ಳೆಯ ಮನರಂಜನೆಯಾಗಿದೆ ಇದು" ಅಂತ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿ ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಅವರು ಇನ್‌ಸ್ಟಾದಲ್ಲಿ ಇದ್ದಾರೆಯೇ? ಎಂತಹ ಪ್ರತಿಭೆ ಇವರದು. ಒಂದೆರಡು ವರ್ಷಗಳ ಹಿಂದೆ ಇವರು ಯೆನ್ನೈ ಮಾಟ್ರುಮ್ ಕಾದಲೇ  ಎಂಬ ಹಾಡನ್ನು ಹಾಡಿದ್ದು ನನಗೆ ಇನ್ನೂ ಚೆನ್ನಾಗಿಯೇ ನೆನಪಿದೆ” ಎಂದು ಕಾಮೆಂಟ್ ಮಾಡಿದ್ದಾರೆ.‘ಪಾತಾಳ ಪಾತಾಳ’ ಹಾಡು ಒಂದು ಜಾನಪದ ಶೈಲಿಯಲ್ಲಿ ಹಾಡಿದ್ದು, ಖುದ್ದು ಕಮಲ್ ಅವರೇ ಇದನ್ನು ಬರೆದು ವಿಕ್ರಮ್ ಸಿನಿಮಾದಲ್ಲಿ ಅವರೇ ಹಾಡಿದ್ದಾರೆ. ಇದು ‘ಮದ್ರಾಸ್’ ನ ಆಡುಭಾಷೆಯ ಮೇಲೆ ಕಮಲ್ ಅವರಿಗಿರುವ ಹಿಡಿತವನ್ನು ತೋರಿಸುತ್ತದೆ. ವಿಕ್ರಮ್ ಚಿತ್ರವು ಬಿಡುಗಡೆಯಾದ ಮೂರನೇ ವಾರದಲ್ಲಿಯೇ ತಮಿಳುನಾಡಿನಲ್ಲಿ ಅತಿದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ.
Published by:Ashwini Prabhu
First published: