ಕೆಲವರು ಸಿನಿಮಾ ನಟರನ್ನು ದೇವರಂತೆ ಆರಾಧಿಸುತ್ತಾರೆ. ಇನ್ನು ಕೆಲವರು ಅವರನ್ನು ಜೀವನದಲ್ಲಿ ಒಮ್ಮೆ ಭೇಟಿ ಮಾಡಬೇಕು, ಸಣ್ಣ ವಿಶ್ ಆದ್ರೂ ಮಾಡಬೇಕು ಎಂದು ಹಪಹಪಿಸುತ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ನಟ-ನಟಿಯರ ಹುಟ್ಟುಹಬ್ಬವನ್ನು ತಮ್ಮ ಹುಟ್ಟುಹಬ್ಬವೆಂಬಂತೆ ಅವರ ಹೆಸರಿನಲ್ಲಿ ಕೇಕ್ ಕತ್ತರಿಸಿ, ಕಟೌಟ್‍ಗೆ ಹಾರ ಹಾಕಿ ಸಂಭ್ರಮಿಸುತ್ತಾರೆ. ಹೌದು ಇಂತಹ ಅಭಿಮಾನಿಗಳ ಅಭಿಮಾನಕ್ಕೆ ಎಂತಹ ನಟರಾದರೂ ಸೋಲಲೇಬೇಕು. ಇನ್ನು ಹಲವರು ತಮ್ಮ ಕಷ್ಟವನ್ನು ಮಾನವೀಯ ಹೃದಯ ಹೊಂದಿರುವ ನಟರ ಮುಂದೆ ಹೇಳಿಕೊಂಡರೆ ಸಮಾಧಾನ ಸಿಗಬಹುದು ಎಂಬ ದೃಷ್ಟಿಯಿಂದ ನೋಡುತ್ತಾ, ಒಬ್ಬ ನಟ ನಟಿಯನ್ನು ತಮ್ಮ ಮನೆಯ ಸದಸ್ಯರಂತೆ ಕಾಣುತ್ತಾರೆ.
ಕೇರಳದ ತ್ರಿಶೂರ್ ಮೂಲದ ವೃದ್ಧೆಯೊಬ್ಬರು ಮಲಯಾಳಂನ ಖ್ಯಾತ ನಟ ಮೋಹನ್‍ಲಾಲ್ (Mohan Lal) ಅವರ ಅಭಿಮಾನಿ. ಫ್ಯಾನ್ ಆಗಿ ನೆಚ್ಚಿನ ನಟನನ್ನು ಭೇಟಿಯಾಗುವಂತೆ ಮನವಿ ಮಾಡುತ್ತಾ ಕಣ್ಣೀರಿಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಮೋಹನ್ ಲಾಲ್ ಫ್ಯಾನ್ ಕ್ಲಬ್ ಮೂಲಕ ಮೋಹನ್ ಲಾಲ್‌ರನ್ನು ತಲುಪಿದ್ದೇ ತಡ, ಸಾಧ್ಯವಾದಷ್ಟು ಬೇಗ ಕೋವಿಡ್ ಕಡಿಮೆಯಾಗುತ್ತಲೇ ಬಂದು ಆ ಮಹಿಳೆಯನ್ನು ಕಾಣುವ ಭರವಸೆ ನೀಡಿದ್ದಾರೆ.
This is why @Mohanlal is the most successful man and most loved malayali.
He is living in the heart of millions of Mother's Like RUKMINI AMMA.
And this how he responds and care those Mothers ❤️
Paid writers u can't destroy the love of Malayalis towards this MAN ❤️#Mohanlal 🙏 pic.twitter.com/lVJZp4XQQz
— Mohanlal Fans Club (@MohanlalMFC) September 20, 2021
ಇದನ್ನೂ ಓದಿ: ಮಲಯಾಳಂ ಸೂಪರ್‌ಸ್ಟಾರ್ 70ರ ಹರೆಯದ Mohan Lal ವರ್ಕೌಟ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು
ರುಕ್ಮಿಣಿ ಮಾಮಿ ಟಿವಿಯಲ್ಲಿ ಪ್ರಸಾರವಾಗುವ ಮೋಹನ್‍ಲಾಲ್ ಸಿನಿಮಾಗಳನ್ನು ತಪ್ಪದೇ ವೀಕ್ಷಿಸುತ್ತಾರೆ. ಸಾದ್ಯವಾದಷ್ಟು ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡಿರುವುದು ರುಕ್ಮಿಣಿ ಮಾಮಿಯ ವಿಶೇಷ. ಕೋವಿಡ್ ನಂತರ ಮಾತ್ರ ಸಿನಿಮಾಗಳನ್ನು ಟಿವಿಗಳಲ್ಲಿ ನೋಡುತ್ತಿದ್ದಾರೆ.
ಒಂದು ಭುಜ ಸ್ಪಲ್ಪ ಇಳಿಮುಖವಾಗಿರುವಂತೆ ನಡೆಯುವ ಮೋಹನ್ ಲಾಲ್ ಅವರ ಟ್ರೇಡ್ ಮಾರ್ಕ್ ನಡಿಗೆಯನ್ನು ಈ ವಯೋವೃದ್ಧೆ ಅನುಕರಿಸುತ್ತಾರೆ. ಜೊತೆಗೆ ಅವರ ಸುಪ್ರಸಿದ್ಧ ಚಿತ್ರದ ಸಂಭಾಷಣೆಗಳನ್ನು ಅವರಂತೆಯೇ ಹೇಳುತ್ತಾರೆ. ಆಗಾಗ್ಗೆ ಮೋಹನ್ ಲಾಲ್‌ನ ಪ್ರಸಿದ್ಧ ಸಾಲು 'ನೀ ಪೊ ಮೊನೆ ದಿನೇಶ' ಅನ್ನು ಅನುಕರಿಸುತ್ತಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ತನ್ನ ನೆರೆಹೊರೆಯವರು ಆಶ್ಚರ್ಯಪಡುವಂತೆ ನಟನ 1990 ರ ಅಯೆ ಆಟೋ ಚಲನಚಿತ್ರವಾದ 'ಸುಂದರಿ ಸುಂದರಿ' ಹಾಡನ್ನು ಕೂಡ ಹಾಡುತ್ತಾರೆ.
ಒಂದೇ ಒಂದು ಆಸೆ
ರುಕ್ಮಿಣಿ ಮಾಮಿಯವರ ಒಂದೇ ಒಂದು ಆಸೆ ಎಂದರೆ ತಮ್ಮ ನೆಚ್ಚಿನ ನಟ ಮೋಹನ್ ಲಾಲ್‌ರನ್ನು ನೇರವಾಗಿ ಭೇಟಿ ಮಾಡಿ ಮಾತನಾಡುವುದು. ಇವರು ವ್ಲಾಗರ್ ಜೊಬಿ ಚುಮಣ್ಣಮನ್ನು ಸಹಾಯದಿಂದ, ಮೋಹನ್ ಲಾಲ್ ಅವರನ್ನು ಭೇಟಿಯಾಗಲು ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಪ್ರಯತ್ನಿಸಿದ್ದರು. ತನ್ನನ್ನು ಭೇಟಿ ಮಾಡಲು ನಟನಿಗೆ ಕಣ್ಣೀರು ಸುರಿಸುತ್ತಾ ವಿನಂತಿಸುವ ವಿಡಿಯೋವೈರಲ್ ಆಗಿದೆ. ಇದು ಅಭಿಮಾನಿಗಳ ಸಂಘದ ಮೂಲಕ ಸ್ವತಃ ನಟನಿಗೆ ತಲುಪಿತು.
ಇದನ್ನೂ ಓದಿ: ನಟ ಮೋಹನ್‍ಲಾಲ್ ನೀಡಿದ್ದ ಫಿಟ್ನೆಸ್ ಸವಾಲನ್ನು ಸ್ವೀಕರಿಸಿದ ಜೂನಿಯರ್ ಎನ್ಟಿಆರ್
"ಕೋವಿಡ್ -19 ಸನ್ನಿವೇಶ ಮುಗಿದ ನಂತರ ಮೋಹನ್ ಲಾಲ್ ನನ್ನನ್ನು ಭೇಟಿ ಮಾಡುವ ಭರವಸೆ ನೀಡಿದ್ದಾರೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ ರುಕ್ಮಿಣಿ ಮಾಮಿ. ದೇವಸ್ಥಾನದ ಅರ್ಚಕರಾಗಿದ್ದ ಆಕೆಯ ಪತಿ ಒಂದೆರಡು ವರ್ಷಗಳ ಹಿಂದೆ ನಿಧನರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ