Vidya Balan: ಈ ಸಿನಿಮಾಗಾಗಿ ಒಂದಲ್ಲಾ 75 ಬಾರಿ ರಿಜೆಕ್ಟ್​ ಆಗಿದ್ದರಂತೆ ವಿದ್ಯಾ ಬಾಲನ್​!

Vidya Balan: ನಟಿ ವಿದ್ಯಾ ಬಾಲನ್​​  ‘ಪರಿಣಿತಾ’ ಸಿನಿಮಾದ ನಾಯಕಿ ಪಾತ್ರಕ್ಕೆ ಆಡಿಷನ್​ ನೀಡಿದಾಗ 75 ಬಾರಿ ರಿಜೆಕ್ಟ್​ ಆಗಿದ್ದರಂತೆ. ಆದರೆ  ಛಲಬಿಡದ ಪ್ರಯತ್ನದಿಂದ ಕೊನೆಗೊ ಅವರೇ ಆಯ್ಕೆಯಾಗಿದ್ದಾರೆ. ‘ಪರಿಣಿತಾ’ ಸಿನಿಮಾ ವಿದ್ಯಾ ಬಾಲನ್​ ಅವರ ಜೀವನಕ್ಕೆ ತಿರುವು ಕೊಟ್ಟ ಸಿನಿಮಾವಾಗಿದೆ.

ವಿದ್ಯಾ ಬಾಲನ್

ವಿದ್ಯಾ ಬಾಲನ್

 • Share this:
  ಸಿನಿಮಾ ಅಂದಮೇಲೆ ನಿರ್ದೇಶಕ ಆ ಚಿತ್ರಕ್ಕೆ ಸರಿಯಾದ ನಟಿಯನ್ನು ಆಯ್ಕೆ ಮಾಡುತ್ತಾರೆ. ಪಾತ್ರಕ್ಕೆ ಸರಿ ಹೊಂದುವ ನಟಿಯರನ್ನು ಆಯ್ಕೆ ಮಾಡುವ ಸಮಯಲ್ಲಿ ಆಡಿಷನ್​ ಕೂಡ ಮಾಡುತ್ತಾರೆ. ಆದರೆ ಬಾಲಿವುಡ್​​ ನಟಿ ವಿದ್ಯಾ ಬಾಲನ್​ ಒಂದೇ ಚಿತ್ರಕ್ಕೆ 75 ಬಾರಿ ಆಡಿಷನ್​ ನೀಡಿದ್ದಾರೆ. ಅಷ್ಟೇ ಅಲ್ಲ, 75 ಬಾರಿ ಕೂಡ ರಿಜೆಕ್ಟ್​ ಆಗಿ ಕೊನೆಗೆ ಅವರೇ ಆಯ್ಕೆಯಾದರು! 

  ‘ಪರಿಣಿತಾ’ ಸಿನಿಮಾದ ನಾಯಕಿ ಪಾತ್ರಕ್ಕೆ ವಿದ್ಯಾ ಬಾಲನ್​ ಆಡಿಷನ್​ ನೀಡಿದಾಗ 75 ಬಾರಿ ರಿಜೆಕ್ಟ್​ ಆಗಿದ್ದರು. ಆದರೆ  ಛಲಬಿಡದ ಪ್ರಯತ್ನದಿಂದ ಕೊನೆಗೊ ಅವರೇ ಆಯ್ಕೆಯಾಗಿದ್ದಾರೆ. ‘ಪರಿಣಿತಾ’ ಸಿನಿಮಾ ವಿದ್ಯಾ ಬಾಲನ್​ ಅವರ ಜೀವನಕ್ಕೆ ತಿರುವು ಕೊಟ್ಟ ಸಿನಿಮಾವಾಗಿದೆ. ಅಂದಹಾಗೆ, ಈ ಸಿನಿಮಾ ಪ್ರದೀಪ್​​ ಸರ್ಕಾರ್​​ ನಿರ್ದೇಶನದಲ್ಲಿ ಮೂಡಿಬಂದಿತ್ತು.

  ಕಿರುತೆರೆಯಲ್ಲಿ ಸಣ್ಣ –ಪುಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದ ವಿದ್ಯಾ ಬಾಲನ್​​ ‘ಪರಿಣಿತಾ’ ಸಿನಿಮಾದ ನಂತರ ಬಾಲಿವುಡ್​ನಲ್ಲಿ ಸ್ಟಾರ್​​ ನಟಿಯಾಗಿ ಬೆಳೆದರು. ಇವರ ನಟನೆ ಬಾಲಿವುಡ್​ ಸಿನಿ ರಸಿಕರನ್ನು ಹುಚ್ಚೆಬ್ಬಿಸುವಂತೆ ಮಾಡಿತ್ತು. ಆದರೆ ಈ ಸಿನಿಮಾ ಆಡಿಷನ್​ಗೆ​ ಮಾತ್ರ ವಿದ್ಯಾ ಬಾಲನ್​ ಕಷ್ಟ ಪಟ್ಟಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೀಗ ಈ ವಿಚಾರ ಹೊರಬಿದ್ದಿದೆ.

  ‘ಪರಿಣಿತಾ’ ಸಿನಿಮಾದ ಸಂಗೀತ ನಿರ್ದೇಶ ಶಂತನು ಮೊಯೇತ್ರಾ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಪರಿಣಿತಾ’ ಚಿತ್ರಕ್ಕೆ ಆಡಿಷನ್​ ನಡೆಯುತ್ತಿದ್ದವು. ವಿದ್ಯಾ ಕೂಡ ಆಡಿಷನ್​ಗೆ ಭಾಗವಹಿಸಿದ್ದರು. ಪ್ರತಿ ಬಾರಿ ಏನಾದರೊಂದು ಸಣ್ಣ ತಪ್ಪಿನಿಂದ ರಿಜೆಕ್ಟ್​​ ಆಗುತ್ತಿದ್ದರು. ಆದರೆ ಪ್ರತಿ ಬಾರಿ ಪ್ರಯತ್ನ ಪಡುತ್ತಲೇ ಇರುತ್ತಿದ್ದರು.

  ನನಗಿನ್ನೂ ನೆನೆಪಿದೆ. ಅಂದು ಮುಂಬೈನಲ್ಲಿ ಬ್ರಿಯಾನ್​​ ಆ್ಯಡಮ್ಸ್​​​ ಅವರ ಕಾನ್ಸರ್ಟ್​ ಇತ್ತು. ಆ ಶೋಗೆ ವಿದ್ಯಾ ಬಾಲನ್​ ಹೋಗಬೇಕಿತ್ತು. ಆದಕ್ಕೂ ಮುನ್ನ ಇನ್ನೊಂದು ಬಾರಿ ಪ್ರಯತ್ನಿಸು ಎಂದು ನಿರ್ದೇಶಕ ಪ್ರದೀಪ್​ ಸರ್ಕಾರ್​​ ಹೇಳಿದ್ದರು. ಅದರಂತೆ ವಿದ್ಯಾ ಬಾಲನ್​ ಆಡಿಷನ್​ ನೀಡಿ 3.30ಕ್ಕೆ ಹೊರಟು ಹೋದರು. ಅವರು ಹೋದ ನಂತರ ನಾನು ಪ್ರದೀಪ್​​​​ ಆ ವಿಡಿಯೋ ನೋಡುತ್ತಾ ಕುಳಿತೆವು. ಆದರಲ್ಲಿ ಒಂದು ಎಕ್ಸ್​​ಪ್ರೆಶನ್​ ಪ್ರದೀಪ್​ಗೆ ಇಷ್ಟವಾಯಿತು. ಕೊನೆಗೆ ‘ಪರಿಣಿತಾ’ ಸಿಕ್ಕಳು ಎಂದು ಪ್ರದೀಪ್​​ ಖುಷಿಯಾದರು. ನಂತರ ಈ ವಿಚಾರವನ್ನು ವಿದ್ಯಾ ಬಾಲನ್​ಗೆ ತಿಳಿಸಲಾಯಿತು. ಈ ವಿಚಾರ ತಿಳಿದು ವಿದ್ಯಾ ಬಾಲನ್​ ಅತ್ತಿದ್ದರಂತೆ. ಸುಮಾರು 75 ಬಾರಿ ಅಡಿಷನ್ ನೀಡಿ ರಿಜೆಕ್ಟ್​ ಆಗಿದ್ದ ವಿದ್ಯಾ ಛಲಬಿಡದೆ ಕೊನೆಯ ಆಡಿಷನ್​ನಲ್ಲಿ ನಿರ್ದೇಶಕರ ಮನಗೆದ್ದರು ಎಂದು ಸಂಗೀತ ನಿರ್ದೇಶಕ ಶಂತನು ಸಂರ್ದನದಲ್ಲಿ ಹೇಳಿದ್ದಾರೆ.
  First published: