Actress Tabu: ಸ್ಟಾರ್ ನಟಿಯ ಸೀಕ್ರೆಟ್ ರಿವೀಲ್, ಹಿರಿಯ ನಟಿ ಶಬಾನಾ ಅಜ್ಮಿಯ ಸಂಬಂಧಿಯಾ ಟಬು?

ಬಾಲಿವುಡ್ ನಟಿ ಟಬು

ಬಾಲಿವುಡ್ ನಟಿ ಟಬು

Actress Tabu: ಟಬು ಹಿರಿಯ ನಟಿ ಶಬಾನಾ ಅಜ್ಮಿ ಅವರ ಸೋದರ ಸೊಸೆ ಅನ್ನೋ ವಿಷಯ ಕೇಳಿ ಅನೇಕರಿಗೆ ನಂಬಲು ಅಸಾಧ್ಯವಾಗಿರಬಹುದು. ಟಬು ಅವರ ತಾಯಿ ರಿಜ್ವಾನಾ ಅವರು ಶಬಾನಾ ಅವರ ಸೋದರ ಸಂಬಂಧಿ.

  • Trending Desk
  • 3-MIN READ
  • Last Updated :
  • Bangalore, India
  • Share this:

ಎಷ್ಟೋ ಬಾರಿ ಈ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುವ ನಟ ಮತ್ತು ನಟಿಯರು (Actress) ಹಿರಿಯ ನಟ-ನಟಿಯರ (Actor-actress) ಸಹೋದರ ಸಂಬಂಧಿಗಳ ಮಕ್ಕಳಾಗಿರುತ್ತಾರೆ ಅಥವಾ ಅವರ ದೂರದ ಸಂಬಂಧಿಕರು ಆಗಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ನಟ-ನಟಿಯರಿಗೆ ಬಹುತೇಕರಿಗೆ ಚಿತ್ರೋದ್ಯಮದಲ್ಲಿ (Movie Industry) ಒಬ್ಬರು ಗಾಡ್ ಫಾದರ್ ಅಂತ ಇದ್ದೆ ಇರುತ್ತಾರೆ ನೋಡಿ. ಭಾರತೀಯ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ (Actress) ಒಬ್ಬರಾದ ಟಬು (Tabu) ಅವರು ಹಿರಿಯ ನಟಿ ಶಬಾನಾ ಅಜ್ಮಿ ಅವರ ಸೋದರ ಸೊಸೆ ಅಂತೆ. ಟಬು ಅವರಿಗೆ ಈಗ 51 ವರ್ಷ ವಯಸ್ಸಾಗಿದೆ, ಆದರೂ ಸಹ ಇವರು ಈಗಲೂ ತಮ್ಮ ನಟನೆಯಿಂದ ಪ್ರಖ್ಯಾತರಾಗಿದ್ದು ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ.


ಇನ್ನೊಬ್ಬ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದಂತೆ, ಹೆಚ್ಚು ಬೇಡಿಕೆಯ ನಟಿಯರಲ್ಲಿ ಒಬ್ಬರಾದ ಟಬು ಕಳೆದ ವರ್ಷ ‘ಭೂಲ್ ಭುಲೈಯಾ 2’ ಮತ್ತು ‘ದೃಶ್ಯಂ 2’ ನಂತಹ ಹಿಟ್ ಚಿತ್ರಗಳೊಂದಿಗೆ ಬಾಲಿವುಡ್ ಅನ್ನು ಉಳಿಸಿದರು.


ಟಬು ಹಿರಿಯ ನಟಿ ಶಬಾನಾ ಅಜ್ಮಿ ಅವರ ಸೋದರ ಸೊಸೆ ಅನ್ನೋ ವಿಚಾರ ಅನೇಕರಿಗೆ ಗೊತ್ತಿಲ್ವಂತೆ..


ಟಬು ಹಿರಿಯ ನಟಿ ಶಬಾನಾ ಅಜ್ಮಿ ಅವರ ಸೋದರ ಸೊಸೆ ಅನ್ನೋ ವಿಷಯ ಕೇಳಿ ಅನೇಕರಿಗೆ ನಂಬಲು ಅಸಾಧ್ಯವಾಗಿರಬಹುದು. ಟಬು ಅವರ ತಾಯಿ ರಿಜ್ವಾನಾ ಅವರು ಶಬಾನಾ ಅವರ ಸೋದರ ಸಂಬಂಧಿ.


ಇಬ್ಬರೂ ಹೈದರಾಬಾದ್ ಮೂಲದವರು. ಟಬು ತನ್ನ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಹೊರಗೆ ಹೇಳಿಕೊಳ್ಳದೆ ಇರುವುದರಿಂದ ಈ ವಿಷಯ ಇದುವರೆಗೂ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ.


Did You Know Tabu Is The Niece Of Shabana Azmi And Younger Sister Of Actress Farah Naaz
ಟಬು


ಅಷ್ಟೇ ಅಲ್ಲದೆ, ಟಬು ಅವರು ‘ಬಾಪ್ ನಂಬರಿ ಬೇಟಾ ದಸ್ ನಂಬರಿ’ ಮತ್ತು ‘ಬೆಗುನಾಹ್’ ಅಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದ ಫರಾಹ್ ನಾಜ್ ಅವರ ಕಿರಿಯ ಸಹೋದರಿಯಂತೆ.


ಟಬು ಜನಿಸಿದಾಗ ಅವರ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ ಆಗಿತ್ತು. ಆಕೆಯ ತಂದೆ ಜಮಾಲ್ ಅಲಿ ಹಶ್ಮಿ ಅವರು ತಬು ಮೂರು ವರ್ಷದವಳಿದ್ದಾಗ ಕುಟುಂಬವನ್ನು ಬಿಟ್ಟು ಹೋಗ್ತಾರೆ. ಅವರ ತಾಯಿ ಶಾಲಾ ಶಿಕ್ಷಕಿಯಾಗಿದ್ದರು ಮತ್ತು ಅವರ ಅಜ್ಜ- ಅಜ್ಜಿ ನಿವೃತ್ತ ಪ್ರಾಧ್ಯಾಪಕರಾಗಿದ್ದು ತಮ್ಮದೇ ಆದ ಶಾಲೆಯೊಂದನ್ನು ನಡೆಸುತ್ತಿದ್ದರು.


10ನೇ ವಯಸ್ಸಿನಲ್ಲಿಯೇ ನಟನೆ ಶುರು ಮಾಡಿದ ನಟಿ ಟಬು


1982ರ ಬಾಲಿವುಡ್ ಚಲನಚಿತ್ರ ಬಜಾರ್ ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಾಗ ಟಬು ಅವರಿಗೆ ಕೇವಲ 10 ವರ್ಷ ವಯಸ್ಸು. ಅವರು 14 ವರ್ಷದವರಿದ್ದಾಗ, ಅವರು ಬಾಲಿವುಡ್ ಚಿತ್ರ ‘ಹಮ್ ನೌಜವಾನ್’ ನಲ್ಲಿ ದೇವ್ ಆನಂದ್ ಅವರ ಮಗಳ ಪಾತ್ರವನ್ನು ಮಾಡಿದರು. 1991ರ ತೆಲುಗು ಚಿತ್ರ ‘ಕೂಲಿ ನಂ 1’ ನೊಂದಿಗೆ ಅವರು ನಟಿಯಾಗಿ ತಮ್ಮ ಚಲನಚಿತ್ರೋದ್ಯಮದ ಪ್ರಯಾಣ ಶುರು ಮಾಡಿದರು.


1994 ರಲ್ಲಿ ಪ್ರಮುಖ ಪಾತ್ರದಲ್ಲಿ ಅವರ ಮೊದಲ ಹಿಂದಿ ಚಿತ್ರ ‘ಪೆಹ್ಲಾ ಪೆಹ್ಲಾ ಪ್ಯಾರ್’ ಆಗಿತ್ತು. ಆದರೆ ಈ ಚಲನಚಿತ್ರವು ಹೆಚ್ಚಿನ ಜನರ ಗಮನಕ್ಕೆ ಬರಲಿಲ್ಲ. ನಂತರ ಅವರು 1994 ರಲ್ಲಿಯೇ ಬಿಡುಗಡೆಯಾದ ‘ವಿಜಯ್ ಪಥ್’ ಚಿತ್ರದ ಮೂಲಕ ತುಂಬಾನೇ ಪ್ರಸಿದ್ಧರಾದರು, ಇದರಲ್ಲಿ ಅವರು ಅಜಯ್ ದೇವಗನ್ ಅವರೊಂದಿಗೆ ನಟಿಸಿದ್ದರು.


Did You Know Tabu Is The Niece Of Shabana Azmi And Younger Sister Of Actress Farah Naaz
ಬಾಲಿವುಡ್ ನಟಿ ಟಬು


ಐದು ದಶಕಗಳ ವೃತ್ತಿಜೀವನದಲ್ಲಿ ತಬು ಮಾಚಿಸ್, ವಿರಾಸತ್, ಚಾಚಿ 420, ಬೀವಿ ನಂ.1, ಹಮ್ ಸಾಥ್-ಸಾಥ್ ಹೈ, ಹೇರಾ ಫೇರಿ, ಚಾಂದನಿ ಬಾರ್, ಮಕ್ಬೂಲ್, ಚೀನಿ ಕಮ್ ಮತ್ತು ಇನ್ನೂ ಅನೇಕ ಸ್ಮರಣೀಯ ಚಲನಚಿತ್ರಗಳನ್ನು ಮಾಡಿದ್ದಾರೆ.


ಸಾಮಾನ್ಯವಾಗಿ ಪುರುಷ ಪ್ರಾಬಲ್ಯ ಎಂದು ಪರಿಗಣಿಸಲಾಗುವ ಉದ್ಯಮದಲ್ಲಿ, ತಬು ಅವರು ತಮ್ಮ ನಟನೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.


ನಟಿ ಟಬು ಇನ್ನೂ ಮದುವೆಯಾಗದೇ ಇರೋದಕ್ಕೆ ಅಜಯ್ ದೇವಗನ್ ಕಾರಣವಂತೆ


ಹೀಗೆ ಒಮ್ಮೆ ಸಂದರ್ಶನದಲ್ಲಿ ಟಬು ಅವರನ್ನ ನೀವ್ಯಾಕೆ ಇನ್ನೂ ಮದುವೆಯಾಗಿಲ್ಲ ಅಂತ ಕೇಳಿದ್ದಕ್ಕೆ, ನಟಿ ಇದಕ್ಕೆಲ್ಲಾ ನಟ ಅಜಯ್ ದೇವಗನ್ ಕಾರಣ ಅಂತ ಹೇಳಿದ್ದರು.


ಇದನ್ನೂ ಓದಿ: Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!


"ಅಜಯ್ ಮತ್ತು ನಾನು ಸುಮಾರು 25 ವರ್ಷಗಳಿಂದ ಪರಿಚಯ ಇರಬಹುದು. ಅವರು ನನ್ನ ಸೋದರ ಸಂಬಂಧಿ ಸಮೀರ್ ಆರ್ಯ ಅವರ ಪಕ್ಕದ ಮನೆಯಲ್ಲಿ ಇರುತ್ತಿದ್ದರು ಮತ್ತು ಆಪ್ತ ಸ್ನೇಹಿತರಾಗಿದ್ದರು.
ನಾನು ಚಿಕ್ಕವಳಾಗಿದ್ದಾಗ, ಸಮೀರ್ ಮತ್ತು ಅಜಯ್ ನನ್ನ ಮೇಲೆ ಗೂಢಚರ್ಯೆ ನಡೆಸುತ್ತಿದ್ದರು, ನನ್ನನ್ನು ಹಿಂಬಾಲಿಸುತ್ತಿದ್ದರು ಮತ್ತು ನನ್ನೊಂದಿಗೆ ಮಾತನಾಡುವಾಗ ಸಿಕ್ಕಿಬಿದ್ದ ಹುಡುಗರನ್ನು ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದರು.

top videos


    ಬಹುಶಃ ಇದರಿಂದಲೇ ನಾನು ಇನ್ನೂ ಮದುವೆಯಾಗಿಲ್ಲ ನೋಡಿ, ಇದಕ್ಕೆ ಅಜಯ್ ಕಾರಣ. ಅವರು ಹೀಗೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಟಬು ಹೇಳಿದ್ದರು.

    First published: