ಬಿ-ಟೌನ್ ನಟ ಸಂಜು ಬಾಬಾ, ಸಂಜಯ್ ದತ್ ವೈಯಕ್ತಿಕ ಜೀವನದಲ್ಲಿ ಭಾರೀ ಏರಿಳಿತವನ್ನೇ ಕಂಡವರು. ಚಿತ್ರರಂಗದಲ್ಲಿ, ನಟನೆಯ ಉತ್ತುಂಗದಲ್ಲಿರುವಾಗಲೇ ಮಾಡಿದ ತಪ್ಪಿಗಾಗಿ ಕೆಲವರ್ಷ ಜೈಲಿಗೂ ಹೋಗಿ ಬಂದಿದ್ದಾರೆ. ಆದರೆ ಇಂದಿಗೂ ನಟನೆಯಲ್ಲಿ ಸಕ್ರಿಯವಾಗಿರುವ ಸಂಜಯ್, ತಮ್ಮ ವರ್ಚಸ್ಸು ಹಾಗೂ ವ್ಯಕ್ತಿತ್ವದಿಂದ ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಈ ಮಧ್ಯೆ ನಟ ಸಂಜಯ್ ದತ್, ಕೆಲವರ್ಷಗಳ ಹಿಂದಿನ ಡ್ರಗ್ಸ್ ಸೇವಿಸುತ್ತಿದ್ದ ಕಾಲದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡುವ ದಸ್ ಕಾ ದಮ್ ಶೋ ನಲ್ಲಿ ಭಾಗವಹಿಸಿದ್ದ ಅವರು, ನಟ ಜಾಕಿ ಶ್ರಾಫ್ ಜೊತೆಗಿನ ಸಂಭಾಷಣೆ ವೇಳೆ ಈ ಘಟನೆಯನ್ನು ನೆನಪಿಸಿಕೊಂಡರು.
ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ನಂಥ ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಈ ಬಗ್ಗೆ ಮಾತನಾಡಿ ಎಂದಾಗ ನಟ ಸಂಜಯ್ ದತ್ ಅದೊಂದು ನಿಷ್ಪ್ರಯೋಜಕ ವಸ್ತು ಎಂದರು. ಅಲ್ಲದೇ ಹಳೆಯ ಘಟನೆಯೊಂದನ್ನು ನೆನಸಿಪಿಕೊಂಡರು.
ಇದನ್ನೂ ಓದಿ: Kantara: 'ಸಿಂಗಾರ ಸಿರಿಯೇ'ನೂ ಕದ್ದ ಟ್ಯೂನಾ? ವಿಡಿಯೋ ನೋಡಿ ನೀವೇ ಡಿಸೈಡ್ ಮಾಡಿ ಅಂತಿದ್ದಾರೆ ನೆಟ್ಟಿಗರು!
ಎರಡು ದಿನ ಮಲಗಿಯೇ ಇದ್ದರಂತೆ ಸಂಜಯ್ ದತ್!
“ಒಮ್ಮೆ ಡ್ರಗ್ಸ್ ಸೇವಿಸಿ ನನ್ನ ರೂಮ್ ಗೆ ಬಂದು ಮಲಗಿದ್ದೆ. ಅದು 7-8 ಗಂಟೆಯ ಹೊತ್ತು. ನಾನು ನಿದ್ದೆಯಿಂದ ಏದ್ದೇಳುವಾಗ ನನಗೆ ತುಂಬಾ ಹಸಿವಾಗಿತ್ತು. ಎದ್ದವನೇ ನನ್ನ ಮನೆಯ ಕೆಲಸದವನಿಗೆ ಹೇಳಿದೆ, ನನಗೆ ತುಂಬಾ ಹಸಿವಾಗ್ತಿದೆ. ಊಟ ತಂದು ಕೊಡು ಅಂತ.
ಆದ್ರೆ ಆತ, ಎರಡು ದಿನದ ನಂತರ ನೀವು ಊಟ ಕೇಳುತ್ತಿದ್ದೀರಿ ಎನ್ನುತ್ತಾ ಅಳಲು ಶುರು ಮಾಡಿದ. ನನಗೆ ಆಶ್ಚರ್ಯವಾಯ್ತು. ಎರಡು ದಿನಗಳಾ? ಹೇಗೆ? ನಾನು ನಿನ್ನೆ ಮಲಗಿದ್ದೆ ಅಷ್ಟೇ ಎಂದಾಗ, ನೌಕರ, ಅಲ್ಲ ನೀವು ಎರಡು ದಿನಗಳ ಹಿಂದೆ ಮಲಗಿದ್ದೀರಿ. ನಿಮಗೆ ಪ್ರಜ್ಞೆಯೇ ಇರಲಿಲ್ಲ ಎಂದಿದ್ದ ಅಳುತ್ತಾ. ಆಗ ನನಗೆ ಡ್ರಗ್ಸ್ ಅನ್ನೋದು ವ್ಯರ್ಥ, ಜೀವನದ ಅಮಲೇ ಉತ್ತಮ ಅನ್ನೋದು ಅರ್ಥವಾಯ್ತು. ಇದಾಗ ಬಳಿಕ ನಾನು ಡ್ರಗ್ಸ್ ತ್ಯಜಿಸಲು ನಿರ್ಧರಿಸಿದೆ.
ಮಹಿಳೆಯರ ದೃಷ್ಟಿಯಲ್ಲಿ ಚೆನ್ನಾಗಿ ಕಾಣೋಕೆ ಡ್ರಗ್ಸ್ ಆರಂಭಿಸಿದ್ದೆ!
ನಟ ಸಂಜಯ್ ದತ್ ತಾವು ಡ್ರಗ್ಸ್ ಪಡೆಯುತ್ತಿದ್ದ ಬಗ್ಗೆ ಬಹಳಷ್ಟು ಸಲ ಸಾಮಾಜಿಕವಾಗಿಯೇ ಮಾತನಾಡಿದ್ದಾರೆ. ಈ ಮೊದಲು ರಣವೀರ್ ಅಲಹಬಾದಿಯಾ ಅವರೊಂದಿಗೆ ಡ್ರಗ್ಸ್ ಬಗ್ಗೆ ಸಂಜಯ್ ಮಾತನಾಡಿದ್ದರು. ಈಗ ನಾನು ತುಂಬಾ ನಾಚಿಕೆ ಪಡುತ್ತೇನೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ವಿಷಯದಲ್ಲಿ.
ಡ್ರಗ್ಸ್ ತೆಗೆದುಕೊಂಡರೆ ಮಹಿಳೆಯರ ದೃಷ್ಟಿಯಲ್ಲಿ ಕೂಲ್ ಆಗಿ ಕಾಣಿಸುತ್ತೇನೆ ಅಂದುಕೊಂಡಿದ್ದೆ. ಹಾಗಾಗಿಯೇ ಡ್ರಗ್ಸ್ ಆರಂಭಿಸಿದ್ದೆ. ಒಂದಲ್ಲ, ಎರಡಲ್ಲ ಹತ್ತು ವರ್ಷಗಳ ಕಾಲ ನಾನು ಒಂದು ಕೋಣೆಯಲ್ಲಿ, ಬಾತ್ ರೋಮ್ ನಲ್ಲಿ ಜೀವನ ಕಳೆದುಬಿಟ್ಟೆ. ಶೂಟಿಂಗ್ ನಲ್ಲಿ ಕೂಡ ಆಸಕ್ತಿ ಇರಲಿಲ್ಲ.
ನಾನು ರಿಹ್ಯಾಬಿಟೇಶನ್ ನಿಂದ ಬಂದ ಮೇಲೆ ನನ್ನನ್ನು ವ್ಯಸನಿ ಅಂತಾ ಕರೀತಾ ಇದ್ರು. ಆದ್ರೆ ನಾನು ಯೋಚಿಸಿದೆ ಇದು ತಪ್ಪು ಅಂತ. ಆದ್ರೆ ಇಂದು ಎಲ್ಲವೂ ಬದಲಾಗಿದೆ ಎಂದು ಹೇಳಿದ್ದರು ಸಂಜಯ್ ದತ್.
ಇದನ್ನೂ ಓದಿ: Subhamangala Film Review: ಮದುವೆ ಮನೆಯ ಶುಭಮಂಗಳ ಚಿತ್ರಕ್ಕೆ ಇದುವೇ ಜೀವಾಳ
ಇನ್ನು, ಸಂಜಯ್ ಇತ್ತೀಚೆಗೆ ಯಶ್ ರಾಜ್ ಫಿಲ್ಮ್ಸ್ನವರ ಶಂಶೇರಾ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ವಾಣಿ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದರು. ಕರಣ್ ಮಲ್ಹೋತ್ರಾ ನಿರ್ದೇಶನದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಅವರು ಮುಂದಿನ ಫ್ಯಾಮಿಲಿ ಎಂಟರ್ಟೈನರ್ ಚಿತ್ರದಲ್ಲಿ ರವೀನಾ ಟಂಡನ್, ಪಾರ್ಥ್ ಸಮತಾನ್ ಮತ್ತು ಖುಶಾಲಿ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಬಿನೋಯ್ ಗಾಂಧಿ ನಿರ್ದೇಶಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ