ವೀಕೆಂಡ್ನಲ್ಲಿ IIFA 2023 ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಗ್ರ್ಯಾಂಡ್ ಇವೆಂಟ್ ನಡೆದಿತ್ತು. ಈ ಇವೆಂಟ್ನಲ್ಲಿ ಸಲ್ಮಾನ್ ಖಾನ್ (Salman Khan) ಅವರು ವಿಕ್ಕಿ ಕೌಶಲ್ (Vicky Kaushal) ಅವರನ್ನು ನಿರ್ಲಕ್ಷಿಸಿದ ಘಟನೆ ನಡೆದಿದೆ. ನಟ ವಿಕ್ಕಿ ಕೌಶಲ್ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರು ಬಿಯರ್ಡ್ ಲುಕ್ನಲ್ಲಿದ್ದು ಅವರ ಲುಕ್ ಬದಲಾಗಿತ್ತು. ಇವೆಂಟ್ನಲ್ಲಿ ಈ ಕಡೆಯಿಂದ ವಿಕ್ಕಿ ಹೋಗುತ್ತಿದ್ದರೆ ಆ ಕಡೆಯಿಂದ ಸಲ್ಮಾನ್ ಖಾನ್ ಬರುತ್ತಿದ್ದರು. ವಿಕ್ಕಿ ಕೌಶಲ್ ಅವರು ನಟನಿಗೆ ವಿಶ್ ಮಾಡಲು ಪ್ರಯತ್ನಿಸಿದಾಗ ಅವರ ಬಾಡಿಗಾರ್ಡ್ಸ್ (Body Guards) ವಿಕ್ಕಿ ಕೌಶಲ್ ಅವರನ್ನು ತಳ್ಳಿದ್ದಾರೆ. ಸಲ್ಮಾನ್ ಖಾನ್ ವಿಕ್ಕಿಯನ್ನು ನೋಡಿದರೂ ಮೈಂಡ್ ಮಾಡದಂತೆ ಯಾವುದೇ ಎಕ್ಸ್ಪ್ರೆಷನ್ ಕೊಡದೇ ಸರಿದು ಹೋದರು. ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದ ವಿಡಿಯೋ ಕ್ಲಿಪ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಕ್ಕಿ ಅಭಿಮಾನಿಯೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಇನ್ನೊಂದು ಬದಿಯಿಂದ ಸಲ್ಮಾನ್ ಖಾನ್ ನಡೆದುಕೊಂಡು ಬಂದಿದ್ದಾರೆ. ಆಗ ವಿಕ್ಕಿ ಸಲ್ಮಾನ್ ಅವರನ್ನು ಕಂಡು ವಿಶ್ ಮಾಡಲು ಹೋಗಿದ್ದಾರೆ. ಹ್ಯಾಂಡ್ ಶೇಕ್ಗಾಗಿ ಕೈ ಕೂಡಾ ಚಾಚಿದ್ದಾರೆ. ಆದರೆ ಸಲ್ಮಾನ್ ಖಾನ್ ಬಾಡಿಗಾರ್ಡ್ಸ್ ವಿಕ್ಕಿ ಕೌಶಲ್ ಅವರನ್ನು ತಡೆದರು.
View this post on Instagram
ಹಳೆ ಗರ್ಲ್ಫ್ರೆಂಡ್ ನೆನಪಾಯ್ತಾ?
ಕತ್ರೀನಾ ಕೈಫ್ ಅವರು ಸಲ್ಮಾನ್ ಖಾನ್ ಜೊತೆಗೆ ಕ್ಲೋಸ್ ಇದ್ದರು. ಇವರ ಜೋಡಿಯೂ ಆನ್ಸ್ಕ್ರೀನ್ನಲ್ಲಿ ಸೂಪರ್ ಆಗಿ ಕಾಣಿಸುತ್ತದೆ. ಆದರೆ ಕತ್ರೀನಾ ಮದುವೆಯಾಗಿದ್ದು ವಿಕ್ಕಿ ಕೌಶಲ್ ಅವರನ್ನು. ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ನೋಡಿದ ನೆಟ್ಟಿಗರು ಸಲ್ಲು ಭಾಯ್ಗೆ ಮಾಜಿ ಗರ್ಲ್ಫ್ರೆಂಡ್ ಗಂಡನ ನೋಡಿ ಸಿಟ್ಟು ಬಂತಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ಗೆ ಜೀವ ಬೆದರಿಕೆ
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಇ-ಮೇಲ್ ಕಳುಹಿಸಿದ್ದು ಒಬ್ಬ ವಿದ್ಯಾರ್ಥಿ ಎನ್ನುವುದು ಬಯಲಾಗಿದೆ. ಯುಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ಹೊರಹಾಕಿದ್ದಾರೆ.
ಆರೋಪಿ ವಿದ್ಯಾರ್ಥಿಯನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವಿದ್ಯಾರ್ಥಿ ಹರ್ಯಾಣ ಮೂಲದವನೆಂದು ತನಿಖೆಯಿಂದ ತಿಳಿದುಬಂದಿದೆ. ವೈದ್ಯಕೀಯ ವಿಜ್ಞಾನ ಓದುತ್ತಿರುವ ಈತ ಪ್ರಸ್ತುತ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
ವರದಿಗಳ ಪ್ರಕಾರ, ವಿದ್ಯಾರ್ಥಿಯು ಈ ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಯುಕೆಯಲ್ಲಿ ಅವರ ಶೈಕ್ಷಣಿಕ ಅವಧಿ ಮುಗಿಯುತ್ತಿದೆಯಂತೆ. ಆರೋಪಿ ವಿದ್ಯಾರ್ಥಿ ಕರೆತರಲು ಪೊಲೀಸರು ಕೂಡ ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ