• Home
  • »
  • News
  • »
  • entertainment
  • »
  • Ranveer Singh: ರಣ್​ವೀರ್ ಸಿಂಗ್​​ಗೆ ಹೊಸಾ ತಲೆನೋವು, ನೆಚ್ಚಿನ ಕಾರ್ ಕೈತಪ್ಪಿ ಹೋಗುತ್ತಾ?

Ranveer Singh: ರಣ್​ವೀರ್ ಸಿಂಗ್​​ಗೆ ಹೊಸಾ ತಲೆನೋವು, ನೆಚ್ಚಿನ ಕಾರ್ ಕೈತಪ್ಪಿ ಹೋಗುತ್ತಾ?

ರಣವೀರ್ ಸಿಂಗ್ ಅವರ ಆಸ್ಟನ್ ಮಾರ್ಟಿನ್ ಕಾರು

ರಣವೀರ್ ಸಿಂಗ್ ಅವರ ಆಸ್ಟನ್ ಮಾರ್ಟಿನ್ ಕಾರು

ರಣವೀರ್ ಸಿಂಗ್ ಅವರು ತಮ್ಮ ಸ್ವಾಂಕಿ ಆಸ್ಟನ್ ಮಾರ್ಟಿನ್ ಅನ್ನು 3 ವರ್ಷಗಳ ಹಿಂದೆ ಖರೀದಿಸಿದ್ದರು ಮತ್ತು ಇತ್ತೀಚೆಗೆ ಅದನ್ನು ಸ್ವಲ್ಪ ಅಪ್ಗ್ರೇಡ್ ಸಹ ಮಾಡಿದ್ದರು. ಈಗ, ರಣವೀರ್ ತನ್ನ 3.9 ಕೋಟಿ ರೂಪಾಯಿಯ ಕಾರನ್ನು ಅವಧಿ ಮೀರಿದ ವಿಮೆಯೊಂದಿಗೆ ಚಲಾಯಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ ಅಂತ ತಿಳಿದುಬಂದಿದೆ.ರಣವೀರ್ ಸಿಂಗ್ ಅವರು ತಮ್ಮ ಸ್ವಾಂಕಿ ಆಸ್ಟನ್ ಮಾರ್ಟಿನ್ ಅನ್ನು 3 ವರ್ಷಗಳ ಹಿಂದೆ ಖರೀದಿಸಿದ್ದರು ಮತ್ತು ಇತ್ತೀಚೆಗೆ ಅದನ್ನು ಸ್ವಲ್ಪ ಅಪ್ಗ್ರೇಡ್ ಸಹ ಮಾಡಿದ್ದರು. ಈಗ, ರಣವೀರ್ ತನ್ನ 3.9 ಕೋಟಿ ರೂಪಾಯಿಯ ಕಾರನ್ನು ಅವಧಿ ಮೀರಿದ ವಿಮೆಯೊಂದಿಗೆ ಚಲಾಯಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ ಅಂತ ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಕೆಲ ಸಿನೆಮಾ ನಟರಿಗೆ ಮತ್ತು ಕ್ರಿಕೆಟ್ (Cricket) ಆಟಗಾರರಿಗೆ ಈ ಸ್ಟೈಲಿಶ್ ಕಾರುಗಳು ಎಂದರೆ ತುಂಬಾನೇ ಪ್ರೀತಿ ನೋಡಿ.. ಈ ವಿಚಾರ ಮಾತಾಡುವಾಗ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರ ಬಗ್ಗೆ ಮಾತಾಡದೆ ಹೋದರೆ ವಿಷಯ ಅಪೂರ್ಣವಾಗುತ್ತದೆ. ಏಕೆಂದರೆ ಇವರಿಗೆ ಸ್ಟೈಲಿಶ್ ಕಾರುಗಳು ಎಂದರೆ ತುಂಬಾನೇ ಇಷ್ಟವಂತೆ. ಹೌದು..ಅದಕ್ಕೆ ನೋಡಿ ಇತ್ತೀಚೆಗೆ ನಟ ರಣವೀರ್ ಮತ್ತು ಅವರ ಸ್ಟೈಲಿಶ್ ಕಾರು ಆಸ್ಟನ್ ಮಾರ್ಟಿನ್ (Aston Martin) ದೊಡ್ಡ ಸುದ್ದಿಯಲ್ಲಿತ್ತು. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ತನ್ನ ಕಾರನ್ನು ಹತ್ತಿ ಖುದ್ದು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಅದರ ವಿಡಿಯೋ (Video) ಅಂತರ್ಜಾಲದಲ್ಲಿ ವೈರಲ್ ಸಹ ಆಗಿತ್ತು.


ವಾಹನದ ವಿಮಾ ಪಾಲಿಸಿ ಅವಧಿ ಮುಗಿದಿದೆ ಎಂದು ಕೆಲವು ವರದಿಗಳು ತಿಳಿಸಿದ್ದವು. ಮಾನ್ಯ ವಿಮಾ ಪಾಲಿಸಿ ಇಲ್ಲದೆ ನಟ ಕಾರನ್ನು ಚಾಲನೆ ಮಾಡುತ್ತಿದ್ದರು ಅಂತ ನೆಟ್ಟಿಗರೊಬ್ಬರು ಹೇಳಿದ್ದರು.


ವಿಡಿಯೋ ನೋಡಿ ಏನಂತ ಆರೋಪಿಸಿದ್ದರು ನೆಟ್ಟಿಗರು?
ರಣವೀರ್ ಸಿಂಗ್ ಅವರು ತಮ್ಮ ಸ್ವಾಂಕಿ ಆಸ್ಟನ್ ಮಾರ್ಟಿನ್ ಅನ್ನು 3 ವರ್ಷಗಳ ಹಿಂದೆ ಖರೀದಿಸಿದ್ದರು ಮತ್ತು ಇತ್ತೀಚೆಗೆ ಅದನ್ನು ಸ್ವಲ್ಪ ಅಪ್ಗ್ರೇಡ್ ಸಹ ಮಾಡಿದ್ದರು. ಈಗ, ರಣವೀರ್ ತನ್ನ 3.9 ಕೋಟಿ ರೂಪಾಯಿಯ ಕಾರನ್ನು ಅವಧಿ ಮೀರಿದ ವಿಮೆಯೊಂದಿಗೆ ಚಲಾಯಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ ಅಂತ ತಿಳಿದುಬಂದಿದೆ.


ಜೂನ್ 28, 2020 ರಂದು ವಿಮೆಯ ಅವಧಿ ಮುಗಿದಿದೆ ಎಂದು ತೋರಿಸುವ ಫೋಟೋವನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಅದನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ "ಮುಂಬೈ ಪೊಲೀಸರೆ ದಯವಿಟ್ಟು ರಣವೀರ್ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ" ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ:  Ola Scooter: ಓಲಾದಿಂದ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್, ರಿಲೀಸ್‌ಗೂ ಮುಂಚೆನೇ ಸಾವಿರಾರು ಬುಕ್ಕಿಂಗ್ಸ್!


“ಅವರು ನಿನ್ನೆ ಚಲಾಯಿಸಿದ ಕಾರಿನ ಇನ್ಶೂರೆನ್ಸ್ ಮುಗಿದಿತ್ತು" ಅಂತ ಸಹ ಬರೆದಿದ್ದರು. ಮುಂಬೈ ಪೊಲೀಸರು ಸಹ ಈ ಟ್ವೀಟ್ ಗೆ ಕೂಡಲೇ ಪ್ರತಿಕ್ರಿಯಿಸಿ 'ನಾವು ಸಂಚಾರ ಪೊಲೀಸ್ ವಿಭಾಗಕ್ಕೆ ಮಾಹಿತಿ ನೀಡಿದ್ದೇವೆ' ಎಂದು ಬರೆದಿದ್ದರು.


ನೆಟ್ಟಿಗರನ್ನು ‘ಮಾಡಲು ಕೆಲಸವಿಲ್ಲದವರು’ ಅಂತ ಹೇಳಿದ ರಣವೀರ್ ಅಭಿಮಾನಿಗಳು
ಆದಾಗ್ಯೂ, ರಣವೀರ್ ಅವರ ಅಭಿಮಾನಿಗಳು ನೆಟ್ಟಿಗರನ್ನು 'ಮಾಡಲು ಬೇರೆ ಕೆಲಸವಿಲ್ಲದವರು' ಎಂದು ಟ್ರೋಲ್ ಮಾಡಿದ್ದಾರೆ. ಅದಕ್ಕೆ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು 'ಅವರ ಬಗ್ಗೆ ಹೇಳಿದ್ರೆ, ನಿಮಗೇನು ಆಗ್ತಾ ಇದೆ' ಅಂತ ಅಭಿಮಾನಿಗಳಿಗೆ ಕೇಳಿದ್ದಾರೆ. ಇನ್ನೊಬ್ಬರು 'ಹಿಂದಿನ ದಿನಾಂಕಕ್ಕೆ ಇನ್ಶೂರೆನ್ಸ್ ಅನ್ನು ಮಾಡಿಸಿಕೊಳ್ಳುತ್ತಾರೆ, ಅವರಿಗೆ ಅದು ದೊಡ್ಡ ವಿಷಯವೇ ಅಲ್ಲ' ಅಂತ ಬರೆದಿದ್ದಾರೆ.


ರಣವೀರ್ ಅವರ ಕಾರಿನ ವಿಮೆ ಅವಧಿ ಮುಗಿದಿಲ್ಲವಂತೆ!
ಈ ಆರೋಪಗಳು ನಿಜವೇ? ಅಂತ ಪರಿಶೀಲಿಸಿ ನೋಡಿದಾಗ ರಣವೀರ್ ಸಿಂಗ್ ಅವರ ಕಾರು ನಿಜವಾಗಿಯೂ ಮಾನ್ಯ ವಿಮಾ ಪಾಲಿಸಿಯನ್ನು ಹೊಂದಿತ್ತು. ಡಾಕ್ಯುಮೆಂಟ್ ನಲ್ಲಿರುವ ಇತ್ತೀಚಿನ ಪಾಲಿಸಿ ನೀಡಿದ ದಿನಾಂಕವು ವಿಮೆಯನ್ನು ಜುಲೈನಲ್ಲಿ ನವೀಕರಿಸಲಾಗಿದೆ ಎಂದು ತೋರಿಸುತ್ತದೆ. ಪುರಾವೆಯಾಗಿ ನಾವು ಸಂಗ್ರಹಿಸಿದ ಅದರ ಸ್ಕ್ರೀನ್ ಶಾಟ್ ಇಲ್ಲಿದೆ ನೋಡಿ ಅಂತ ಸುದ್ದಿ ಮಾಧ್ಯಮವೊಂದು ತನ್ನ ವರದಿಯಲ್ಲಿ ಹೇಳಿದೆ.


ಆಸ್ಟನ್ ಮಾರ್ಟಿನ್ ಜೊತೆಗೆ, ರಣವೀರ್ ಲ್ಯಾಂಬೋರ್ಗಿನಿ ಉರುಸ್, ಮರ್ಸಿಡಿಸ್-ಬೆಂಝ್ ಜಿಎಲ್ಎಸ್, ಜಾಗ್ವಾರ್ ಎಕ್ಸ್ಜೆ ಎಲ್, ಆಡಿ ಕ್ಯೂ 5 ಮತ್ತು ಲ್ಯಾಂಡ್ ರೋವರ್, ರೇಂಜ್ ರೋವರ್ ವೋಗ್ ನಂತಹ ಅನೇಕ ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ.


ಇದನ್ನೂ ಓದಿ:  Tata Tiago EV: ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಟಾಟಾ ಟಿಯಾಗೊ ಎಲೆಕ್ಟ್ರಿಕ್​ ಕಾರು! ಹೇಗಿದೆ?


ಕೆಲಸದ ವಿಷಯಕ್ಕೆ ಬಂದರೆ ರಣವೀರ್ ಅವರ ಬಳಿ ಆಸಕ್ತಿದಾಯಕ ಚಿತ್ರಗಳಿವೆ. ರೋಹಿತ್ ಶೆಟ್ಟಿ ಅವರ ಸರ್ಕಸ್ ಮತ್ತು ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿಯೂ ಸಹ ನಟಿಸಲಿದ್ದಾರೆ.

Published by:Ashwini Prabhu
First published: