Priyanka Chopra ತನ್ನ ಹೆಸರಿನ ಮುಂದೆ Nick Jonas ಹೆಸರು ಕೈಬಿಡಲು ಅಸಲಿ ಕಾರಣ ಇದು!

ಪ್‌ನಲ್ಲಿ, ನಿಕ್ ಡಂಬೆಲ್ಸ್‌ನೊಂದಿಗೆ ವರ್ಕ್ ಮಾಡುತ್ತಾ ಬೆವರು ಸುರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ “ಡ್ಯಾಮ್! ಐ ಜಸ್ಟ್ ಡೈಡ್ ಇನ್ ಯುವರ್ ಆರ್ಮ್ಸ್" ಎಂದು ಕಾಮೆಂಟ್ ಮಾಡಿದ್ದರು.

ನಿಕ್​ ಜೋನಾಸ್- ಪ್ರಿಯಾಂಕಾ ಚೋಪ್ರಾ

ನಿಕ್​ ಜೋನಾಸ್- ಪ್ರಿಯಾಂಕಾ ಚೋಪ್ರಾ

  • Share this:
ಸೋಮವಾರ ಸಂಜೆ ನಟಿ ಪ್ರಿಯಾಂಕಾ ಚೋಪ್ರಾ( Priyanka Chopra) ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್(Instagram), ಟ್ವಿಟ್ಟರ್(Twitter)‌ ಸೇರಿ ಸಾಮಾಜಿಕ ಜಾಲತಾಣ(Social Media) ಖಾತೆಯಲ್ಲಿ ತಮ್ಮ ಹೆಸರಿನಿಂದ 'ಜೋನಾಸ್(Jonas)' ಅನ್ನು ಕೈಬಿಟ್ಟ ನಂತರ ಇಂಟರ್ನೆಟ್‌(Internet)ನಲ್ಲಿ ಕಲರವ ಮೂಡಿದೆ. ಇದಾದ ನಂತರ ಪ್ರಿಯಾಂಕಾ(Priyanka) ಮತ್ತು ನಿಕ್ ಜೋನಾಸ್(Nick Jonas) ನಡುವೆ ಎಲ್ಲವೂ ಸರಿಯಾಗಿದೆಯೇ ಎಂದು ಅಭಿಮಾನಿಗಳು ಯೋಚನೆ ಮಾಡುವಂತಾಗಲು ಕಾರಣವಾಗಿದೆ. ಅವರು ಈ ಹಿಂದೆ 'ಪ್ರಿಯಾಂಕಾ ಚೋಪ್ರಾ ಜೋನಾಸ್' ಆಗಿದ್ದ ತಮ್ಮ ಹೆಸರನ್ನು ಈಗ ಕೇವಲ 'ಪ್ರಿಯಾಂಕಾ' ಎಂದು ಎಡಿಟ್ ಮಾಡಿದ್ದಾರೆ.ಈ ಬಗ್ಗೆ ಪ್ರಿಯಾಂಕಾ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಆಕೆಯ ತಾಯಿ ಮಧು ಚೋಪ್ರಾ ವದಂತಿಗಳನ್ನು ತಳ್ಳಿಹಾಕಿದ್ದಾರೆ. "ಇದೆಲ್ಲವೂ ನಾನ್ ಸೆನ್ಸ್(Nonsense). ಈ ಸುಳ್ಳು ವದಂತಿಗಳನ್ನು(Rumours) ಹರಡಬೇಡಿ" ಎಂದು ಮಧು ಚೋಪ್ರಾ ಹೇಳಿದ್ದಾರೆ.

ಬಾಲಿವುಡ್ ಲೈಫ್ ಡಾಟ್ ಕಾಮ್ ಪ್ರಕಾರ, ತಮ್ಮ ನೆಟ್‌ಫ್ಲಿಕ್ಸ್ ಕಾಮಿಡಿ ಸ್ಪೆಷಲ್ ‘ಜೋನಾಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌’ನ ಪ್ರಚಾರದ ಭಾಗವಾಗಿ ನಿಕ್‌ರನ್ನು ಕಾಲೆಳೆಯಲು ಇದು ಪ್ರಿಯಾಂಕಾ ಆರಿಸಿಕೊಂಡಿರುವ ಮಾರ್ಗವಾಗಿದೆ ಎಂದು ವರದಿಯಾಗಿದೆ. 'ಜೋನಾಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್' ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದೆ. ನಿಕ್ ತಮ್ಮ ಸಹೋದರರಾದ ಕೆವಿನ್ ಮತ್ತು ಜೋ ಜೋನಾಸ್‌ರೊಂದಿಗೆ ನೆಟ್‌ಫ್ಲಿಕ್ಸ್ ವಿಶೇಷ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೋನಾಸ್ ಸಹೋದರರು ವಿಶೇಷ ಅತಿಥಿಗಳು ಮತ್ತು ಅವರ ಪ್ರೀತಿಪಾತ್ರರ ನಡುವೆ ಪರಸ್ಪರ ಟ್ರೋಲ್ ಮಾಡುತ್ತಾರೆ. ಪ್ರಿಯಾಂಕಾ ಚೋಪ್ರಾ, ಜೋ ಪತ್ನಿ ಸೋಫಿ ಟರ್ನರ್ ಮತ್ತು ಕೆವಿನ್ ಪತ್ನಿ ಡೇನಿಯಲ್ ಜೋನಾಸ್ ಕೂಡ ಈ ಹಾಸ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Nick Jonas-Priyanka Chopra Divorce? ಈ ಕುರಿತಾಗಿ ನಟಿ ಹೇಳಿದ್ದೇನು ಗೊತ್ತಾ..?

ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾ ಪೋಸ್ಟ್​

ಈ ಹಿಂದೆ, ಪ್ರಿಯಾಂಕಾ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಜೋನಾಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್ ಅನ್ನು ಪ್ರಚಾರ ಮಾಡಿದ್ದರು, “@jonasbrothers #ROASTED ಆಗುವುದನ್ನು ನೋಡಲು ಸಿದ್ಧರಿದ್ದೀರಾ? ನನಗೆ ನಗು ತಡೆಯಾಗುತ್ತಿಲ್ಲ. #JonasBrothersFamilyRoast @netflix ನಲ್ಲಿ 11/23 ರಂದು ಪ್ರಥಮ ಪ್ರದರ್ಶನ ಎಂದು ಪ್ರಿಯಾಂಕಾ ಬರೆದುಕೊಂಡಿದ್ದರು.

ಪತಿಯ ಪೋಸ್ಟ್​ಗೆ ರೊಮ್ಯಾಂಟಿಕ್ ಕಾಮೆಂಟ್ ಹಾಕಿದ್ದ ಪ್ರಿಯಾಂಕಾ

ಈ ಮಧ್ಯೆ, ದಂಪತಿಯ ನಡುವೆ ಬ್ರೇಕಪ್ ಆಗಿದೆ ಎನ್ನುವ ವದಂತಿಗಳ ನಡುವೆ ಪತಿ ನಿಕ್ ಜೋನಾಸ್ ಅವರ Instagram ವಿಡಿಯೋಗೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಕಾಮೆಂಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್‌ನಲ್ಲಿ ನಿಕ್ ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುತ್ತಾರೆ. ಕ್ಲಿಪ್‌ನಲ್ಲಿ, ನಿಕ್ ಡಂಬೆಲ್ಸ್‌ನೊಂದಿಗೆ ವರ್ಕ್ ಮಾಡುತ್ತಾ ಬೆವರು ಸುರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ “ಡ್ಯಾಮ್! ಐ ಜಸ್ಟ್ ಡೈಡ್ ಇನ್ ಯುವರ್ ಆರ್ಮ್ಸ್" ಎಂದು ಕಾಮೆಂಟ್ ಮಾಡಿದ್ದರು.

ಇದನ್ನೂ ಓದಿ: Priyanka Chopra & ನಿಕ್ ಜೋನಸ್ ದಾಂಪತ್ಯದಲ್ಲಿ ಬಿರುಕು..? ಸಮಂತಾರಂತೆ ಗುಟ್ಟು ಬಿಟ್ಟುಕೊಟ್ಟರಾ?

ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್‌ನಲ್ಲಿ ಪ್ರಿಯಾಂಕಾ ಬ್ಯುಸಿ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2018ರಲ್ಲಿ ವಿವಾಹವಾಗಿದ್ದರು. ಕೆಲಸದ ವಿಷಯದಲ್ಲಿ, ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಿಟಾಡೆಲ್ ಅನ್ನು ಮುಗಿಸಿದ್ದಾರೆ. ಮ್ಯಾಟ್ರಿಕ್ಸ್ ಸೀರೀಸ್‌ನ ನಾಲ್ಕನೇ ಭಾಗವಾಗಿ, ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್‌ನಲ್ಲಿ ಸದ್ಯಕ್ಕೆ ಪ್ರಿಯಾಂಕಾ ಬ್ಯುಸಿಯಾಗಲಿದ್ದಾರೆ.
Published by:Latha CG
First published: