ರಣವೀರ್​-ದೀಪಿಕಾ ವಿವಾಹದ ದಿನಾಂಕ ಫಿಕ್ಸ್​: ನವೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಸ್ಟಾರ್​ ಜೋಡಿ?

news18
Updated:August 14, 2018, 6:15 PM IST
ರಣವೀರ್​-ದೀಪಿಕಾ ವಿವಾಹದ ದಿನಾಂಕ ಫಿಕ್ಸ್​: ನವೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಸ್ಟಾರ್​ ಜೋಡಿ?
news18
Updated: August 14, 2018, 6:15 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ನಲ್ಲಿ ಸೋನಮ್​ ಹಾಗೂ ಆನಂದ್​ ಅಹುಜಾ ವಿವಾಹದ ನಂತರ ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಅವರ ವಿವಾಹದ ಮಾತುಗಳು ಎಲ್ಲೆಡೆ ಹರಿದಾಡುತ್ತಿದೆ. ಹೀಗಿರುವಾಗಲೇ ಅವರು ಇದೇ ನವೆಂಬರ್​ 20ಕ್ಕೆ ಇಟಲಿಯ ಲೇಕ್​ ಕೊಮೊದಲ್ಲಿ ಈ ಸೆಲೆಬ್ರಿಟಿ ಜೋಡಿ ವಿವಾಹ ಬಂಧನಕ್ಕೊಳಗಾಗಲಿದ್ದಾರೆ ಎಂದು ಫಿಲ್ಮ್​ಫೇರ್​ ವರದಿ ಮಾಡಿದೆ.

ರಣವೀರ್​ ಹಾಗೂ ದೀಪಿಕಾ ಅವರಿಗೆ ಇಟಲಿ ತುಂಬಾ ಇಷ್ಟವಾದ ಸ್ಥಳವಾದ ಕಾರಣ ಅವರ ವಿವಾಹವನ್ನು ಅಲ್ಲೇ ಮಾಡಲು ನಿರ್ಧರಿಸಲಾಗಿದೆ. ಅದರಲ್ಲೂ ಈ ಇಬ್ಬರಿಗೆ ಬೇಕಾದಂತೆ ಈ ವಿವಾಹವನ್ನು ಕೇವಲ ಕುಟುಂಬದವರೊಂದಿಗೆ ಮಾಡಲು ನಿರ್ಧರಿಸಲಾಗಿದ್ದು, 30 ಮಂದಿ ಸಂಬಂಧಿಕರನ್ನು ಮಾತ್ರ ವಿವಾಹಕ್ಕೆ ಆಹ್ವಾನಿಸಲಾಗಿದೆಯಂತೆ.

ಇನ್ನೂ ಸ್ನೇಹಿತರು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಉಳಿದ ಸಂಬಂಧಿಕರಿಗಾಗಿ ಮುಂಬೈನಲ್ಲಿ ಒಂದು ಅದ್ದೂರಿ ಆರತಕ್ಷತೆಯನ್ನು ಆಯೋಜಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು ಫಿಲ್ಮ್​ಫೇರ್​ ವರದಿ ಮಾಡಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟ ಹಾಗೂ ಕಿರುತೆರೆ ನಿರೂಪಕ ಕಬೀರ್​ ಬೇಡಿ, ದೀಪಿಕಾ ಹಾಗೂ ರಣವೀರ್​ ಇಟಲಿಯಲ್ಲಿ ವಿವಾಹವಾಗಲಿದ್ದಾರೆ ಎಂದು ಟ್ವೀಟ್​ ಮೂಲಕ ಶುಭಕೋರಿದ್ದಾರೆ.ಇನ್ನೂ ಇವರ ವಿವಾಹಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಹಿಂದೆಯೇ ಎರಡೂ ಕುಟುಂಬದವರು ಸಾಕಷ್ಟು ಬಾರಿ ಭೇಟಿ ಮಾಡಿದ್ದರು. ಸದ್ಯ ಬಾಲಿವುಡ್​ನ ಮೋಸ್ಟ್ ಹ್ಯಾಪನಿಂಗ್​ ಜೋಡಿಯ ವಿವಾಹಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...