Brahmastra: ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ತಾಯಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ? ಚಿತ್ರತಂಡ ಮೌನ ವಹಿಸಿದ್ದೇಕೆ?

ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಭರ್ಜರಿ ಆರಂಭವನ್ನು ಮಾಡಿದ್ದು ಚಿತ್ರದ ವಿಎಫ್‌ಎಕ್ಸ್ ಇಫೆಕ್ಟ್‌ಗೆ ಅಭಿಮಾನಿಗಳು ಜಯಕಾರ ಹಾಕುತ್ತಿದ್ದಾರೆ. ಆಲಿಯಾ ಹಾಗೂ ರಣಬೀರ್ ಕಪೂರ್ ಜೋಡಿಯ ಬ್ರಹ್ಮಾಸ್ತ್ರ ಚಿತ್ರವು ಉತ್ತಮ ಆರಂಭವನ್ನೇ ಪಡೆದುಕೊಂಡಿದ್ದು, ಬಾಲಿವುಡ್‌ಗೆ ಅಂಟಿಕೊಂಡಿದ್ದ ಸೋಲಿನ ಶಾಪವನ್ನು ಕಿತ್ತೊಗೆಯುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅತ್ಯಂತ ದೊಡ್ಡ ಸೋಜಿಗದ ಸುದ್ದಿಯೆಂದರೆ ಚಿತ್ರದಲ್ಲಿ ದೀಪಿಕಾ ಅವರನ್ನು ವೀಕ್ಷಕರು ಅತಿಥಿ ಪಾತ್ರದಲ್ಲಿ ನೋಡಿರುವುದಾಗಿ ಹೇಳಿಕೊಂಡಿರುವುದಾಗಿದೆ.

ರಣ್‌ಬೀರ್ ಮತ್ತು ದೀಪಿಕಾ

ರಣ್‌ಬೀರ್ ಮತ್ತು ದೀಪಿಕಾ

  • Share this:
ನಿರ್ದೇಶಕ ಅಯಾನ್ ಮುಖರ್ಜಿಯವರ (Ayan Mukherjee) ಬ್ರಹ್ಮಾಸ್ತ್ರ (Brahmastra) ಚಿತ್ರವು ಕೊಂಚ ಜೋರಾಗಿಯೇ ಸದ್ದುಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಭರ್ಜರಿ ಆರಂಭವನ್ನು ಮಾಡಿದ್ದು ಚಿತ್ರದ ವಿಎಫ್‌ಎಕ್ಸ್ ಇಫೆಕ್ಟ್‌ಗೆ ಅಭಿಮಾನಿಗಳು ಜಯಕಾರ ಹಾಕುತ್ತಿದ್ದಾರೆ. ಆಲಿಯಾ ಹಾಗೂ ರಣಬೀರ್ ಕಪೂರ್ (Alia and Ranbir Kapoor) ಜೋಡಿಯ ಬ್ರಹ್ಮಾಸ್ತ್ರ ಚಿತ್ರವು ಉತ್ತಮ ಆರಂಭವನ್ನೇ ಪಡೆದುಕೊಂಡಿದ್ದು, ಬಾಲಿವುಡ್‌ಗೆ ಅಂಟಿಕೊಂಡಿದ್ದ ಸೋಲಿನ ಶಾಪವನ್ನು ಕಿತ್ತೊಗೆಯುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರದ ಪ್ರಚಾರ ಕೆಲವು ವಾರಗಳಿಂದೀಚೆಗೆ ನಡೆಯುತ್ತಿದ್ದು, ಚಿತ್ರ ನಿರ್ಮಾಪಕರು (Film producer) ಕೆಲವೊಂದು ಸೋಜಿಗವನ್ನು ರಣಬೀರ್ ಅಭಿಮಾನಿಗಳಿಗೆ ಚಿತ್ರದಲ್ಲಿ ಪ್ರದರ್ಶಿಸಿದ್ದು, ಸಿನಿಮಾ ವೀಕ್ಷಣೆಯ ಸಮಯದಲ್ಲಿ ವೀಕ್ಷಕರಿಗೆ ಈ ಅನುಭವ ನೇರವಾಗಿ ಆಗಲಿದೆ. 

ಅತ್ಯಂತ ದೊಡ್ಡ ಸೋಜಿಗದ ಸುದ್ದಿಯೆಂದರೆ ಚಿತ್ರದಲ್ಲಿ ದೀಪಿಕಾ ಅವರನ್ನು ವೀಕ್ಷಕರು ಅತಿಥಿ ಪಾತ್ರದಲ್ಲಿ ನೋಡಿರುವುದಾಗಿ ಹೇಳಿಕೊಂಡಿರುವುದಾಗಿದೆ. ದೀಪಿಕಾ ಅವರನ್ನು ಚಿತ್ರದಲ್ಲಿ ಕಂಡಿದ್ದೇವೆ ಎಂದು ಹೇಳಿಕೊಂಡಿರುವ ಚಿತ್ರ ಪ್ರೇಮಿಗಳು ಸಾಮಾಜಿಕ ಮಾಧ್ಯಮದಲ್ಲಿ ನಟಿಯ ಪಾತ್ರ ಹಾಗೂ ಚಿತ್ರದ ಕುರಿತು ಕಾಮೆಂಟ್‌ಗಳ ಸುರಿಮಳೆಯನ್ನೇ ನಡೆಸುತ್ತಿದ್ದಾರೆ.

ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಕಾಮೆಂಟ್ ಸುರಿಮಳೆ
ಒಬ್ಬ ಅಭಿಮಾನಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದಲ್ಲಿ ದೀಪಿಕಾ ಇರುವುದನ್ನು 99% ದಷ್ಟು ವೀಕ್ಷಕರು ಗಮನಿಸಿರುವುದಿಲ್ಲ ಏಕೆಂದರೆ ಈ ದೃಶ್ಯವನ್ನು ಐಮ್ಯಾಕ್ಸ್ (ಬೇರೆ ಪ್ರಿಂಟ್) ನಲ್ಲಿ ಮಾತ್ರವೇ ಕಾಣಬಹುದು. ಬ್ರಹ್ಮಾಸ್ತ್ರದಲ್ಲಿ ದೀಪಿಕಾ ಅಮೃತಾ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಬ್ಬ ಅಭಿಮಾನಿಯಂತೂ ದೀಪಿಕಾ ಅಮೃತಾ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಶಿವ (ರಣಬೀರ್ ಕಪೂರ್) ತಾಯಿಯಾಗಿ. ಬ್ರಹ್ಮಾಸ್ತ್ರದ ಎರಡನೇ ಭಾಗದಲ್ಲಿ ದೇವ್‌ಗೆ ದೀಪಿಕಾ ಅಮೃತಾ ಆಗಿ ಸಿಗಲಿದ್ದಾರೆ ಹಾಗೂ ರಣವೀರ್‌ಸಿಂಗ್ ದೇವ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಯಾನ್ ಮುಖರ್ಜಿಯ ತಂದೆ ತಾಯಿಯ ಹೆಸರು ಕೂಡ ದೇವ್ ಹಾಗೂ ಅಮೃತಾ ಎಂದಾಗಿದೆ.

ಇದನ್ನೂ ಓದಿ: Vivek Agnihotri: ಬೀಫ್​ ಬಗ್ಗೆ ರಣಬೀರ್ ಹೇಳಿಕೆ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ ಮತ್ತೊಂದು ವಿಡಿಯೋ ವೈರಲ್!

ಪೃಧ್ವಿ ಎನ್ನುವ ಬಳಕೆದಾರರು ಟ್ವಿಟ್ಟರ್‌ನಲ್ಲಿ ದೀಪಿಕಾ ಅವರನ್ನು ಚಿತ್ರದಲ್ಲಿ ಎಷ್ಟು ಜನರು ನೋಡಿದ್ದೀರಿ ಎಂಬುದಾಗಿ ಪ್ರಶ್ನೆ ಹಾಕಿದ್ದಾರೆ. ಇನ್ನು ಆಲಿಯಾ ರಣಬೀರ್ ಅಭಿಮಾನಿಯೊಬ್ಬರು ಚಿತ್ರದಲ್ಲಿ ನಾಲ್ವರು ಸ್ಟಾರ್ ನಟರಿದ್ದು, ಶಾರುಖ್ ಖಾನ್, ರಣಬೀರ್, ಆಲಿಯಾ, ಹಾಗೂ ದೀಪಿಕಾ ಎಂದು ಬರೆದುಕೊಂಡಿದ್ದು, ನನ್ನ ಮೆಚ್ಚಿನ ನಟ ನಟಿಯರನ್ನು ಒಂದೇ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದಕ್ಕೆ ನಿರ್ದೇಶಕನಿಗೆ ಶಹಬ್ಬಾಷ್ ಎಂದು ಹೊಗಳಿದ್ದಾರೆ.ಬ್ರಹ್ಮಾಸ್ತ್ರದಲ್ಲಿ ಅಮೃತಾ ಆಗಿ ದೀಪಿಕಾ ನನಗೊಬ್ಬಳಿಗೆ ಮಾತ್ರ ಕಾಣಿಸಿಕೊಂಡಿದ್ದಾರೆಯೇ? ಚಿತ್ರವನ್ನು ತುಂಬಾ ಇಷ್ಟಪಟ್ಟಿರುವೆ ಪಾರ್ಟ್-2 ದೇವ್‌ಗಾಗಿ ನಿರೀಕ್ಷಿಸುತ್ತಿರುವೆ ಎಂಬುದಾಗಿ ಮತ್ತೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ. ಇನ್ನು ಬ್ರಹ್ಮಾಸ್ತ್ರದ ಎರಡನೇ ಭಾಗಕ್ಕಾಗಿ ಕಾಯುತ್ತಿರುವೆ ಎಂಬುದಾಗಿ ಹೆಚ್ಚಿನ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಬ್ರಹ್ಮಾಸ್ತ್ರ ಭಾಗ ಎರಡು: ದೇವ್
ಬ್ರಹ್ಮಾಸ್ತ್ರ ಭಾಗ ಎರಡು: ದೇವ್ ಎಂಬ ಶೀರ್ಷಿಕೆಯ ಉತ್ತರಭಾಗದ ಘೋಷಣೆಯೊಂದಿಗೆ ಚಲನಚಿತ್ರವು ಕೊನೆಗೊಳ್ಳುತ್ತದೆ. ಇನ್ನು ಬ್ರಹ್ಮಾಸ್ತ್ರ ಭಾಗ 2 ರಲ್ಲಿ ದೀಪಿಕಾ ಪಡುಕೋಣೆ, ಹೃತಿಕ್ ರೋಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ. ಆದರೆ ಈ ಕುರಿತು ಇನ್ನೂ ಯಾವುದೇ ದೃಢೀಕರಣ ಸಿಕ್ಕಿಲ್ಲ. ಬ್ರಹ್ಮಾಸ್ತ್ರ ಚಿತ್ರವು ವಾರಾಂತ್ಯದ ವೇಳೆಯಲ್ಲಿಯೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ 36.50 ರಿಂದ 38.50 ಕೋಟಿಗಳಷ್ಟು ಆದಾಯ ಬಾಚಿಕೊಂಡಿದೆ ಎಂಬುದಾಗಿ ಬಾಲಿವುಡ್ ಹಂಗಾಮಾ ವರದಿ ನೀಡಿದೆ.

ಇದನ್ನೂ ಓದಿ:  Big Budget Movies: ಬಾಹುಬಲಿಯಿಂದ ಬ್ರಹ್ಮಾಸ್ತ್ರ ತನಕ, ಭಾರತದ ಬಿಗ್​ ಬಜೆಟ್ ಸಿನಿಮಾಗಳಿವು

ಟ್ರೇಡ್ ವೆಬ್‌ಸೈಟ್ BoxOfficeIndia.com ಉಲ್ಲೇಖಿಸಿರುವಂತೆ ಭಾರತದಲ್ಲಿ ಚಿತ್ರವು 35-36 ಕೋಟಿ ಆದಾಯವನ್ನು ಮೊದಲ ದಿನದಲ್ಲಿಯೇ ಕಂಡುಕೊಂಡಿದೆ ಎಂದು ಉಲ್ಲೇಖಿಸಿದೆ. ಚಿತ್ರ ನಿರ್ಮಾಪಕರಾದ ಕರಣ್ ಜೋಹರ್ ಚಿತ್ರವು ವಿಶ್ವದಾದ್ಯಂತ ಆರಂಭ ದಿನದಂದೇ 75 ಕೋಟಿ ಆದಾಯವನ್ನು ಗಳಿಸಿದ್ದು ಮೊದಲ ದಿನದಂದೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಾನು ವಿನಮ್ರ, ಕೃತಜ್ಞ ಹಾಗೂ ನನಗೆ ಉತ್ಸಾಹ ನಿಯಂತ್ರಿಸಲಾಗುತ್ತಿಲ್ಲವೆಂದು ಕರಣ್ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ
Published by:Ashwini Prabhu
First published: