• Home
  • »
  • News
  • »
  • entertainment
  • »
  • Chiranjeevi: ಅಬ್ಬಬ್ಬಾ ಒಂದು ಮನೆಗೋಸ್ಕರ 30 ಕೋಟಿ ಖರ್ಚು ಮಾಡಿದ್ರಾ ಮೆಗಾಸ್ಟಾರ್?

Chiranjeevi: ಅಬ್ಬಬ್ಬಾ ಒಂದು ಮನೆಗೋಸ್ಕರ 30 ಕೋಟಿ ಖರ್ಚು ಮಾಡಿದ್ರಾ ಮೆಗಾಸ್ಟಾರ್?

ಮೆಗಾ ಸ್ಟಾರ್ ಚಿರಂಜೀವಿ

ಮೆಗಾ ಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಎಂದರೆ ಟಾಲಿವುಡ್​ನಲ್ಲಿ ಸಖತ್ ಕ್ರೇಜ್. ಈ ಸ್ಟಾರ್ ನಟ ಒಂದು ಬಂಗಲೆ ಮೇಲೆ 30 ಕೋಟಿ ಖರ್ಚು ಮಾಡಿದ್ರಾ?

  • Share this:

ತೆಲುಗು ಸೂಪರ್ ಸ್ಟಾರ್ ಚಿರಂಜೀವಿ (Chiranjeevi) ಸಿನೆಮಾ ಬರಲಿದೆ ಅಂತ ಗೊತ್ತಾದರೆ ಸಾಕು ತೆಲುಗು ರಾಜ್ಯದಲ್ಲಿರುವ ಅವರ ಅಭಿಮಾನಿಗಳು ಅವರನ್ನು ದೊಡ್ಡ ಸ್ಕ್ರೀನ್ ಮೇಲೆ ನೋಡಲು ತುಂಬಾನೇ ಕಾತುರದಿಂದ ಕಾಯುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಮೆಗಾಸ್ಟಾರ್ (Megastar) ಚಿರಂಜೀವಿ ಅವರು ತಮ್ಮ ನಟನೆಯಿಂದ ಮತ್ತು ಡ್ಯಾನ್ಸ್ ನಿಂದಾಗಿ ತೆಲುಗು (Telugu) ಚಿತ್ರೋದ್ಯಮದಲ್ಲಿ ಹೆಸರು ಮಾಡಿದ್ದಾರೆ. ತಮ್ಮ 67ನೇ ವಯಸ್ಸಿನಲ್ಲಿಯೂ ಈ ಸೂಪರ್ ಸ್ಟಾರ್ ಇನ್ನೂ ಚಿತ್ರದಲ್ಲಿ ನಾಯಕ ನಟನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದರೆ ಇವರ ಕ್ರೇಜ್ ಮತ್ತು ಫಿಟ್ನೆಸ್ (Fitness) ಯಾವ ಹಂತದಲ್ಲಿದೆ ಅಂತ ಅರ್ಥವಾಗುತ್ತದೆ.


‘ವಾಲ್ಟೇರ್ ವೀರಯ್ಯ’ ಚಿತ್ರದ ಬಿಡುಗಡೆ


ಚಿರಂಜೀವಿ ಅವರು ತಮ್ಮ ಮುಂಬರುವ ಆಕ್ಷನ್ ಹಾಸ್ಯ ಚಿತ್ರ ವಾಲ್ಟೇರ್ ವೀರಯ್ಯ ಚಿತ್ರದ ಬಿಡುಗಡೆಗೆ ಮುಂದಾಗಿದ್ದಾರೆ. ಹಿಟ್ಲರ್ ಚಿತ್ರದ ನಾಯಕ ನಟರಾದ ಚಿರಂಜೀವಿ ಅವರು ಇತ್ತೀಚೆಗೆ ಕೆ.ಎಸ್.ರವೀಂದ್ರ ನಿರ್ದೇಶನದ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಚಲನಚಿತ್ರ ಘಟಕದ ಇತರ ಸದಸ್ಯರೊಂದಿಗೆ ಭಾಗವಹಿಸಿದ್ದರು.
ವಿಶಾಖಪಟ್ಟಣಂನ ಆಂಧ್ರ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ತಾರೆಯನ್ನು ಭೇಟಿಯಾಗಲು ಉತ್ಸುಕರಾಗಿದ್ದ ಪ್ರೇಕ್ಷಕರೊಂದಿಗೆ ನಟ ಆಸಕ್ತಿದಾಯಕ ಸಂವಾದ ನಡೆಸಿದರು.


ವೈಜಾಗ್ ನಲ್ಲಿ ಆಸ್ತಿ ಖರೀದಿಸಿರುವುದಾಗಿ ಹೇಳಿಕೊಂಡ ಚಿರಂಜೀವಿ


ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಚಿರಂಜೀವಿ ಅವರು ವೈಜಾಗ್ ನಲ್ಲಿ ಎಂದರೆ ವಿಶಾಖಪಟ್ಟಣಂ ನಲ್ಲಿ 30 ಕೋಟಿ ರೂಪಾಯಿಗಳ ಮೌಲ್ಯದ ಮನೆಯನ್ನು ನಿರ್ಮಿಸಲು ಹೊಚ್ಚ ಹೊಸ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಬಹಿರಂಗಪಡಿಸಿದರು.


ವೆಕೇಷನ್​ ಮನೆ ಇದು


ಚಿರಂಜೀವಿ ಅವರು "ನಾನು ಇತ್ತೀಚೆಗೆ ಭೀಮಿಲಿ ರಸ್ತೆಯಲ್ಲಿ ಕೆಲವು ಆಸ್ತಿಯನ್ನು ಖರೀದಿಸಿದ್ದೇನೆ. ನಾನು ರಜೆಯ ದಿನಗಳನ್ನು ಕಳೆಯಲು ಒಂದು ಮನೆಯನ್ನು ಇಲ್ಲಿ ನಿರ್ಮಿಸುತ್ತೇನೆ" ಎಂದರು.


ಈ ಪ್ರದೇಶದಲ್ಲಿ ವಾಸಿಸುವ ಸಿಂಪಲ್ ಜನರ ಕಾರಣದಿಂದಾಗಿ ಅವರು ಯಾವಾಗಲೂ ವಿಶಾಖಪಟ್ಟಣಂನಲ್ಲಿ ನೆಲೆಸಲು ಬಯಸುತ್ತಾರೆ ಎಂಬುದರ ಬಗ್ಗೆ ಗಾಡ್ ಫಾದರ್ ನಟ ತಮ್ಮ ಮನದಾಳದ ಮಾತನ್ನು ಎಲ್ಲಾ ಪ್ರೇಕ್ಷಕರ ಮುಂದೆ ತೆರೆದಿಟ್ಟರು.


ವಿಶಾಖಪಟ್ಟಣಂ ಗೆ ಶಿಫ್ಟ್ ಆಗ್ತಾರಾ ಚಿರಂಜೀವಿ?


ನಗರದ ಸುಂದರವಾದ ರಾಮಕೃಷ್ಣ ಬೀಚ್ ಗೆ ಜನರು ಹೇಗೆ ಭೇಟಿ ನೀಡುತ್ತಾರೆ ಮತ್ತು ಅದನ್ನು ತಮ್ಮ ಕುಟುಂಬಗಳೊಂದಿಗೆ ಹೇಗೆ ಆನಂದಿಸುತ್ತಾರೆ ಎಂಬುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ನಟ ಹೇಳಿದರು.


ಟಾಲಿವುಡ್ ಸ್ಟಾರ್ ಮುಂದಿನ ವರ್ಷ ತಮ್ಮ ವಸತಿ ಪ್ರದೇಶವನ್ನು ನಿರ್ಮಿಸಲಾಗುವುದು ಎಂದು ಸುಳಿವು ನೀಡಿದರು. ವರದಿಗಳ ಪ್ರಕಾರ, ಚಿರಂಜೀವಿ ಅವರ ಮನೆ ಸಮುದ್ರಾಭಿಮುಖವಾಗಿದ್ದು, ಸಮುದ್ರ ತೀರದ ದೂರದ ವಿಸ್ಟಾಗಳನ್ನು ಹೊಂದಿರುತ್ತದೆ.


ನಟ ವಿಶಾಖಪಟ್ಟಣಂ ಮನೆಗಾಗಿ ಸುಮಾರು 30 ಕೋಟಿ ಖರ್ಚು ಮಾಡಿದ್ದಾರೆ ಮತ್ತು ಶೀಘ್ರದಲ್ಲಿಯೇ ಈ ಸ್ಥಳವನ್ನು ತಮ್ಮ ಶಾಶ್ವತ ಮನೆಯನ್ನಾಗಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.


ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಲ್ಲಿ ಚಿರಂಜೀವಿ ಅವರ ಗೆಟಪ್ ಹೇಗಿತ್ತು ಗೊತ್ತೇ?


ವಾಲ್ಟೇರ್ ವೀರಯ್ಯ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಲ್ಲಿ ಚಿರಂಜೀವಿ ಕ್ಯಾಶುಯಲ್ ಕಪ್ಪು ಟಿ-ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಚಿತ್ರದಲ್ಲಿ ತೆರೆಯ ಮೇಲಿನ ಸಹೋದರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರ ಸಹನಟ ರವಿ ತೇಜಾ ಕೂಡ ಕಪ್ಪು ಬಣ್ಣದ ಉಡುಪನ್ನು ಧರಿಸಿ ಬಂದಿದ್ದರು.


ಇದನ್ನೂ ಓದಿ: Golden Globes 2023: RRR ಐತಿಹಾಸಿಕ ಗೆಲುವು! ನಾಟು ನಾಟು ಬೆಸ್ಟ್ ಒರಿಜಿನಲ್ ಸಾಂಗ್


ಚಿರಂಜೀವಿ ಅವರು ವಾಲ್ಟೇರ್ ವೀರಯ್ಯ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ ನಟಿ ಶ್ರುತಿ ಹಾಸನ್ ಅವರ ಬಗ್ಗೆ ಮಾತನಾಡಿ ನಟಿಯ ಅತ್ಯುತ್ತಮ ಅಭಿನಯವನ್ನು ಶ್ಲಾಘಿಸಿದರು. ಶ್ರುತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.


ವಾಲ್ಟೇರ್ ವೀರಯ್ಯ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಪಾತ್ರವರ್ಗದಲ್ಲಿ ಊರ್ವಶಿ ರೌಟೇಲಾ, ರಾಜೇಂದ್ರ ಪ್ರಸಾದ್, ಶ್ರೀನಿವಾಸ್ ರೆಡ್ಡಿ, ವೆನ್ನೆಲಾ ಕಿಶೋರ್, ಬಾಬಿ ಮತ್ತು ಸಪ್ತಗಿರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ಜನವರಿ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು