ಅಗಲಿದ ಸಿನಿ ತಾರೆಯರ ಆತ್ಮಗಳ ಹೆಸರಲ್ಲಿ ವಿದೇಶಿಗನ ವಂಚನೆ! 

ಚಿರು ನಿಧನದ ನಂತರ, ಕೆಲ ದಿನಗಳವರೆಗೂ ಅವರ ಅಂತ್ಯಸಂಸ್ಕಾರ ಮಾಡಿರುವ ಬೃಂದಾವನ ತೋಟದ ಮನೆಯಲ್ಲಿ ಹಾಗೂ ಅವರ ನಿವಾಸದ ಬಳಿ ಆತ್ಮ ಓಡಾಡುತ್ತಿದೆ ಎಂದು ಸುದ್ದಿಯನ್ನು ಕೆಲ ಕಿಡಿಗೇಡಿಗಳು ಹಬ್ಬಿಸಿದ್ದರು. ಅದರ ಬೆನ್ನಲ್ಲೇ ವಿದೇಶಿ ಪ್ಯಾರಾನಾರ್ಮಲ್ ತಜ್ಞರೊಬ್ಬರು, ತಾನು ಚಿರು ಸರ್ಜಾ ಆತ್ಮದ ಜೊತೆ ಮಾತನಾಡಿದ್ದೀನಿ ಎಂದು ಯೂಟ್ಯೂಬ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

news18-kannada
Updated:July 25, 2020, 2:36 PM IST
ಅಗಲಿದ ಸಿನಿ ತಾರೆಯರ ಆತ್ಮಗಳ ಹೆಸರಲ್ಲಿ ವಿದೇಶಿಗನ ವಂಚನೆ! 
ಮೇಘನಾ ರಾಜ್​ - ಚಿರು ಸರ್ಜಾ
  • Share this:
ಸ್ಯಾಂಡಲ್​ವುಡ್​ನ ಯುವಸಾಮ್ರಾಟ್​ ಚಿರು ಸರ್ಜಾ ನಮ್ಮನ್ನಗಲಿ ಒಂದೂವರೆ ತಿಂಗಳೇ ಕಳೆದಿದೆ. ಆದರೆ ಈಗಲೂ ಅವರ ನೆನಪುಗಳು ಮಾತ್ರ ಕನ್ನಡ ಚಿತ್ರರಂಗ ಹಾಗೂ ಅವರ ಪ್ರತಿಯೊಬ್ಬ ಅಭಿಮಾನಿಯಲ್ಲೂ ಹಸಿರಾಗಿದೆ. ಒಂದು ರೀತಿ ಜೂನ್ 7 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ ಅಂದರೂ ತಪ್ಪಾಗಲಾರದು.

ಚಿರು ನಿಧನದ ನಂತರ, ಕೆಲ ದಿನಗಳವರೆಗೂ ಅವರ ಅಂತ್ಯಸಂಸ್ಕಾರ ಮಾಡಿರುವ ಬೃಂದಾವನ ತೋಟದ ಮನೆಯಲ್ಲಿ ಹಾಗೂ ಅವರ ನಿವಾಸದ ಬಳಿ ಆತ್ಮ ಓಡಾಡುತ್ತಿದೆ ಎಂದು ಸುದ್ದಿಯನ್ನು ಕೆಲ ಕಿಡಿಗೇಡಿಗಳು ಹಬ್ಬಿಸಿದ್ದರು. ಅದರ ಬೆನ್ನಲ್ಲೇ ವಿದೇಶಿ ಪ್ಯಾರಾನಾರ್ಮಲ್ ತಜ್ಞರೊಬ್ಬರು, ತಾನು ಚಿರು ಸರ್ಜಾ ಆತ್ಮದ ಜೊತೆ ಮಾತನಾಡಿದ್ದೀನಿ ಎಂದು ಯೂಟ್ಯೂಬ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಪ್ಯಾರಾನಾರ್ಮಲ್ ತಜ್ಞ ಚಾರ್ಲಿ


ಹೀಗೆ ಯೂಟ್ಯೂಬ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವಾತನ ಹೆಸರು ಚಾರ್ಲಿ ಚಿಟ್ಟೆಂಡೆನ್. ಐಟಿಸಿ ರೀಸರ್ಚ್ ಡಿವೈಸ್ ಪಿಎಸ್ಬಿ7 ಮೂಲಕ ಚಿರು ಸರ್ಜಾ ಆತ್ಮದ ಜೊತೆ ಮಾತನಾಡುತ್ತೇನೆ ಎಂದು ಕೆಲ ಬಟನ್ ಒತ್ತುತ್ತಾರೆ ಚಾರ್ಲಿ. ಚಿರು ಸರ್ಜಾ ಹೆಸರು ಹೇಳುತ್ತಾ, ಆತ್ಮವನ್ನು ಕರೆಯುತ್ತಾರೆ. ಆಗ ಕ್ಯಾಲ್ಕುಲೇಟರ್​ನಂತೆ ಸಾಮಾನ್ಯವಾಗಿ ಕೆಲ ನಂಬರಗಗಳನ್ನು ತೋರಿಸುವ ಆ ಐಟಿಸಿ ರೀಸರ್ಚ್ ಡಿವೈಸ್, ಬೀಪ್ ಬೀಪ್ ಎಂದು ಶಬ್ದ ಮಾಡುತ್ತಾ, ಸಂಖ್ಯೆ ಹೆಚ್ಚಾಗುತ್ತಾ ಕಡಿಮೆಯಾಗುತ್ತದೆ. ಆ ಬೀಪ್ ಬೀಪ್ ಶಬ್ದವೇ ಚಿರು ಆತ್ಮ ಎಂದು ಬಿಂಬಿಸುತ್ತಾರೆ ಚಾರ್ಲಿ.

ಸ್ವಘೋಷಿತ ಪ್ಯಾರಾನಾರ್ಮಲ್ ಎಕ್ಸ್ಪರ್ಟ್ ಚಾರ್ಲಿ....

ಅಂದಹಾಗೆ, ಪ್ರಪಂಚದಾದ್ಯಂತ ಪ್ಯಾರಾನಾರ್ಮಲ್ ತಜ್ಞಈ ಐಟಿಸಿ ರಿಸರ್ಚ್ ಡಿವೈಸ್ಅನ್ನು ಹೆಚ್ಚು ಬಳಸುತ್ತಾರೆ. ಅದರಲ್ಲಿ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಎಲೆಕ್ಟ್ರೋಮ್ಯಾಗ್ನೆಟಿಕ್ ಶಬ್ದಗಳನ್ನು ಕೇಳಬಹುದು. ಆದರೆ ಅಕ್ಕ ಪಕ್ಕ ತಾವೇ ಬೇಕಂತಲೇ ಥರಹೇವಾರಿ ಶಬ್ದ ಸೃಷ್ಟಿಸಿ ಮೋಸ ಕೂಡ ಮಾಡಬಹುದು. ಚಾರ್ಲಿ ಕೂಡ ಹಾಗೇ ಮಾಡುತ್ತಿದ್ದಾನೆ ಎಂಬ ಅನುಮಾನವಿದೆ. ಯಾಕೆಂದರೆ ಆತ ಈ 3 ನಿಮಿಷ 54 ಸೆಕೆಂಡುಗಳ ವಿಡಿಯೋದಲ್ಲಿ, ಐಟಿಸಿ ರಿಸರ್ಚ್ ಡಿವೈಸ್ಅನ್ನು ಹೊರತುಪಡಿಸಿ ಬೇರೇನನ್ನೂ ತೋರಿಸಿಲ್ಲ.

ಈ ಐಟಿಸಿ ರೀಸರ್ಚ್ ಬೆಲೆ 5 ಸಾವಿರ ರೂ.!ಇದೇ ರೀತಿ ಸಾವಿರಕ್ಕೂ ಹೆಚ್ಚು ಜನರ ವಿಡಿಯೋಗಳನ್ನು ಚಾರ್ಲಿ ಯೂಟ್ಯೂಬ್​ನಲ್ಲಿ ಶೇರ್ ಮಾಡಿದ್ದಾನೆ. ಆದರೆ ಆತನ ಯೂಟ್ಯೂಬ್ ಚಾನಲ್​ನಲ್ಲಿ ಆತನ ಬಗ್ಗೆಯಾಗಲಿ ಅಥವಾ ಅವನ ಈ ಪ್ಯಾರಾನಾರ್ಮಲ್ ರಿಸರ್ಚ್ ಬಗ್ಗೆಯಾಗಲೀ ಯಾವುದೆ ಮಾಹಿತಿ ಇಲ್ಲ. ಇನ್ನು ಈ ಐಟಿಸಿ ರಿಸರ್ಚ್ ಡಿವೈಸ್ಅನ್ನು ಭಾರತದಲ್ಲೂ ಯಾರು ಬೇಕಾದರೂ ಆನ್ಲೈನ್ನಲ್ಲಿ ಖರೀದಿಸಬಹುದಾಗಿ. ಬೆಲೆ ಕೇವಲ 5 ಸಾವಿರ ರೂಪಾಯಿಯಿಂದ 8 ಸಾವಿರ ರೂಪಾಯಿ, ಅವರೂ ಅದಕ್ಕೊಂದು ಮೈಕ್ ಹಾಕಿಕೊಂಡು ತಾವೂ ಪ್ಯಾರಾನಾರ್ಮಲ್ ಎಕ್ಸ್ಪರ್ಟ್ ಎಂಬ ಪೋಸ್ ಕೊಡಬಹುದು.

ಈಗೀಗ ಭಾರತದ ಆತ್ಮಗಳೇ ಚಾರ್ಲಿ ಟಾರ್ಗೆಟ್!

ಇಡೀ ವಿಶ್ವದಲ್ಲೇ ಭಾರತ ಎಲ್ಲ ಸೇವೆಗಳು, ಉತ್ಪನ್ನಗಳಿಗೂ ಅತಿ ದೊಡ್ಡ ಮಾರ್ಕೆಟ್. ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಕಾರಣ, ಎಲ್ಲರಿಗೂ ಭಾರತದ ಮೇಲೆ ಕಣ್ಣು. ವಿದೇಶಿ ಕಂಪನಿಗಳು ಮಾತ್ರವಲ್ಲ ಯೂಟ್ಯೂಬರ್​ಗಳಿಗೂ ಭಾರತವೇ ಉತ್ತಮ ಮಾರುಕಟ್ಟೆ. ಹೀಗಾಗಿಯೇ ಭಾರತೀಯರನ್ನು ಸೆಳೆಯಲು ಅವರು ಮಾಡುವ ಸರ್ಕಸ್ ಒಂದೆರಡಲ್ಲ.

ಪ್ಯಾರಾನಾರ್ಮಲ್ ತಜ್ಞ ಚಾರ್ಲಿ


ಈಗ ಚಾರ್ಲಿ ಮಾಡುತ್ತಿರುವುದೂ ಅದೇ. ಈಗೀಗ ಚಾರ್ಲಿ ಭಾರತೀಯರ ಆತ್ಮಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾನೆ. ಬಾಬಾ ಸಾಹೆಬ್ ಅಂಬೇಡ್ಕರ್, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಸುಭಾಷ್ ಚಂದ್ರ ಬೋಸ್, ಓಶೋ. ಇಂದಿರಾ ಗಾಂಧಿ, ಸ್ವಾಮಿ ವಿವೇಕಾನಂದ, ಸುಶಾಂತ್ ಸಿಂಗ್ ರಜಪೂತ್ ಜತೆಗೆ ಯುಪಿ ಪೊಲೀಸರ ಗುಂಡಿಗೆ ಬಲಿಯಾದ ಪಾತಕಿ ವಿಕಾಸ್ ದುಬೆ ಆತ್ಮದ ಜೊತೆಗೂ ಮಾತನಾಡಿದ್ದೀನಿ ಅಂತ ಯೂಟ್ಯೂಬ್​ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Pawan Kalyan: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪವನ್​ ಕಲ್ಯಾಣ್​: ವೈರಲ್​ ಆಗುತ್ತಿದೆ ಫೋಟೋ..!

ಆ ಮೂಲಕ ತನ್ನ ಯೂಟ್ಯೂಬ್ ಚಾನಲ್ ಸಬ್​ಸ್ಕ್ರೈಬರ್​ಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅದೇನೇ ಇರಲಿ ಜನ ಈತನ ಈ ಆತ್ಮಗಳ ಜೊತೆಗಿನ ನಕಲಿ ಆಟಕ್ಕೆ ಮರುಳಾಗದಿರಲಿ.
Published by: Anitha E
First published: July 25, 2020, 10:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading