BREAKING NEWS: ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಾ ಆಮೀರ್ ಖಾನ್? ಇವರ ಅಭಿಮಾನಿಗಳಿಗೆ ಬಿಗ್ ಶಾಕ್!
ಪತ್ರಿಕಾಗೋಷ್ಠಿಯಲ್ಲಿ ಆಮೀರ್ ಖಾನ್ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಕೆಲವೇ ತಿಂಗಳ ಹಿಂದಷ್ಟೇ ಈ ಸಿನಿಮಾ ಸಹವಾಸ ಸಾಕು, ಇದರಿಂದ ಬ್ರೇಕ್ ತೆಗೆದುಕೊಳ್ಳ ಬೇಕು ಅಂತ ಆಮೀರ್ ಖಾನ್ ನಿರ್ಧಾರ ಮಾಡಿದ್ದರಂತೆ.
ಬಾಲಿವುಡ್ನ (Bollywood) ‘ಮಿಸ್ಟರ್ ಪರ್ಫೆಕ್ಟನಿಸ್ಟ್’ (Mr. Perfectionist) ಆಮೀರ್ ಖಾನ್ (Aamir Khan) ಚಿತ್ರರಂಗಕ್ಕೆ (Film Industry) ಗುಡ್ ಬೈ (Good Bye) ಹೇಳ್ತಾರಾ? ಹೀಗೊಂದು ಗಾಸಿಪ್ (Gossip) ಓಡಾಡುತ್ತಿದೆ. ಈ ಸುದ್ದಿ (News) ಕೇಳಿ ಆಮೀರ್ ಖಾನ್ ಅಭಿಮಾನಿಗಳು (Fans) ಶಾಕ್ಗೆ (Shock) ಒಳಗಾಗಿದ್ದಾರೆ. ನೀವು ಇನ್ನೂ ಸಿನಿಮಾಗಳನ್ನು (Cinema) ಮಾಡಬೇಕು, ನಿಮ್ಮ ನಟನೆಯನ್ನು (Acting) ಇನ್ನಷ್ಟು ನೋಡಬೇಕು, ಚಿತ್ರರಂಗದಲ್ಲಿ ಇನ್ನೂ ಬಹಳ ವರ್ಷ ನೀವು ಇರಬೇಕು ಅಂತ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಹಾಗಿದ್ರೆ ಆಮೀರ್ ಖಾನ್ ನಿಜಕ್ಕೂ ಚಿತ್ರರಂಗ ತೊರೆಯುವುದಕ್ಕೆ ನಿರ್ಧಾರ ಮಾಡಿದ್ದಾರಾ? ಅವರಿಗೆ ಅಂಥದ್ದು ಏನಾಯ್ತು? ಈ ರೀತಿ ದಿಢೀರ್ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣವೇನು? ಇದು ನಿಜ ಸುದ್ದಿನಾ ಅಥವಾ ಗಾಸಿಪ್ಪಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ಓದಿ…
ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಆಮೀರ್ ಖಾನ್?
ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 11ರಂದು ಆ ಚಿತ್ರ ತೆರೆಕಾಣಲಿದೆ. ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಪದೇಪದೇ ಮುಂದೂಡಲ್ಪಡುತ್ತಿದೆ. ಈಗ ಅವರು ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರದ ಕಡೆಗೆ ಗಮನ ಹರಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳುವ ವಿಚಾರ ಹಂಚಿಕೊಂಡಿದ್ದಾರೆ.
ಕೆಲವೇ ತಿಂಗಳ ಹಿಂದೆ ಇಂಥದ್ದೊಂದು ಕಠಿಣ ನಿರ್ಧಾರ
ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಆಮೀರ್ ಖಾನ್ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಕೆಲವೇ ತಿಂಗಳ ಹಿಂದಷ್ಟೇ ಈ ಸಿನಿಮಾ ಸಹವಾಸ ಸಾಕು, ಇದರಿಂದ ಬ್ರೇಕ್ ತೆಗೆದುಕೊಳ್ಳ ಬೇಕು ಅಂತ ಆಮೀರ್ ಖಾನ್ ನಿರ್ಧಾರ ಮಾಡಿದ್ದರಂತೆ.
57 ವರ್ಷದ ಅಮೀರ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಚಿತ್ರರಂಗಕ್ಕೆ ವಿದಾಯ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ವೈಯುಕ್ತಿಕ ಜೀವನ ಮತ್ತಿತರ ಕಾರಣಗಳಿಂದ ಅವರ ಮನಸ್ಸಿನಲ್ಲಿ ಇಂತಹ ಯೋಚನೆಗಳು ಬಂದಿದ್ದವು ಅಂತ ಅವರೇ ಹೇಳಿಕೊಂಡಿದ್ದಾರೆ.
ಫ್ಯಾಮಿಲಿ, ಮಕ್ಕಳಿಗಾಗಿ ಸಮಯ ಮೀಸಲು
ಇತ್ತೀಚೆಗಷ್ಟೇ ಅಮೀರ್ ಖಾನ್ ಹೆಂಡತಿ ಕಿರಣ್ ರಾವ್ ಅವರೊಂದಿಗಿನ ಬಾಂಧವ್ಯವನ್ನು ಮುರಿಯುವ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಸಿನಿಮಾಗಳಿಂದ ನನ್ನ ಕುಟುಂಬ ಮತ್ತು ಮಕ್ಕಳಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸಿದ್ದೇನೆ, ಎಂದು ಅವರು ಭಾವಿಸುವ ಸಮಯವಿತ್ತು. ಇದೇ ಕಾರಣಕ್ಕೆ ನಟನೆ ಬಿಡುವ ಮನಸ್ಸು ಅವರ ಮನದಲ್ಲಿ ಮೂಡಿತ್ತಂತೆ.
ಚಿತ್ರರಂಗ ತೊರೆಯದಂತೆ ಕುಟುಂಬ ಸದಸ್ಯರ ಕಿವಿಮಾತು
ಈ ಎಲ್ಲ ವಿಚಾರಗಳನ್ನು ಆಲೋಚನೆ ಮಾಡಿದ ಬಳಿಕ ಆಮಿರ್ ಖಾನ್ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳಲು ನಿರ್ಧರಿಸಿದ್ದರು. ಅದನ್ನು ಕುಟುಂಬದವರ ಜೊತೆ ಹೇಳಿಕೊಂಡಿದ್ದರು. ಆದರೆ ಮನೆಯವರು ಅದಕ್ಕೆ ಒಪ್ಪಿಗೆ ನೀಡಲಿಲ್ಲವಂತೆ. ಫ್ಯಾಮಿಲಿ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಂತೆ ಹೆಂಡತಿ ಹಾಗೂ ಮಕ್ಕಳು ಸಲಹೆ ನೀಡಿ್ದರಂತೆ. ಹೀಗಾಗಿ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ ಅಂತ ಆಮೀರ್ ಖಾನ್ ಹೇಳಿದ್ದಾರೆ.
ನನಗೆ ಈಗ ಬೇಗ ಅರ್ಥವಾಯಿತು. ನಾನು 86 ನೇ ವಯಸ್ಸಿನಲ್ಲಿ ಅರ್ಥಮಾಡಿಕೊಂಡಿದ್ದರೆ, ನಾನು ಅದನ್ನು ಸುಧಾರಿಸಲು ಸಾಧ್ಯವಿರಲಿಲ್ಲ. ಆದರೆ ಈಗ ಸಮಯ ಬಂದಿದೆ ಮತ್ತು ನಾನು ಈ ತಪ್ಪುಗಳನ್ನು ಸರಿಪಡಿಸಲು ಪ್ರಾರಂಭಿಸಿದೆ. ಹೀಗಾಗಿ ಸಿನಿಮಾ ಜೊತೆಗೆ ಫ್ಯಾಮಿಲಿಗೂ ಸಮಯ ಕೊಡಲು ನಿರ್ಧಾರ ಮಾಡಿದ್ದೇನೆ ಅಂತ ಹೇಳಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ