Jai Bheem ವಿವಾದ: ಸಂಭಾವನೆ ಹಿಂದಿರುಗಿಸಲು ನಿರ್ಧರಿಸಿದ ಚಿತ್ರದ ಸಂಭಾಷಣೆಕಾರ

ಇದೀಗ ‘ಜೈ ಭೀಮ್’ ಸಿನಿಮಾದ ವಿವಾದಕ್ಕೆ ಇನ್ನೊಂದು ವಿಷಯ ಸೇರ್ಪಡೆ ಆಗಿದೆ; ಚಿತ್ರದ ಸಂಭಾಷಣೆ ಬರಹಗಾರ ಕಣ್ಮಣಿ ಗುಣಶೇಖರನ್, ಈ ಸಿನಿಮಾಗಾಗಿ ತಾವು ತೆಗೆದುಕೊಂಡಿದ್ದ ಸಂಭಾವನೆಯನ್ನು ಹಿಂದಿರುಗಿಸಿದ್ದಾರೆ.

ಜೈ ಭೀಮ್ ಚಿತ್ರದ ಪೋಸ್ಟರ್.

ಜೈ ಭೀಮ್ ಚಿತ್ರದ ಪೋಸ್ಟರ್.

  • Share this:
ನಟ ಸೂರ್ಯ  (Actor Suriya)ಅವರ ಅಭಿನಯದ ಇತ್ತೀಚೆಗೆ ಬಿಡುಗಡೆ ಆದ ‘ಜೈ ಭೀಮ್’  (Jai Bheem) ತಮಿಳು ಸಿನಿಮಾ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಓಟಿಟಿಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಈಗಲೂ ಚರ್ಚೆಯಲ್ಲಿದೆ. ದಶಕಗಳ ಹಿಂದೆ ನಡೆದಿದ್ದ ಮುಗ್ಧ ಬುಡಕಟ್ಟು ಜನಾಂಗ ಒಂದರ ನೈಜ್ಯ ಘಟನೆ ಆಧರಿಸಿದ ಕಥೆಯುಳ್ಳ ಸಿನಿಮಾ ಇದು. ಈ ಚಿತ್ರದಲ್ಲಿ, ನಟ ಸೂರ್ಯ ಕೂಡ ತಮ್ಮ ಎಂದಿನ ಹೀರೋಯಿಸಂ ಬಿಟ್ಟು, ಸಹಜ ಪಾತ್ರವೊಂದನ್ನು ಅಭಿನಯಿಸುವ ಮೂಲಕ ಬಹಳಷ್ಟು ಮಂದಿಯ ಮನ ಗೆದ್ದಿದ್ದರು. ಸಿನಿಮಾದಲ್ಲಿ ಅತ್ಯುತ್ತಮ ತಾರಾಬಳಗವು ಇತ್ತು. ಕೇವಲ ತಮಿಳುನಾಡಿನ ಜನರಷ್ಟೇ ಅಲ್ಲ, ಅನ್ಯರಾಜ್ಯಗಳ ಅಭಿಮಾನಿಗಳು, ಪ್ರಭಾವಿ ವ್ಯಕ್ತಿಗಳು ಚಿತ್ರಕ್ಕೆ ಮೆಚ್ಚುಗೆ ಸೂಚಿಸಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಹಾಗಂತ ‘ಜೈ ಭೀಮ್’ ಕೇವಲ ಹೊಗಳಿಕೆಯನ್ನು ಮಾತ್ರ ತನ್ನ ಮುಡಿಗೇರಿಸಿಕೊಂಡಿದೆ ಎಂದರೆ ತಪ್ಪಾಗುತ್ತದೆ. ಏಕೆಂದರೆ, ಅದು ಈ ದಿನಗಳಲ್ಲಿ ವಿವಾದಕ್ಕೆ ಕಾರಣವಾದ ಚಿತ್ರವು ಕೂಡ. ಹೌದು, ಸಿನಿಮಾ ಸಮುದಾಯಗಳ ನಡುವೆ ದ್ವೇಷ ಕೆರಳಿಸಬಲ್ಲದು ಎಂಬ ಆರೊಪಕ್ಕೆ ಒಳಗಾಗಿದೆ. ಇದೀಗ ‘ಜೈ ಭೀಮ್’ ಸಿನಿಮಾದ ವಿವಾದಕ್ಕೆ ಇನ್ನೊಂದು ವಿಷಯ ಸೇರ್ಪಡೆ ಆಗಿದೆ; ಚಿತ್ರದ ಸಂಭಾಷಣೆ ಬರಹಗಾರ ಕಣ್ಮಣಿ ಗುಣಶೇಖರನ್, ಈ ಸಿನಿಮಾಗಾಗಿ ತಾವು ತೆಗೆದುಕೊಂಡಿದ್ದ ಸಂಭಾವನೆಯನ್ನು ಹಿಂದಿರುಗಿಸಿದ್ದಾರೆ.

ಜೈ ಭೀಮ್​ ಚಿತ್ರದ ಸಂಭಾಷಣೆ ಬರಹಗಾರ ಕಣ್ಮಣಿ ಗುಣಶೇಖರನ್​ ಅವರು ತೆಗೆದುಕೊಂಡಿದ್ದ ಸಂಭಾವನೆಯನ್ನು ಹಿಂದಿರುಗಿಸಿದ್ದಾರೆ. ಜೊತೆಗೆ ಒಂದು ಪತ್ರ ಸಹ ಬರೆದಿದ್ದಾರೆ.


ಕಣ್ಮಣಿ ಗುಣಶೇಖರನ್, ತಮ್ಮ ಫೇಸ್‍ಬುಕ್ ಪುಟದಲ್ಲಿ ಒಂದು ದೊಡ್ಡ ಸಂದೇಶ ಬರೆಯುವ ಮೂಲಕ, ಅವರ ದುಃಖವನ್ನು ಹಂಚಿಕೊಂಡಿದ್ದಾರೆ. ‘ಜೈ ಭೀಮ್ ‘ ಚಿತ್ರದ ನಿರ್ದೇಶಕ ಟಿ ಜೆ ಗುಣವೇಲ್ ಅವರು, ತಮ್ಮ ಸಿನಿಮಾದ ಸಂಭಾಷಣೆಗಳಿಗೆ ಸ್ಥಳೀಯ ಸ್ಪರ್ಶ ನೀಡುವ ಉದ್ದೇಶದಿಂದ, 2 ವರ್ಷಗಳ ಹಿಂದೆ, ಕಣ್ಮಣಿ ಗುಣಶೇಖರನ್ ಅವರನ್ನು ಸಂಪರ್ಕಿಸಿ ಸಂಭಾಷಣೆ ಬರೆಯುವಂತೆ ಕೇಳಿಕೊಂಡಿದ್ದರು. ಕಣ್ಮಣಿ ಗುಣಶೇಖರನ್ ಅದನ್ನು ಮಾಡಿದರು ಕೂಡ. ಆದರೆ ಅವರಿಗೆ ಈಗ ವಿವಾದಕ್ಕೆ ಕಾರಣವಾಗಿರುವ ಕ್ಯಾಲೆಂಡರ್ ದೃಶ್ಯದ ಬಗ್ಗೆ ಮಾಹಿತಿ ನೀಡಲಾಗಿರಲಿಲ್ಲ. ಕಣ್ಮಣಿ ಗುಣಶೇಖರನ್ ಕೂಡ ಅದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಕ್ಯಾಲೆಂಡರ್ ದೃಶ್ಯದ ಸಂಗತಿ ನಿರಾಶೆಯನ್ನುಂಟು ಮಾಡಿದೆ. ಈಗ ಆ ದೃಶ್ಯಗಳಲ್ಲಿ ಬದಲಾವಣೆ ತರಲಾಗಿದ್ದರೂ ಕೂಡ ಅವರ ಭಾವನೆಗಳಿಗೆ ಧಕ್ಕೆಯಾಗಿದೆ.

ಇದನ್ನೂ ಓದಿ: Avatara Purushaನಾಗಿ ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿರುವ ನಟ ಶರಣ್: 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್​

‘ಜೈ ಭೀಮ್’ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾರಣದಿಂದಲೇ ನಿರ್ದೇಶಕ ಟಿ ಜೆ ಜ್ಞಾನವೇಲ್, ವಿವಾದಾತ್ಮಕ ದೃಶ್ಯಗಳನ್ನು ಮಾಡಿದ್ದರು ಮತ್ತು ಎರಡು ಸಮುದಾಯಗಳ ನಡುವೆ ದೊಡ್ಡ ಮಟ್ಟದ ದ್ವೇಷವೊಂದು ಕೆರಳಲು ಪ್ರಚೋದನೆ ನೀಡಿದ್ದಾರೆ ಎಂದು ಕಣ್ಮಣಿ ಗುಣಶೇಖರನ್ ವಾದಿಸಿದ್ದಾರೆ.

ಇದನ್ನೂ ಓದಿ: Actor Surya Movie Jai Bhim| ಸೂರ್ಯ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೈಭೀಮ್ ಓಟಿಟಿಯಲ್ಲಿ ಬಿಡುಗಡೆ; ದಿನಾಂಕ ಫಿಕ್ಸ್

ಇದೀಗ ಅವರು ತಮ್ಮ ಸ್ವಂತ ಜನರಿಂದಲೇ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಆ ಕಾರಣದಿಂದ ಒಂದು ಪ್ರಮುಖ ನಿರ್ಧಾಕ್ಕೆ ಬಂದಿದ್ದಾರೆ. ‘ಜೈ ಭೀಮ್’ ಸಿನಿಮಾದ ಪ್ರಾದೇಶಿಕ ಭಾಷಾಂತರ ಕೆಲಸಕ್ಕೆ ತಮಗೆ ನೀಡಲಾಗಿದ್ದ 50,000 ರೂ.ಗಳ ಚೆಕ್ ಅನ್ನು ನಿರ್ಮಾಪಕರಿಗೆ ಹಿಂತಿರುಗಿಸಲು ನಿರ್ಧರಿಸಿದ್ದಾರೆ ಮತ್ತು ಪತ್ರದೊಂದಿಗೆ ವೇದನೆಯ ಒಂದು ಸಂದೇಶವನ್ನು ಕೂಡ ಲಗತ್ತಿಸಿದ್ದಾರೆ. ಇಂತಹ ಕೆಲಸಗಳನ್ನು ಮಾಡುವ ಮತ್ತು ಬೆನ್ನಿಗೆ ಚೂರಿ ಹಾಕುವ ದ್ರೋಹಿಗಳನ್ನು ಭವಿಷ್ಯದಲ್ಲಿ ತಾವು ಯಾವತ್ತೂ ಭೇಟಿ ಮಾಡುವುದಿಲ್ಲ ಎಂದು ಕಣ್ಮಣಿ ಗುಣಶೇಖರನ್ ನಿರ್ಧರಿಸಿದ್ದಾರೆ.
First published: