Disha Patani: ದಿಶಾ ಪಾಟ್ನಿ ಹೊಸ ಫೋಟೋ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ನೆಟ್ಟಿಗರು

ಬಾಲಿವುಡ್ ದಿವಾ ಎನಿಸಿಕೊಂಡಿರುವ ದಿಶಾ ಪಾಟ್ನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಬಿಸಿಬಿಸಿ ಸುದ್ದಿಗೆ ಆಹಾರವಾಗುತ್ತಾರೆ.

ದಿಶಾ ಪಠಾನಿ

ದಿಶಾ ಪಠಾನಿ

  • Share this:
ಬಾಲಿವುಡ್ ನಟ ನಟಿಯರ ಲುಕ್ ನಲ್ಲಿ ಸ್ವಲ್ಪ ಬದಲಾವಣೆ ಆದರೂ ನೆಟ್ಟಿಗರು ಅದರ ಬಗ್ಗೆ ಕಾಮೆಂಟ್ ಮಾಡುವ ವಿಷಯದಲ್ಲಿ ಸದಾ ಮುಂದು. ಅದರಲ್ಲೂ ದೈಹಿಕ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ನಟಿಯರಂತೂ ಇವರ ಮಾತಿಗೆ ಸುಲಭವಾಗಿ ಸಿಗುತ್ತಾರೆ. ಈಗ 'ಅಂತಿಮ್' (Antim) ಚಿತ್ರದ ಸ್ಕ್ರೀನಿಂಗ್‌ನಲ್ಲಿ ದಿಶಾ ಪಾಟ್ನಿ (Disha Patani)  ಅವರ ಫೋಟೋ ಸಾಕಷ್ಟು ವದಂತಿಗಳನ್ನು ಹುಟ್ಟುಹಾಕಿದೆ, ನೆಟಿಜನ್‌ಗಳು, 'ದಿಶಾ ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾರೆ' ಎಂದು ಹೇಳುತ್ತಿದ್ದಾರೆ. ಅದರಲ್ಲೂ ಅವರ ಮೂಗಿನ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಬದಲಾದಂತಿರುವ ಅವರ ಮೂಗನ್ನು ನೋಡಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಆಕೆಗೆ ಮೂಗಿನ ಸರ್ಜರಿ (Nose Surgery) ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಂತ ಇದನ್ನು ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವ ಕೆಲಸ ಎನ್ನುವಂತಿಲ್ಲ.

ಸಲ್ಮಾನ್​ ಜೊತೆಗೆ ರೋಮಾನ್ಸ್​

ಬಾಲಿವುಡ್ ದಿವಾ ಎನಿಸಿಕೊಂಡಿರುವ ದಿಶಾ ಪಾಟ್ನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಬಿಸಿಬಿಸಿ ಸುದ್ದಿಗೆ ಆಹಾರವಾಗುತ್ತಾರೆ. ಆಕೆಯ ಬಳುಕುವ ದೇಹ ಪ್ರಕೃತಿಯಿಂದ ಹಿಡಿದು ಎಲ್ಲದವರೆಗೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಮೆಂಟ್ ಮಾಡುತ್ತಾರೆ. ಆದರೆ, ಆಕೆಯ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದ ಸಹನಟ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ, ಅಂತಿಮ್: ದಿ ಫೈನಲ್ ಟ್ರುತ್ ಸ್ಕ್ರೀನಿಂಗ್‌ಗೆ ಹಾಜರಾದಾಗ ಈ ವಿಷಯ ಸಹಜವಾಗಿರಲಿಲ್ಲ.

ಹೊಸ ಲುಕ್​ನಲ್ಲಿ ದಿಶಾ

ಸಲ್ಮಾನ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಪ್ರದರ್ಶನಕ್ಕೆ ಹಾಜರಾದ ಇತರ ಸೆಲೆಬ್ರಿಟಿಗಳಲ್ಲಿ ದಿಶಾ ಕೂಡ ಇದ್ದರು. ಈ ಈವೆಂಟ್‌ನಲ್ಲಿನ ನಟಿಯ ಲುಕ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಕಣ್ಣು ಸೆಳೆಯುತ್ತಿದೆ. ಆದರೆ ಇದು ತಪ್ಪು ಕಾರಣಗಳಿಗಾಗಿ ಎಂದರೆ ತಪ್ಪೇನಿಲ್ಲ. ಮಲಾಂಗ್ ತಾರೆ ಅಂತಿಮ್ ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಕ್ಯಾಶುಯಲ್ ಮತ್ತು ಚಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಸ್ಕಿನ್ನಿ ಫಿಟ್ ಜೀನ್ಸ್ ಜೊತೆ ಹಳದಿ ಕ್ರಾಪ್ ಟಾಪ್ ಧರಿಸಿ ಸೀಕ್ವಿನ್ಡ್ ಬ್ಯಾಗ್ ಜೊತೆ ದಿಶಾ ಎಂದಿನಂತೆ ಬ್ರೈಟ್ ಆಗಿ ಕಾಣುತ್ತಿದ್ದರೂ, ಆಕೆಯ ಮುಖದ ವೈಶಿಷ್ಟ್ಯಗಳು ನೆಟಿಜನ್‌ಗಳ ಗಮನವನ್ನು ಸೆಳೆದವು. ಸೆಲೆಬ್ರಿಟಿಗಳು ನೆಟ್ಟಿಗರ ಗೂಢಾಚಾರಿಕೆಯ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಯಿತು. ದಿಶಾ ಅವರ ಹೊಸ ಲುಕ್ ಕೂಡಾ ಇದಕ್ಕೆ ಹೊರತಾಗಲಿಲ್ಲ.

ಇದನ್ನು ಓದಿ: ಅಪ್ಪು ನೆನಪಲ್ಲಿ ತನ್ನ 3 ಮಕ್ಕಳ ಜೊತೆ 500km ಓಟಕ್ಕೆ ಮುಂದಾದ ತಾಯಿ..!

ದಿಶಾ ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಸುದ್ದಿವಾಹಿನಿಗಳು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಎಲ್ಲರ ದೃಷ್ಠಿ ಆಕೆಯ ಮೂಗಿನತ್ತಲೇ ಹೋಗಿತ್ತು. ಹಲವಾರು ನೆಟಿಜನ್‌ಗಳು ಕಾಮೆಂಟ್‌ಗಳ ವಿಭಾಗದಲ್ಲಿ ದಿಶಾ ಏಕೆ 'ಅಷ್ಟು ವಿಭಿನ್ನವಾಗಿ' ಕಾಣುತ್ತಿದ್ದಾರೆ ಎಂದು ಕೇಳಲು ಶುರು ಮಾಡಿದರು.

ಮೂಗಿನ ಸರ್ಜರಿ

ಒಬ್ಬರು, "ಅವಳು ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾಳೆ." ಎಂದರೆ, ಮತ್ತೊಬ್ಬರು, "ಪ್ಲಾಸ್ಟಿಕ್ ಸರ್ಜರಿ, ಓ ದೇವರೇ!" ಎಂದಿದ್ದಾರೆ. ಏತನ್ಮಧ್ಯೆ, ಕೆಲವರು ಮೊರೊಕನ್ ಸುಂದರಿ ನೋರಾ ಫತೇಹಿಯ ಹೋಲಿಕೆಯನ್ನು ಇದೆ ಎಂದು ಹೇಳಿದ್ದಾರೆ. "ಈಕೆ ನೋರಾ ಫತೇಹಿ ಅವರನ್ನು ಹೋಲುತ್ತಾಳೆ" ಎಂದು ಕಾಮೆಂಟ್ ಅನ್ನು ಓದಿದ ಅಭಿಮಾನಿಯೊಬ್ಬರು ಕುತೂಹಲದಿಂದ "ಈಕೆ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ವರ್ಷಾಂತ್ಯಕ್ಕೆ ಬರಲಿವೆ ಸ್ಟಾರ್ ನಟರ ಸಿನಿಮಾಗಳು.. ಕನ್ನಡ ಚಿತ್ರಗಳ ಜೊತೆ ಪರಭಾಷೆ ಸಿನಿಮಾಗಳ ಫೈಟ್, ಫುಲ್ ಲಿಸ್ಟ್ ಇಲ್ಲಿದೆ

ಕೆಲಸದ ವಿಷಯದಲ್ಲಿ, ದಿಶಾ ಏಕ್ ವಿಲನ್ ರಿಟರ್ನ್ಸ್‌ನಲ್ಲಿ ಜಾನ್ ಅಬ್ರಹಾಂ, ತಾರಾ ಸುತಾರಿಯಾ ಮತ್ತು ಅರ್ಜುನ್ ಕಪೂರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ಸಿದ್ಧಾರ್ಥ್ ಮಲ್ಹೋತ್ರಾ ಅವರ ಏಕ್ ವಿಲನ್‌ನ ಮುಂದುವರಿದ ಭಾಗವಾಗಿದೆ. 2014 ರ ಈ ಆಕ್ಷನ್ ಥ್ರಿಲ್ಲರ್‌ನಲ್ಲಿ ಶ್ರದ್ಧಾ ಕಪೂರ್ ಮತ್ತು ರಿತೇಶ್ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಅನೌನ್ಸ್ ಆದ ಸಿದ್ಧಾರ್ಥ್ ಅವರ ಚಿತ್ರ ಯೋಧದಲ್ಲಿ ಕೂಡ ದಿಶಾ ನಟಿಸಲಿದ್ದಾರೆ ಎಂದು ವರದಿಯಾಗಿದೆ.
First published: