Dia Mirza: ದಿಯಾ ಮಿರ್ಜಾ ಸೊಸೆ ಅಪಘಾತದಲ್ಲಿ ನಿಧನ, ಭಾವನಾತ್ಮಕ ಪೋಸ್ಟ್​ ಹಾಕಿದ ನಟಿ

Tanya Kakde: ಇನ್ನು ಮೂಲಗಳ ಪ್ರಕಾರ ಕಾರಿನ ಸನ್ ರೂಫ್ ತೆರೆದಿತ್ತು. ಕಾರು ಪಲ್ಟಿಯಾದಾಗ ತಾನ್ಯಾ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಆಕೆಯ ಬಲಗೈಗೂ ತೀವ್ರ ಗಾಯವಾಗಿತ್ತು.

ದಿಯಾ ಮಿರ್ಜಾ

ದಿಯಾ ಮಿರ್ಜಾ

  • Share this:
ಬಾಲಿವುಡ್ ನಟಿ (Bollywood Actress) ದಿಯಾ ಮಿರ್ಜಾ (Dia Mirza) ಅವರ ಸೊಸೆ ತಾನ್ಯಾ ಕಾಕ್ಡೆ (Niece Tanya) ಇತ್ತೀಚೆಗೆ ನಿಧನರಾಗಿದ್ದು, ಈ ಬಗ್ಗೆ ನಟಿ ಭಾವನಾತ್ಮಕ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಸಾವಿನ ಕಾರಣದ ಬಗ್ಗೆ ವಿವರಗಳನ್ನು ನೀಡದೆ, ದಿಯಾ ತನ್ನ ಸೊಸೆಯ ಫೋಟೋ ಹಂಚಿಕೊಂಡಿದ್ದು, ಅವರಿಗಾಗಿ ಪ್ರೀತಿಯಿಂದ ಮೆಸೇಜ್​ ಬರೆದಿದ್ದಾರೆ. ಅದರಲ್ಲಿ ಅವರು ಎಷ್ಟು ತಮ್ಮ ಸೊಸೆಯನ್ನು ಮಿಸ್​ ಮಾಡಿಕೊಳ್ಳುತ್ತೇನೆ ಎಂಬುದನ್ನ ತಿಳಿಸಿದ್ದಾರೆ.

ನೀನು ನಮ್ಮ ನಗುವಿನ ಕಾರಣ ಎಂದ ನಟಿ

ನನ್ನ ಸೊಸೆ. ನನ್ನ ಮಗು. ನನ್ನ ಜಾನ್. ನೀನು ಬೆಳಕಾಗಿ ಹೋಗಿದ್ದೀಯಾ. ನೀನು ಎಲ್ಲಿದ್ದರೂ ಶಾಂತಿ ಮತ್ತು ಪ್ರೀತಿಯಿಂದ ಇರು. ನೀನು ನನ್ನ ಪ್ರೀತಿ.  ನೀನು ಯಾವಾಗಲೂ ನಮ್ಮ ಹೃದಯದಲ್ಲಿ ನಗುವನ್ನು ತಂದಿದ್ದೀಯ.  ನೀನಿರುವ ಕಡೆ ನೃತ್ಯ, ನಗು ಮತ್ತು ಹಾಡುಗಾರಿಕೆ ತುಂಬಿರುತ್ತದೆ ಎಂದು ಬರೆದುಕೊಂಡಿದ್ದು, ಎಮೋಜಿಗಳನ್ನು ಸಹ ಹಾಕಿದ್ದಾರೆ.

21 ವರ್ಷದ ತಾನ್ಯಾ ಕಾಕ್ಡೆ ಕಾಂಗ್ರೆಸ್ ನಾಯಕ ಫಿರೋಜ್ ಖಾನ್ ಅವರ ಪುತ್ರಿ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ತಾನ್ಯಾ NH 44 ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಕೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಳಿ ಬರುತ್ತಿದ್ದರು. ಆಕೆಯ ಸ್ನೇಹಿತ ಮಿರ್ಜಾ ಅಲಿ ಕಾರು ಓಡಿಸುತ್ತಿದ್ದ ಎನ್ನಲಾಗಿದೆ.ಅಪಘಾತದಲ್ಲಿ ಸೊಸೆ ನಿಧನ

ಇನ್ನು ಮೂಲಗಳ ಪ್ರಕಾರ ಕಾರಿನ ಸನ್ ರೂಫ್ ತೆರೆದಿತ್ತು. ಕಾರು ಪಲ್ಟಿಯಾದಾಗ ತಾನ್ಯಾ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಆಕೆಯ ಬಲಗೈಗೂ ತೀವ್ರ ಗಾಯವಾಗಿತ್ತು. ಅಪಘಾತವಾದ ತಕ್ಷಣ ತಾನ್ಯಾ ಅವರನ್ನು ಚಿಕಿತ್ಸೆಗಾಗಿ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಸಹ ಮಾರ್ಗ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ತಾನ್ಯಾ ಮೇಕಪ್ ಆರ್ಟಿಸ್ಟ್​ ಆಗಿದ್ದು, ಕಾರ್ಯಕ್ರಮದವೊಂದರಲ್ಲಿ ದಿಯಾ ಮಿರ್ಜಾ ಅವರನ್ನು ಸುಂದರವಾಗಿ ರೆಡಿ ಮಾಡಿ ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ನನ್ನ ಫೇವರೇಟ್​ ಎಂದು ಬರೆದುಕೊಂಡಿದ್ದರು. ಇದು ದಿಯಾ ಮಿರ್ಜಾ ಹಾಗೂ ತಾನ್ಯಾ ಎಷ್ಟು ಆತ್ಮೀಯರಾಗಿದ್ದರು ಎಂಬುದನ್ನ ತೋರಿಸುತ್ತದೆ.

ನಟಿ ದಿಯಾ ಮಿರ್ಜಾ ಅವರು ವೈಭವ್​ ರೇಕಿ ಎಂಬುವರನ್ನು 2ನೇ ಮದುವೆಯಾಗಿದ್ದರು. ಗರ್ಭಿಣಿಯಾಗಿದ್ದ ವಿಷಯವನ್ನೂ ದಿಯಾ ಹಂಚಿಕೊಂಡಿದ್ದರು.  ದಿಯಾ ಹಾಗೂ ವೈಭವ್​ ಅವರಿಗೆ ಗಂಡು ಮಗುವಾಗಿದೆ.ಬಾಲಿವುಡ್​ ನಟಿ ನಟಿ ದಿಯಾ ಮಿರ್ಜಾ ಅವರು ತಮಗೆ ಗಂಡು ಮಗುವಾಗಿರುವ ವಿಷಯವನ್ನು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದರು.  ದಿಯಾ ಹಾಗೂ ವೈಭವ್ ಅವರು ಮಗನಿಗೆ ಅವ್ಯಾಯಾನ್​ ಆಜಾದ್​ ರೇಕಿ ಎಂದು ನಾಮಕರಣ ಮಾಡಿದ್ದಾರೆ.

ದಿಯಾ ತಾವು ತಾಯಿ ಅಗಲಿದ್ದೇನೆ ಎಂದು ಏಪ್ರಿಲ್​​​ನಲ್ಲಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು. ಗರ್ಭಿಣಿಯಾದ ಬಳಿಕವೇ ದಿಯಾ ಮದುವೆಯಾಗಿದ್ದಾರೆ ಎಂದು ಹಲವರು ಕಾಲೆಳೆದಿದ್ದರು. ನನಗೆ ನನ್ನ ಜೀವನ, ಮಗು, ನನ್ನ ಆಯ್ಕೆಯೇ ಮುಖ್ಯ ಎಂದು ದಿಯಾ ತಿರುಗೇಟು ನೀಡಿದ್ದರು.
Published by:Sandhya M
First published: