• Home
  • »
  • News
  • »
  • entertainment
  • »
  • Dia Mirza: ನಟಿಯರ ಸ್ನಾನದ ವಿಡಿಯೋ ಲೀಕ್! ಹೋಟೆಲ್​​ಗೆ ಹೋದಾಗ ನಟಿ ದಿಯಾ ಏನ್ಮಾಡ್ತಾರೆ?

Dia Mirza: ನಟಿಯರ ಸ್ನಾನದ ವಿಡಿಯೋ ಲೀಕ್! ಹೋಟೆಲ್​​ಗೆ ಹೋದಾಗ ನಟಿ ದಿಯಾ ಏನ್ಮಾಡ್ತಾರೆ?

ದಿಯಾ ಮಿರ್ಜಾ

ದಿಯಾ ಮಿರ್ಜಾ

ಈ ಬಾಲಿವುಡ್ ನಟಿ ಹೊಟೇಲ್ ಗಳಲ್ಲಿರುವ ಕೋಣೆಗಳಿಗೆ ಹೋದಾಗ ತುಂಬಾನೇ ಜಾಗರೂಕತೆಯಿಂದ ಇರುತ್ತಾರೆ ಅಂತ ಖುದ್ದು ಅವರೇ ಹೇಳಿಕೊಂಡಿದ್ದಾರೆ . ಆ ನಟಿ ದಿಯಾ ಮಿರ್ಜಾ.

  • Trending Desk
  • Last Updated :
  • Bangalore, India
  • Share this:

ಈಗಂತೂ ಮಹಿಳೆಯರು ಯಾವುದಾದರೂ ಸೀರೆ ಅಂಗಡಿಗೆ (Saree Shop) ಅಥವಾ ಬಟ್ಟೆ ಅಂಗಡಿಗೆ ಹೋದರೆ ಅಲ್ಲಿರುವ ಬಟ್ಟೆ ಧರಿಸಿ ನೋಡುವ ಟ್ರೈಯಲ್ ರೂಂಗೆ ಕಾಲಿಟ್ಟರೆ ಸಾಕು ಮೊದಲು ನೋಡುವುದೇ ಯಾವುದಾದರೂ ಕ್ಯಾಮೆರಾಗಳನ್ನು (Camera) ಸೀಕ್ರೆಟ್ ಆಗಿ ಫಿಕ್ ಮಾಡಿದ್ದಾರೆಯೇ ಅಂತ. ಈ ಆತಂಕ ಮತ್ತು ಭಯ ಬರೀ ಇವರಲ್ಲಿ ಮಾತ್ರವಲ್ಲದೇ, ಹೊಟೇಲ್ ಗಳಲ್ಲಿರುವ ಕೋಣೆಗಳಿಗೆ (Room) ಯಾರೇ ಹೋದರೂ ಸಹ ಅವರಿಗೆ ಈ ಆತಂಕ ಇದ್ದೇ ಇರುತ್ತದೆ. ಹೌದು.. ಮೊನ್ನೆ ತಾನೇ ಭಾರತದ (India) ಕ್ರಿಕೆಟ್ (Cricket) ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಟ್ವೆಂಟಿ20 ವಿಶ್ವಕಪ್ ನಲ್ಲಿ (T20 World cup) ಆಡುತ್ತಿರಬೇಕಾದರೆ ಆಸ್ಟ್ರೇಲಿಯಾದಲ್ಲಿ ಅವರು ತಂಗಿದ್ದ ಹೊಟೇಲ್ (Hotel) ಕೋಣೆಯ ವೀಡಿಯೋ ಮಾಡಿ ಅದನ್ನು ಆನ್ಲೈನ್ ನಲ್ಲಿ ಹರಿ ಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ.


ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್ ಅವರ ಹೋಟೆಲ್ ಕೋಣೆಯ ಒಳಗಿನ ವೀಡಿಯೋ ಆನ್ಲೈನ್ ನಲ್ಲಿ ಸೋರಿಕೆಯಾದ ನಂತರ ತಮ್ಮ ಕೋಪವನ್ನು ಸಹ ವ್ಯಕ್ತಪಡಿಸಿದ್ದರು. ವಿರಾಟ್ ಸಹ ತನ್ನ ಖಾಸಗಿ ಸ್ಥಳಕ್ಕೆ ನುಸುಳಿದ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ನಂತರ ಬಾಲಿವುಡ್ ನಟ ಮತ್ತು ನಟಿಯರು ಸಹ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.


ಗುಪ್ತ ಕ್ಯಾಮೆರಾಗಳ ಬಗ್ಗೆ ಜಾಗೂರಕರಾಗುತ್ತಿದ್ದಾರೆ ಸೆಲೆಬ್ರಿಟಿಗಳು


ಹೀಗೆ ಇಂತಹ ಘಟನೆಗಳಿಂದ ಎಚ್ಚೆತ್ತುಕೊಂಡು ಈಗ ಅನೇಕ ಜನ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಈ ಗುಪ್ತ ಕ್ಯಾಮೆರಾಗಳ ಬಗ್ಗೆ ತುಂಬಾನೇ ಜಾಗೂರಕರಾಗಿರುತ್ತಿದ್ದಾರೆ. ಇಲ್ಲೊಬ್ಬ ಬಾಲಿವುಡ್ ನಟಿ ಸಹ ಈ ಹೊಟೇಲ್ ಗಳಲ್ಲಿರುವ ಕೋಣೆಗಳಿಗೆ ಹೋದಾಗ ತುಂಬಾನೇ ಜಾಗರೂಕತೆಯಿಂದ ಇರುತ್ತಾರೆ ಅಂತ ಖುದ್ದು ಅವರೇ ಹೇಳಿಕೊಂಡಿದ್ದಾರೆ . ಆ ನಟಿ ದಿಯಾ ಮಿರ್ಜಾ. ಹೌದು.. ಅವರು ಯಾವುದೇ ಹೋಟೆಲ್ ಗೆ ಭೇಟಿ ನೀಡುವಾಗ ಹೇಗೆ ಹೆಚ್ಚು ಜಾಗರೂಕರಾಗಿದ್ದಾರೆ ಎಂಬುದನ್ನು ಹೇಳಿದ್ದಾರೆ ನೋಡಿ.


ಈ ವಿಚಾರದ ಬಗ್ಗೆ ನಟಿ ದಿಯಾ ಹೇಳಿದ್ದೇನು ಗೊತ್ತೇ?


"ಸುಮಾರು ಒಂದು ದಶಕದ ಹಿಂದೆ ನಟಿಯರು ಸ್ನಾನ ಮಾಡುವ ವೀಡಿಯೋಗಳು ನೆಟ್ ನಲ್ಲಿ ಕಾಣಿಸಿಕೊಂಡ ನಂತರ ತಾನು ಜಾಗರೂಕಳಾಗಿದ್ದೇನೆ" ಎಂದು ದಿಯಾ ಹೇಳಿದರು. ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ, ‘ಥಪ್ಪಡ್’ ಚಿತ್ರದ ನಟಿ ದಿಯಾ ಅವರು ತಾನು ಹೋಟೆಲ್ ಗೆ ಭೇಟಿ ನೀಡುವ ಮೊದಲು ಪ್ರೋಟೋಕಾಲ್ ಅನ್ನು ಅನುಸರಿಸುತ್ತೇನೆ ಎಂದು ಹೇಳಿದರು. ಅವರು ಒಂದು ಕೋಣೆಯನ್ನು ಬುಕ್ ಮಾಡುವ ಮೊದಲೇ ಆ ಹೋಟೆಲ್ ಅವರನ್ನು ಗುಪ್ತ ಕ್ಯಾಮೆರಾಗಳ ಬಗ್ಗೆ ಕೇಳುತ್ತಾರೆ. ಅದರಲ್ಲಿ ಯಾವುದಾದರೂ ಗುಪ್ತ ಕ್ಯಾಮೆರಾಗಳು ಇವೆಯೆ ಅಂತ ಹುಡುಕುತ್ತಾರೆ. ಈ ವಿಷಯದಲ್ಲಿ ನಾನು ತುಂಬಾನೇ ಜಾಗರೂಕಳಾಗಿದ್ದೇನೆ ಎಂದು ದಿಯಾ ತಿಳಿಸಿದರು.


ಇಂತಹ ಘಟನೆಗಳ ಬಗ್ಗೆ ನಟಿ ಅನುಷ್ಕಾ ಏನ್ ಹೇಳ್ತಾರೆ ನೋಡಿ..


ಸಾಮಾಜಿಕ ಮಾಧ್ಯಮ ಹೇಳಿಕೆಯಲ್ಲಿ ಅನುಷ್ಕಾಅವರು "ಕೆಲವು ಅಭಿಮಾನಿಗಳು ಈ ಹಿಂದೆ ಯಾವುದೇ ಕರುಣೆ ತೋರಿಸದೆ ಮಾಡಿರುವ ಕೆಲವು ಘಟನೆಗಳನ್ನು ನಾನು ಅನುಭವಿಸಿದ್ದೇನೆ, ಆದರೆ ಇದು ನಿಜವಾಗಿಯೂ ಕೆಟ್ಟ ವಿಷಯವಾಗಿದೆ. ಒಬ್ಬ ಮನುಷ್ಯನನ್ನು ಹೀಗೆ ಅವಮಾನ ಮಾಡಬಾರದು. ಸೆಲೆಬ್ರಿಟಿಗಳು ಇಂತಹದರ ಜೊತೆಗೆ ಡೀಲ್ ಮಾಡುವುದನ್ನು ಕಲಿತಿರಬೇಕು ಎಂದು ಭಾವಿಸುವ ಜನರಿಗೆ ಮೊದಲು ಅರ್ಥವಾಗಬೇಕು. ತಮ್ಮ ವ್ಯಕ್ತಿತ್ವದ ಮೇಲೆ ಸ್ವಲ್ಪ ನಿಯಂತ್ರಣವನ್ನು ಹೊಂದಿರಬೇಕು, ಅದು ಎಲ್ಲರಿಗೂ ಒಳ್ಳೆಯದು" ಎಂದು ಹೇಳಿದ್ದರು.


ದಿಯಾ ಮಿರ್ಜಾ ಅವರು 2001 ರಲ್ಲಿ ‘ರೆಹನಾ ಹೈ ತೇರೆ ದಿಲ್ ಮೇ’ ಎಂಬ ರೊಮ್ಯಾಂಟಿಕ್ ಚಿತ್ರದ ಮೂಲಕ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದ ನಂತರ ಪರಿಣೀತಾ, ಲಗೇ ರಹೋ ಮುನ್ನಾ ಭಾಯ್, ಸಂಜು ಮತ್ತು ಥಪ್ಪಡ್ ನಂತಹ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು