ಚೆಂದುಳ್ಳಿ ಚೆಲುವೆ ನಟಿ ದಿಯಾ ಮಿರ್ಜಾ ದಾಂಪತ್ಯ ಜೀವನಕ್ಕೆ ಕೊಳ್ಳಿಯಿಟ್ಟ ಕಥೆಗಾರ್ತಿ..!

Dia Mirza :  2014 ಅಕ್ಟೋಬರ್​ 18ರಂದು ಇಬ್ಬರೂ ವಿವಾಹವಾಗಿದ್ದ ಸಾಹಿಲ್-ದಿಯಾ ಜೋಡಿ ಆಗಸ್ಟ್​ 1ರಂದು ಬೇರೆಯಾಗಲು ತೀರ್ಮಾನಿಸಿದ್ದರು. ಈ ವೇಳೆ “ನಾವು ವಿಚ್ಛೇದನ ಪಡೆದುಕೊಂಡಿದ್ದರೂ ಗೆಳೆಯರಾಗಿರುತ್ತೇವೆ.

zahir | news18
Updated:August 2, 2019, 9:36 PM IST
ಚೆಂದುಳ್ಳಿ ಚೆಲುವೆ ನಟಿ ದಿಯಾ ಮಿರ್ಜಾ ದಾಂಪತ್ಯ ಜೀವನಕ್ಕೆ ಕೊಳ್ಳಿಯಿಟ್ಟ ಕಥೆಗಾರ್ತಿ..!
Kanika dhillon
  • News18
  • Last Updated: August 2, 2019, 9:36 PM IST
  • Share this:
ಬಾಲಿವುಡ್​ನ ಚೆಂದುಳ್ಳಿ ಚೆಲುವೆ ದಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿರುವುದು ಕೆಲ ದಿನಗಳ ಹಿಂದೆಯಷ್ಟೇ ಭಾರೀ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ಬಹಿರಂಗ ಪಡಿಸಿದ್ದ ನಟಿ ದಿಯಾ, ತಾನು ಪತಿ ಸಾಹಿಲ್​ರಿಂದ ವಿಚ್ಛೇದನ ಹೊಂದುತ್ತಿರುವುದಾಗಿ ತಿಳಿಸಿದ್ದರು.

ಇದೇ ವೇಳೆ 11 ವರ್ಷಗಳ ದಾಂಪತ್ಯ ಜೀವನಕ್ಕೆ ಏಕಾಏಕಿ ಇತಿಶ್ರೀ ಹಾಡಲು ಕಾರಣವೇನು ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಈ ಪ್ರಶ್ನೆಗಳಿಗೆ ಉತ್ತರಗಳು ಇದೀಗ ಕೇಳಿ ಬರುತ್ತಿದೆ. ದಿಯಾ ಮಿರ್ಜಾರನ್ನು ಪ್ರೀತಿಸಿ ಮದುವೆಯಾಗಿದ್ದ ಸಾಹಿಲ್​ಗೆ ಇತ್ತೀಚಿನ ದಿನಗಳಲ್ಲಿ ಬೇರೊಂದು ಆಫೇರ್ ಕವಲೊಡೆದಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಪತಿಯಿಂದ ದೂರ ಸರಿಯಲು ಬಿಟೌನ್ ಚೆಲುವೆ ನಿರ್ಧರಿಸಿದ್ದರು ಎಂದು ವರದಿಯೊಂದು ಹೇಳಿದೆ.

ದಿಯಾ ಬಾಳಿಗೆ ಮುಳ್ಳಾದ ಮಹಿಳೆ ಕೂಡ ಚಿತ್ರರಂಗದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಬಾಲಿವುಡ್​ ಚಿತ್ರಗಳ ಕಥೆಗಾರ್ತಿ ಎಂದು ಹೇಳಲಾಗಿದೆ. ಇನ್ನು ಕಂಗನಾ ರಾಣವತ್ ಅಭಿನಯದ 'ಜಡ್ಜ್​ಮೆಂಟಲ್ ಹೆ ಕ್ಯಾ' ಚಿತ್ರದ ಕಥೆಗಾರ್ತಿ ಕನಿಕಾ ದಿಲ್ಲಾನ್ ಅವರ ಹೆಸರು ಕೂಡ ಸಾಹಿಲ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಇದಕ್ಕೆ ಮತ್ತೊಂದು ಕಾರಣ ಕನಿಕಾ ಕೂಡ ಪತಿಯಿಂದ ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿರುವುದು.

ಹೀಗಾಗಿ ದಿಯಾ ಮಿರ್ಜಾ ಅವರ ಪ್ರೇಮಗೀತೆಗೆ ಕಥೆಗಾರ್ತಿ ಪುಲಿಸ್ಟಾಪ್ ಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದಿಯಾ ಮಿರ್ಜಾ, ನಮ್ಮಿಬ್ಬರ ವಿಚ್ಛೇದನಕ್ಕೆ ಯಾರೊಬ್ಬರು ಕಾರಣರಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕಪೋಕಲ್ಪಿತ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಆದರೂ ಬಾಲಿವುಡ್​ ಕಡಲ ಕಿನಾರೆಯಲ್ಲಿ ಸಾಹಿಲ್-ದಿಯಾ ಬಾಳಿಗೆ ಕೊಲ್ಲಿಯಿಟ್ಟ ಕನಿಕಾ ಎಂಬ ಗುಸು ಗುಸು ಪಿಸು ಪಿಸುಗಳು ಮಾತ್ರ ಕೇಳಿ ಬರುತ್ತಿವೆ.

Kanika dhillon
ಕನಿಕಾ ದಿಲ್ಲಾನ್ ( ಒಳ ಚಿತ್ರದಲ್ಲಿ ಸಾಹಿಲ್ ಮತ್ತು ದಿಯಾ)


2014 ಅಕ್ಟೋಬರ್​ 18ರಂದು ಇಬ್ಬರೂ ವಿವಾಹವಾಗಿದ್ದ ಸಾಹಿಲ್-ದಿಯಾ ಜೋಡಿ ಆಗಸ್ಟ್​ 1ರಂದು ಬೇರೆಯಾಗಲು ತೀರ್ಮಾನಿಸಿದ್ದರು. ಈ ವೇಳೆ “ನಾವು ವಿಚ್ಛೇದನ ಪಡೆದುಕೊಂಡಿದ್ದರೂ ಗೆಳೆಯರಾಗಿರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ನಾವು ಅನಿವಾರ್ಯವಾಗಿ ಬೇರೆ ಮಾರ್ಗ ತುಳಿಯಬೇಕಿದೆ. ನಿರಂತರವಾಗಿ ಪ್ರೀತಿ ಹಾಗೂ ಬೆಂಬಲ ತೋರಿಸುತ್ತಿರುವ ಕುಟುಂಬ, ಗೆಳೆಯರು ಹಾಗೂ ಮಾಧ್ಯಮದವರಿಗೆ ಧನ್ಯವಾದ,” ಎಂದು ತಿಳಿಸಿದ್ದರು.
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading