ಸ್ಟಾರ್​ ನಟನ ಮಗನ ಪುಡಾಂಟಕ್ಕೆ ಆಟೋ ಜಖಂ

news18
Updated:August 12, 2018, 9:43 PM IST
ಸ್ಟಾರ್​ ನಟನ ಮಗನ ಪುಡಾಂಟಕ್ಕೆ ಆಟೋ ಜಖಂ
news18
Updated: August 12, 2018, 9:43 PM IST
-ನ್ಯೂಸ್ 18 ಕನ್ನಡ

ತಮಿಳಿನ ಖ್ಯಾತ ನಟ ವಿಕ್ರಮ್ ಮಗ ಧ್ರುವ ಯದ್ವಾ ತದ್ವಾ ಕಾರು ಓಡಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಭಾನುವಾರ ಮುಂಜಾನೆ ಅತಿ ವೇಗದಲ್ಲಿ ಕಾರು ಚಲಾಯಿಸಿದ್ದ ಧ್ರುವ ನಿಂತಿದ್ದ ಆಟೋವೊಂದಕ್ಕೆ ಗುದ್ದಿದ್ದರು. ಈ ವೇಳೆ ರಿಕ್ಷಾದಲ್ಲಿದ್ದ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಜವಾಬ್ದಾರಿಯುತ ಚಾಲನೆ ಮತ್ತು ಅಪಘಾತದ ಪ್ರಕರಣದಡಿಯಲ್ಲಿ ವಿಕ್ರಮ್​ ಮಗನನ್ನು ಬಂಧಿಸಿರುವ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.

ಚೆನ್ನೈನ ಟಿಟಿಕೆ ರಸ್ತೆಯಲ್ಲಿ ಬೆಳಗಿನ ಜಾವ 3.50 ಕ್ಕೆ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡ ಆಟೋ ಚಾಲಕ ಕಮೇಶ್​ರನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ ಧ್ರವನ ಜೊತೆ ಇನ್ನಿಬ್ಬರೂ ಕೂಡ ಕಾರಿನಲ್ಲಿದ್ದರು ಎಂದು ಟ್ರಾಫಿಕ್ ಪೊಲೀಸ್ ತಿಳಿಸಿದ್ದಾರೆ.ಕಾರು ಬಂದು ಹೊಡೆದ ವೇಗಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆದರೆ ಧ್ರುವ ಕುಡಿದು ಚಾಲನೆ ಮಾಡಿರಲಿಲ್ಲ ಎಂದು ಅಡಿಯಾರ್ ಟ್ರಾಫಿಕ್ ಪೊಲೀಸ್ ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಹುಡುಗನೊಬ್ಬ ಪೊಲೀಸ್ ಸಿಬ್ಬಂದಿಗಳೊಂದಿಗೆ ವಾದ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದು ಧ್ರವನ ಸ್ನೇಹಿತರಲ್ಲಿ ಒಬ್ಬನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Loading...


ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾದ ತಮಿಳು ರಿಮೇಕ್ 'ವರ್ಮಾ' ಮೂಲಕ ಧ್ರುವ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಆದರೆ ಕಾಲಿವುಡ್​ಗೆ ಕಾಲಿಡುವ ಮುನ್ನವೇ ತನ್ನ ಪುಂಡಾಟದಿಂದ ವಿಕ್ರಮ್ ಮಗ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...