ಆ್ಯಕ್ಷನ್ ಪ್ರಿನ್ಸ್ ವಾಯ್ಸ್​ಗೆ ಫುಲ್ ಬೇಡಿಕೆ: ಕಿಸ್ ಕೊಡೋರಿಗೆ ಜೊತೆಯಾದ ಧ್ರುವ ಸರ್ಜಾ !

ಧ್ರುವ ಸರ್ಜಾ ಮಾಸ್ ಡೈಲಾಗ್ ಹೊಡೆಯೋದರಲ್ಲಿ ಮಾಸ್ಟರ್. ಅವರ ಡೈಲಾಗ್‍ಗೆ ಅಭಿಮಾನಿಗಳು ಹುಚ್ಚೆದ್ದು ಕುಣೀತಾರೆ. ಥಿಯೇಟರ್​ನಲ್ಲಿ ಶಿಳ್ಳೆ, ಚಪ್ಪಾಳೆಗಳು ಕಿವಿ ತುಂಬುತ್ತವೆ. ಈಗ ಈ ಡೈಲಾಗ್ ಹೊಡೆಯೋ ಕಂಠವೂ ಲಕ್ಕಿ ಎನ್ನುತ್ತಿದೆ ಸ್ಯಾಂಡಲ್‍ವುಡ್. ಆ ಲಕ್ಕಿ ಮ್ಯಾಜಿಕ್ ಮತ್ತೊಮ್ಮೆ ರಿಪೀಟ್ ಮಾಡೋಕೆ ಎ.ಪಿ. ಅರ್ಜುನ್ ಕಿಸ್ ಟೀಂ ಕಾಯ್ತಿದೆ.

Anitha E | news18-kannada
Updated:August 24, 2019, 2:20 PM IST
ಆ್ಯಕ್ಷನ್ ಪ್ರಿನ್ಸ್ ವಾಯ್ಸ್​ಗೆ ಫುಲ್ ಬೇಡಿಕೆ: ಕಿಸ್ ಕೊಡೋರಿಗೆ ಜೊತೆಯಾದ ಧ್ರುವ ಸರ್ಜಾ !
ಕಿಸ್​ ಸಿನಿಮಾ ತಂಡಕ್ಕೆ ಜತೆಯಾದ ಧ್ರುವ ಸರ್ಜಾ
  • Share this:
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡೈಲಾಗ್ ಹೊಡೆದರೆ ಫ್ಯಾನ್ಸ್ ಫಿದಾ ಆಗ್ತಾರೆ. ಆ ಡೈಲಾಗ್‍ನಲ್ಲಿ ಪವರ್ ಇರುತ್ತೆ, ಖಡಕ್ ಫೀವರ್ ಇರುತ್ತೆ. 'ಅದ್ಧೂರಿ', 'ಬಹಾದ್ದೂರ್' ಹಾಗೂ 'ಭರ್ಜರಿ' ಮೂರೂ ಸೂಪರ್​ ಹಿಟ್​ ಸಿನಿಮಾಗಳ ಹೈಲೈಟ್ ಅಂದ್ರೇ ಡೈಲಾಗ್... ನೋಡೌಟ್. ಈಗ ಖಡಕ್ ಡೈಲಾಗ್ ಹೊಡೆಯೋ ಈ ಧ್ರುವ ಅವರ ಕಂಠಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ.

ಧ್ರುವ ಸರ್ಜಾ ಮಾಸ್ ಡೈಲಾಗ್ ಹೊಡೆಯೋದರಲ್ಲಿ ಮಾಸ್ಟರ್. ಅವರ ಡೈಲಾಗ್‍ಗೆ ಅಭಿಮಾನಿಗಳು ಹುಚ್ಚೆದ್ದು ಕುಣೀತಾರೆ. ಥಿಯೇಟರ್​ನಲ್ಲಿ ಶಿಳ್ಳೆ, ಚಪ್ಪಾಳೆಗಳು ಕಿವಿ ತುಂಬುತ್ತವೆ. ಈಗ ಈ ಡೈಲಾಗ್ ಹೊಡೆಯೋ ಕಂಠವೂ ಲಕ್ಕಿ ಎನ್ನುತ್ತಿದೆ ಸ್ಯಾಂಡಲ್‍ವುಡ್. ಆ ಲಕ್ಕಿ ಮ್ಯಾಜಿಕ್ ಮತ್ತೊಮ್ಮೆ ರಿಪೀಟ್ ಮಾಡೋಕೆ ಎ.ಪಿ. ಅರ್ಜುನ್ 'ಕಿಸ್' ಟೀಂ ಕಾಯ್ತಿದೆ.ವಿರಾಟ್-ಶ್ರೀಲೀಲಾ ಜೋಡಿಯಾಗಿರೋ 'ಕಿಸ್' ಸಿನಿಮಾಗೆ ಧ್ರುವ ಸರ್ಜಾ ಕಂಠದಾನ ಮಾಡುತ್ತಿದ್ದಾರೆ. 'ಕಿಸ್' ಕಮಾಲ್‍ನಲ್ಲಿ ಧ್ರುವ ಸೇರಿಕೊಂಡಿರೋದು ಅರ್ಜುನ್ ಮತ್ತು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಆದರೆ ಈ ಬಲವಾದ ಆನೆಯನ್ನು ಅದ್ದೂರಿಯಾಗಿ ಬೆಳೆಸಿದ್ದೇ ಎ.ಪಿ ಅರ್ಜುನ್. ಈಗ ಧ್ರುವ ಸರ್ಜಾಗೆ ಗುರುಕಾಣಿಕೆ ಕೊಡುವ ಸಮಯ. ಇನ್ನು ಧ್ರುವ ದನಿ ಅಂದರೆ ಅದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಇದನ್ನೂ ಓದಿ: 'ಸಾಹೋ' ಚಿತ್ರದಿಂದಾಗಿ ಅನುಷ್ಕಾರನ್ನ ದೂರವಿಟ್ಟ ಪ್ರಭಾಸ್

ಹೌದು, ಧ್ರುವ ಅವರ ಕಂಠಕ್ಕೆ ಅಂತಹದ್ದೊಂದು ಬೇಡಿಕೆ ಇರೋದಕ್ಕೆ ಕಾರಣವೇ ಇದು. ಇಷ್ಟಕ್ಕೂ ಬರೀ ಮಾಸ್ ಅಲ್ಲ, ಆ್ಯಕ್ಷನ್ ಪ್ರಿನ್ಸ್ ಕಂಠದಲ್ಲೊಂದು ಕಾಡುವ ಮ್ಯಾಜಿಕ್ ಇದೆ. ಮಾಸ್‍ಗೆ ಮಾಸ್, ಕ್ಲಾಸ್‍ಗೆ ಕ್ಲಾಸ್ ಈ ಧ್ರುವ ಸರ್ಜಾ ವಾಯ್ಸ್.

Kannada Kiss Movie
'ಕಿಸ್​' ಕನ್ನಡ ಸಿನಿಮಾ
ಮಾಸ್ ಡೈಲಾಗ್‍ನಲ್ಲಿ ಸರ್ಜಾ ಖದರ್ ಬೇರೆನೇ ಇದ್ದರೆ, ಭಾವನಾತ್ಮಕ ದೃಶ್ಯಗಳಲ್ಲಿ ಬೇರೇನೇ ಆಗಿರುತ್ತೆ. ಧ್ರುವ ದನಿಯಿದ್ದ 'ಯಜಮಾನ' ಟೈಟಲ್ ಟೀಸರ್ ಇಷ್ಟವಾಗೋ ಜೊತೆಗೇ 'ಯಜಮಾನ' ಸಿನಿಮಾ ಕೂಡ ದಚ್ಚು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಸದ್ಯ 'ಪೊಗರು' ಮೂಲಕ ಪವರ್ ತೋರಿಸೋಕೆ ಹೊರಟಿರೋ ಧ್ರುವ ಸರ್ಜಾ ಅಲ್ಲೂ ಪವರ್​ಫುಲ್​ ಡೈಲಾಗ್ ಚಚ್ಚಿದ್ದಾರೆ.

ಇದನ್ನೂ ಓದಿ: ಮಾವ ನಾಗಾರ್ಜುನರ ರಾಸಲೀಲೆಯಿಂದ ಕಷ್ಟಪಡುತ್ತಿರುವ ನಟಿ ಸಮಂತಾ..!

ಒಟ್ಟಾರೆ ಸ್ಯಾಂಡಲ್‍ವುಡ್‍ನಲ್ಲಿ ಎರಡು ವರ್ಷಕ್ಕೊಂದು ಸಿನಿಮಾ ಮಾಡಿದ್ರೂ, ವರ್ಷಕ್ಕರೆಡು ಸೂಪರ್ ಹಿಟ್ ಕೊಟ್ಟಷ್ಟು ಸದ್ದು ಮಾಡೋ ಸ್ಟಾರ್ ಅಂದರೆ ಅದು ಧ್ರುವ ಸರ್ಜಾ. ಸದ್ಯ ತಮ್ಮ ಮೊದಲ ಸಿನಿಮಾ ನಿರ್ದೇಶಕರ 'ಕಿಸ್' ಸಿನಿಮಾ ರಿಲೀಸ್‍ಗೆ ಹತ್ತಿರದಲ್ಲಿದೆ. 'ಕಿಸ್‍'ಗೆ ಈಗಾಗಲೇ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ಪವರ್​ ಸ್ಟಾರ್​ ಪುನೀತ್ ಚಿತ್ರಕ್ಕೆ ಲವ್ಲೀ ಹಾಡೊಂದು ಹಾಡಿದ್ದಾರೆ. ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗ್ತಿದೆ.

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ