ಜೊತೆ ಜೊತೆಯಲಿ...ಪತ್ನಿ ಜೊತೆಯಲಿ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಜಾಲಿ ರೈಡ್ ವಿಡಿಯೋ ಫುಲ್ ವೈರಲ್

Dhruva Sarja: ನಂದ ಕಿಶೋರ್- ಧ್ರುವ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಪೊಗರು ಚಿತ್ರವು ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಸಿನಿಮಾ ಮಾರ್ಚ್​​ನಲ್ಲಿ ರಿಲೀಸ್ ಆಗಲಿದೆ.

zahir | news18-kannada
Updated:January 12, 2020, 3:25 PM IST
ಜೊತೆ ಜೊತೆಯಲಿ...ಪತ್ನಿ ಜೊತೆಯಲಿ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಜಾಲಿ ರೈಡ್ ವಿಡಿಯೋ ಫುಲ್ ವೈರಲ್
ಧ್ರುವ ಸರ್ಜಾ
  • Share this:
ಕಳೆದೆರಡು ವರ್ಷಗಳಿಂದ 'ಪೊಗರು'ಗಾಗಿ ತನು ಮನ ಅರ್ಪಿಸಿರುವ ಸ್ಯಾಂಡಲ್​ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೂಟಿಂಗ್​ನಿಂದ ಸ್ವಲ್ಪ ಬಿಡುವು ಮಾಡಿಕೊಂಡಿದ್ದಾರೆ. ಈ ಬಿಡುವಿನ ವೇಳೆಯಲ್ಲಿ ಪತ್ನಿ ಪ್ರೇರಣಾ ಜೊತೆಗೂಡಿ ತಮ್ಮ ಹುಟ್ಟೂರಿಗೆ ತೆರಳಿದ್ದರು.

ಹೌದು, ಮಧುಗಿರಿಗೆ ಹೋಗಿದ್ದ ಈ ಯುವಜೋಡಿ ಅಲ್ಲಿನ ಚೌಡೇಶ್ವರಿ ದೇವಿ ಹಾಗೂ ನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಇದೇ ವೇಳೆ ಮಧುಗಿರಿಯಿಂದ ಲಕ್ಕೇನಹಳ್ಳಿವರೆಗೂ ಪತ್ನಿಯೊಂದಿಗೆ ಬೈಕ್‍ನಲ್ಲಿ ಜಾಲಿ ರೈಡ್ ಹೋಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ನಿಯ ಜತೆ ಸುಮಾರು 7 ಕಿ.ಮೀ ಬೈ ಕ್‍ನಲ್ಲಿ ತೆರಳಿದ ಆ್ಯಕ್ಷನ್ ಪ್ರಿನ್ಸ್ ತಮ್ಮ ಅಜ್ಜಿ ಕಟ್ಟಿಸಿದ್ದ ದೇವಾಲಯಗಳಲ್ಲಿ ಇತ್ತೀಚೆಗೆ ಖರೀದಿಸಿದ 1 ಕೋಟಿ ರೂ. ಬೆಲೆಯ ಪೋರ್ಷೆ ಕಾರ್​ಗೆ ಪೂಜೆ ಮಾಡಿಸಿದರು.

ಧ್ರುವ ಸರ್ಜಾರ ಈ ಜಾಲಿ ಟ್ರಿಪ್​ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ನವಜೋಡಿಯ ಸಿಂಪಲ್​ಸಿಟಿಗೆ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಂದ ಕಿಶೋರ್- ಧ್ರುವ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ 'ಪೊಗರು' ಚಿತ್ರವು ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಸಿನಿಮಾ ಮಾರ್ಚ್​​ನಲ್ಲಿ ರಿಲೀಸ್ ಆಗಲಿದೆ. ಅಲ್ಲದೆ ಈ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಲಿರುವ ಹೊಸ ಸಿನಿಮಾದಲ್ಲೂ ಆ್ಯಕ್ಷನ್ ಪ್ರಿನ್ಸ್ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Bigg Boss: ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್ ಟ್ವಿಸ್ಟ್​..!
Published by: zahir
First published: January 12, 2020, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading