Pogaru Title Track: ಮೈ ಕೊಡವಿಕೊಂಡು ಎಂಟ್ರಿ ಕೊಟ್ಟ ಪೊಗರು ಶಿವ..!

Dhruva Sarja: ಪೊಗರು ಅಣ್ಣನಿಗೆ ಪೊಗರು ಪೊಗರು... ವಿಡಿಯೋ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡಿನ ಬೀಟ್ಸ್​ಗಳಿಗೆ ಸಿನಿಪ್ರಿಯರು ಹುಚ್ಚೆದು ಕುಣಿಯುವಂತೆ ಮಾಡಿದೆ. ಚಂದನ್​ ಶೆಟ್ಟಿ ಸಂಗೀ ನೀಡಿರುವ ಈ ಸಿನಿಮಾದ ಟೈಟಲ್​ ಟ್ರ್ಯಾಕ್​ಗೆ ಚಂದನ್​ ಶೆಟ್ಟಿ, ಶಶಾಂಕ್​ ಶೇಷಗಿರಿ ಹಾಗೂ ಅನಿರುದ್ಧ ಶಾಸ್ತ್ರಿ ದನಿಯಾಗಿದ್ದಾರೆ. ಈ ಹಾಡು ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು, 40 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ. 

ಪೊಗರು ಟೈಟಲ್​ ಟ್ರ್ಯಾಕ್​ನಲ್ಲಿ ಧ್ರುವ ಸರ್ಜಾ

ಪೊಗರು ಟೈಟಲ್​ ಟ್ರ್ಯಾಕ್​ನಲ್ಲಿ ಧ್ರುವ ಸರ್ಜಾ

  • Share this:
ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ, ಡೈಲಾಗ್​​ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಖತ್ ಸದ್ದು ಮಾಡುತ್ತಿದೆ. ಫೆ. 19ರಂದು ರಿಲೀಸ್​ ಆಗಲಿರುವ ಈ ಸಿನಿಮಾದ ಆಡಿಯೋ ಲಾಂಚ್​ ನಿನ್ನೆಯಷ್ಟೆ ದಾವಣಗೆರೆಯಲ್ಲಿ ಆಗಿದೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಇನ್ನು ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದಾಗಿನಿಂದಲೂ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ ಚಿತ್ರದ ಖರಾಬು ಹಾಡು ಸಿನಿಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ತೆಲುಗು ಹಾಗೂ ಕನ್ನಡದಲ್ಲಿ ಹೊಸ ದಾಖಲೆ ಬರೆದಿದೆ.ಇನ್ನು ಟ್ರೇಲರ್ ಹಾಗೂ ಹಾಡುಗಳಿಂದಲೇ  ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಈಗ ದುಪ್ಪಟ್ಟಾಗಿದೆ. ರಶ್ಮಿಕಾ ಮಂದಣ್ಣ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. 

ಪ್ರೇಮಿಗಳ ದಿನದಂದು ಎಲ್ಲ ಚಿತ್ರತಂಡಗಳು ಲವ್​ ಹಾಗೂ ರೊಮ್ಯಾಂಟಿಕ್​ ಹಾಡನ್ನು ರಿಲೀಸ್ ಮಾಡಿದರೆ, ಪೊಗರು ಚಿತ್ರತಂಡ ಮಾತ್ರ ಸಖತ್ ಮಾಸ್​ ಸಾಂಗ್​ ಬಿಡುಗಡೆ ಮಾಡಿದೆ. ಪೊಗರು ಚಿತ್ರದ ಟೈಟಲ್​ ಟ್ರ್ಯಾಕ್​ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.ಪೊಗರು ಅಣ್ಣನಿಗೆ ಪೊಗರು ಪೊಗರು... ವಿಡಿಯೋ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡಿನ ಬೀಟ್ಸ್​ಗಳಿಗೆ ಸಿನಿಪ್ರಿಯರು ಹುಚ್ಚೆದು ಕುಣಿಯುವಂತೆ ಮಾಡಿದೆ. ಚಂದನ್​ ಶೆಟ್ಟಿ ಸಂಗೀ ನೀಡಿರುವ ಈ ಸಿನಿಮಾದ ಟೈಟಲ್​ ಟ್ರ್ಯಾಕ್​ಗೆ ಚಂದನ್​ ಶೆಟ್ಟಿ, ಶಶಾಂಕ್​ ಶೇಷಗಿರಿ ಹಾಗೂ ಅನಿರುದ್ಧ ಶಾಸ್ತ್ರಿ ದನಿಯಾಗಿದ್ದಾರೆ. ಈ ಹಾಡು ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು, 40 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.ಸ್ಯಾಂಡಲ್​ವುಡ್​ನಲ್ಲಿ ದಾಖಲೆಗಳ ಜೊತೆಗೆ ವಿವಾದಕ್ಕೂ ಕಾರಣವಾಗಿತ್ತು ಈ ಖರಾಬು ಹಾಡು. ಈ ಹಾಡಿನಲ್ಲಿ ನಾಯಕಿಗೆ ಸಿಕ್ಕಾಪಟ್ಟೆ ಕಾಟ ಕೊಡಲಾಗಿದ್ದು, ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಈ ಕಾರಣದಿಂದ ಹಾಡನ್ನು ಸಿನಿಮಾದಿಂದ ತೆಗೆದಯುವಂತೆ ಕೆಲವು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು. ಜೊತೆಗೆ ಪೊಲೀಸ್​ ಠಾಣೆ ಮೆಟ್ಟಿಲು ಸಹ ಏರಿದ್ದರು.

ಇದನ್ನೂ ಓದಿ: ಕೃಷ್ಣ-ಮಿಲನಾ ಆರತಕ್ಷತೆಯಲ್ಲಿ ತಾರೆಯರ ಸಮಾಗಮ: ನವಜೋಡಿಗೆ ಆಶೀರ್ವದಿಸಿದ ಶಿವರಾಜ್​ಕುಮಾರ್

ನಂದ ಕಿಶೋರ್​ ನಿರ್ದೇಶನದ ಪೊಗರು ಸಿನಿಮಾದಲ್ಲಿ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಧ್ರುವ ಜೊತೆ ಅಂತರರಾಷ್ಟ್ರೀಯ ಫೈಟರ್​ಗಳೂ ಕೈ ಮಿಲಾಯಿಸಿದ್ದಾರೆ. ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಜೊತೆ ಡಾಲಿ ಧನಂಜಯ್, ತೆಲುಗಿನ ಸ್ಟಾರ್​ ನಟ ಜಗಪತಿಬಾಬು, ಆರ್ಮುಗಂ ರವಿಶಂಕರ್​ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.
Published by:Anitha E
First published: