• Home
  • »
  • News
  • »
  • entertainment
  • »
  • Pogaru: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ತೆಲುಗು ಟೀಸರ್​ ನಾಳೆ ರಿಲೀಸ್​ ಆಗಲಿದೆ..!

Pogaru: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ತೆಲುಗು ಟೀಸರ್​ ನಾಳೆ ರಿಲೀಸ್​ ಆಗಲಿದೆ..!

ತೆಲುಗಿನಲ್ಲಿ ಪೊಗರು ಸಿನಿಮಾ

ತೆಲುಗಿನಲ್ಲಿ ಪೊಗರು ಸಿನಿಮಾ

Dhruva Sarja: ತೆಲುಗಿನಲ್ಲಿ ಈಗಾಗಲೇ ಖರಾಬು ಹಾಡು ರಿಲೀಸ್ ಮಾಡಿರುವ ಚಿತ್ರತಂಡ ಈಗ, ಟೀಸರ್​ ರಿಲೀಸ್​ಗೆ ಸಜ್ಜಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಚಿತ್ರತಂಡ ತೆಲುಗು ಟೀಸರ್​ ರಿಲೀಸ್​ ಮಾಡಲಿದೆ. ಈ ಬಗ್ಗೆ ಧ್ರುವ ಸರ್ಜಾ ಟ್ವೀಟ್​ ಮಾಡಿದ್ದಾರೆ.

  • Share this:

ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್​ ಕಟ್ ಹೇಳಿರುವ ಹಾಗೂ ಧ್ರುವ ಸರ್ಜಾ ನಟಿಸಿರುವ ಪೊಗರು ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಧ್ರುವ ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದ ಸುದ್ದಿಯಲ್ಲಿರುವ ಸಿನಿಮಾ ಪೊಗರು. ಈ ಸಿನಿಮಾದ ಹಾಡು, ಡೈಲಾಗ್​ ಟೀಸರ್​, ಟೀಸರ್​ ಹೀಗೆ ಎಲ್ಲವೂ ಸಿನಿಮಾಗೆ ಬಗ್ಗೆ ಇದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಅಲ್ಲದೆ ಈ ಸಿನಿಮಾ ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್​ ಆಗಲಿದೆ. ಇತ್ತೀಚೆಗಷ್ಟೆ ತಮಿಳಿನ ಟೈಟಲ್​ ಪೋಸ್ಟರ್​  ಅನ್ನು ನಿರ್ದೇಶಕ ನಂದ ಕಿಶೋರ್​ ಹಂಚಿಕೊಂಡಿದ್ದಾರೆ. ಸೆಮ್ಮಾ ತಿಮಿರ್​ ಹೆಸರಿನಲ್ಲಿ ಕಾಲಿವುಡ್​ನಲ್ಲಿ ಕನ್ನಡದ ಪೊಗರು ತೆರೆ ಕಾಣಲಿದೆ. ಇನ್ನು ತೆಲುಗಿನಲ್ಲಿ ಪೊಗರು ಸಿನಿಮಾಗೆ  ಮತ್ತೊಂದು ಪ್ಲಸ್​ ಪಾಯಿಂಟ್ ಎಂದರೆ ರಶ್ಮಿಕಾ. ಈಗಾಗಲೇ ಟಾಲಿವುಡ್​ನಲ್ಲಿ ಹೆಸರು ಮಾಡಿರುವ ರಶ್ಮಿಕಾಗೆ ದೊಡಗಡ ಅಭಿಮಾನಿ ಬಳಗವೇ ಇದೆ. ಇದರಿಂದಾಗಿ ಪೊಗರು ಸಿನಿಮಾ ಟಾಲಿವುಡ್​ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. 


ತೆಲುಗಿನಲ್ಲಿ ಈಗಾಗಲೇ ಖರಾಬು ಹಾಡು ರಿಲೀಸ್ ಮಾಡಿರುವ ಚಿತ್ರತಂಡ ಈಗ, ಟೀಸರ್​ ರಿಲೀಸ್​ಗೆ ಸಜ್ಜಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಚಿತ್ರತಂಡ ತೆಲುಗು ಟೀಸರ್​ ರಿಲೀಸ್​ ಮಾಡಲಿದೆ. ಈ ಬಗ್ಗೆ ಧ್ರುವ ಸರ್ಜಾ ಟ್ವೀಟ್​ ಮಾಡಿದ್ದಾರೆ.


POGARU 💪🏼



ನಾಳೆ ಅಂದರೆ ಹೊಸ ವರ್ಷದಂದು ಮಧ್ಯಾಹ್ನ 12;12ಕ್ಕೆ ತೆಲುಗು ತೆಲುಗು ಟೀಸರ್ ಆದಿತ್ಯ ಮ್ಯೂಸಿಕ್​ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಖರಾಬು ವಿಡಿಯೋ ಹಾಡು ಸಹ ಇನ್ನೂ ಸದ್ದು ಮಾಡುತ್ತಿದೆ. 5 ಕೋಟಿ ವೀಕ್ಷಣೆ ಪಡೆದುಕೊಂಡಿದೆ.



ಊಹಿಸಿದಂತೆ ಕ್ರಿಸ್ಮಸ್​ಗೆ ಈ ಸಿನಿಮಾ ರಿಲೀಸ್​ ಆಗಲಿಲ್ಲ. ಇನ್ನುಜ.14ರಂದು ಅಂದರೆ ಸಂಕ್ರಾಂತಿಗೆ ಪೊಗರು ರಿಲೀಸ್​ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ನೀಡಿಲ್ಲ.


ಇದನ್ನೂ ಓದಿ: Rashmika Mandanna: ಮತ್ತೊಂದು ಬಾಲಿವುಡ್​ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ: ಬಿಗ್​ ಬಿಗೆ ಜೊತೆಯಾದ ಲಿಲ್ಲಿ..!


ಧ್ರುವ ಸರ್ಜಾ ಹಾಗೂ ನಂದ ಕಿಶೋರ್​ ಅವರ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ಚಿರು ಹುಟ್ಟಿದ ಹಬ್ಬದಂದೇ ಈ ಸಿನಿಮಾದ ಸ್ಕ್ರಿಪ್ಟ್​ ಪೂಜೆ ನಡೆದಿತ್ತು. ಇನ್ನು ಇತ್ತೀಚೆಗಷ್ಟೆ ಈ ಸಿನಿಮಾ ಟೈಟಲ್​ ಪೋಸ್ಟರ್​ ಸಹ ರಿಲೀಸ್​ ಮಾಡಲಾಯಿತು. ಆ ಸಿನಿಮಾಗೆ ದುಬಾರಿ ಎಂದು ಹೆಸರಿಡಲಾಗಿದೆ.

Published by:Anitha E
First published: