ಧ್ರುವಾ ಸರ್ಜಾ ಅಭಿನಯದ ಪೊಗರು ಕರಾಬು ಸಾಂಗ್​ಗೆ ಸ್ಟೆಪ್​ ಹಾಕಿದ ಬಾಲಕ; ಬಾಲಿವುಡ್​ ಮಂದಿ ಫುಲ್​ ಫಿದಾ

ಟ್ವಿಟ್ಟರ್​, ಫೇಸ್​ಬುಕ್​ ಇನ್ಸ್​ಟಾಗ್ರಾಂನಲ್ಲೂ ಈ ಬಾಲಕನ ಹವಾ ಜೋರಾಗಿಯೇ ಇದೆ. ಅಲ್ಲದೆ, ಈ ಬಾಲಕ ಯಾರು ಆತನಿಗೆ ಶಿಕ್ಷಣೆಗೆ ಒದಗಿಸುವ ಜವಾಬ್ದಾರಿನ್ನು ಹೊತ್ತುಕೊಳ್ಳುತ್ತಿದ್ದೆ ಎಂದು ಕೆಲವರು ಮುಂದೆ ಬಂದಿದ್ದಾರೆ.

news18-kannada
Updated:October 29, 2020, 10:30 AM IST
ಧ್ರುವಾ ಸರ್ಜಾ ಅಭಿನಯದ ಪೊಗರು ಕರಾಬು ಸಾಂಗ್​ಗೆ ಸ್ಟೆಪ್​ ಹಾಕಿದ ಬಾಲಕ; ಬಾಲಿವುಡ್​ ಮಂದಿ ಫುಲ್​ ಫಿದಾ
dance
  • Share this:
ಡಾನ್ಸ್​ಗೆ ಸಂಬಂಧಿಸಿದಂತೆ ಸಾಕಷ್ಟು ರಿಯಾಲಿಟಿ ಶೋಟಗಳು ನಡೆದಿವೆ ಮತ್ತು ನಡೆಯುತ್ತಿವೆ. ಈ ರಿಯಾಲಿಟಿ ಶೋಗಳಲ್ಲಿ ದೇಶದ ಮೂಲೆ ಮೂಲೆಯಿಂದ ಜನರು ಬಂದು ಭಾಗವಹಿಸಿದ್ದಾರೆ. ಈ ವೇಳೆ ಬಡ ಕುಟುಂಬದಿಂದ ಬಂದವರ ಸಂಖ್ಯೆಯೂ ಕಡಿಮೆ ಏನಿಲ್ಲ. ಎಲ್ಲಿಯೂ ಅವಕಾಶ ಸಿಗದೆ ಇದ್ದವರು ಈ ರೀತಿ ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೊಂದು ಒಂದು ವರ್ಗವಾದರೆ, ಮತ್ತೊಂದು ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್​ ಆಗುವುದು. ಯಾವುದೋ ವ್ಯಕ್ತಿ ಎಲ್ಲಿಯೋ ಡಾನ್ಸ್​ ಮಾಡಿರುತ್ತಾರೆ. ಆ ಡಾನ್ಸ್​ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್​ ಆಗಿ ಬಿಡುತ್ತದೆ. ಇದಕ್ಕೆ ಈಗ ಬಾಲಕನೋರ್ವ ಹೊಸ ಸೇರ್ಪಡೆ. ಬೀದಿ ಬದಿಯಲ್ಲಿ ನಿಂತು ಪುಟಾಣಿ ಬಾಲಕನೋರ್ವ ಡಾನ್ಸ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

ಅಣ್ಣ ಬಂದ ಬಾಸು ಬಂದ ಎಲ್ರೂ ಎರಡು ಸ್ಟೆಪ್​ ಹಾಕಿ ಹಾಡಿಗೆ ಬಾಲಕ ಡಾನ್ಸ್​ ಮಾಡಿದ್ದಾನೆ. ಆತನ ಡಾನ್ಸ್​ ಜೊತೆಗೆ ಅವನ ಸ್ಮೈಲ್​ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋಗೆ ಟೀಂ ಇಂಡಿಯಾ ಸ್ಪಿನ್ನರ್​ ಯಜುವೇಂದ್ರ ಚಹಾಲ್​, ನಟ ರಿತೇಶ್​ ದೇಶ್​ಮುಖ್​ ಸೇರಿ ಸಾಕಷ್ಟು ಮಂದಿ ಈ ವಿಡಿಯೋವನ್ನು ಮೆಚ್ಚಿದ್ದಾರೆ.ಇನ್ನು, ಟ್ವಿಟ್ಟರ್​, ಫೇಸ್​ಬುಕ್​ ಇನ್ಸ್​ಟಾಗ್ರಾಂನಲ್ಲೂ ಈ ಬಾಲಕನ ಹವಾ ಜೋರಾಗಿಯೇ ಇದೆ. ಅಲ್ಲದೆ, ಈ ಬಾಲಕ ಯಾರು ಆತನಿಗೆ ಶಿಕ್ಷಣೆಗೆ ಒದಗಿಸುವ ಜವಾಬ್ದಾರಿನ್ನು ಹೊತ್ತುಕೊಳ್ಳುತ್ತಿದ್ದೆ ಎಂದು ಕೆಲವರು ಮುಂದೆ ಬಂದಿದ್ದಾರೆ.
Published by: Apurva Kumar
First published: October 29, 2020, 10:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading