Anitha EAnitha E
|
news18-kannada Updated:January 22, 2021, 12:33 PM IST
ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ
ಆ್ಯಕ್ಷನ್ ಪ್ರಿನ್ ಧೃವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ ಪೊಗರು ಇದೇ ಫೆ. 19ರಂದು ತೆರೆಗೆಬರಲು ಸಜ್ಜಾಗಿದೆ. ಈಗಾಗಲೇ ಸಿನಿಮಾ ಪ್ರಚಾರ ಕಾರ್ಯ ಸಹ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ನಿರ್ದೇಶಕ ನಂದಕಿಶೋರ್, ನಾಯಕ ಧ್ರುವ ಸರ್ಜಾ ಸಹ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇವರ ಜೊತೆಗೆ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಸಹ ಜೊತೆಯಾಗಿದ್ದಾರೆ. ಕೊರೋನಾ ಕಾರಣದಿಂದಾಗಿ ಬಹತೇಕ ಪ್ರಚಾರ ಕೆಲಸಗಳು ಸಾಮಾಜಿಕ ಜಾಲತಾಣದಲ್ಲೇ ನಡೆಯುತ್ತಿವೆ. ಇನ್ನು ನಿನ್ನೆಯಷ್ಟೆ ಚಿತ್ರತಂಡ ಸುದ್ಧಿಗೋಷ್ಠಿ ನಡೆಸಿದ್ದು, ಸಿನಿಮಾದ ಕುರಿತಾಗಿ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅನ್ಲಾಕ್ ಆದ ನಂತರ ಬಿಡುಗಡೆ ಆಗುತ್ತಿರೋ ಮೊದಲ ಕನ್ನಡದ ಸ್ಟಾರ್ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ಬೆಂಬಲ ನೀಡಲು ಸಲಗ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಕೆಜಿಎಫ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಫ್ಯಾಂಟಮ್ ನಿರ್ಮಾಪಕ ಜಾಕ್ ಮಂಜು, ಕೋಟಿಗೊಬ್ಬ 3 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಸಹ ಪೊಗರು ಪ್ರೀ-ರಿಲೀಸ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಸುದ್ದಿಗೀಷ್ಠಿಯಲ್ಲಿ ಪೊಗರು ಸಿನಿಮಾ ಎಷ್ಟು ಪರದೆಗಳಲ್ಲಿ ರಿಲೀಸ್ ಆಗಲಿದೆ ಎಂದು ಮಾಹಿತಿ ನೀಡಿದೆ ಚಿತ್ರತಂಡ. ಸದ್ಯಕ್ಕೆ ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಇನ್ನು ಧ್ರುವ ಸರ್ಜಾ, ಅಣ್ಣ ಚಿರು ಅವರನ್ನು ನೆನದು ಭಾವುಕರಾಗಿದ್ದರು. ಸುದ್ದಿಗೋಷ್ಠಿಯಲ್ಲೇ ಕಣ್ಣೀರಿಟ್ಟು, ತನ್ನ ಪ್ರತಿ ಸಿನಿಮಾವನ್ನು ಅಣ್ಣನ ಜೊತೆಯಲ್ಲೇ ನೋಡುತ್ತಿದ್ದೆ ಎಂದು ನೋವಿನಿಂದ ನುಡಿದಿದ್ದಾರೆ.
ಈ ಸಿನಿಮಾದಲ್ಲಿ ಧ್ರುವ ಸರ್ಜಾ ಹತ್ತನೇ ತರಗತಿ ಹುಡುನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ದೇಹದ ತೂಕ ಇಳಿಸಿಕೊಂಡಿದ್ದ ಧ್ರುವ ಮತ್ತೆ ದೇಹದ ತೂಕ ಹೆಚ್ಚಿಸಿಕೊಳ್ಳಲು ಕೊಂಚ ಸಮಯ ತೆಗೆದುಕೊಂಡಿದ್ದರು. ಇದರಿಂದಾಗಿ ಸಿನಿಮಾದ ಚಿತ್ರೀಕರಣ ಕೊಂಚ ತಡವಾಗಿತ್ತು ಎಂದು ನಿರ್ದೇಶಕ ನಂದ ಕಿಶೋರ್ ತಿಳಿಸಿದ್ದಾರೆ.
ಫೆಬ್ರವರಿ 19ರಂದು ತೆರೆಗೆ ಬರಲು ಸಿದ್ದವಾಗಿರೋ ಪೊಗರು ಚಿತ್ರ ನಾಲ್ಕು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಪೊಗರು ಸಿನಿಮಾದಲ್ಲಿ ಧ್ರುವ ಜೊತೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಗಂಗಾಧರ್ ನಿರ್ಮಾಣದ ಪೊಗರು ಈಗಾಗಲೇ ಟೀಸರ್, ಡೈಲಾಗ್ ಟೀಸರ್ ಹಾಗೂ ಹಾಡುಗಳಿಂದಾಗಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ. ಅದರಲ್ಲೂ ಸಿನಿಮಾದ ಖರಾಬು ಹಾಡಂತೂ ಸಖತ್ ವೈರಲ್ ಆಗಿದೆ. ಕನ್ನಡ ಹಾಗೂ ತೆಲುಗ ಎರಡೂ ಭಾಷೆಗಳಲ್ಲೂ ಸಿನಿಪಪ್ರಿಯರು ಪೊಗರು ರಿಲೀಸ್ಗಾಗಿ ಕಾಯುವಂತೆ ಮಾಡಿದೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದಂದೇ ರಿಲೀಸ್ ಆಯ್ತು ರೈಡರ್ ಸಿನಿಮಾದ ಟೀಸರ್..!
ಧ್ರುವ ಸರ್ಜಾ ಈ ಚಿತ್ರಕ್ಕಾಗಿಯೇ ಮೂರುವರೆ ವರ್ಷಗಳ ಕಾಲ ಕೂದಲು , ಗಡ್ಡ ಬಿಟ್ಟು ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ ಚಿತ್ರದ ಕೆಲವು ಡೈಲಾಗ್ಗಳು ಕೂಡ ಸಾಕಷ್ಟು ಜನಪ್ರಿಯವಾಗಿತ್ತು. ಇನ್ನು ಈ ಚಿತ್ರದ ಖರಾಬು ಹಾಡು 18 ಕೋಟಿ ವೀವ್ಸ್ ಪಡೆಯುವ ಮೂಲಕ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡು ಎಂಬ ದಾಖಲೆ ಕೂಡ ಮಾಡಿದೆ.
Published by:
Anitha E
First published:
January 22, 2021, 12:33 PM IST