Dhruva Sarja: ಮಾರ್ಟಿನ್​ ನಾನಲ್ಲ ಎಂದಿದ್ದೇಕೆ ಧ್ರುವ ಸರ್ಜಾ: ಮಾರಾಟವಾಯ್ತು ಆಡಿಯೋ ರೈಟ್ಸ್​

ಮಾರ್ಟಿನ್​ ಚಿತ್ರದ ಪೋಸ್ಟರ್ ನೋಡಿದವರೆಲ್ಲ ಇದರಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಇದೇ ಎಂದು ತಿಳಿದುಕೊಂಡಿದ್ದಾರೆ. ಆದರೆ, ಇದು ಸತ್ಯ ಅಲ್ಲ ಎಂದು ಧ್ರುವ ಹೇಳಿದ್ದಾರೆ. ಹೌದು, ಮಾರ್ಟಿನ್​ ನಾನಲ್ಲ ಎಂದಿರುವ ಧ್ರುವ, ಸಿನಿಮಾದ ಕತೆಯೇ ಮಾರ್ಟಿನ್ ಯಾರು ಅನ್ನೋದು ಅಂತ ಸುಳಿವು ನೀಡಿದ್ದಾರೆ.

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ

  • Share this:
ಆ್ಯಕ್ಷನ್​ ಪ್ರಿನ್ಸ್​ ಧುವ್ರ ಸರ್ಜಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ಅವರು 9 ವರ್ಷಗಳ ನಂತರ ಮತ್ತೆ ಸಿನಿಮಾಗಾಗಿ ಒಂದಾಗಿದ್ದಾರೆ. ಅರ್ಜುನ್ ಹಾಗೂ ಧ್ರವ ಸರ್ಜಾ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಮಾರ್ಟಿನ್​. ನಿನ್ನೆ ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಮಾರ್ಟಿನ್ ಸಿನಿಮಾದ ಪೋಸ್ಟರ್​ ಅನ್ನು ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಧ್ರುವ ಸರ್ಜಾ ಅವರ ಖಡಕ್ ಲುಕ್​ಗೆ ಫಿದಾ ಆಗಿದ್ದಾರೆ. ಅದೇ ಕಟ್ಟು ಮಸ್ತಾದ ದೇಹ, ಕೈ ಮೇಲೆ ಟ್ಯಾಟೂ. ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಲುಕ್ ವೈರಲ್ ಆಗಿದೆ. ಈ ಸಿನಿಮಾ ಕುರಿತಾಗಿ ಧ್ರುವ ಸರ್ಜಾ ಅವರು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎ.ಪಿ. ಅರ್ಜುನ್ ಹಾಗೂ ಧ್ರುವ ಅವರ ಕಾಂಬಿನೇಷನ್​ ಮೇಲೆ  ಕನ್ನಡ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇದೆ. 

ಮಾರ್ಟಿನ್​ ಚಿತ್ರದ ಪೋಸ್ಟರ್ ನೋಡಿದವರೆಲ್ಲ ಇದರಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಇದೇ ಎಂದು ತಿಳಿದುಕೊಂಡಿದ್ದಾರೆ. ಆದರೆ, ಇದು ಸತ್ಯ ಅಲ್ಲ ಎಂದು ಧ್ರುವ ಹೇಳಿದ್ದಾರೆ. ಹೌದು, ಮಾರ್ಟಿನ್​ ನಾನಲ್ಲ ಎಂದಿರುವ ಧ್ರುವ, ಸಿನಿಮಾದ ಕತೆಯೇ ಮಾರ್ಟಿನ್ ಯಾರು ಅನ್ನೋದು ಅಂತ ಸುಳಿವು ನೀಡಿದ್ದಾರೆ.


View this post on Instagram


A post shared by ap arjun (@aparjun_official)


ಈ ಸಿನಿಮಾದಲ್ಲಿ ಪೊಗರು ಚಿತ್ರದಂತೆ ಪವರ್ ಫುಲ್ ಡೈಲಾಗ್ಸ್​ ಇಲ್ಲವಂತೆ. ಉದಯ್ ಮೆಹ್ತಾ ನಿರ್ಮಾಣದ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದೆ. ಈ ಪ್ಯಾನ್​ ಇಂಡಿಯಾ ಸಿನಿಮಾಗೆ ಇನ್ನೂ ಯಾವ ಕಲಾವಿದರನ್ನೂ ಆಯ್ಕೆ ಮಾಡಲಾಗಿಲ್ಲ. ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, ಮುಂದಿನ ವರ್ಷ ಮಾರ್ಚ್​ ಅಥವಾ ಏಪ್ರಿಲ್ ವೇಳೆಗೆ ರಿಲೀಸ್​ಗೆ ಸಿದ್ಧವಾಗಲಿದೆ ಎನ್ನಲಾಗುತ್ತಿದೆ.

ಮಾರಾಟವಾಯ್ತು ಆಡಿಯೋ ರೈಟ್ಸ್​

ಇನ್ನು ಈ ಸಿನಿಮಾ ಸೆಟ್ಟೇರುವ ಮುನ್ನವೇ ಮಾರ್ಟಿನ್ ಚಿತ್ರದ ಐದೂ ಭಾಷೆಗಳ ಆಡಿಯೋ ಹಕ್ಕು ಮಾರಾಟವಾಗಿದೆಯಂತೆ. ಲಹರಿ ಸಂಸ್ಥೆ ಎಲ್ಲ ಭಾಷೆಯ ಹಕ್ಕನ್ನು ಖರೀದಿ ಮಾಡಿದೆಯಂತೆ.

ಇದನ್ನೂ ಓದಿ: Hemanth Kumar Wedding: ಹೊಸ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್ ಕುಮಾರ್..!

ಮಾರ್ಟಿನ್ ಚಿತ್ರಕ್ಕೂ ಮೊದಲು ಅಂದರೆ ಪೊಗರು ಸಿನಿಮಾ ರಿಲೀಸ್ ಆದ ನಂತರ ನಂದ ಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅವರ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಲಾಗಿತ್ತು. ಅದೇ ದುಬಾರಿ. ಆ ಸಿನಿಮಾಗೂ ಉದಯ್ ಮೆಹ್ತಾ ಅವರೇ ಹಣ ಹೂಡುವವರಿದ್ದರು. ಆದರೆ ಆ ಚಿತ್ರವನ್ನು ಮಧ್ಯದಲ್ಲೇ ಕೈ ಬಿಡಲಾಯಿತು.

ದುಬಾರಿ ಸಿನಿಮಾದ ಪ್ರಕಟಣೆಯಾದ ನಂತರ ಕೆಲ ದಿನಗಳಲ್ಲೇ, ಈ ಚಿತ್ರ ಸದ್ಯಕ್ಕೆ ಸೆಟ್ಟೇರುವುದಿಲ್ಲ ಎಂದು ಹೇಳಲಾಯಿತು. ಆಗ ಪೊಗರು ಸಿನಿಮಾ ರಿಲೀಸ್​ ಆದಾಗ ಆಗಿದ್ದ ವಿವಾದದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಹೇಳಲಾಗಿತ್ತು. ಮತ್ತೆ ಕೆಲವರು ಧ್ರುವ ಹಾಗೂ ನಂದ ಕಿಶೋರ್ ನಡುವಿನ ಸಂಬಂಧ ಸರಿಯಾಗಿಲ್ಲ ಅಂತಲೂ ಮಾತನಾಡಿಕೊಂಡಿದ್ದರು. ಈ ಎಲ್ಲ ಊಹಾಪೋಹಗಳಿಗೆ ನಿನ್ನೆ ತೆರೆ ಬಿದ್ದಿದೆ.

ಇದನ್ನೂ ಓದಿ: ಸರಳವಾಗಿ ರಿಜಿಸ್ಟರ್ ಮದುವೆಯಾದ ಖ್ಯಾತ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ

ಮಾರ್ಟಿನ್​ ಸಿನಿಮಾದ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಜೊತೆ ನಂದ ಕಿಶೋರ್ ಸಹ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಾನು ಧ್ರುವ ಚೆನ್ನಾಗಿದ್ದೇವೆ. ದುಬಾರಿ ಸಿನಿಮಾ ಸದ್ಯಕ್ಕೆ ಆರಂಭವಾಗಿಲ್ಲ ಅಷ್ಟೆ ಕೊರೋನಾ ಕಾರಣದಿಂದ ಅದು ಆರಂಭವಾಗಿಲ್ಲ. ಸ್ವಲ್ಪ ಸಮಯದ ನಂತರ ಈ ಸಿನಿಮಾ ಆರಂಭವಾಗಲಿದೆ ಎಂದು ಹೇಳಿದ್ದಾರೆ.
Published by:Anitha E
First published: