• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Martin Movie: ಸೆಪ್ಟೆಂಬರ್​ನಲ್ಲಿ ಮಾರ್ಟಿನ್ ಸಿನಿಮಾ ರಿಲೀಸ್​ ಆಗಲ್ವಾ? ಹೊಸ ಅಪ್ಡೇಟ್ ಇಲ್ಲಿದೆ​

Martin Movie: ಸೆಪ್ಟೆಂಬರ್​ನಲ್ಲಿ ಮಾರ್ಟಿನ್ ಸಿನಿಮಾ ರಿಲೀಸ್​ ಆಗಲ್ವಾ? ಹೊಸ ಅಪ್ಡೇಟ್ ಇಲ್ಲಿದೆ​

ಧ್ರುವ ಸರ್ಜಾ

ಧ್ರುವ ಸರ್ಜಾ

Dhruva Sarja: ಈಗಾಗಲೇ ಮಾರ್ಟಿನ್ ತಂಡ ನೀಡಿರುವ ಮಾಹಿತಿಯ ಪ್ರಕಾರ ಈ ಸಿನಿಮಾವನ್ನು ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡುವ ಆಲೋಚನೆಯಲ್ಲಿತ್ತು. ಆದರೆ ಇದೀಗ ಅದರ ರಿಲೀಸ್​ ಡೇಟ್​ ಮುಂದಕ್ಕೆ ಹೋಗುತ್ತಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

  • Share this:

ಧ್ರುವ ಸರ್ಜಾ (Dhruva Sarja) ಹೆಚ್ಚು ಸಿನಿಮಾ (Film) ಮಾಡದಿದ್ದರೂ ಸಹ ಒಳ್ಳೆಯ ಹೆಸರು ಮಾಡಿದ ಯುವ ನಾಯಕ ನಟ (Actor). ಅವರ ಖಡಕ್ ಡೈಲಾಗ್, ಕ್ಯೂಟ್​ ಎಕ್ಸಪ್ರೆಷನ್​ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಧ್ರುವ ಸರ್ಜಾ ಪೊಗರು (Pogaru) ಸಿನಿಮಾದ ನಂತರ ಸದ್ಯ ಮಾರ್ಟಿನ್ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿ ಇದ್ದಾರೆ. ಅಭಿಮಾನಿಗಳು ಸಹ ಸಿನಿಮಾದ ಬಗ್ಗೆ ಅಪ್​ಡೇಟ್​ಗಾಗಿ ಕಾಯುತ್ತಿದ್ದರು, ಆದರೆ ಇದೀಗ ಒಂದು ಬ್ಯಾಡ್​ ನ್ಯೂಸ್​ ಇದೆ. ಏನದು? ಇಲ್ಲಿದೆ ನೋಡಿ.  


ಸಿನಿಮಾ ರಿಲೀಸ್​ ಡೇಟ್ ಮುಂದಕ್ಕೆ?


ಈಗಾಗಲೇ ಮಾರ್ಟಿನ್ ತಂಡ ನೀಡಿರುವ ಮಾಹಿತಿಯ ಪ್ರಕಾರ ಈ ಸಿನಿಮಾವನ್ನು ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡುವ ಆಲೋಚನೆಯಲ್ಲಿತ್ತು. ಆದರೆ ಇದೀಗ ಅದರ ರಿಲೀಸ್​ ಡೇಟ್​ ಮುಂದಕ್ಕೆ ಹೋಗುತ್ತಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ ಆದರೆ ಆಕ್ಷನ್​ ಭಾಗ ಮಾತ್ರ ಇನ್ನೂ ಶೂಟಿಂಗ್ ಆಗಿಲ್ಲ. ಇದೇ ಆಗಸ್ಟ್ 5ರಿಂದ ಈ ಸಿನಿಮಾದ ಆಕ್ಷನ್ ಭಾಗದ ಶೂಟಿಂಗ್ ಆರಂಭವಾಗುತ್ತಿದೆ. ಹಾಗಾಗಿ ಸಿನಿಮಾ ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದ್ದು, ಹಾಗಾಗಿ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.


ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿಜಕ್ಕೂ ಸಿನಿಮಾ ರಿಲೀಸ್​ ಮುಂದಕ್ಕೆ ಹೋಗುತ್ತದೆಯಾ ಎಂಬುದನ್ನ ಧ್ರುವ ಹಾಗೂ ಚಿತ್ರತಂಡವೇ ಮಾಹಿತಿ ನೀಡಬೇಕಿದ್ದು, ಸದ್ಯದ ಮಾಹಿತಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವುದು ಸತ್ಯ.


ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಜೋಡಿ ಈಗಾಗಲೇ ಅದ್ಧೂರಿ ಸಿನಿಮಾ ಮೂಲಕ ಜನರಿಗೆ ಮೋಡಿ ಮಾಡಿದೆ. ಈಗ ಮತ್ತೆ ಮಾರ್ಟಿನ್ ಸಿನಿಮಾ ಮೂಲಕ ಜನರಿಗೆ ಮನರಂಜನೆ ನೀಡಲು ಸಜ್ಜಾಗುತ್ತಿದ್ದಾರೆ. ಧ್ರುವ ಸರ್ಜಾ ಅವರ ಮೊದಲ ಸಿನಿಮಾ ಅದ್ದೂರಿಯನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದಲೇ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಷನ್ ಪ್ರಿನ್ಸ್ ಆಗಿ ಮೆರೆಯುತ್ತಿದ್ದಾರೆ.


ಇದನ್ನೂ ಓದಿ: ರಶ್ಮಿಕಾ ಈ ಸ್ವೆಟರ್​​ ರೇಟ್​ನಲ್ಲಿ ಸಾವ್ರ ಬಟ್ಟೆ ತಗೋಬೋದಂತೆ!


ಸಿನಿಮಾಗೆ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು


ಅದ್ಧೂರಿ ಚಿತ್ರದ ಮೂಲಕ ಅದ್ಧೂರಿಯಾಗೇ ಸ್ಯಾಂಡಲ್‍ವುಡ್‍ಗೆ ಡೆಬ್ಯೂ ಮಾಡಿದವರು ನಟ ಧ್ರುವ ಸರ್ಜಾ. ನಂತರ ಬಹದ್ದೂರ್, ಭರ್ಜರಿ, ಪೊಗರು ಹೀಗೆ ಒಂಭತ್ತು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್ ಆಗಿದೆ. ಇದು ಅವರ ಐದನೇ ಸಿನಿಮಾವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ ಎನ್ನಬಹುದು. ಇನ್ನು ಮಾರ್ಟಿನ್ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದ್ದು,  ಕನ್ನಡ, ತೆಲುಗು, ತಮಿಳು ಭಾಷೆಗಳ ಜೊತೆ ಜೊತೆಗೆ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಮಾಹಿತಿ ನೀಡಿದೆ.


ಇನ್ನು ಸ್ಟಂಟ್ ಮಾಸ್ಟರ್ ರವಿ ವರ್ಮಾ ಈ ಆಕ್ಷನ್​ ಸೀನ್​ಗಳನ್ನು ನಿರ್ದೇಶನ ಮಾಡುತ್ತಿದ್ದು, ಸ್ಟಂಟ್ ಮಾಸ್ಟರ್ಸ್‌ ರಾಮ ಲಕ್ಷ್ಮಣ   ಕೂಡ ಚಿತ್ರತಂಡಕ್ಕೆ ಸಾಥ್​ ಕೊಡುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ವೈಭವಿ ನಟಿಸುತ್ತಿದ್ದು, ಬಾಲಿವುಡ್ ನಟ ನಿಕಿತ್, ಅನ್‌ವೇಷಿ ಜೈನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಧಿಡೀರ್​ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್​, ಇನ್ನು ಚಾನ್ಸ್​ ಸಿಗಲ್ಲ ಅಂದವ್ರಿಗೆ ಕೊಟ್ರಾ ಟಾಂಗ್?


ಈಗಾಗಲೇ ಈ ಸಿನಿಮಾದ ಟೈಟಲ್​ ಟೀಸರ್ ಹಾಗೂ ಫಸ್ಟ್​​ ಲುಕ್​ ಬಿಡುಗಡೆಯಾಗಿ ಜನರಿಗೆ ಬಹಳ ಇಷ್ಟವಾಗಿದ್ದು ಮಾತ್ರವಲ್ಲದೇ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಸಹ ಹೆಚ್ಚು ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಟೈಟಲ್ ಟೀಸರ್ ನೋಡಿದವರು ಧ್ರುವ ಸರ್ಜಾ ಅವರ ಖಡಕ್ ಲುಕ್, ಖತರ್ನಾಕ್ ಹಾವ ಭಾವಗಳು, ಕೈಯಲ್ಲಿ ಕ್ರಾಸ್ ಚೈನ್ ಹಿಡಿದುಕೊಂಡಿರುವುದನ್ನು ನೋಡಿ, ಆ್ಯಕ್ಷನ್ ಪ್ರಿನ್ಸ್ ಅವರೇ ಮಾರ್ಟಿನ್ ಎಂದುಕೊಂಡಿದ್ದರು. ಆದರೆ ಧ್ರುವ ಸರ್ಜಾ, ನಾನು ಮಾರ್ಟಿನ್ ಅಲ್ಲ, ಮಾರ್ಟಿನ್ ಯಾರು ಅನ್ನೋದೇ ಸಿನಿಮಾ ಅಂತ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದರು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು