Junior Chiru: ಜೂನಿಯರ್​ ಚಿರು ಆಗಮನಕ್ಕೆ ಕಾದಿದೆ ಸರ್ಜಾ ಕುಟುಂಬ: ವಿಶೇಷ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ..!

ಮೇಘನಾರ ಸೀಮಂತದ ವಿಡಿಯೋವನ್ನು ಪುಟ್ಟದಾಗಿ ಎಡಿಟ್​ ಮಾಡಿ ಈ ವಿಡಿಯೋ ಮಾಡಲಾಗಿದೆ. ಇದರಲ್ಲಿ ಧ್ರುವ ಸರ್ಜಾ ಜೂನಿಯರ್​ ಚಿರು ಆಗಮನದ ಬಗ್ಗೆ ಸುಳಿವು ಕೊಟ್ಟಂತೆ ಕಾಣುತ್ತಿದೆ. 

Anitha E | news18-kannada
Updated:October 16, 2020, 12:56 PM IST
Junior Chiru: ಜೂನಿಯರ್​ ಚಿರು ಆಗಮನಕ್ಕೆ ಕಾದಿದೆ ಸರ್ಜಾ ಕುಟುಂಬ: ವಿಶೇಷ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ..!
ಕನ್ನಡದ ನಟಿ ಮೇಘನಾ ರಾಜ್​ ಸರ್ಜಾ ಕೂಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಇವರ ಸೀಮಾಂತ ಕಾರ್ಯ ನಡೆದಿತ್ತು.
  • Share this:
ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯಿಂದಾಗಿ ತೀರಲಾರದಷ್ಟು ನೋವಿಲ್ಲಿದೆ ಅವರ ಕುಟುಂಬ. ಇನ್ನು ನಾಳೆ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಅಲ್ಲದೆ ಮೇಘನಾ ಸರ್ಜಾ ಸಹ ತುಂಬು ಗರ್ಭಿಣಿ. ಇತ್ತೀಚೆಗಷ್ಟೆ ಅವರಿಗೆ ಎರಡು ಸಲ ಸೀಮಂತ ಕಾರ್ಯ ಮಾಡಲಾಗಿತ್ತು. ಅದೂ ಸಹ ಚಿರಂಜೀವಿ ಸರ್ಜಾ ಅವರ ಆಸೆಯಂತೆಯೇ ಅವರ ಸೀಮಂತ ಮಾಡಲಾಗಿತ್ತು. ಇನ್ನು ಸೀಮಂತ ಕಾರ್ಯದಲ್ಲಿ ಚಿರು ಅವರ ಕಟೌಟ್​ ಇಡಲಾಗಿದ್ದು ವಿಶೇಷವಾಗಿತ್ತು. ಇನ್ನು ಸೀಮಂತ ಕಾರ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಅದನ್ನು ಫೋಟೋಶಾಪ್​ನಲ್ಲಿ ಎಡಿಟ್ ಮಾಡಿದ ಅಭಿಮಾನಿಗಳು ಚಿರು ಹಾಗೂ ಮೇಘನಾ ಅವರ ಬೇಬಿ ಶವರ್​ ಫೋಟೋಗಳನ್ನು ಕ್ರಿಯೇಟ್​ ಮಾಡಿ ಮ್ಯಾಜಿಕ್​ ಮಾಡಿದ್ದರು. ಮೇಘನಾರ ಸೀಮಂತದಲ್ಲಿ ಖುದ್ದು ಚಿರು ಇರುವಂತೆಯೇ ಫೋಟೋಗಳನ್ನು ಎಡಿಟ್ ಮಾಡಿದ್ದು, ಆ ಫೋಟೋಗಳು ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇನ್ನು ಮೇಘನಾರಿಗಾಗಿಯೇ ಒಂದು ವಿಶೇಷ ವಿಡಿಯೋ ಮಾಡಿದ್ದಾರೆ ಚಿರು ಅವರ ಕುಟುಂಬವರು. ಅದನ್ನು ಧ್ರುವ ಸರ್ಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಅದರಲ್ಲೂ ಮೇಘನಾರ ಸೀಮಂತದ ವಿಡಿಯೋವನ್ನು ಪುಟ್ಟದಾಗಿ ಎಡಿಟ್​ ಮಾಡಿ ಈ ವಿಡಿಯೋ ಮಾಡಲಾಗಿದೆ. ಇದರಲ್ಲಿ ಧ್ರುವ ಸರ್ಜಾ ಜೂನಿಯರ್​ ಚಿರು ಆಗಮನದ ಬಗ್ಗೆ ಸುಳಿವು ಕೊಟ್ಟಂತೆ ಕಾಣುತ್ತಿದೆ.

Meghana Raj Baby Shower, Meghana Raj baby shower, Artist karan acharya Recreated Meghana Raj Baby Shower photo, Meghana Raj and Chiranjeevi sarja, ಮೇಘನಾ ರಾಜ್ ಸೀಮಂತ, ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ, ಕಲಾವಿದ ಕರಣ್ ಆಚಾರ್ಯ
ಮೇಘನಾ ಹಾಗೂ ಚಿರು


ಹೌದು, ಜೂನಿಯರ್​ ‌ಚಿರು ಆಗಮನಕ್ಕೆ ಕಾದಿರುವ ಸರ್ಜಾ ಅವರ ಕುಟುಂಬ ಈ ಮುದ್ದಾದ ವಿಡಿಯೋ ಮಾಡಿಸಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ಅವರ ಪ್ರೀತಿಯ ಕಾಣಿಕೆಯಾಗಿರುವ ಮಗುವಿನ ಸ್ವಾಗತಕ್ಕಾಗಿ ಈ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


ನಾಳೆ ಚಿರು ಹುಟ್ಟು ಹಬ್ಬದ ದಿನವೇ ಆಗಲಿದೆಯಾ ಜೂನಿಯರ್​ ಚಿರು ಜನನ? ಈ ವಿಡಿಯೋದಲ್ಲಿ ಹ್ಯಾಪಿ ವೆಲ್​ಕಮ್ ಜೂನಿಯರ್​​ ಚಿರು ಎಂದು ಹೇಳಲಾಗಿತ್ತಿದೆ. ಜೊತೆಗೆ ಚಿರು ಅವರಿಗೆ ಹುಟ್ಟುಹಬ್ಬದ ಶುಭ ಸಹ ಕೋರಲಾಗಿದೆ. ಇದನ್ನು ನೋಡಿದವರು ನಾಳೆಯೇ ಜೂನಿಯರ್​ ಚಿರು ಅವರ ಜನನವಾಗಲಿದ್ದು, ಅದಕ್ಕೆ ಧ್ರುವಾ ಸರ್ಜಾ ಈ ವಿಡಿಯೋ ಮೂಲಕ ಸುಳಿವು ನೀಡಿದ್ದಾರೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಥಿಯೇಟರ್​ಗೆ ಜನರನ್ನ ಸೆಳೆಯೋಕೆ ಹೊಸ ತಂತ್ರ: ಮಲ್ಟಿಪ್ಲೆಕ್ಸ್​- ಚಿತ್ರಮಂದಿರಗಳಲ್ಲಿ ಕಡಿಮೆಯಾದ ಟಿಕೆಟ್ ದರ

ಚಿರು ಅವರ ಹುಟ್ಟುಹಬ್ಬದ ಅಂಗವಾಗಿಯೇ ಒಂದು ದಿನ ಮುಂಚಿತವಾಗಿ ಶಿವಾರ್ಜುನ ಸಿನಿಮಾವನ್ನು ರಿಲೀಸ್​ ಮಾಡಲಾಗಿದೆ. ಶಿವಾರ್ಜುನ ಸಿನಿಮಾ ಚಿರು ಅಭಿನಯದ ಚಿತ್ರವಾಗಿದ್ದು, ಲಾಕ್​ಡೌನ್​ ಆಗುವ ಮೊಲದು ರಿಲೀಸ್ ಆಗಿತ್ತು.
Published by: Anitha E
First published: October 16, 2020, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading