ಅಣ್ಣ ಚಿರಂಜೀವಿ ಸರ್ಜಾ ಮಗನ ಬಗ್ಗೆ ಧ್ರುವ ಸರ್ಜಾ ಏನ್​ ಹೇಳಿದ್ರು ಗೊತ್ತಾ?; ಈ ಸ್ಟೋರಿ ನೋಡಿ

ಗಂಡು ಮಗು ಆಗಿರುವುದಕ್ಕೇ ಚಿರಂಜೀವಿ ಸರ್ಜಾ ಅವರೇ ಜೊತೆಯಲ್ಲಿದ್ದಂತೆ ಅವರಿಗೆ ಭಾಸವಾಗುತ್ತಿದೆಯಂತೆ. ಈ ಬಗ್ಗೆ ಮಾತನಾಡಿರುವ ಧ್ರುವಾ ಸರ್ಜಾ, ಮಗುವನ್ನು ಎತ್ತುಕೊಂಡಾಗ ನಮ್ಮ ಅಣ್ಣನ ಜೊತೆಯಲ್ಲೇ ಇದ್ದಂತೆ ಖುಷಿಯಾಯ್ತು, ಎಂದಿದ್ದಾರೆ.

Dhruva Sarja

Dhruva Sarja

 • Share this:
  ಸರ್ಜಾ ಕುಟುಂಬಕ್ಕೆ ಜೂನಿಯರ್​ ಚಿರಂಜೀವಿಯ ಆಗಮವಾಗಿದೆ. ಕೆಲ ತಿಂಗಳ ಹಿಂದಷ್ಟೇ ಗಂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ನಟಿ ಮೇಘನಾ ರಾಜ್​ ಈಗ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಸರ್ಜಾ ಕುಟುಂಬದ ಜೊತೆಗೆ ಸರ್ಜಾ ಕುಟುಂಬದ ಅಭಿಮಾನಿಗಳ ಖುಷಿ ಕೂಡ ಹೆಚ್ಚಿದೆ. ಇನ್ನು, ಅಣ್ಣನನ್ನು ಕಳೆದುಕೊಂಡು ತುಂಬಾನೇ ಬೇಸರಗೊಂಡಿದ್ದ ಧ್ರವಾ ಸರ್ಜಾ ಮಗುವನ್ನು ನೋಡಿ ಸಂತಸಗೊಂಡಿದ್ದಾರೆ.

  ಜೂನಿಯರ್​ ಚಿರು ಮನೆಗೆ ಬಂದಿರುವ ಬಗ್ಗೆ ಮಾತನಾಡಿರುವ ಧ್ರುವ, ಗಂಡು ಮಗು ಆಗಿರುವುದಕ್ಕೆ ಖುಷಿ ಆಗುತ್ತಿದೆ. ಮಗು ಹಾಗೂ ಮೇಘನಾ ಇಬ್ಬರೂ ಆರೋಗ್ಯವಾಗಿದ್ದಾರೆ. ಸಡನ್ ಆಗಿ ಮಗು ಎತ್ತಿಕೊಂಡಾಗ ಆದ ಖುಷಿಯನ್ನು ಹೇಳೋಕೆ ಸಾಧ್ಯವೇ ಇಲ್ಲ. ಇಡೀ ರಾಜ್ಯದ ಜನತೆ ತಾಯಿ ಮಗುವಿಗೆ ಆಶೀರ್ವಾದ ಮಾಡಿ, ಎಂದು ಕೋರಿದರು.

  ಗಂಡು ಮಗು ಆಗಿರುವುದಕ್ಕೇ ಚಿರಂಜೀವಿ ಸರ್ಜಾ ಅವರೇ ಜೊತೆಯಲ್ಲಿದ್ದಂತೆ ಅವರಿಗೆ ಭಾಸವಾಗುತ್ತಿದೆಯಂತೆ. ಈ ಬಗ್ಗೆ ಮಾತನಾಡಿರುವ ಧ್ರುವಾ ಸರ್ಜಾ, ಮಗುವನ್ನು ಎತ್ತುಕೊಂಡಾಗ ನಮ್ಮ ಅಣ್ಣನ ಜೊತೆಯಲ್ಲೇ ಇದ್ದಂತೆ ಖುಷಿಯಾಯ್ತು, ಎಂದಿದ್ದಾರೆ.

  ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿ ಜನ್ಮದಿನ ಆಚರಣೆ ಮಾಡಿತ್ತು ಸರ್ಜಾ ಕುಟುಂಬ. ಅದೇ ದಿನವೇ ಮೇಘನಾಗೆ ಹೆರಿಗೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕೆಲ ದಿನ ಬಿಟ್ಟು ಜೂನಿಯರ್​ ಚಿರು ಆಗಮಿಸಿದ್ದಾನೆ. ವಿಶೇಷ ಎಂದರೆ, ಇಂದು ಚಿರು ಸರ್ಜಾ- ಮೇಘನಾ ನಿಶ್ಚಿತಾರ್ಥದ ದಿನ. ಅದೇ ದಿನವೇ ಮೇಘನಾಗೆ ಮಗುವಾಗಿದೆ.
  Published by:Rajesh Duggumane
  First published: