Dhruva Sarja Martin: ಧ್ರುವ ಸರ್ಜಾ ಹೊಸಾ ಸಿನಿಮಾ ಫಸ್ಟ್ ಲುಕ್ ರಿಲೀಸ್, ಹೇಗಿದ್ದಾನೆ ನೋಡಿ 'ಮಾರ್ಟಿನ್'

Dhruva Sarja New Movie: 'ಮಾರ್ಟಿನ್' ಸಸ್ಪೆನ್ಸ್ ಥ್ರಿಲ್ಲರ್ ಹಿನ್ನೆಲೆಯಲ್ಲಿ ಮೂಡಿಬರೋ ಲವ್ ಸ್ಟೋರಿಯಂತೆ. ಕಾಲೇಜ್ ಬ್ಯಾಕ್​ಗ್ರೌಂಡ್​ನಲ್ಲಿ ಹೆಣೆಯಲಾದ ಈ ಕತೆ ಒಂದು ಹೊಸತನ ನೀಡುತ್ತದೆ ಎನ್ನಲಾಗಿದೆ. ಇಂದು ಅರ್ಜುನ್ ಸರ್ಜಾ ಹುಟ್ಟುಹಬ್ಬದ ಜೊತೆ ಸ್ವಾತಂತ್ರ್ಯ ಹಬ್ಬವೂ ಆಗಿರೋದ್ರಿಂದ ಇಂದೇ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಮಾರ್ಟಿನ್ ಪೋಸ್ಟರ್

ಮಾರ್ಟಿನ್ ಪೋಸ್ಟರ್

  • Share this:
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹೊಸಾ ಚಿತ್ರ ‘ಮಾರ್ಟಿನ್’ (Martin) ಅನ್ನೋದು ಈಗಾಗಲೇ ತಿಳಿದಿರುವ ವಿಚಾರ. ಆದ್ರೆ ಈ ವಿಚಾರವನ್ನು ಚಿತ್ರತಂಡ ಸ್ವಾತಂತ್ರ್ಯೋವದ ಈ ದಿನ ಅಧಿಕೃತವಾಗಿ ಪ್ರಕಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿರೋ ಚಿತ್ರತಂಡ ಅಭಿಮಾನಿಗಳಿಗೆ ಸ್ವಾತಂತ್ರ ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದೆ. ಯಶಸ್ವಿ ಜೋಡಿ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ ಪಿ ಅರ್ಜುನ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಅಲ್ಲಿಗೆ ಅಭಿಮಾನಿಗಳು ಮತ್ತೊಂದು ಬ್ಲಾಕ್​ಬಸ್ಟರ್ ಸಿನಿಮಾ ನಿರೀಕ್ಷಿಸಬಹುದು. ಧ್ರುವ ಚಿತ್ರದ ಟೈಟಲ್​ಗಳು ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡುತ್ತವೆ. ಮಾರ್ಟಿನ್ ಕೂಡಾ ಅದೇ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳಿವೆ.

ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ರಾಮ್ ಲಕ್ಷ್ಮಣ್ ಸಾಹಸ ಸಂಯೋಜನೆ ಮಾರ್ಟಿನ್​ಗೆ ಇರಲಿದೆ. ಕೆಲವು ತಿಂಗಳ ಹಿಂದೆ ಈ ಚಿತ್ರದ ಸ್ಕ್ರಿಪ್ಟ್​​ಗೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿತ್ತು. ಆಗಲೇ ಈ ಚಿತ್ರದ ಬಗ್ಗೆ ಕೆಲವು ವಿಚಾರಗಳು ಹೊರಬಿದ್ದಿದ್ದವು. ಈಗಾಗಲೇ ಎ ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಶನ್​ನಲ್ಲಿ ಅದ್ದೂರಿ ಚಿತ್ರ ಬಂದು ಸೂಪರ್ ಹಿಟ್ ಕೂಡಾ ಆಗಿದೆ. ಆದ್ದರಿಂದ ಈ ಹಿಟ್ ಜೋಡಿಯ ಮುಂದಿನ ಚಿತ್ರ ಕೂಡಾ ಸೂಪರ್ ಹಿಟ್ ಅನ್ನೋ ನಿರೀಕ್ಷೆ ಅಭಿಮಾನಿಗಳದ್ದು. ಬರೋಬ್ಬರಿ 9 ವರ್ಷಗಳ ನಂತರ ಧ್ರುವ ಮತ್ತು ಅರ್ಜುನ್ ಒಂದು ಪ್ರಾಜೆಕ್ಟ್​ಗಾಗಿ ಜೊತೆಯಾಗಿದ್ದಾರೆ. ಇದು ಇಬ್ಬರಿಗೂ ಹೊಸಾ ಜವಾಬ್ದಾರಿ, ಹೆಚ್ಚಿನ ಜವಾಬ್ದಾರಿ ಎಂದಿದ್ದಾರೆ ಧ್ರುವ ಸರ್ಜಾ.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಸಖತ್ ಸುದ್ದಿ…ಬಂದಿದೆ Alcohol Ice Cream! ತಿಂದ್ರೆ ಕಿಕ್ ಹೊಡೆಯೋದು ಗ್ಯಾರಂಟಿ

ಅಂದ್ಹಾಗೆ 'ಮಾರ್ಟಿನ್' ಸಸ್ಪೆನ್ಸ್ ಥ್ರಿಲ್ಲರ್ ಹಿನ್ನೆಲೆಯಲ್ಲಿ ಮೂಡಿಬರೋ ಲವ್ ಸ್ಟೋರಿಯಂತೆ. ಕಾಲೇಜ್ ಬ್ಯಾಕ್​ಗ್ರೌಂಡ್​ನಲ್ಲಿ ಹೆಣೆಯಲಾದ ಈ ಕತೆ ಒಂದು ಹೊಸತನ ನೀಡುತ್ತದೆ ಎನ್ನಲಾಗಿದೆ. ಇಂದು ಅರ್ಜುನ್ ಸರ್ಜಾ ಹುಟ್ಟುಹಬ್ಬದ ಜೊತೆ ಸ್ವಾತಂತ್ರ್ಯ ಹಬ್ಬವೂ ಆಗಿರೋದ್ರಿಂದ ಇಂದೇ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇನ್ನು ಧ್ರುವ ಸಿನಿಮಾ ಅಂದ್ರೆ ಘೋಷಣೆಯಾಗಿ ಕನಿಷ್ಟ 1 ವರ್ಷವಾದರೂ ಬೇಕಾಗುತ್ತದೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ. ಆದ್ರೆ ಮಾರ್ಟಿನ್ ವಿಚಾರದಲ್ಲಿ ಹಾಗಾಗದಂತೆ ನೋಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್​ನಲ್ಲಿ ನಾಲ್ಕು ತಿಂಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿಬಿಡಲು ಡೆಡ್​ಲೈನ್ ಹಾಕಿಕೊಂಡಿದೆ. ಡಿಸೆಂಬರ್ 20ರೊಳಗೆ ಮಾರ್ಟಿನ್ ಕೆಲಸ ಮುಗಿಸಿ ನಂತರ ಧ್ರುವ ತಮ್ಮ ಮುಂದಿನ ಚಿತ್ರಕ್ಕೆ ಹೊರಡಲಿದ್ದಾರೆ. ಧ್ರುವ ಮುಂದಿನ ಚಿತ್ರ ದುಬಾರಿ ಕೂಡಾ ಈಗಾಗ್ಲೇ ಅನೌನ್ಸ್ ಆಗಿದೆ. ಹಾಗಾಗಿ ಅಭಿಮಾನಿಗಳನ್ನು ಹೆಚ್ಚು ಕಾಯಿಸದೇ ಬೇಗ ಮಾರ್ಟಿನ್​ನ್ನು ತೆರೆ ಮೇಲೆ ತರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Cheque: ಚೆಕ್ ಬರೀತಿದ್ದೀರಾ? RBI ಮಾಡಿರುವ ಈ ಹೊಸಾ ರೂಲ್ಸ್ ಬಗ್ಗೆ ತಪ್ಪದೇ ತಿಳಿದುಕೊಳ್ಳಿ, ಮಿಸ್ ಆದ್ರೆ ಹಣ ಕಳ್ಕೊಳ್ತೀರಾ ಜೋಕೆ!

ಕನ್ನಡ ಅಲ್ಲದೇ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲೂ ಮಾರ್ಟಿನ್ ಬಿಡುಗಡೆಯಾಗಲಿದೆ. ಕೈಯಲ್ಲೊಂದು ಗ್ರೆನೇಡ್ ಹಿಡಿದಿರೋ ಧ್ರುವ ಲುಕ್ ನಾನ್ಯಾರಿಗೂ ಕೇರ್ ಮಾಡಲ್ಲ ಅನ್ನೋ ಮೆಸೇಜ್​ನ್ನ ಕಣ್ಣಲ್ಲೇ ಹೇಳಿದಂತಿದೆ. ಹಾಗಾಗಿ ಮತ್ತೊಮ್ಮೆ ರಫ್ ಅಂಡ್ ಟಫ್ ಧ್ರುವ ಸರ್ಜಾ ತೆರೆ ಮೇಲೆ ಅಭಿಮಾನಿಗಳನ್ನು ಖುಷಿಪಡಿಸಲಿದ್ದಾರೆ.

ಮಾರ್ಟಿನ್​ಗಾಗಿ ಧ್ರುವ ಸಖತ್ತಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ. ಎಡತೋಳಿನ ಮೇಲೆ ಇಂಡಿಯನ್ ಎಂದು ಇಂಗ್ಲಿಷ್ ಅಕ್ಷರಗಳ ಟ್ಯಾಟೂ ಇದೆ. ಜೊತೆಗೆ ಬೇಡಿ ತೊಟ್ಟಿದ್ದರೂ ರಗಡ್ ಲುಕ್ ಕೊಡ್ತಿರೋ ಫಸ್ಟ್ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಸ್ಯಾಂಡಲ್​ವುಡ್ ಫಿಟ್ನೆಸ್ ಕ್ಲಬ್ ನ ಮುಂಚೂಣಿ ನಾಯಕ ಧ್ರುವ ಮಾರ್ಟಿನ್ ಮೂಲಕ ಮತ್ತಷ್ಟು ಬಾಡಿ ಬಿಲ್ಡಿಂಗ್ ಕ್ರೇಜ್ ಹುಟ್ಟುಹಾಕಿದ್ರೂ ಆಶ್ಚರ್ಯವಿಲ್ಲ. ಒಟ್ಟಾರೆ ಮಾರ್ಟಿನ್​ಗಾಗಿ ಅಭಿಮಾನಿಗಳೆಲ್ಲಾ ಕಾತರದಿಂದ ಕಾಯುತ್ತಿದ್ದಾರೆ.
Published by:Soumya KN
First published: