• Home
  • »
  • News
  • »
  • entertainment
  • »
  • Martin Movie: ಆ್ಯಕ್ಷನ್ ಸೀನ್​ಗೆ ಫುಲ್​ ತಯಾರಿ ಮಾಡ್ತಿದ್ದಾರೆ ಧ್ರುವ ಸರ್ಜಾ, ಮಾರ್ಟಿನ್ ಸಿನಿಮಾ ಬಗ್ಗೆ ಹೊಸ ಅಪ್​​ಡೇಟ್​

Martin Movie: ಆ್ಯಕ್ಷನ್ ಸೀನ್​ಗೆ ಫುಲ್​ ತಯಾರಿ ಮಾಡ್ತಿದ್ದಾರೆ ಧ್ರುವ ಸರ್ಜಾ, ಮಾರ್ಟಿನ್ ಸಿನಿಮಾ ಬಗ್ಗೆ ಹೊಸ ಅಪ್​​ಡೇಟ್​

ಧ್ರುವ ಸರ್ಜಾ

ಧ್ರುವ ಸರ್ಜಾ

Dhruva Sarja: ಇದು ಅವರ ಐದನೇ ಸಿನಿಮಾವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ ಎನ್ನಬಹುದು. ಇನ್ನು ಮಾರ್ಟಿನ್ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.

  • Share this:

ಧ್ರುವ ಸರ್ಜಾ (Dhruva Sarja) ಹೆಚ್ಚು ಸಿನಿಮಾ (Film) ಮಾಡದಿದ್ದರೂ ಸಹ ಒಳ್ಳೆಯ ಹೆಸರು ಮಾಡಿದ ಯುವ ನಾಯಕ ನಟ (Actor). ಅವರ ಖಡಕ್ ಡೈಲಾಗ್, ಕ್ಯೂಟ್​ ಎಕ್ಸಪ್ರೆಷನ್​ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಧ್ರುವ ಸರ್ಜಾ ಪೊಗರು (Pogaru) ಸಿನಿಮಾದ ನಂತರ ಸದ್ಯ ಮಾರ್ಟಿನ್ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿ ಇದ್ದು, ಈ ಸಿನಿಮಾದ ಆ್ಯಕ್ಷನ್​ ಸೀಸನ್​ಗಳಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.  ನಿರ್ದೇಶಕ ಎ.ಪಿ. ಅರ್ಜುನ್(A.P Arjun)  ಹಾಗೂ ಧ್ರುವ ಸರ್ಜಾ ಸಖತ್​ ಬ್ಯುಸಿ ಇದ್ದು, ಈ ಸಿನಿಮಾದ ಆಕ್ಷನ್​ ಸೀನ್​ ಭರ್ಜರಿಯಾಗಿ ಶೂಟ್​ ಮಾಡಲು ತಯಾರಿ ನಡೆಸಿದ್ದಾರಂತೆ.


ಆಕ್ಷನ್​ ಸೀನ್​ಗೆ ಭರ್ಜರಿ ತಯಾರಿ


ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಜೋಡಿ ಈಗಾಗಲೇ ಅದ್ಧೂರಿ ಸಿನಿಮಾ ಮೂಲಕ ಜನರಿಗೆ ಮೋಡಿ ಮಾಡಿದೆ. ಈಗ ಮತ್ತೆ ಮಾರ್ಟಿನ್ ಸಿನಿಮಾ ಮೂಲಕ ಜನರಿಗೆ ಮನರಂಜನೆ ನೀಡಲು ಸಜ್ಜಾಗುತ್ತಿದ್ದಾರೆ. ಧ್ರುವ ಸರ್ಜಾ ಅವರ ಮೊದಲ ಸಿನಿಮಾ ಅದ್ದೂರಿಯನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದಲೇ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಷನ್ ಪ್ರಿನ್ಸ್ ಆಗಿ ಮೆರೆಯುತ್ತಿದ್ದಾರೆ.
ಅದ್ಧೂರಿ ಚಿತ್ರದ ಮೂಲಕ ಅದ್ಧೂರಿಯಾಗೇ ಸ್ಯಾಂಡಲ್‍ವುಡ್‍ಗೆ ಡೆಬ್ಯೂ ಮಾಡಿದವರು ನಟ ಧ್ರುವ ಸರ್ಜಾ. ನಂತರ ಬಹದ್ದೂರ್, ಭರ್ಜರಿ, ಪೊಗರು ಹೀಗೆ ಒಂಭತ್ತು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್ ಆಗಿದೆ. ಇದು ಅವರ ಐದನೇ ಸಿನಿಮಾವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ ಎನ್ನಬಹುದು. ಇನ್ನು ಮಾರ್ಟಿನ್ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದ್ದು,  ಕನ್ನಡ, ತೆಲುಗು, ತಮಿಳು ಭಾಷೆಗಳ ಜೊತೆ ಜೊತೆಗೆ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಮಾಹಿತಿ ನೀಡಿದೆ.
ಸದ್ಯ ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಆಕ್ಷನ್​ ಸೀನ್​ಗಳು ಮಾತ್ರ ಬಾಕಿ ಇದೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಈ ಆಕ್ಷನ್​ ಸೀನ್​ಗಳನ್ನು ನಿರ್ದೇಶನ ಮಾಡುತ್ತಿದ್ದು, ಸ್ಟಂಟ್ ಮಾಸ್ಟರ್ಸ್‌ ರಾಮ ಲಕ್ಷ್ಮಣ   ಕೂಡ ಚಿತ್ರತಂಡಕ್ಕೆ ಸಾಥ್​ ಕೊಡುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ವೈಭವಿ ನಟಿಸುತ್ತಿದ್ದು, ಬಾಲಿವುಡ್ ನಟ ನಿಕಿತ್, ಅನ್‌ವೇಷಿ ಜೈನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಊರ್ವಶಿ ರೌಟೇಲಾ ಬಟ್ಟೆ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು, ಉರ್ಫಿ ಜಾವೇದ್​ ಗಾಳಿ ಬೀಸ್ತಾ ಎಂದು ಕಾಮೆಂಟ್​


ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್​


ಈಗಾಗಲೇ ಈ ಸಿನಿಮಾದ ಟೈಟಲ್​ ಟೀಸರ್ ಹಾಗೂ ಫಸ್ಟ್​​ ಲುಕ್​ ಬಿಡುಗಡೆಯಾಗಿ ಜನರಿಗೆ ಬಹಳ ಇಷ್ಟವಾಗಿದ್ದು ಮಾತ್ರವಲ್ಲದೇ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಸಹ ಹೆಚ್ಚು ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಟೈಟಲ್ ಟೀಸರ್ ನೋಡಿದವರು ಧ್ರುವ ಸರ್ಜಾ ಅವರ ಖಡಕ್ ಲುಕ್, ಖತರ್ನಾಕ್ ಹಾವ ಭಾವಗಳು, ಕೈಯಲ್ಲಿ ಕ್ರಾಸ್ ಚೈನ್ ಹಿಡಿದುಕೊಂಡಿರುವುದನ್ನು ನೋಡಿ, ಆ್ಯಕ್ಷನ್ ಪ್ರಿನ್ಸ್ ಅವರೇ ಮಾರ್ಟಿನ್ ಎಂದುಕೊಂಡಿದ್ದರು. ಆದರೆ ಧ್ರುವ ಸರ್ಜಾ, ನಾನು ಮಾರ್ಟಿನ್ ಅಲ್ಲ, ಮಾರ್ಟಿನ್ ಯಾರು ಅನ್ನೋದೇ ಸಿನಿಮಾ ಅಂತ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದರು.
ಇದನ್ನೂ ಓದಿ: ಗಣೇಶನ ಜೊತೆ ಅಪ್ಪು, ಹಬ್ಬದ ಸಂಭ್ರಮದಲ್ಲೂ ಪರಮಾತ್ಮನ ಮರೆಯದ ಅಭಿಮಾನಿಗಳು


ಇನ್ನು ಈ ಸಿನಿಮಾದ ನಂತರ ಧ್ರುವ ಸರ್ಜಾ ಮುಂದಿನ ಸಿನಿಮಾ ನಿರ್ದೇಶಕ ಜೋಗಿ ಪ್ರೇಮ್ ​ ಜೊತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.ಈ ಸಿನಿಮಾದಲ್ಲಿ ಭೂಗತಲೋಕದ ದೊರೆ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ.. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಲಿದೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು