Dhruva Sarja: ಚಿರು ಕೊನೆ ಸಿನಿಮಾಗೆ ಡಬ್​ ಮಾಡಿದ ಧ್ರುವ ಸರ್ಜಾ! ಅಣ್ಣನ ಅಭಿನಯ ಕಂಡು ಭಾವುಕ

‘ರಾಜಮಾರ್ತಾಂಡ’ ಸಿನಿಮಾ (Rajamarthanda Kannada Movie) ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಟೀಸರ್​ ಮೂಲಕ ಭಾರಿ ಹೈಪ್​ ಕೂಡ ಸೃಷ್ಟಿ ಮಾಡಿತ್ತು. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುಕ್ಕೂ ಮುನ್ನವೇ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ಈಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಧ್ರುವ ಸರ್ಜಾ

ಧ್ರುವ ಸರ್ಜಾ

  • Share this:
ಚಿರಂಜೀವಿ ಸರ್ಜಾ(Chiranjeevi Sarja).. ಕನ್ನಡ(Kannada)ದ ಯುವ ನಟ. ತಮ್ಮದೇ ಆದ ಶೈಲಿಯಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದ ‘ವಾಯುಪುತ್ರ’. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು(Fans) ಚಿರಂಜೀವಿ ಸರ್ಜಾ ಹೊಂದಿದ್ದರು. ಇನ್ನೂ ಕನ್ನಡ ಚಿತ್ರರಂಗದಲ್ಲಿ ಬೆಳೆದು ದೊಡ್ಡ ಸ್ಟಾರ್​(Star) ಆಗಬೇಕೆಂಬ ಆಸೆ ಹೊಂದಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. 39ನೇ ವಯಸ್ಸಿಗೆ ಚಿರಂಜೀವಿ ಸರ್ಜಾ ಹೃದಯಾಘಾತ(Heart Attack)ದಿಂದ ಮೃತಪಟ್ಟಿದ್ದರು.ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕಾದ ದೊಡ್ಡ ನಷ್ಟ. ಚಿರು ನಮ್ಮನ್ನೆಲ್ಲ ಬಿಟ್ಟು ಹೋಗಿ ಇಷ್ಟು ದಿನ ಕಳೆದರೂ, ಅವರ ನೆನಪುಗಳು ಮಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲಿದೆ. ಚಿರು ಮೃತಪಟ್ಟ ಬಳಿಕ ಮೇಘನಾ(Meghana) ಗಂಡು ಮಗುವಿಗೆ ಜನ್ಮ ನೀಡಿದ್ದರು. ನಮ್ಮನ್ನು ಬಿಟ್ಟು ಹೋದ ಚಿರು ಮತ್ತೆ ಮಗು ರೂಪದಲ್ಲಿ ಬಂದಿದ್ದಾರೆ.

ರಾಜಮಾರ್ತಾಂಡ ಡಬ್ಬಿಂಗ್​ ಮುಗಿಸಿದ ಧ್ರುವ ಸರ್ಜಾ!

ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗುವುದಕ್ಕೂ ಮುನ್ನ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಪೈಕಿ ‘ರಾಜಮಾರ್ತಾಂಡ’ ಸಿನಿಮಾ (Rajamarthanda Kannada Movie) ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಟೀಸರ್​ ಮೂಲಕ ಭಾರಿ ಹೈಪ್​ ಕೂಡ ಸೃಷ್ಟಿ ಮಾಡಿತ್ತು. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುಕ್ಕೂ ಮುನ್ನವೇ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ಈಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಕುರಿತು ಚಿತ್ರತಂಡದಿಂದ ಅಪ್​ಡೇಟ್​ ಸಿಕ್ಕಿದೆ. ಚಿರಂಜೀವಿ ಸರ್ಜಾ ಅವರ ಕೊನೆ ಸಿನಿಮಾಗೆ ಧ್ರುವ ಸರ್ಜಾ ಡಬ್ಬಿಂಗ್​ ಮುಗಿಸಿದ್ದಾರೆ.

ಮಾತು ಕೊಟ್ಟಂತೆ ನಡೆದ ಧ್ರುವ ಸರ್ಜಾ!

ರಾಜಮಾರ್ತಾಂಡ' ನಿರ್ದೇಶಕರಿಗೆ ಧ್ರುವ ಸರ್ಜಾ ಮಾತು ಕೊಟ್ಟಿದ್ದರು. ಅಣ್ಣ ಅರ್ಧಕ್ಕೆ ಬಿಟ್ಟು ಹೋದ ಸಿನಿಮಾದ ಕೆಲಸವನ್ನು ಪೂರ್ತಿ ಮಾಡಿಕೊಡುವ ಭರವಸೆ ನೀಡಿದ್ದರು. ಅದರಂತೆ ನಿನ್ನೆ ( ಮೇ 9) 'ರಾಜಮಾರ್ತಾಂಡ' ಚಿತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಮೈಕ್ ಮುಂದೆ ನಿಂತು ಧ್ರುವ ಸರ್ಜಾ ಅಣ್ಣ ದೃಶ್ಯಗಳಿಗೆ ಧ್ವನಿ ನೀಡುತ್ತಿರುವ ವಿಡಿಯೋ ಅಭಿಮಾನಿಗಳ ಮನ ಕಲುಕಿದೆ. 'ಸಮಧಾನ ಸಮಾಧಾನ.. ಅಕ್ಕ ತಂಗಿಯಂದಿರೇ.. ಅಣ್ಣ-ತಮ್ಮಂದಿರೇ.. ಬಂಧು ಬಾಂಧವರೇ.. ನನ್ನನ್ನ ನಂಬಿ ಓಟ್ ಹಾಕಿ. ನನ್ನ ಕೊನೆ ಉಸಿರಿರುವವರೆಗೂ ನಿಮ್ಮಗಳಿಗೋಸ್ಕರನೇ ಹೋರಾಡ್ತೀನಿ' ಎಂಬ ಡೈಲಾಗ್​​ಗೆ ಧ್ರುವ ವಾಯ್ಸ್​​ ನೀಡಿದ್ದಾರೆ.



ಇದನ್ನೂ ಓದಿ: ಆಗಸ್ಟ್​ನಲ್ಲಿ ಗಾಳಿಪಟ ಹಾರಿಸಲು ರೆಡಿಯಾದ್ರು ಭಟ್ರು - ಗಣಿ, ಗಾಳಿಪಟ 2 ರಿಲೀಸ್ ಡೇಟ್ ಫಿಕ್ಸ್

ಭರದಿಂದ ಸಾಗಿದ ಪೋಸ್ಟ್​ ಪ್ರೊಡಕ್ಷನ್​ ವರ್ಕ್​!

ಹೌದು, ಈಗಾಗಲೇ ಎಲ್ಲಿರಗೂ ಗೊತ್ತಿರುವ ಹಾಗೇ ಈ ಸಿನಿಮಾದಲ್ಲಿ ಅಣ್ಣ ಚಿರಂಜೀವಿ ಸರ್ಜಾಗೆ ತಮ್ಮ ಧ್ರುವ ಸರ್ಜಾ ಧನಿಯಾಗಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬರದಿಂದ ಸಾಗುತ್ತಿವೆ. ಕೊನೇ ಹಂತದ ಕೆಲಸಗಳು ಮಾತ್ರ ಬಾಕಿ ಇವೆ.ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರಬೇಕು ಎಂಬ ಆಶಯದೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ.

ಇದನ್ನೂ  ಓದಿ: ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿಗೆ UFO ಬಲ! ಸ್ಯಾಂಡಲ್​ವುಡ್​ ಖದರ್​ ಅರ್ಥ ಮಾಡಿಕೊಂಡ ಬಾಲಿವುಡ್​


ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ದಿನಾಂಕನ್ನು ಚಿತ್ರತಂಡ ಘೋಷಣೆ ಮಾಡಲಿದೆಯಂತೆ. ಕೊನೆಯ ಬಾರಿಗೆ ಚಿರಂಜೀವಿ ಸರ್ಜಾರನ್ನು ಬೆಳ್ಳೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

Published by:Vasudeva M
First published: