Dhruva Sarja: ಆಕ್ಷನ್ ಪ್ರಿನ್ಸ್ ಜೀವನದಲ್ಲಿ ಹೊಸ ಅಧ್ಯಾಯ, ವಿಡಿಯೋ ಮೂಲಕ ಸಿಹಿ ಸುದ್ದಿ ಹಂಚಿಕೊಂಡ ಧ್ರುವ-ಪ್ರೇರಣಾ

Dhruva Sarja: ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ (Dhruva Sarja) ಸಾಮಾಜಿಕ ತಾಣದಲ್ಲಿ ಒಂದು ವಿಶೇಷ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಇದು ಇವರ ಲೈಫ್​ಗೆ ಸಂಬಂಧಿಸಿದ ಖುಷಿ ವಿಷಯವೇ ಆಗಿದೆ. ಇನ್ನೂ ಒಂದು ವಿಶೇಷವೆಂದ್ರೆ ಈ ಸುದ್ದಿಯನ್ನ ಅಷ್ಟೇ ಸ್ಪೆಷಲ್ (Specials) ಆಗಿಯೇ ಹೇಳಿರೋದು ಇನ್ನೂ ಒಂದು ಸ್ಪೆಷಾಲಿಟಿ ಅಂತಲೇ ಹೇಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ (Prince) ಧ್ರುವ ಸರ್ಜಾ (Dhruva Sarja) ಸಾಮಾಜಿಕ ತಾಣದಲ್ಲಿ ಒಂದು ವಿಶೇಷ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಇದು ಇವರ ಲೈಫ್​ಗೆ ಸಂಬಂಧಿಸಿದ ಖುಷಿ ವಿಷಯವೇ ಆಗಿದೆ. ಇನ್ನೂ ಒಂದು ವಿಶೇಷವೆಂದ್ರೆ ಈ ಸುದ್ದಿಯನ್ನ ಅಷ್ಟೇ ಸ್ಪೆಷಲ್ (Specials) ಆಗಿಯೇ ಹೇಳಿದ್ದಾರೆ. ಸಿನಿಮಾ ಹೀರೋ ಅಂದ್ಮೇಲೆ ಸಿನಿಮಾ ರೀತಿಯಲ್ಲಿಯೇ ಯೋಚನೆ ಮಾಡ್ಬೇಕು ಅಲ್ವೇ. ಅಭಿಮಾನಿಗಳೂ (Fans) ಅದನ್ನೇ ಬಯಸಿದ್ರೂ ಬಯಸಬಹುದು. ಈ ಹಿನ್ನೆಲೆಯಲ್ಲಿಯೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರ ಒಂದು ಫೋಟೋ (Photoshoot) ಶೂಟ್ ವೀಡಿಯೋ (Video) ಸಾಮಾಜಿಕ ತಾಣದಲ್ಲಿ( Social Media) ಭಾರೀ ಗಮನ ಸಳೆಯುತ್ತಿದೆ.

    ಅಪ್ಪ-ಅಮ್ಮ ಆಗ್ತಿದ್ದಾರೆ ಧ್ರುವ ಸರ್ಜಾ-ಪ್ರೇರಣಾ ಸರ್ಜಾ
    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಲ್ಲ ಅಭಿಮಾನಿಗಳು ಅಚ್ಚು-ಮೆಚ್ಚಿನ ನಾಯಕ ನಟ. ಪ್ರತಿ ವಿಷಯವನ್ನೂ ಧ್ರುವ ಸರ್ಜಾ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ತಾರೆ. ಹಾಗೆ ಧ್ರುವ ಸರ್ಜಾ ಈಗ ತಾವು ತಂದೆ ಆಗ್ತಿರೋ ವಿಷಯವನ್ನೂ ಸೋಷಿಯಲ್ ಮೀಡಿಯಾ ಮೂಲಕ ಅದು ವಿಶೇಷ ವೀಡಿಯೋ ಮೂಲಕವೇ ಶೇರ್ ಮಾಡಿಕೊಂಡಿದ್ದಾರೆ.



    ಹೌದು. ಧ್ರುವ ಸರ್ಜಾ ಹಾಗೂ ಪ್ರೇರಣಾ ವಿಶೇಷ ಫೋಟೋ ಶೂಟ್ ತುಂಬಾ ಗಮನ ಸೆಳೆಯೋ ಹಾಗೇನೆ ಇದೆ.ಈ ಫೋಟೋ ಶೂಟ್ ವೀಡಿಯೋದಲ್ಲಿ ವಿಶೇಷ ಪೋಟೋಗಳು ಇರೋದು ಗಮನ ಸೆಳೆಯುತ್ತಿದೆ. ನಿಜ, ಈ ಫೋಟೋ ಶೂಟ್​ ನಲ್ಲಿ ಪ್ರೇರಣಾ ಮತ್ತು ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯ ಸಂಕೇತದ ಆಗಮನಕ್ಕೆ ಇವರ ಖುಷಿ ಇಲ್ಲಿ ವಿಶೇಷವಾಗಿಯೇ ವ್ಯಕ್ತವಾಗಿದೆ.



    ಅಪ್ಪ-ಅಮ್ಮ ಪ್ರೇರಣಾ-ಧ್ರುವ ವಿಶೇಷ ಫೋಟೋ ಶೂಟ್
    ತಾಯಿ ಆಗ್ತಿರೋ ಪ್ರೇರಣಾ ಹೊಟ್ಟೆ ಹಿಡಿದು ಧ್ರುವ ಸರ್ಜಾ ಫೋಜ್ ಕೊಟ್ಟಿದ್ದಾರೆ. ಇದು ಒಂದು ರೀತಿ ಆದರೆ, ಪತಿ-ಪತ್ನಿ ತಮ್ಮ ಹೊಸ ಅತಿಥಿಯ ಆಗಮನದ ಸಂಭ್ರಮವನ್ನ ತಮ್ಮದೇ ರೀತಿಯಲ್ಲಿಯೇ ವ್ಯಕ್ತಪಡಿಸಿದ್ದಾರೆ. ಅದು ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದೆ. ಈ ಎಲ್ಲ  ಫೋಟೋಗಳನ್ನೆ ಕೋಲಾಜ್ ಮಾಡಿಯೇ ಒಂದು ವೀಡಿಯೋ ತಯಾರಿಸಲಾಗಿದೆ. ಅದೇ ವೀಡಿಯೋವನ್ನೇ  ಧ್ರುವ ಸರ್ಜಾ, ಪ್ರೇರಣಾ ಶಂಕರ್ ಇನ್​ಸ್ಟಾ ಗ್ರಾಮ್​ನ ಅಕೌಂಟ್​ನಲ್ಲಿಯೇ ಶೇರ್ ಮಾಡಲಾಗಿದೆ. ಅಂಬಾರಿ ಚಿತ್ರದ ಹಾಡನ್ನ ಈ ಒಂದು ವೀಡಿಯೋಗೆ ಹಿನ್ನೆಲೆಯಲ್ಲಿ ಬಳಸಲಾಗಿದೆ.






    ಇದೇ ತಿಂಗಳು ಮಗುವಿಗೆ ಜನ್ಮ ನೀಡುತ್ತಿದ್ದಾರೆ ಪ್ರೇರಣಾ ಸರ್ಜಾ 
    ಹೌದು. ಇದೇ ವೀಡಿಯೋದಲ್ಲಿ  ಕೊನೆಗೊಂದು ಫೋಟೋ ಕೂಡ ಇದೆ. ಇದರಲ್ಲಿ Arriving Our love on September ಅಂತಲೂ ಬರೆದಿರೋದು ಕೂಡ ಕಾಣಿಸುತ್ತದೆ. ಅಂದರೆ, ಪ್ರೇರಣಾ ತಮ್ಮ ಮೊದಲ ಮಗುವಿಗೆ ಇದೇ ತಿಂಗಳೇ ಜನ್ಮ ನೀಡಲಿದ್ದಾರೆ ಅನ್ನೋದನ್ನೂ ಇಲ್ಲಿ ಹೀಗೆ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.



    ಇದನ್ನೂ ಓದಿ: ಹೈದ್ರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಟೀಮ್; ಆಲಿಯಾ ಹಾಡಿಗೆ ಅಭಿಮಾನಿಗಳು ಫುಲ್ ಫಿದಾ!

    2018 ರಲ್ಲಿ ನಿಶ್ಚಿತಾರ್ಥ-2019 ಡಿಸೆಂಬರ್​ ನಲ್ಲಿ ಪ್ರೇರಣಾ-ಧ್ರುವ ಸರ್ಜಾ ಮದುವೆ
    ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ 3 ವರ್ಷದ ಹಿಂದೆ ಮದುವೆ ಆಗಿದ್ದರು. ಬೆಂಗಳೂರಿನ ಸಂಸ್ಕೃತಿ ಬೃಂದಾವನ ಸಭಾಂಗಣದಲ್ಲಿ ವಿಶೇಷವಾಗಿಯೇ ನಡೆದಿತ್ತು.
    ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಅವರನ್ನ ಮದುವೆ ಆದ ಧ್ರುವ ಸರ್ಜಾ ಮೂರು ವರ್ಷದ ಬಳಿಕ ಅಪ್ಪ ಆಗುತ್ತಿದ್ದಾರೆ. ಪ್ರೇರಣಾ ತಾಯಿ ಆಗೋ ಖುಷಿಯಲ್ಲಿ ಫೋಟೋಗೆ ಫೋಜ್ ಕೊಟ್ಟಿದ್ದಾರೆ. We are entering a new phase of life ಅಂತಲೂ ಹಂಚಿಕೊಂಡ ವೀಡಿಯೋದಲ್ಲಿ ಈ ಜೋಡಿ ಬರೆದು ಕೊಂಡಿದೆ.
    First published: