Dhruva Sarja: ನಾನು ಧ್ರುವನ ಫ್ಯಾನ್​ ಕಣೋ! ಹೊಸ ಸಿನಿಮಾ ಅನೌನ್ಸ್​ ಕಾರ್ಯಕ್ರಮದಲ್ಲಿ ಜೋಗಿ ಪ್ರೇಮ್ ಗರಂ

ಇಂದು ಜೋಗಿ ಪ್ರೇಮ್ (Jogi Prem)​ ಹಾಗೂ ಧ್ರುವ ಸರ್ಜಾ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಇದೇ ವೇಳೆ ಧ್ರುವ ಸರ್ಜಾ ಅಭಿಮಾನಿಗಳ (Dhruva Sarja Fans) ವಿರುದ್ಧ ಜೋಗಿ ಪ್ರೇಮ್​ ಕೆಲಕಾಲ ಗರಂ ಆಗಿದ್ದರು.

ಪ್ರೇಮ್​, ಧ್ರುವ ಸರ್ಜಾ

ಪ್ರೇಮ್​, ಧ್ರುವ ಸರ್ಜಾ

  • Share this:
ಧ್ರುವ ಸರ್ಜಾ (Dhruva Sarja).. ಕಡಿಮೆ ಸಮಯದಲ್ಲಿ ಹೆಚ್ಚು ಹೆಸರು ಮಾಡಿದ ಯುವ ನಾಯಕ ನಟ. ಬ್ಯಾಗ್ರೌಂಡ್​ ಇದ್ದರೂ ಬಳಸಿಕೊಳ್ಳದೇ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ, ‘ಅದ್ಧೂರಿ’ (Addhuri) ಮೂಲಕ ಸ್ಯಾಂಡಲ್​ವುಡ್(Sandalwood)​ನಲ್ಲಿ ನೆಲೆ ಕಂಡುಕೊಂಡರು. ಇದಾದ ಬಳಿಕ ‘ಬಹದ್ದೂರ್’​(Bahaddur), ನಂತರ ‘ಭರ್ಜರಿ’ (Bharjari), ಕೊನೆಯದಾಗಿ ‘ಪೊಗರು’(Pogaru) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಡೈಲಾಗ್​ ಡೆಲಿವರಿ, ಮ್ಯಾನರಿಸಂ ಎಲ್ಲವೂ ಫ್ಯಾನ್ಸ್​ಗೆ ಸಖತ್​ ಇಷ್ಟ. ಇಂದು ಜೋಗಿ ಪ್ರೇಮ್ (Jogi Prem)​ ಹಾಗೂ ಧ್ರುವ ಸರ್ಜಾ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಇದೇ ವೇಳೆ ಧ್ರುವ ಸರ್ಜಾ ಅಭಿಮಾನಿಗಳ (Dhruva Sarja Fans) ವಿರುದ್ಧ ಜೋಗಿ ಪ್ರೇಮ್​ ಕೆಲಕಾಲ ಗರಂ ಆಗಿದ್ದರು. ಹೊಸ ಸಿನಿಮಾದ ಪ್ರೆಸ್​ಮೀಟ್​ (Press Meet) ವೇಳೆ ಈ ಘಟನೆ ನಡೆದಿದೆ.

ನಾನೂ ಧ್ರುವನ ಫ್ಯಾನ್​ ಕಣೋ ಎಂದ ಪ್ರೇಮ್​!

'ಏಕ್‌ ಲವ್ ಯಾ' ಚಿತ್ರ ರಿಲೀಸ್ ಬೆನ್ನಲ್ಲೇ ಧ್ರುವ ಸರ್ಜಾಗೆ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಹೊರ ಬಂದಿತ್ತು. ಈ ಬಗ್ಗೆ ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿ ವಿಚಾರ ಹಂಚಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದರು. ಮೈಸೂರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಕಾರ್ಯಕ್ರಮ ನಡೆದಿದೆ. ಇದೇ ವೇಳೆ ಕೆಲ ಧ್ರುವ ಸರ್ಜಾ ಅಭಿಮಾನಿಗಳು ಪ್ರೆಸ್​ಮೀಟ್​ ನಡೆಯುವ ವೇಳೆ ಧ್ರುವನಿಗೆ ಜೈಕಾರ ಹಾಕಿದ್ದಾರೆ. ಇದನ್ನು ಕೇಳಿ ಗರಂ ಆದ  ಪ್ರೇಮ್​, 'ನಾನೂ ಧ್ರುವನ ಫ್ಯಾನ್ ಕಣೋ.. ಬಾರೋ ಇಲ್ಲಿ.. ಯಾರೋ ಅವನು..' ಎಂದು ಗರಂ ಆಗಿದ್ದಾರೆ.

ಮೊದಲು ಮರ್ಯಾದೆ ಕೊಡಿ ಎಂದ ಪ್ರೇಮ್​!

ಪ್ರೆಸ್​ಮೀಟ್​ಗೆ ತೊಂದರೆಯಾಗುತ್ತಿದ್ದಂತೆ ಪ್ರೇಮ್​ ಕುರ್ಚಿಯಿಂದ ಎದ್ದಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಸೈಲೆಂಟ್​ ಆಗಿರುವಂತೆ ಕೇಳಿದ್ದಾರೆ. 'ಇಲ್ಲಿ ಪ್ರೆಸ್​ ಮೀಟ್​ ನಡೀತಿದೆ. ತೊಂದರೆ ಕೊಡ್ಬೇಡಿ' ಎಂದು ಕೇಳಿಕೊಂಡಿದ್ದಾರೆ. ಅಣ್ಣಾ ಮಾತನಾಡುತ್ತಿದ್ದಾರೆ , ಮೊದಲು ರೆಸ್ಪೆಕ್ಟ್​ ಕೊಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಕೆಲ ಟ್ರೋಲ್​ ಪೇಜ್​ಗಳು ಈ ವಿಡಿಯೋ ಬಳಸಿಕೊಂಡು ಟ್ರೋಲ್​ ಮಾಡುತ್ತಿದ್ದಾರೆ. 'ಅಣ್ಣ ಲಾಂಗ್​ ಎತ್ಕೊಂಡು ಬರ್ತಾರೆ ಆಮೇಲೆ ಅಷ್ಟೇ ಎಂದು ಬರೆದುಕೊಂಡಿದ್ದಾರೆ'.

ಇದನ್ನೂ ಓದಿ: ಜೋಗಿ ಪ್ರೇಮ್​-ಧ್ರುವ ಸರ್ಜಾ ಸಿನಿಮಾಗೆ ಮುಹೂರ್ತ ಫಿಕ್ಸ್​! ಇವ್ರೇ ನೋಡಿ ಚೀಫ್​ ಗೆಸ್ಟ್​

ಭೂಗತಲೋಕದ ಹೊಸ ಚರಿತ್ರೆ ಬರೆದಿದ್ದ ಪ್ರೇಮ್​!

ಭೂಗತಲೋಕದ ಹೊಸ ಚರಿತ್ರೆಯನ್ನು ಈ ಹಿಂದೆ ತೆರೆಮೇಲೆ ನಿರ್ದೇಶಕ ಪ್ರೇಮ್​ ತಂದಿಟ್ಟಿದ್ದರು. ಈಗ ಮತ್ತೆ ಅಂತಹದ್ದೇ ಒಂದು ಕಥೆಯನ್ನು ತೆರೆಮೇಲೆ ಜೋಗಿ ಪ್ರೇಮ್ ತರುತ್ತಿದ್ದಾರೆ. ಜೋಗಿ ಪ್ರೇಮ್​ ಅವರ ಮೊದಲ ನಿರ್ದೇಶನದ 'ಎಕ್ಸ್​ಕ್ಯೂಸ್​​ಮಿ' ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಇದಾದ ಬಳಿಕ ರಕ್ತಸಿಕ್ತ 'ಕರಿಯಾ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಇದಾದ ಬಳಿಕ ಜೋಗಿ ಸಿನಿಮಾ ಬಗ್ಗೆ ಹೇಳುವು ಅವಶ್ಯಕಥೆ ಇಲ್ಲ.ಈಗ ಧ್ರುವ ಸರ್ಜಾ ಜೊತೆ ಮಾಡುತ್ತಿರುವ ಸಿನಿಮಾಗೂ ದುಬಾರಿ ಸೆಟ್ ಒಂದನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ. ಸೀಗೆಹಳ್ಳಿ ಸಮೀಪ 70ರ ದಶಕದ ಸೆಟ್‌ ಅನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ: ಇಂದು ಡಾ. ರಾಜ್​ಕುಮಾರ್​ ಹುಟ್ಟುಹಬ್ಬ, ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಅಣ್ಣಾವ್ರ ಸ್ಮರಣೆ


ಈ ಸಿನಿಮಾಗಾಗಿ 70 ದಶಕಕ್ಕೆ ಹೋಲುವ ಸೆಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದು ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲ ಭೂಗತಲೋಕದ ಕತೆಯೊಂದನ್ನು ತೆರೆಮೇಲೆ ತರಲು ಹೊರಟಿದ್ದಾರೆ ಅನ್ನುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ

Published by:Vasudeva M
First published: