Dhruva Sarja: ಚಿರು ಬಾಕಿ ಇರುವ ಚಿತ್ರಕ್ಕೆ ಧ್ರುವ ಜೊತೆಗೆ ಮತ್ತೊಬ್ಬ ಸ್ಟಾರ್ ನಟನ ವಾಯ್ಸ್​; ಯಾರು ಗೊತ್ತೇ?

D Boss Darshan: ಸೆಂಟಿಮೆಂಟಲ್ ಸೀನ್‌ಗಳಲ್ಲಿ ಚಿರು ಅಭಿನಯ ನೋಡಿದರೆ ಅವರ ಮನೆಯವರು, ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿಕೊಳ್ಳುವಷ್ಟರ ಮಟ್ಟಿಗೆ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ರಾಮ್​ ನಾರಾಯಣ್ ಹೇಳಿದ್ದಾರೆ.

news18-kannada
Updated:June 29, 2020, 10:42 AM IST
Dhruva Sarja: ಚಿರು ಬಾಕಿ ಇರುವ ಚಿತ್ರಕ್ಕೆ ಧ್ರುವ ಜೊತೆಗೆ ಮತ್ತೊಬ್ಬ ಸ್ಟಾರ್ ನಟನ ವಾಯ್ಸ್​; ಯಾರು ಗೊತ್ತೇ?
ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ.
  • Share this:
ಸ್ಯಾಂಡಲ್​ವುಡ್​ನ ಯುವ ನಟ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ಮೂರು ವಾರಗಳು ಕಳೆದಿವೆ. ಆದರೂ ಅವರ ನೆನಪುಗಳು ಇನ್ನೂ ಜೀವಂತವಾಗಿದೆ. ಚಿರು ಅವರ ಅಕಾಲಿಕ ಮೃತ್ಯು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನೇ ತಂದೊಡ್ಡಿದೆ. ಅದರಲ್ಲೂ ಮುಖ್ಯವಾಗಿ ಅವರ ನಟನೆಯ ಬಾಕಿ ಇರುವ ಚಿತ್ರಗಳು ಅರ್ಧಕ್ಕೆ ನಿಂತುಹೋಗಿವೆ.

ಈಗಾಗಲೇ ರಾಜಮಾರ್ತಾಂಡ ಚಿತ್ರಕ್ಕೆ ನಟ ಧ್ರುವ ಸರ್ಜಾ ಅವರು ಚಿರು ವಾಯ್ಸ್ ಡಬ್ ಮಾಡಲಿದ್ದಾರೆ ಎಂದು ಚಿತ್ರದ ನಿರ್ದೇಶಕ ರಾಮ್ ನಾರಾಯಣ್ ಅವರು ದೃಢಪಡಿಸಿದ್ದಾರೆ. ಇದರ ಜೊತೆಗೆ ಈ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ನಟನ ಧ್ವನಿ ಕೂಡ ಇರಲಿದೆಯಂತೆ. ಹೌದು ಈ ಕುರಿತು ಖಾಸಗಿ ಜಾಲತಾಣವೊಂದಕ್ಕೆ ರಾಮ್​ ನಾರಾಯಣ್ ಮಾಹಿತಿ ನೀಡಿದ್ದಾರೆ.

Rashmika-Mahesh Babu: ಮಹೇಶ್​ ಬಾಬು ಮನೆ ತಲುಪಿತು ರಶ್ಮಿಕಾ ಕೊಡಗಿನಿಂದ ಕಳುಹಿಸಿದ ಈ ಉಡುಗೊರೆ..!

'ರಾಜಮಾರ್ತಾಂಡ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಿಂದೆಂದೂ ಕಾಣದಂತಹ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಸೆಂಟಿಮೆಂಟಲ್ ಸೀನ್‌ಗಳಲ್ಲಿ ಅವರ ಅಭಿನಯ ನೋಡಿದರೆ ಅವರ ಮನೆಯವರು, ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿಕೊಳ್ಳುವಷ್ಟರ ಮಟ್ಟಿಗೆ ಅದ್ಭುತವಾಗಿ ಅಭಿನಯಿಸಿದ್ದಾರೆ' ಎಂದು ರಾಮ್​ ನಾರಾಯಣ್ ಹೇಳಿದ್ದಾರೆ.

ಇನ್ನು ಪ್ರಮುಖವಾಗಿ ಮೊದಲಿಂದಲೂ ಈ ಸಿನಿಮಾಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವೇ ಸ್ವತಃ ಚಿರು ಕೊನೆಯ ಸಿನಿಮಾಗೆ ಧ್ವನಿ ಕೊಡುವುದಾಹಿ ಮುಂದೆ ಬಂದಿದ್ದು ಇವರೆಲ್ಲರ ಧ್ವನಿಯಿಂದ ಚಿರಂಜೀವಿ ಸರ್ಜಾ ಆತ್ಮಕ್ಕೆ ಶಾಂತಿ ಸಿಕ್ಕೇ ಸಿಗುತ್ತದೆ ಎಂದು ರಾಮ್​ ನಾರಾಯಣ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

Shrtuti Haasan: ಸ್ಟನ್ನಿಂಗ್​ ಲುಕ್ಸ್​ನಲ್ಲಿ ಶ್ರುತಿ ಹಾಸನ್​: ಇಲ್ಲಿವೆ ಅಂಡರ್​ವಾಟರ್​ ಫೋಟೋಶೂಟ್​ನ ಚಿತ್ರಗಳು..!

ಇದರ ಜೊತೆಗೆ ಲಾಕ್​ಡೌನ್​ ಆಗುವ ಹಿಂದಿನ ದಿನ ಬಿಡುಗಡೆಯಾಗಿದ್ದ ‘ಶಿವಾರ್ಜುನ’ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಲಿದೆ. ಆ ಚಿತ್ರದ ನಿರ್ವಪಕರೂ ಆಗಿರುವ ಶಿವಾರ್ಜುನ್, ‘ಚಿತ್ರ ಬಿಡುಗಡೆಯಾದ ಮರುದಿನದಿಂದ ಲಾಕ್​ಡೌನ್ ಜಾರಿಗೆ ಬಂತು. ಹಲವು ಚಿತ್ರಮಂದಿರಗಳ ಎದುರು ಇನ್ನೂ ಚಿತ್ರದ ಕಟೌಟ್ ಮತ್ತು ಪೋಸ್ಟರ್​ಗಳು ಹಾಗೆಯೇ ಇವೆ. ಹೀಗಾಗಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಚಿತ್ರವನ್ನು ಮರುಬಿಡುಗಡೆ ಮಾಡಲಾಗುತ್ತದೆ’ಎಂದಿದ್ದಾರೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading