Martin: ಧ್ರುವ ಸರ್ಜಾ ಜೊತೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಅವಕಾಶ ನಿಮ್ಮದಾಗಬಹುದು..!

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಈಗ ಆ ಕುತೂಹಲಕ್ಕೆ ಬ್ರೇಕ್​ ಬಿದ್ದಿದೆ. ಹೌದು, ಈ ಸಿನಿಮಾಗಾಗಿ ಹೊಸ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ

  • Share this:
ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ  (Dhruva Sarja)ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ (Martin Movie)​. ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಸಹ ಆರಂಭವಾಗಿದೆ. ಉದಯ್ ಮೆಹ್ತಾ (Uday Mehta) ನಿರ್ಮಾಣದ ಮಾರ್ಟಿನ್ ಸಿನಿಮಾಗೆ ಅದ್ಧೂರಿ ಸಿನಿಮಾ ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್​ (A.P Arjun) ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾಗೂ ಮೊದಲು ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ನಿರ್ದೇಶನದಲ್ಲಿ ದುಬಾರಿ ಸಿನಿಮಾ ಸೆಟ್ಟೇರಬೇಕಿತ್ತು. ಚಿರು ಹುಟ್ಟುಹಬ್ಬದಂದು ಈ ಸಿನಿಮಾದ ಸ್ಕ್ರಿಪ್ಟ್​ ಪೂಜೆ ಸಹ ಆಗಿತ್ತು. ಆದರೆ ಕಾರಣಾಂತರಗಳಿಂದಾಗಿ ಆ ಸಿನಿಮಾ ಸದ್ಯಕ್ಕೆ ನಿಂತಿದೆ. ದುಬಾರಿ ಸಿನಿಮಾಗೆ ಬ್ರೇಕ್​ ಬಿದ್ದ ಕೂಡಲೇ ಮಾರ್ಟಿನ್ ಚಿತ್ರದ ಕೆಲಸಗಳು ಆರಂಭವಾಗಿವೆ. ಇತ್ತೀಚೆಗಷ್ಟೆ ರಿಲೀಸ್​ ಆದ ಈ ಸಿನಿಮಾದ ಫಸ್ಟ್​ಲುಕ್ ಪೋಸ್ಟರ್ ಹಾಗೂ ಟೈಟಲ್​ ಟೀಸರ್​  ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.  

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಈಗ ಆ ಕುತೂಹಲಕ್ಕೆ ಬ್ರೇಕ್​ ಬಿದ್ದಿದೆ. ಹೌದು, ಈ ಸಿನಿಮಾಗಾಗಿ ಹೊಸ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.








View this post on Instagram






A post shared by ap arjun (@aparjun_official)






ಹೌದು, ಸಿನಿಮಾದಲ್ಲಿನ ಫಿಮೇಲ್​ ಲೀಡ್​ ರೋಲ್​ಗಾಗಿ ಈಗ ಪ್ರಕಟಣೆ ಹೊರಡಿಸಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್​. ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಕುರಿತಾಗಿ ಒಂದು ಪೋಸ್ಟ್​ ಮಾಡಿರುವ ನಿರ್ದೇಶಕ, ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಆಸಕ್ತರು ಕೂಡಲೇ Martinmovie1234@Gmail.com ಗೆ ಅರ್ಜಿಗಳನ್ನು ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Dhruva Sarja: ಒಂದೊಳ್ಳೆ ಕೆಲಸಕ್ಕೆ ಕೂದಲು ದಾನ ಮಾಡಿದ ಧ್ರುವ ಸರ್ಜಾ: ಹೊಸ ಲುಕ್​ನಲ್ಲಿ ಆ್ಯಕ್ಷನ್ ಪ್ರಿನ್ಸ್..!

ನಾಯಕಿಯಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿರುವವರು ಈ ಇ-ಮೇಲ್ ಐಡಿಗೆ ಸಂಪರ್ಕಿಸಬಹುದಾಗಿದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದಾರೆ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಜತೆ ನಾಯಕಿಯಾಗಿ ಬೆಳ್ಳಿತೆರೆ ಮೇಲೆ ಮಿಂಚ ಬಹುದಾಗಿದೆ.

ಮೊದಲ ದಿನದಿಂದಲೇ ಮಾರ್ಟಿನ್ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಹೆಚ್ಚಿಸುವಲ್ಲಿ ಸಕ್ಸಸ್ ಆಗಿದೆ. ಜೊತೆಗೆ ಯೂಟ್ಯೂಬ್‍ನಲ್ಲಿ ರಿಲೀಸ್ ಆದ ಕೇವಲ 15 ತಾಸುಗಳಲ್ಲೇ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ 1.35 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದು 2ನೇ ಸ್ಥಾನದಲ್ಲಿ ಟ್ರೆಂಡ್ ಆಗುವ ಮೂಲಕ ಮಾರ್ಟಿನ್ ಟೈಟಲ್ ಟೀಸರ್ ಹೊಸ ದಾಖಲೆ ನಿರ್ಮಿಸಿತ್ತು.








View this post on Instagram






A post shared by ap arjun (@aparjun_official)






ಹೌದು, ಅದ್ಧೂರಿ ಚಿತ್ರದ ಮೂಲಕ ಅದ್ಧೂರಿಯಾಗೇ ಸ್ಯಾಂಡಲ್‍ವುಡ್‍ಗೆ ಡೆಬ್ಯೂ ಮಾಡಿದವರು ನಟ ಧ್ರುವ ಸರ್ಜಾ. ನಂತರ ಬಹದ್ದೂರ್, ಭರ್ಜರಿ, ಪೊಗರು ಹೀಗೆ ಒಂಭತ್ತು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್, ಸೂಪರ್‍ಹಿಟ್ ಲಿಸ್ಟ್ ಸೇರಿರುವ ಚಿತ್ರಗಳೇ. ಹೀಗಾಗಿಯೇ ಇವತ್ತು ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಸ್ಯಾಂಡಲ್‍ವುಡ್‍ನ ಕೆಲವೇ ಸೂಪರ್​ಸ್ಟಾರ್​ ಸಾಲಿನಲ್ಲಿ ನಿಲ್ಲುತ್ತಾರೆ ಧ್ರುವ ಸರ್ಜಾ. ಇಂತಹ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಲೇಯಿತ್ತು. ಅದಕ್ಕೆ ಮಾರ್ಟಿನ್ ಸಿನಿಮಾ ಉತ್ತರವಾಯಿತು. ಮೊದಲ ಚಿತ್ರ ಅದ್ಧೂರಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಮತ್ತೆ ಒಂದಾಗಿದ್ದು, ಮಾರ್ಟಿನ್ ಎಂಬ ಆ್ಯಕ್ಷನ್ ಥ್ರಿಲ್ಲ ರ್​ ಅನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: Dhruva-Prerana: ಗೋವಾದಲ್ಲಿ ರೊಮ್ಯಾಂಟಿಕ್​ ಮೂಡ್​ನಲ್ಲಿ ಮಡದಿ ಪ್ರೇರಣಾ ಜೊತೆ ಧ್ರುವ ಸರ್ಜಾ..!

ಇನ್ನು ಈ ಸಿನಿಮಾದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಅವರ ಪಾತ್ರದ ಹೆಸರು ಬೇರೆಯೇ. ನಾನು ಮಾರ್ಟಿನ್ ಅಲ್ಲ ಎಂದು ಈ ಹಿಂದೆಯೇ ಧ್ರುವಾ ಸರ್ಜಾ ಹೇಳಿಕೊಂಡಿದ್ದರು. ಅದರ ಪುಟ್ಟ ವಿಡಿಯೋ ಒಂದು ವೈರಲ್ ಆಗಿತ್ತು.
Published by:Anitha E
First published: