ಕರಣ್ ಜೋಹರ್ ಮುಂದಿನ ನಿರ್ದೇಶನದಲ್ಲಿ ಜಯಾ ಬಚ್ಚನ್, ಶಬಾನಾ ಅಜ್ಮಿ ಜೊತೆ ಧರ್ಮೇಂದ್ರ ರೊಮ್ಯಾನ್ಸ್!

Karan Johar: ಜುಲೈ 6ರಂದು ರಣವೀರ್ ಅವರ 36ನೇ ಜನ್ಮದಿನವಾದ ಕಾರಣ ಕರಣ್ ಜೋಹರ್ ಅವರು ಅಧಿಕೃತವಾಗಿ ತಮ್ಮ ಚಿತ್ರದ ಮಾಹಿತಿಯನ್ನು ಕುರಿತು ಜುಲೈ 6ರಂದು ಘೋಷಿಸಿದ್ದಾರೆ. ಐದು ವರ್ಷಗಳ ನಂತರ ಜೋಹರ್ ನಿರ್ದೇಶನಕ್ಕೆ ಮರಳುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.

Dharmendra, Shabana Azmi and Jaya Bachchan.

Dharmendra, Shabana Azmi and Jaya Bachchan.

  • Share this:

ಕರಣ್ ಜೋಹರ್ ತಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕಾಗಿ ಬಾಲಿವುಡ್‌ನಲ್ಲಿನ ದಂತಕತೆಗಳಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅಂತಹ ದೊಡ್ಡ ನಟ ಹಾಗೂ ನಟಿಯರನ್ನು ಸೇರಿಸಿಕೊಂಡು ಹೊಸ ಸಿನಿಮಾವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ ಎಂದು ಹಲವು ಮೂಲಗಳು ನ್ಯೂಸ್ 18ಗೆ ತಿಳಿಸಿವೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದು, ಜುಲೈ 6ರಂದು ರಣವೀರ್ ಅವರ 36ನೇ ಜನ್ಮದಿನವಾದ ಕಾರಣ ಕರಣ್ ಜೋಹರ್ ಅವರು ಅಧಿಕೃತವಾಗಿ ತಮ್ಮ ಚಿತ್ರದ ಮಾಹಿತಿಯನ್ನು ಕುರಿತು ಜುಲೈ 6ರಂದು ಘೋಷಿಸಿದ್ದಾರೆ. ಐದು ವರ್ಷಗಳ ನಂತರ ಜೋಹರ್ ನಿರ್ದೇಶನಕ್ಕೆ ಮರಳುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.


ನ್ಯೂಸ್ 18 ಧರ್ಮೇಂದ್ರನನ್ನು ಈ ಕುರಿತು ಕೇಳಿದಾಗ, ಅವರು, “ಹೌದು, ನಾನು ಚಿತ್ರ ಮಾಡುತ್ತಿದ್ದೇನೆ. ಕರಣ್ ಅವರೊಂದಿಗೆ ಕೆಲಸ ಮಾಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ" ಎಂದು ಖಚಿತಪಡಿಸಿದರು. ಈ ಚಿತ್ರವು ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಜೋಹರ್ ಅವರಿಗೆ ಕರಣ್ ಜೋಹರ್ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಅಮಿತಾಭ್‌ ಬಚ್ಚನ್ ಅವರು ಕರಣ್ ಜೋಹರ್ ನಿರ್ದೇಶನದ ಕಭಿ ಖುಷಿ ಕಭಿ ಘಮ್ ಚಿತ್ರದಲ್ಲಿ ಈಗಗಾಲೇ ನಟಿಸಿದ್ದು, 2001 ರಲ್ಲಿ ಬಿಡುಗಡೆ ಕಂಡು ಜನರ ವೆಚ್ಚುಗೆ ಪಡೆದಿತ್ತು.


“ಕರಣ್ ಜೋಹರ್ ಅವರು ನಮಗೆ ತಿಳಿದಿರುವಂತೆ ರೊಮ್ಯಾಂಟಿಕ್ ಚಿತ್ರಗಳಿಗೆ ಟ್ರೇಡ್‌ಮಾರ್ಕ್.ಈ ಚಿತ್ರವೂ ಕೂಡ ರೊಮ್ಯಾಂಟಿಕ್ ಚಿತ್ರವಾಗಿದ್ದು, ಮೂವರು ಹಿರಿಯ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಪಷ್ಟವಾಗಿ, ಈ ಚಿತ್ರವು ಪ್ರಬುದ್ಧ ಪ್ರೇಮ ಕತೆಯಾಗಲಿದೆ ಮತ್ತು ಇದು ಮೂವರು ಅನುಭವಿ ನಟರ ನಡುವೆ ನಡೆಯುವ ತ್ರಿಕೋನ ಪ್ರೇಮಕತೆ. ಬಾಲಿವುಡ್‌ನ ಹೀ-ಮ್ಯಾನ್ ಎಂದೇ ಕರೆಯಲ್ಪಡುವ ಧರ್ಮೇಂದ್ರ ಅವರು ರೋಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಈ ಮೊದಲು ನೋಡಿರದ ಅವತಾರದಲ್ಲಿ ಅವರನ್ನು ಈ ಚಿತ್ರದಲ್ಲಿ ನೋಡಬಹುದು" ಎಂದು ನ್ಯೂಸ್ 18 ನೊಂದಿಗೆ ಅನೇಕ ಮೂಲಗಳು ದೃಡಪಡಿಸಿವೆ.


ಜೋಹರ್ ತನ್ನ ನಿರ್ಮಾಣ ಸಂಸ್ಥೆಗಳಾದ ಧರ್ಮ ಪ್ರೊಡಕ್ಷನ್ಸ್ ಮತ್ತು ಧರ್ಮ 2.0 ಅಡಿಯಲ್ಲಿ ಅನೇಕ ಯೋಜನೆಗಳನ್ನು ಬೆಂಬಲಿಸಿದ ನಂತರ ಮತ್ತು ಧರ್ಮ ಕಾರ್ನರ್‌ಸ್ಟೋನ್ ಏಜೆನ್ಸಿಯನ್ನು ಪ್ರಾರಂಭಿಸಿದ ನಂತರ ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ. ಐದು ವರ್ಷಗಳ ನಂತರ ರೊಮ್ಯಾಂಟಿಕ್ ಚಿತ್ರದೊಂದಿಗೆ ನಿರ್ದೇಶನಕ್ಕೆ ಮರಳಿದ ಸುದ್ದಿಯನ್ನು ಜೋಹರ್‌ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿಯನ್ನು ತಿಳಿದ ಅಭಿಮಾನಿಗಳು ತುಂಬ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದ ಶೀರ್ಷಿಕೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಿರ್ವಹಿಸಿದ ಪ್ರಮುಖ ಪಾತ್ರಗಳ ಹೆಸರನ್ನು ಕೇಂದ್ರೀಕರಿಸಿದೆ. ಸೆಪ್ಟೆಂಬರ್ ವೇಳೆಗೆ ಚಿತ್ರವು ಆರಂಭವಾಗುವ ನಿರೀಕ್ಷೆಯಿದೆ” ಎಂದು ಮೂಲಗಳು ನ್ಯೂಸ್ 18ಗೆ ತಿಳಿಸಿವೆ.


ಇವರೇನಾ ಅವರು… ನೀವಾದರು ಹೇಳ್ತಿರಾ ಈ ನಟಿ ಯಾರು ಅಂತ“ಇದು ಹೊಸ ಪ್ರಯಾಣದ ಪ್ರಾರಂಭ ಮತ್ತು ನಿರ್ದೇಶನಕ್ಕೆ ಹಿಂದಿರುಗುವ ದಾರಿ - ಎಲ್ಲವೂ ಒಂದೇ ಬಾರಿಗೆ. ನನ್ನ ನೆಚ್ಚಿನ ಕೆಲಸಕ್ಕೆ ಹಿಂತಿರುಗಲು ಇದು ಸಮಯ, ತೆರೆ ಹಿಂದಿ ಅಡಗಿರುವ ಕೆಲವು ಶಾಶ್ವತ ಪ್ರೇಮ ಕತೆಗಳನ್ನು ರಚಿಸುವ ಸಮಯ. ಬಹಳ ವಿಶೇಷವಾದ ಕಥೆ, ನಿಜವಾಗಿಯೂ ಪ್ರೀತಿ ಮತ್ತು ಕುಟುಂಬದ ಬೇರುಗಳನ್ನು ಒಳಗೊಂಡ ಚಿತ್ರ ”ಎಂದು ಟ್ವೀಟ್ ಮಾಡುವ ಮೂಲಕ ಜೋಹರ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

First published: