• Home
  • »
  • News
  • »
  • entertainment
  • »
  • ವರನಟ ರಾಜ್ ಕುಮಾರ್ ಮೊಮ್ಮಗಳ ಮೊದಲ ಫೋಟೋ ಶೂಟ್ ವಿಡಿಯೋ ವೈರಲ್

ವರನಟ ರಾಜ್ ಕುಮಾರ್ ಮೊಮ್ಮಗಳ ಮೊದಲ ಫೋಟೋ ಶೂಟ್ ವಿಡಿಯೋ ವೈರಲ್

ಧನ್ಯಾ ರಾಮ್​ಕುಮಾರ್

ಧನ್ಯಾ ರಾಮ್​ಕುಮಾರ್

ಅಂದಹಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕೂಡ ಹೊಸ ನಿರ್ದೇಶಕ ಸುಮನ್ ಜಾದುಗರ್. ಕನಡದ 'ಸಿಲಿಕಾನ್ ಸಿಟಿ', ತಮಿಳಿನ 'ಉತ್ತಮ ವಿಲನ್' ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಸುಮನ್, ಹೊಸ ಕಥೆಯೊಂದಿಗೆ ಡೈರೆಕ್ಟರ್ ಕ್ಯಾಪ್ ಧರಿಸಲು ಅಣಿಯಾಗುತ್ತಿದ್ದಾರೆ.

  • News18
  • 5-MIN READ
  • Last Updated :
  • Share this:

ಕನ್ನಡಿಗರ ಕಣ್ಮಣಿ ವರನಟ ಡಾ.ರಾಜ್​ಕುಮಾರ್​ ಅವರ ಮೊಮ್ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿರುವ ಸುದ್ದಿ ಈಗಾಗಲೇ ರಿವೀಲ್ ಆಗಿದೆ. ರಾಘವೇಂದ್ರ ರಾಜ್​ ಕುಮಾರ್ ಮಗ ವಿನಯ್ ರಾಜ್​ಕುಮಾರ್ ಹೀರೋ ಆಗಿ ಪದಾರ್ಪಣೆಗೈದರೆ, ತಮ್ಮ ಯುವರಾಜ್​ ಕುಮಾರ್ ನಾಯಕನಾಗುವ ಸಕಲ ಸಿದ್ಧತೆಯಲ್ಲಿದ್ದಾರೆ. ಇನ್ನು ಅಣ್ಣಾವ್ರ ಮಗಳು ಪುರ್ಣಿಮಾ-ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಜ್​ಕುಮಾರ್ 'ದಾರಿ ತಪ್ಪಿದ ಮಗ' ಚಿತ್ರದೊಂದಿಗೆ ಸಿನಿರಂಗದಲ್ಲಿ ದಾರಿ ಹುಡುಕಲು ಹೊರಟಿದ್ದಾರೆ.

ಹಾಗೆಯೇ ಶಿವರಾಜ್​ ಕುಮಾರ್ ಅವರ ಪುತ್ರಿ ನಿವೇದಿತಾ 'ಹೇಟ್ ಯೂ ರೋಮಿಯೋ' ಎಂಬ ವೆಬ್​ ಸಿರೀಸ್ ಮೂಲಕ ಬಣ್ಣದ ಲೋಕದಲ್ಲಿ ನಿರ್ಮಾಪಕಿಯಾಗಿ ಕಾಲಿರಿಸಿದ್ದಾರೆ. ಇವೆಲ್ಲದರ ಬೆನ್ನಲ್ಲೇ ಇದೀಗ ರಾಜ್​ ವಂಶದಿಂದ ನಾಯಕಿಯಾಗಿ ಧನ್ಯಾ ರಾಮ್ ಕುಮಾರ್ ಎಂಟ್ರಿ ಕೊಡುತ್ತಿದ್ದಾರೆ.
 
View this post on Instagram
 

Powder kissed cheeks and ruby woo lips 💋 @maccosmeticsindia #meetyourmatte


A post shared by Dhanya Ramkumar (@dhanya_ramkumar) on

ಅಣ್ಣಾವ್ರ ಮಗಳು ಪುರ್ಣಿಮಾ-ನಟ ರಾಮ್ ಕುಮಾರ್ ಅವರ ಮಗಳಾದ ಧನ್ಯಾ ವರ್ಷಗಳ ಹಿಂದೆಯೇ ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ಇರುವುದಾಗಿ ತಿಳಿಸಿದ್ದರು. ಆದರೆ ಆ ಬಳಿಕ ಅಣ್ಣಾವ್ರ ಮೊಮ್ಮಗಳು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು, 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ನಾಯಕ ಸೂರಜ್ ಗೌಡ ಅಭಿನಯಿಸುವ ಹೊಸ ಚಿತ್ರದಲ್ಲಿ 'ವರನಟ'ನ ಮೊಮ್ಮಗಳು ಬಣ್ಣ ಹಚ್ಚಲಿದ್ದಾಳೆ. 
View this post on Instagram
 

White dresses really do make you wanna run away 🏃🏻‍♀️#yougetitoryoudont


A post shared by Dhanya Ramkumar (@dhanya_ramkumar) on

ಈ ಚಿತ್ರಕ್ಕಾಗಿ ಇದೀಗ ಧನ್ಯಾ ಭರ್ಜರಿ ತಯಾರಿಯಲ್ಲಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದ ಫೋಟೋ ಶೂಟ್​​ನಲ್ಲಿ ರಾಜ್ ಮೊಮ್ಮಗಳು ಕಾಣಿಸಿಕೊಂಡಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಶೂಟ್ ಚಿತ್ರದ ಟೈಟಲ್ ಕಾರ್ಡ್​ಗಾಗಿ ಎನ್ನಲಾಗಿದ್ದು, ಶೀಘ್ರದಲ್ಲೇ ಶೀರ್ಷಿಕೆಯೊಂದಿಗೆ ಸ್ಯಾಂಡಲ್​ವುಡ್​ಗೆ ಅಣ್ಣಾವ್ರ ರಾಜನ ಮೊಮ್ಮಗಳ ಎಂಟ್ರಿ ಅಧಿಕೃತವಾಗಲಿದೆ.ಅಂದಹಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕೂಡ ಹೊಸ ನಿರ್ದೇಶಕ ಸುಮನ್ ಜಾದುಗರ್. ಕನಡದ 'ಸಿಲಿಕಾನ್ ಸಿಟಿ', ತಮಿಳಿನ 'ಉತ್ತಮ ವಿಲನ್' ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಸುಮನ್, ಹೊಸ ಕಥೆಯೊಂದಿಗೆ ಡೈರೆಕ್ಟರ್ ಕ್ಯಾಪ್ ಧರಿಸಲು ಅಣಿಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡಲು ರಾಕ್​ ಸ್ಟಾರ್ ರಘು ದೀಕ್ಷಿತ್ ಸಹ ರೆಡಿಯಾಗಿದ್ದು, ವೈಟ್ ಅಂಡ್ ಗ್ರೇ ಮೀಡಿಯಾ ಹೊಸಬರ ಕನಸಿಗೆ ಬಂಡವಾಳ ಹೂಡಲಿದೆ. ಒಟ್ಟಿನಲ್ಲಿ ರಾಜ್​ ಕುಟುಂಬದ ಹೀರೋಗಳ ಎಡೆಯಲ್ಲಿ ಇದೇ ಮೊದಲ ಬಾರಿಗೆ ಹೀರೋಯಿನ್ ಒಬ್ಬರು ಎಂಟ್ರಿಯಾಗುತ್ತಿರುವುದು ರಾಜ್ ವಂಶದ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟು ಹಾಕಿದೆ.

First published: