ತಮಿಳು ನಟ ಧನುಷ್ (Dhanush) ಅವರ ಮುಂದಿನ ಚಿತ್ರ ಮಾರನ್ (Maaran) ನೇರವಾಗಿ ಡಿಸ್ನಿ+ಹಾಟ್ ಸ್ಟಾರ್ (Disney + Hotstar) ನಲ್ಲಿ ರಿಲೀಸ್ ಆಗಲಿದೆ. ಮಾರನ್ ಚಿತ್ರವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದ್ರೆ ಕೋವಿಡ್ 19 (Covid-19) ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆ ಚಿತ್ರ ತಯಾರಕರು ಓಟಿಟಿ (OTT)ಯತ್ತ ಮುಖ ಮಾಡಿದ್ದಾರೆ. ಕಾರ್ತಿಕ್ ನರೇನ್ (Karthik Naren) ನಿರ್ದೇಶನದ ಮಾರನ್ ಚಿತ್ರ ಪೋಸ್ಟ್ ಪ್ರೊಡಕ್ಷನ್ (Post production) ಹಂತದಲ್ಲಿದೆ. ತಮಿಳುನಾಡಿನ ಧನುಷ್ ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್ ನೀಡಿರೋ ಚಿತ್ರ ತಂಡ, ಜನವರಿ 14ರಂದು ಮಾರನ್ ಚಿತ್ರದ ಮೋಷನ್ ಪೋಸ್ಟರ್ (Motion poster) ರಿಲೀಸ್ ಮಾಡಿದೆ.
‘ಮಾರನ್’ ಮೋಷನ್ ಪೋಸ್ಟರ್ ರಿಲೀಸ್
ಮೋಷನ್ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ‘ಮಾರನ್’ ಚಿತ್ರ ನೇರವಾಗಿ ಡಿಸ್ನಿ+ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡಿದೆ. ಚಿತ್ರ ನಿರ್ದೇಶಕ ಕಾರ್ತಿಕ್ ನರೇನ್ ಟ್ವಿಟರ್ ನಲ್ಲಿ ಮೊಷನ್ ಪೊಸ್ಟರ್ ಹಂಚಿಕೊಂಡಿದ್ದಾರೆ. ಕತ್ತಿಗಿಂತ ಪೆನ್ನು ಶಕ್ತಿಶಾಲಿ ಎಂದು ಬರೆದಿದ್ದಾರೆ.
ಮಾರನ್ ಚಿತ್ರತಂಡದ ಮಾಹಿತಿ
ತಮಿಳು ನಟ ಧನುಷ್ ಹಾಗೂ ನಿರ್ದೇಶಕ ಕಾರ್ತಿಕ್ ನರೇನ್ ಕಾಂಬಿನೇಷನ್ ನಲ್ಲಿ ಮೂಡಿಬರ್ತಿರೋ ಮೊದಲ ಚಿತ್ರ ಇದಾಗಿದೆ. ಮಾರನ್ ಚಿತ್ರವನ್ನು ಸತ್ಯಜ್ಯೋತಿ ಫಿಲಂಸ್ (Sathya Jothi Film) ಅವರು ನಿರ್ಮಾಣ ಮಾಡ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ನಡೆದಿದೆ. ಮಾರನ್ ಚಿತ್ರ ತನಿಖಾ ಥ್ರಿಲ್ಲರ್ ಚಿತ್ರವಾಗಿದೆ. ಧನುಷ್ ಚಿತ್ರ ಅಂದ್ಮೇಲೆ ಆಕ್ಷನ್ (Action) ಇರಲೇಬೇಕು ಅಲ್ವಾ. ಮಾರನ್ ಚಿತ್ರದಲ್ಲಿ ಧನುಷ್ ಅಭಿಮಾನಿಗಳಿಗೆ ನಿರಾಸೆಯಾಗಲ್ಲ. ಫೈಟಿಂಗ್ ಜೊತೆ ಎಮೋಷನ್ ದೃಶ್ಯಗಳು ಅಭಿಮಾನಿಗಳನ್ನ ಸೆಳೆಯೋದು ಗ್ಯಾರೆಂಟಿ ಅಂತಿದೆ ಚಿತ್ರತಂಡ.
ಇದನ್ನು ಓದಿ: ರಾಧಿಕಾ ಪಂಡಿತ್ ಫೋನ್ನಲ್ಲಿ ಸೇವ್ ಆಗಿರೋ `ಡೊಲ್ಲಾ’ ನಂಬರ್ ಯಾರದ್ದು ಗೊತ್ತಾ? ನೋಡಿದ್ರೆ ಶಾಕ್ ಆಗ್ತೀರ!
ಇನ್ನು ಮಾರನ್ ಚಿತ್ರದಲ್ಲಿ ಧನುಷ್ ಜೊತೆ ಮಾಳವಿಕ ಮೋಹನ್, ಮಾಸ್ಟರ್ ಮಹೇಂದ್ರ, ಸಮುದ್ರಕನಿ, ಸ್ಮೃತಿ ವೆಂಕಟೇಶ್ ಹಾಗೂ ಕೃಷ್ಣಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರನ್ ಚಿತ್ರಕ್ಕೆ ಜಿ.ವಿ ಪ್ರಕಾಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿವೇಕ್ ಹಾಡುಗಳನ್ನ ಬರೆದಿದ್ದಾರೆ ಜೊತೆಗೆ ನಿರ್ದೇಶಕ ಕಾರ್ತಿಕ್ ನರೇನ್ ಜೊತೆ ತಂತ್ರಜ್ಞಾನ (Technical)ದ ವಿಭಾಗದ ಕೆಲಸಕ್ಕೂ ಸಾಥ್ ನೀಡಿದ್ದಾರೆ.
ಓಟಿಟಿಯಲ್ಲಿ ಧನುಷ್ ಸಾಲು ಸಾಲು ಸಿನಿಮಾ
ಧನುಷ್ ಅಭಿನಯದ ಜಗಮೆ ಥಂಡಿರಾಮ್ (Jagame thandhiram) 2020ರಲ್ಲಿ(Netflix)ನಲ್ಲಿ ಬಿಡುಯಾಗಿತ್ತು. ಈ ವೇಳೆ ಸಿನಿಮಾ ನಿರ್ದೇಶಕರು ಹಾಗೂ ಚಿತ್ರತಂಡದ ವಿರುದ್ಧ ಧನುಷ್ ಬೇಸರ ಹೊರಹಾಕಿದ್ದರಂತೆ. ಥಿಯೇಟರ್ ನಲ್ಲಿ ಬಿಡುಗಡೆ ಮಾಡೋ ಆಸೆ ಅವರದಾಗಿತ್ತು. ಆದ್ರೆ ಬಳಿಕ ಓಟಿಟಿಯಲ್ಲಿ ಬಂದ ಧನುಷ್ ಚಿತ್ರಗಳೆಲ್ಲಾ ಸೂಪರ್ ಹಿಟ್ ಆಗಿವೆ. 2019ರಲ್ಲಿ ಅಮೆಜಾನ್ ಪ್ರೈಮ್ (Amazon prime video)ನಲ್ಲಿ ‘ಅಸುರನ್’ ಚಿತ್ರ ಬಿಡುಗಡೆಯಾಗಿ ಗೆದ್ದಿದೆ. ನಿರ್ದೇಶಕ ಆನಂದ್ ಎಲ್ ರೈ ಅವರ ಅತ್ರಾಂಗಿ ರೇ (Atrangi Re) ಚಿತ್ರ 2021 ಡಿಸೆಂಬರ್ ನಲ್ಲಿ ಡಿಸ್ನಿ+ ಹಾಟ್ ಸ್ಟಾರ್ನಲ್ಲಿ ಬಿಡುಗಡೆಯಾಗಿ ಸಕ್ಸಸ್ ಕೂಡ ಕಂಡಿದೆ. ಇದೀಗ ಧನುಷ್ ಸಹ ಚಿತ್ರ ಗೆದ್ದಿರೋ ಖುಷಿಯಲ್ಲಿದ್ದಾರೆ.
ಇದನ್ನು ಓದಿ: `ಊ ಅಂಟವಾ ಮಾವ..’ ಅನ್ನೋಕೆ ಸಮಂತಾ ತಗೊಂಡಿದ್ದು ಒಂದೂವರೆ ಕೋಟಿ ಅಲ್ಲ.. ಅದಕ್ಕೂ ಮೇಲೆ!
ಧನುಷ್ ಕೈಯಲ್ಲಿ ಹಲವು ಸಿನಿಮಾಗಳು
ಮಾರನ್ ಚಿತ್ರ ಬಿಡುಗಡೆ ಬಳಿಕ ನಟ ಧನುಷ್ ಅವರ ಸಾಲು ಸಾಲು ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ. ನಿರ್ದೇಶಕ ವೆಂಕಿ ಅತ್ಲೂರಿ ಜೊತೆ ಧನುಷ್ ಮಾಡ್ತಿರೋ ಸರ್(Sir) ಚಿತ್ರ ಮೇನಲ್ಲಿ ಬಿಡುಗಡೆಯಾಗಲಿದೆ ಅಂತ ಹೇಳಲಾಗ್ತಿದೆ. ಜೊತೆಗೆ ನಾನೇ ವರುವೇಲ್, ತಿರುಚಿತ್ರಾಂಬಲಂ ಸೇರಿದಂತೆ ಹಲವು ಚಿತ್ರಗಳು ಈ ವರ್ಷವೇ ರಿಲೀಸ್ ಆಗಲಿದೆ.
ವರದಿ: ಪಾವನ H.S
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ