ತಮಿಳು ನಟ ಧನುಷ್‌ಗೆ ಭರ್ಜರಿ ಆಫರ್‌ಗಳು: ಅವರ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ

Dhanush films: ಧನುಷ್ ತುಂಬಾ ವಿಮರ್ಶಾತ್ಮಕ ಪಾತ್ರಗಳನ್ನೂ ಮಾಡಿದ್ದು, ಬಾಕ್ಸ್ ಆಫೀಸ್ನಲ್ಲಿಯೂ ಹಣ ಮಾಡಿರುವುದು ನಾವೆಲ್ಲಾ ಗಮನಿಸಿದ ವಿಷಯ. ಧನುಷ್ ಅವರ ಕೈಯಲ್ಲಿರುವ ಬಹುಮುಖ್ಯವಾದ ಚಿತ್ರಗಳು ಈ ಕೆಳಗಿನಂತಿವೆ.

ಧನುಷ್

ಧನುಷ್

  • Share this:
ಜೂನ್ ತಿಂಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾದಂತಹ ಕಾರ್ತಿಕ್ ಸುಬ್ಬರಾಜ್ ಅವರ ನಿರ್ದೇಶನದ ಆ್ಯಕ್ಷನ್ ತಮಿಳು ಸಿನೆಮಾ ಜಗಮೇ ತಂತಿರಾಮ್ ಚಿತ್ರದಲ್ಲಿ ಕಾಣಿಸಿಕೊಂಡ ತಮಿಳು ಚಿತ್ರನಟ ಧನುಷ್ ಕೈಯಲ್ಲಿ ಎಷ್ಟು ಚಿತ್ರಗಳಿವೆ ಎಂದು ನಿಮಗೆ ಗೊತ್ತಾದರೆ ಧನುಷ್ ಎಂತಹ ಬೇಡಿಕೆಯುಳ್ಳಂತಹ ಮತ್ತು ಬ್ಯುಸಿ ನಾಯಕ ನಟ ಎಂಬುದು ತಿಳಿಯುತ್ತದೆ. ಧನುಷ್ ಕೈಯ್ಯಲ್ಲಿ ಸದ್ಯಕ್ಕೆ ಸುಮಾರು 5 ರಿಂದ 7 ಸಿನಿಮಾಗಳು ಇದ್ದು, ಅವರು 2021 ಮತ್ತು 2022ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಎರಡು ವರ್ಷ ಕ್ಯಾಲೆಂಡರ್ ಫುಲ್ ಪ್ಯಾಕ್ ಆಗಿದ್ದು ಧನುಷ್ ಮುಂದಿನ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. 37 ವರ್ಷದ ನಾಯಕ ನಟ ಧನುಷ್ ಕೇವಲ ತಮಿಳಿನಲ್ಲಿ ಸೂಪರ್ ಸ್ಟಾರ್ ಆಗಿ ತಮ್ಮ ಛಾಪನ್ನು ಮೂಡಿಸಿರುವುದಲ್ಲದೆ ಬಾಲಿವುಡ್ ಮತ್ತು ಹಾಲಿವುಡ್​​ನಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸಿರುವುದು ಪ್ರಶಂಸನೀಯ ವಿಷಯವಾಗಿದೆ.


ಧನುಷ್ ತುಂಬಾ ವಿಮರ್ಶಾತ್ಮಕ ಪಾತ್ರಗಳನ್ನೂ ಮಾಡಿದ್ದು, ಬಾಕ್ಸ್ ಆಫೀಸ್ನಲ್ಲಿಯೂ ಹಣ ಮಾಡಿರುವುದು ನಾವೆಲ್ಲಾ ಗಮನಿಸಿದ ವಿಷಯ. ಧನುಷ್ ಅವರ ಕೈಯಲ್ಲಿರುವ ಬಹುಮುಖ್ಯವಾದ ಚಿತ್ರಗಳು ಈ ಕೆಳಗಿನಂತಿವೆ.


ನಾನೇ ವರುವೆನ್:


ತಮಿಳಿನ ಸೆಲ್ವಾರಾಘವನ್ ಕತೆ ಬರೆದು ನಿರ್ದೇಶಿಸುತ್ತಿರುವಂತಹ ತಮಿಳು ಚಿತ್ರ ನಾನೇ ವರುವೆನ್ ಧನುಷ್ ಮುಂಬರುವ ಚಿತ್ರವಾಗಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣವು ಆಗಸ್ಟ್ 20 ರಂದು ಪ್ರಾರಂಭವಾಗಲಿದ್ದು, ಚಿತ್ರವು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಯುವಾನ್ ಶಂಕರ್ ರಾಜ ಅವರು ಸಂಗೀತ ನೀಡಲಿದ್ದು, ಅರವಿಂದ್ ಕೃಷ್ಣ ಛಾಯಾಗ್ರಹಣವನ್ನು ನಿಭಾಯಿಸಲಿದ್ದಾರೆ. ಧನುಷ್ ಮತ್ತು ಸೆಲ್ವಾರಾಘವನ್ ಜೊತೆಗೂಡಿ ಮಾಡುತ್ತಿರುವಂತಹ ಐದನೆಯ ಚಿತ್ರವು ಇದಾಗಲಿದೆ.


ಅತರಂಗಿ ರೇ:


ಅತರಂಗಿ ರೇ ಹಿಂದಿ ಚಿತ್ರವಾಗಿದ್ದು, ಇದರಲ್ಲಿ ನಾಯಕ ನಟ ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಧನುಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಂದ್ ಎಲ್ ರಾಯ್ ನಿರ್ದೇಶನದ ಚಿತ್ರವಾಗಿದ್ದು, ಧನುಷ್ ಮತ್ತು ಇವರ ಜೋಡಿಯ ಎರಡನೆಯ ಚಿತ್ರವಾಗಲಿದೆ. ಈ ಜೋಡಿ ಮೊದಲು 2013ರಲ್ಲಿ ಬಿಡುಗಡೆಗೊಂಡ ರಾಂಜಾನಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರವು ಫೆಬ್ರುವರಿ 2021ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದರು, ಆದರೆ ಕೋವಿಡ್-19 ಹಿನ್ನಲೆಯಲ್ಲಿ ಮುಂದಿನ ತಿಂಗಳು ಆಗಸ್ಟ್ 6 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ.


ಡಿ 43:


ಡಿ 43 ಎಂಬ ಹೆಸರಿನೊಂದಿಗೆ ಚಿತ್ರದ ಶೂಟಿಂಗ್ ಜುಲೈಯಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದು, ಕಾರ್ತಿಕ್ ನರೇನ್ ನಿರ್ದೇಶನದ ಚಿತ್ರಕ್ಕೆ ಹೆಸರು ಇನ್ನೂ ಖಚಿತ ಪಡಿಸಿಲ್ಲವಾದರೂ ಸದ್ಯಕ್ಕೆ ಡಿ 43 ಎಂದು ಇಡಲಾಗಿದ್ದು, ಸತ್ಯಾ ಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ. ಚಿತ್ರದ ಕತೆಯನ್ನು ಸುಹಾಸ್ ಮತ್ತು ಶ್ರಾಫ್ ಬರೆದಿದ್ದು, ಚಿತ್ರದಲ್ಲಿ ಮಾಳವಿಕಾ ಮೋಹನನ್, ಸಮೂತ್ರಕಾನಿ, ಸ್ಮೃತಿ ವೆಂಕಟ್ ಅಭಿನಯಿಸಲಿದ್ದಾರೆ.


ದ ಗ್ರೇಯ್ ಮ್ಯಾನ್:


ದ ಗ್ರೇಯ್ ಮ್ಯಾನ್ ಚಿತ್ರವು ಹಾಲಿವುಡ್ನಲ್ಲಿ ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದ ಕಥೆಯನ್ನು ಜೋ ರುಸ್ಸೋ ಮತ್ತು ಆಂಥೋನಿ ರುಸ್ಸೋ ಅವರಿಬ್ಬರೂ ಸೇರಿ ಬರೆದಿರುವುದು ವಿಶೇಷ. ಚಿತ್ರದಲ್ಲಿ ಧನುಷ್, ಕ್ರಿಸ್ ಇವಾನ್ಸ್ ಮತ್ತು ರ‍್ಯಾನ್ ಗ್ಯಾಸ್ಲಿಂಗ್ ಅಭಿನಯಿಸಲಿದ್ದಾರೆ. ಧನುಷ್ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ.


First published: