ದಕ್ಷಿಣ ಭಾರತದ ಖ್ಯಾತ ನಟ ಧನುಷ್. ಇತ್ತೀಚಿನ ಸಿನಿಮಾಗಳಾದ ಅಸುರನ್ ಹಾಗೂ ಕರ್ಣನ್ನಲ್ಲಿನ ಅಮೋಘ ಅಭಿನಯದಿಂದ ಧನುಷ್ ಮನೆ ಮಾತಾಗಿದ್ದಾರೆ. ಇವರು ಚೆನ್ನೈನ ಪೋಯೆಸ್ ಗಾರ್ಡನ್ ಬಳಿ ಹೊಸ ನಿವೇಶನವನ್ನು ಇದೇ ವರ್ಷ ಏಪ್ರಿಲ್ನಲ್ಲಿ ಖರೀದಿಸಿದ್ದರು. ಜೊತೆಗೆ ಮಾವ ರಜಿನಿಕಾಂತ್, ಅತ್ತೆ ಲತಾ, ಪತ್ನಿ ಐಶ್ವರ್ಯಾ ಸೇರಿ ಇತ್ತೀಚೆಗಷ್ಟೆ ಭೂಮಿ ಪೂಜೆ ನೆರವೇರಿಸಿದ್ದಾರೆ. ನಟನ ಈ ಕನಸಿನ ಮನೆ ನಿರ್ಮಿಸಲು 150 ಕೋಟಿ ವೆಚ್ಚ ತಗುಲಲಿದೆಯಂತೆ. ಈ ಮನೆಯು ರಜಿನಿಕಾಂತ್ ವಾಸವಿದ್ದ ಐಷಾರಾಮಿ ಪ್ರದೇಶದಲ್ಲಿಯೇ ಇದೆಯಂತೆ. ಈ ಸ್ಥಳದಲ್ಲಿ ಚೆನ್ನೈನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಮನೆ ಕೂಡ ಇತ್ತು. ಇವರಲ್ಲದೇ ಸಾಕಷ್ಟು ಸುಪ್ರಸಿದ್ಧ ನಟ-ನಟಿಯರೂ ಇದೇ ಏರಿಯಾದಲ್ಲೇ ವಾಸವಾಗಿದ್ದಾರೆ.
ಧನುಷ್ ಖರೀದಿಸಿರುವ ನಿವೇಶನದ ಅಳತೆ 19000 ಚದರ ಅಡಿ ಇದೆ. ಈ ನಿವೇಶನದಲ್ಲಿ ಧನುಷ್ ಹಾಗೂ ಐಶ್ವರ್ಯಾ ಅವರು ನಾಲ್ಕು ಅಂತಸ್ತಿನ ಮನೆ ನಿರ್ಮಿಸಲು ಯೋಚಿಸಿದ್ದಾರೆ ಎಂದು ತಮಿಳುನಾಡಿನ ಮನರಂಜನಾ ಮಾಧ್ಯಮವೊಂದು ವರದಿ ಮಾಡಿತ್ತು.
View this post on Instagram
ಇದನ್ನೂ ಓದಿ: Devaraj: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ದೇವರಾಜ್ ದಂಪತಿ: ಇಲ್ಲಿವೆ ಕುಟುಂಬದ ಅಪರೂಪದ ಚಿತ್ರಗಳು..!
ಧನುಷ್ ಅವರ ಜಗಮೆ ತಂದಿರಾಮ್ ಎಂಬ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ಈ ಚಿತ್ರವು ಜೂನ್ 18ರಂದು 190 ದೇಶಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಯಿತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಐಶ್ವರ್ಯ ಲಕ್ಷ್ಮೀ ಮುಖ್ಯಭೂಮಿಕೆಯಲ್ಲಿದ್ದು, ಜೇಮ್ಸ್ ಕಾಸ್ಮೋ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಈ ಸಿನಿಮಾ ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲಿ ವಿಶೇಷ ರೇಟಿಂಗ್ ಗಳಿಸಿದೆ. ಜಾಗತಿಕವಾಗಿ ಪ್ರಚಲಿತದಲ್ಲಿರುವ ಸಾಮಾಜಿಕ ವಿಚಾರಗಳನ್ನು ತೆರೆದಿಡುವ ಕಥೆ ಇದಾಗಿದ್ದು, ಈ ಚಿತ್ರ ಅಲೆಮಾರಿ ದರೋಡೆಕೋರನ ಸುತ್ತ ಸುತ್ತುತ್ತದೆ. ಧನುಷ್ ಇದರಲ್ಲಿ ಅಲೆಮಾರಿ ದರೋಡೆಕೋರನಾಗಿ ಕಾಣಿಸಿಕೊಂಡಿದ್ದಾರೆ.
ಧನುಷ್ ಮೊದಲ ಬಾರಿಗೆ ಚಲನಚಿತ್ರ ನಿರ್ಮಾಪಕ ಶೇಖರ್ ಕಮ್ಮುಲಾ ಅವರೊಂದಿಗೆ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದು, ಅದು ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗಲಿದೆ. ಈ ಮೂಲಕ ಧನುಷ್ ಅವರ ಹೆಸರು ಆಗಸ್ಟ್ನಿಂದ ಬಹು ಎತ್ತರದಲ್ಲಿ ಸಾಗಲಿದೆ. ಈ ಚಿತ್ರವು ಧನುಷ್ ಅವರ ತೆಲುಗು ಚೊಚ್ಚಲ ಚಿತ್ರವೂ ಹೌದು. ಇದರಲ್ಲಿ ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ಬಳುಕುವ ಬಳ್ಳಿಯಂತ ದೇಹ-ತೆಳುವಾದ ಸೊಂಟಕ್ಕಾಗಿ ಆಲೂಗಡ್ಡೆ ಸೇವಿಸಿ..!
ಆನಂದ್ ಎಲ್ ರಾಯ್ ಅವರ ಅತ್ರಂಗಿ ರೇ ಬಾಲಿವುಡ್ ಚಿತ್ರದಲ್ಲಿಯೂ ಧನುಷ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಧನುಷ್ ಎದುರು ಸಾರಾ ಅಲಿ ಖಾನ್ ನಟಿಸಿದ್ದಾರೆ. ಜತೆಗೆ ನಟ ಅಕ್ಷಯ್ ಕುಮಾರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಅತ್ರಂಗಿ ರೇ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಅಸುರನ್ ಚಿತ್ರದಲ್ಲಿನ ಉಗ್ರತೆ ಕಂಡು ಧನುಷ್ ಒಬ್ಬ ಅಸಾಮಾನ್ಯ ನಟ ಎಂಬ ನಿರ್ಧಾರಕ್ಕೆ ಜನರು ಬಂದರು. ಅಷ್ಟೊಂದು ಪಾತ್ರವೇ ಅವರಾಗಿ ಅದರಲ್ಲಿ ಕಾಣಿಸಿಕೊಂಡಿದ್ದರು. ಇದೇ ರೀತಿ ಕರ್ಣನ್ ಕೂಡ ಜನರು ಮೆಚ್ಚಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ