Dhanush-Aishwarya Rajinikanth: ‘ನನ್ನ ಮಗ-ಸೊಸೆ ಬೇರೆಯಾಗಿಲ್ಲ‘ ಅಚ್ಚರಿ ಹೇಳಿಕೆ ಕೊಟ್ಟ ಧನುಷ್ ತಂದೆ

ಐಶ್ವರ್ಯ ಹಾಗೂ ಧನುಷ್

ಐಶ್ವರ್ಯ ಹಾಗೂ ಧನುಷ್

Aishwarya and Dhanush: ಸಂದರ್ಶನವೊಂದರಲ್ಲಿ ಮಾತನಾಡಿರುವ ಕಸ್ತೂರಿ ರಾಜಾ ಅವರು, ಧನುಷ್​ ಹಾಗೂ ಐಶ್ವರ್ಯಾ ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬೇರ್ಪಟ್ಟಿದ್ದಾರೆ. ಇದು ಸಾಮಾನ್ಯವಾಗಿ ದಂಪತಿಯ ನಡುವೆ ಇರುವ ಕೌಟುಂಬಿಕ ಕಲಹವಾಗಿದೆ. ಪ್ರಸ್ತುತ ಈ ದಂಪತಿ ಚೆನ್ನೈನಲ್ಲಿಲ್ಲ, ಹೈದರಾಬಾದ್​ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಸೂಪರ್ ಸ್ಟಾರ್ ರಜನಿಕಾಂತ್(Super Start Rajinikanth) ಅವರ ಪುತ್ರಿ ಐಶ್ವರ್ಯ(Aishwarya) ಅವರನ್ನು ವಿವಾಹವಾಗಿದ್ದ ತಮಿಳು ನಟ ಧನುಷ್(Actor Dhanush) ವಿವಾಹ ವೀಚ್ಚೆಧನ (Divorce)ನೀಡಿದ್ದಾರೆ.. ಈ ಜೋಡಿಯ ವೀಚ್ಚೆಧನದ ಸುದ್ದಿ ಈಗ ಎಲ್ಲಾ ಕಡೆ ಸಾಕಷ್ಟು ಸದ್ದು ಮಾಡುತ್ತಿದೆ.. ಅಲ್ಲದೆ 18 ವರ್ಷ ಸಂಸಾರ ಮಾಡಿದ ಬಳಿಕ ಈ ಜೋಡಿ ವೀಚ್ಚೆಧನ ಪಡೆದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಒಂದು ಕಡೆ ಧನುಷ್ ಗೆ ಕೆಲವು ನಟಿ ಮಣಿಯರ ಜೊತೆ ಡೇಟಿಂಗ್(Dating) ನಲ್ಲಿ ಇದ್ದರು ಎನ್ನುವುದೇ ಕಾರಣ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದರ ನಡುವೆ ಧನುಷ್ ಆಪ್ತ ಸ್ನೇಹಿತರೊಬ್ಬರು ಧನುಷ್ ಸಿನಿಮಾ ಹಾಗೂ ಕೆಲಸದ ಮೇಲೆ ಇದ್ದ ಪ್ರೀತಿ ಅವರ ವಿವಾಹ ವಿಚ್ಛೇದನಕ್ಕೆ ಕಾರಣ ಎಂದು ಹೇಳಿಕೆ ನೀಡಿದ್ದರು... ಇದರ ನಡುವೆಯೇ ಧನುಷ್ ತಂದೆ-ಮಗ ಹಾಗೂ ಸೊಸೆ ಬೇರೆಯಾಗಿಲ್ಲ ಎಂಬ ಅಚ್ಚರಿಯ ಮಾಹಿತಿ ನೀಡಿದ್ದಾರೆ..


ಮಗ-ಸೊಸೆ ನಡುವೆ ಸಣ್ಣ ಜಗಳ ಎಂದ ಧನುಷ್ ತಂದೆ


ಐಶ್ವರ್ಯ ಹಾಗೂ ಧನುಷ್ ಅವರ ವಿವಾಹ ವಿಚ್ಛೇದನದ ಬಗ್ಗೆ ಹಲವಾರು ಮಾತುಗಳು ಕೇಳಿ ಬರುತ್ತಿರುವಾಗಲೇ ಧನುಷ್ ತಂದೆ ನಿರ್ಮಾಪಕ ಕಸ್ತೂರಿ ರಾಜಾ ತಮ್ಮ ಪುತ್ರ ಹಾಗೂ ಸೊಸೆಯ ವಿಚ್ಚೇದನದ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕಸ್ತೂರಿ ರಾಜಾ ಅವರು, ಧನುಷ್​ ಹಾಗೂ ಐಶ್ವರ್ಯಾ ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬೇರ್ಪಟ್ಟಿದ್ದಾರೆ. ಇದು ಸಾಮಾನ್ಯವಾಗಿ ದಂಪತಿಯ ನಡುವೆ ಇರುವ ಕೌಟುಂಬಿಕ ಕಲಹವಾಗಿದೆ. ಪ್ರಸ್ತುತ ಈ ದಂಪತಿ ಚೆನ್ನೈನಲ್ಲಿಲ್ಲ, ಹೈದರಾಬಾದ್​ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.ಅಲ್ಲದೆ ಇವರಿಬ್ಬರು ಚೆನ್ನಾಗಿ ಇದ್ದಾರೆ ಎಂದು ಹೇಳುವ ಮೂಲಕ ಧನುಷ್ ಹಾಗೂ ಐಶ್ವರ್ಯಾ ನಡುವಿನ ವಿವಾಹ ವಿಚ್ಛೇದನದ ಬಗ್ಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ..


ಇದನ್ನೂ ಓದಿ: ಪಾತ್ರಕ್ಕಾಗಿ ಸಖತ್‌ ತಯಾರಿ ನಡೆಸಿರುವ ನಟಿ ಫಾತಿಮಾ ಸನಾ ಶೇಖ್..!


ಬಹಳ ಹಿಂದೆ ಹದಗೆಟ್ಟಿದ್ದ ಧನುಷ್ ಹಾಗೂ ಐಶ್ವರ್ಯಾ ಸಂಬಂಧ


ಇನ್ನು ಧನುಷ್ ಆಪ್ತರು ನೀಡಿರುವ ಮಾಹಿತಿ ಧನುಷ್ ಐಶ್ವರ್ಯ ನಡುವೆ ಸಂಬಂಧ ಬಹಳ ದಿನಗಳ ಹಿಂದೆ ಹಾಳಾಗಿತ್ತು. ತಮ್ಮ ಮದುವೆಯ ಸಂಬಂಧ ಉಳಿಸಿಕೊಳ್ಳಲು ಧನುಷ್ ಹಾಗೂ ಐಶ್ವರ್ಯ ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಕೊನೆಗೆ ಇಬ್ಬರೂ ವಿಚ್ಛೇದನ ಪಡೆದು ಕೊಂಡಿದ್ದಾರೆ.


ಧನುಷ್ ಕೆಲಸದಿಂದಾಗಿಯೇ ಕೌಟುಂಬಿಕ ಜೀವನಕ್ಕೆ ಕುತ್ತು


ಧನುಷ್ ಅವರ ಸಿನಿಮಾಗಳನ್ನು ನೋಡಿದಾಗ ಧನುಶ್ ಅವರು ಎಷ್ಟು ಪರಿಶ್ರಮ ಮಾತಾಡುತ್ತಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ.. ಒಂದು ಸಿನಿಮಾ ಒಪ್ಪಿಕೊಂಡಾಗ ಸಿನಿಮಾಗಾಗಿ ಸಾಕಷ್ಟು ಪ್ರಯತ್ನ ಪಡುವ ಧನುಷ್, ಒಂದು ನಗರದಿಂದ ಮತ್ತೊಂದು ನಗರಕ್ಕೆ ಸದಾ ಪ್ರವಾಸ ಮಾಡುತ್ತಲೇ ಇರುತ್ತಾರೆ. ಹೀಗೆ ಹೊರಗಡೆ ಸಿನಿಮಾ ಶೂಟಿಂಗ್‌ಗೆ ಹೋಗುತ್ತಾರೆ. ಇದರಿಂದ ಅವರ ಕೌಟುಂಬಿಕ ಜೀವನಕ್ಕೆ ಕುತ್ತು ತಂದುಕೊಂಡಿದ್ದಾರೆ.


ಇದನ್ನೂ ಓದಿ: ಮುಖ ಮುಚ್ಚಿಕೊಂಡು ಬಂದಿದ್ಯಾಕೆ ಬುಲ್ ಬುಲ್ ಬೆಡಗಿ..? ಸುದ್ದಿ ತಿಳಿದು ಅಭಿಮಾನಿಗಳು ಶಾಕ್!


ಇನ್ನು ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಅವರನ್ನು 18 ನವೆಂಬರ್ 2004 ರಂದು ವಿವಾಹವಾಗಿದ್ದರು. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನುಷ್ ಮತ್ತು ಐಶ್ವರ್ಯ ಅವರು ತಮ್ಮ ಪ್ರತ್ಯೇಕತೆ ಬಗ್ಗೆ ಸೋಮವಾರದಂದು ಟ್ವಿಟರ್​ನಲ್ಲಿ ತಿಳಿಸಿದ್ದರು.ಹದಿನೆಂಟು ವರ್ಷಗಳ ವರೆಗೆ ಸ್ನೇಹಿತರು, ದಂಪತಿ, ಪೋಷಕರು ಮತ್ತು ಪರಸ್ಪರ ಹಿತೈಷಿಗಳಾಗಿ ಒಟ್ಟಿಗೆ ಇದ್ದೆವು. ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನೀಡಿ. ಓಂ ನಮ ಶಿವಾಯ ಎಂದು ಧನುಷ್ ಟ್ವೀಟ್ ಮಾಡಿದ್ದರು

First published: