ತಮಿಳು(Tamil) ಚಿತ್ರರಂಗದ ಖ್ಯಾತ ನಟ ಧನುಷ್(Dhanush) ಮತ್ತು ಅವರ ಪತ್ನಿ ಐಶ್ವರ್ಯಾ(Aishwarya) ಇತ್ತೀಚೆಗೆ ಇದ್ದಕಿದ್ದ ಹಾಗೇ ಬೇರೆಯಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನು ಕೇಳಿದ ಅವರ ಅಭಿಮಾನಿಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್(Superstar Rajinikanth) ಕೂಡ ತಮ್ಮ ಮಗಳ ವಿಚಾರ ಕೇಳಿ ಬೇಜಾರಾಗಿದ್ದರು. ಯಾರೊಬ್ಬರು ಈ ಸ್ಟಾರ್ ಜೋಡಿ ಹೀಗೆ ಬೇರೆಯಾಗುತ್ತಾರೆ ಎಂದು ಊಹೆ ಮಾಡಿರಲಿಲ್ಲ. ದೂರಾದ ಬಳಿಕ ಈ ಬಗ್ಗೆ ಇಬ್ಬರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಬದಲಿಗೆ ನಮಗೆ ಪ್ರೈವಸಿ(Privacy) ನೀಡಿ ಎಂದು ಕೇಳಿಕೊಂಡಿದ್ದರು.ಆದರೆ, ಏಕಾಏಕಿ ಇಬ್ಬರೂ ಹೀಗೆ ಡಿವೋರ್ಸ್(Divorce) ಪಡೆಯಲು ಕಾರಣವೇನು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ವಿಚ್ಚೇದನ ಪಡೆದ ನಂತರ ಧನುಷ್ ಮತ್ತು ಐಶ್ವರ್ಯಾ ಇಬ್ಬರೂ ಸಹ ತಮ್ಮ ತಮ್ಮ ಕೆರಿಯರ್(Carrier)ನಲ್ಲಿ ಬ್ಯುಸಿ(Busy)ಯಾಗಿದ್ದಾರೆ.ಸದ್ಯ ಐಶ್ವರ್ಯಾ ಅವರು ಮ್ಯೂಸಿಕ್ ಆಲ್ಬಂ ಸಾಂಗ್ ನಿರ್ದೇಶನ(Direction) ಮಾಡುತ್ತಿದ್ದಾರೆ. ಕಳೆದ ಕೆಲದಿನಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ರೆಸ್ಟ್ ಮಾಡುತ್ತಿದ್ದಾರೆ.ಇತ್ತ ಧನುಷ್ ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಹೋಟೆಲ್ನಲ್ಲಿ ಹುಡುಗಿ ಜೊತೆ ಕಾಣಿಸಿಕೊಂಡ ಧನುಷ್?
ಇಷ್ಟೇ ಆಗಿದ್ದರು ಈ ವಿಚಾರ ಸುದ್ದಿಯಾಗುತ್ತಿರಲಿಲ್ಲ. ಶೂಟಿಂಗ್ ವೇಳೆ ನಟ ಧನುಷ್ ಹೈದರಾಬಾದ್ನ ಫೇಮಸ್ ಮಿಲಿಟರಿ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದರು. ಅದು ಒಂದು ಹುಡುಗಿಯ ಜೊತೆ. ಹೌದು, ನಟ ಧನುಷ್ ಯಾರಿಗೂ ತಿಳಿಯದಂತೆ ಸಾಮನ್ಯರಂತೆ ಜಾಕೆಟ್, ಕ್ಯಾಪ್ ಧರಿಸಿ ಮಿಲಿಟರಿ ಹೋಟೆಲ್ಗೆ ಹೋಗಿದ್ದಾರೆ. ಆದರೆ, ಆ ಹೋಟೆಲ್ನ ಮಾಲೀಕರು ಧನುಷ್ ಅವರನ್ನು ಗುರುತಿಸಿ ಕೆಲ ಫೋಟೋಗಳನ್ನು ತೆಗೆದಿದ್ದಾರೆ. ಈ ಫೋಟೋದಲ್ಲಿ ಧನುಷ್ ಪಕ್ಕ ಯುವತಿಯೊಬ್ಬಳು ಕೂತು ಊಟ ಮಾಡುತ್ತಿದ್ದಾರೆ. ಈ ಹುಡುಗಿ ಯಾರು ಎಂಬುದು ಸದ್ಯಕ್ಕೆ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.
ಧನುಷ್ ಜೊತೆ ಇರುವ ಹುಡುಗಿ ಯಾರು?
ಸದ್ಯಕ್ಕೆ ಧನುಷ್ ಪಕ್ಕ ಕೂತು ಊಟ ಮಾಡುತ್ತಿರುವ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆ ಯುವತಿ ಯಾರಿರಬಹುದು? ಧನುಷ್ ಯಾಕೆ ಸಾಮನ್ಯರಂತೆ ಆ ಹೋಟೆಲ್ಗೆ ಬರುತ್ತಾರೆ? ಅದು ತನ್ನ ಐಡೆಂಟಿಟಿ ಗೊತ್ತಾಗದಂತೆ ಬಂದಿದ್ದಾರೆ? ಇಲ್ಲಿ ಏನೋ ಒಂದು ಸಮಸ್ಯೆ ಇದೆ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಇದನ್ನೂ ಓದಿ: Aishwarya-Dhanush ವಿಚ್ಛೇದನದಿಂದ ನೊಂದ ರಜನಿಕಾಂತ್, ದಂಪತಿ ಮನವೊಲಿಸುವ ಪ್ರಯತ್ನ ಮಾಡ್ತಿದ್ದಾರೆ ತಲೈವಾ
'ಕಾದಲ್ ಕೊಂಡೈನ್' ನೋಡಿ ಫಿದಾ ಆಗಿದ್ದ ಐಶ್ವರ್ಯಾ!
ಧನುಷ್ ಅಭಿನಯಿಸಿದ್ದ 'ಕಾದಲ್ ಕೊಂಡೈನ್' ಸಿನಿಮಾ ನೋಡಿ ಐಶ್ವರ್ಯಾ ಫಿದಾ ಆಗಿದ್ದರು. ಸಿನಿಮಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಹೀಗಾಗಿ ಈ ಸಿನಿಮಾವನ್ನು ನೋಡುವುದಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಕೂಡ ಬಂದಿದ್ದರು. ಈ ಸಿನಿಮಾ ನೋಡಿದ ಬಳಿಕ ಧನುಷ್ ಅಭಿನಯ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ತುಂಬಾನೇ ಇಷ್ಟ ಆಗಿತ್ತಂತೆ. ಈ ಸಿನಿಮಾ ನೋಡಿದ ಬಳಿಕವೇ ಐಶ್ವರ್ಯಾಗೆ ಧನುಷ್ ಮೇಲೆ ಪ್ರೀತಿ ಮೂಡಿತ್ತಂತೆ.
ಇದನ್ನೂ ಓದಿ : ಕೊರೋನಾ ಬಂದು ಆಸ್ಪತ್ರೆಯಲ್ಲಿದ್ದ ಐಶ್ವರ್ಯಾಗೆ ಬಂತು ಬಿಗ್ ಸರ್ಪ್ರೈಸ್.. ಮತ್ತೆ ಒಂದಾಗ್ತಾರಾ ತಾರಾ ಜೋಡಿ?
18 ವರ್ಷದ ದಾಂಪತ್ಯಕ್ಕೆ ಪುಲಿಸ್ಟಾಪ್!
18 ವರ್ಷಗಳವರಗೆ ಜೊತೆಯಾಗಿ ಬಾಳಿದ ಈ ಜೋಡಿ ಇದೀಗ ತಮ್ಮ ಬದುಕಿನ ಪಥ ಬದಲಿಸಿದ್ದಾರೆ. ಗಂಡನಿಂದ ದೂರಾದರೂ ಕೂಡ ಐಶ್ವರ್ಯಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಧನುಷ್ ಎಂಬ ಹೆಸರನ್ನು ತೆಗೆದುಹಾಕಿಲ್ಲ. ಹೀಗಾಗಿ ಈ ಜೋಡಿ ಮತ್ತೆ ಒಂದಾಗುತ್ತಾರಾ ಎಂಬ ಆಸೆಯಿಂದ ಅಭಿಮಾನಿಗಳು ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ