HOME » NEWS » Entertainment » DHANUSH AND SAIPALLAVI MAARI 2 MOVIE ROWDY BABY SONG 1 BILLION VIEWS ON YOUTUBE HG

Rowdy Baby: ದಾಖಲೆ ಬರೆದ ರೌಡಿ ಬೇಬಿ ಹಾಡು; ಯ್ಯೂಟೂಬ್​​ನಲ್ಲಿ 1 ಬಿಲಿಯನ್ ವೀಕ್ಷಣೆ!

Maari2 Movie: ರಜನಿಕಾಂತ್​​ ಅಳಿಯ ಧನುಷ್ ಹಾಗೂ ಸಾಯಿ ಪಲ್ಲವಿ ಹಾಡಿನ ಹೈಲೈಟ್. ತಪ್ಪಾಂಗುಚ್ಚಿ ಸ್ಟೆಪ್ಪು. ಕುಂತವ್ನೂ ಸಹ ಕುಣಿಯುವಂತಹ ಬೀಟ್ಸ್​​. ರೌಡಿ ಬೇಬಿ ಹಾಡನ್ನ ಪದೇ ಪದೆ ನೋಡುವಂತೆ ಮಾಡಿದೆ.

news18-kannada
Updated:November 17, 2020, 8:31 PM IST
Rowdy Baby: ದಾಖಲೆ ಬರೆದ ರೌಡಿ ಬೇಬಿ ಹಾಡು; ಯ್ಯೂಟೂಬ್​​ನಲ್ಲಿ 1 ಬಿಲಿಯನ್ ವೀಕ್ಷಣೆ!
ಧನುಷ್ -ಸಾಯಿ ಪಲ್ಲವಿ
  • Share this:
ರೌಡಿ ಬೇಬಿ, ಮಾರಿ ಸಿನಿಮಾದ ಈ ಹಾಡು ಯಾವ ಮಟ್ಟದ ಸಂಚಲನ ಹುಟ್ಟಿಸಿದೆ ಅಂತ ಹೇಳಬೇಕಿಲ್ಲ. ಸಿನಿಮಾ ಬಿಡುಗಡೆಯಾಗಿ 2 ವರ್ಷ ಆಗ್ತಾ ಬಂತು. ಆದರೂ ರೌಡಿ ಬೇಬಿ ಹವಾ ಒಂಚೂರು ಕಮ್ಮಿನೇ ಆಗಿಲ್ಲ. ದಿನದಿಂದ ದಿನಕ್ಕೆ ಇದರ ಸೌಂಡು ಜಾಸ್ತಿಯಾಗ್ತಾನೇ ಇದೆ. ಪ್ರಪಂಚವೆಲ್ಲಾ ಒಂದು ರೌಂಡು ಈ ಹಾಡನ್ನ ಕೇಳಿ ಬಿಟ್ಟಿದೆಯೆನೋ ಅನ್ನುವಷ್ಟು ಜನಪ್ರಿಯತೆ ಹೆಚ್ಚಾಗುತ್ತಿದೆ.

ಯೆಸ್.. ರೌಡಿ ಬೇಬಿ ಸೌತ್ ಸಿನಿದುನಿಯಾದಲ್ಲಿ ಹೊಸ ದಾಖಲೆ ಬರೆದಿದೆ. ನೂರು ಕೋಟಿ ವೀಕ್ಷಣೆ ಪಡೆಯುವ ಮೂಲಕ ಯೂಟ್ಯೂಬ್ ನ ದಾಖಲೆಗಳನ್ನ ಚಿಂದಿ ಉಡಾಯಿಸಿದೆ. ದೀಪಾವಳಿ ಸರ ಪಟಾಕಿ ತರ ಎಲ್ಲಾ ದಾಖಲೆಗಳನ್ನ ತನ್ನ ಹೆಸರಿಗೆ ಬರೆಸಿಕೊಂಡಿದೆ. ಆ ಮೂಲಕ ಕೇವಲ ತಮಿಳು, ಇಂಡಿಯನ್ ಸಾಂಗ್ ಆಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಹಾಡುಗಳ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದೆ.

Youtube Video


ರಜನಿಕಾಂತ್​​ ಅಳಿಯ ಧನುಷ್ ಹಾಗೂ ಸಾಯಿ ಪಲ್ಲವಿ ಹಾಡಿನ ಹೈಲೈಟ್. ತಪ್ಪಾಂಗುಚ್ಚಿ ಸ್ಟೆಪ್ಪು. ಕುಂತವ್ನೂ ಸಹ ಕುಣಿಯುವಂತಹ ಬೀಟ್ಸ್​​. ರೌಡಿ ಬೇಬಿ ಹಾಡನ್ನ ಪದೇ ಪದೆ ನೋಡುವಂತೆ ಮಾಡಿದೆ. ಈ ಎರಡು ವರ್ಷಗಳಲ್ಲಿ ಪಡೆದಿರೋ ಕಾಲೇಜ್ ಫಂಕ್ಷನ್, ಮದುವೆ ಇನ್ನಿತರ ಸಮಾರಂಭಗಳು, ಗಣೇಶ ಫಂಕ್ಷನ್ ಹೀಗೆ ಎಲ್ಲಾ ಕಡೆ ಈ ಹಾಡು ಇರ್ಲೇಬೇಕು. ಅದರಲ್ಲೂ ವಯಸ್ಸಿನ ಹಂಗಿಲ್ಲದೆ, ಭಾಷೆಯ ಬೇಧವಿಲ್ಲದೆ, ಈ ಹಾಡನ್ನ ಎಲ್ಲರೂ ಇಷ್ಟಪಡುತ್ತಿರೋದೆ ಹಾಡಿನ ಜನಪ್ರಿಯತೆ ಈ ಮಟ್ಟಿಗೆ ರೀಚ್ ಆಗೋಕೆ ಕಾರಣ‌. ಒಟ್ಟಾರೆ 9 ವರ್ಷಗಳ ಹಿಂದೆ ‘ಕೊಲವೆರಿ ಡಿ’ ಎಂಬ ಹಾಡಿನ ಮೂಲಕ ಯೂಟ್ಯೂಬ್ ಗೆ ಬೆಂಕಿ ಹಚ್ಚಿದ್ದರು, ವೈರಲ್ ಎಂಬ ಪದವನ್ನ ಸೌತ್ ಇಂಡಿಯಾಗೆ ಪರಿಚಯಿಸಿದ ಧನುಷ್ ಈಗ ಮತ್ತೊಮ್ಮೆ ರೌಡಿ ಬೇಬಿ ಹಾಡಿನಿಂದ ಸುನಾಮಿಯನ್ನೇ ಸೃಷ್ಟಿಸಿದ್ದಾರೆ ಅಂದರೆ ತಪ್ಪಾಗದು.
Published by: Harshith AS
First published: November 17, 2020, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories