Dhanush Divorce: ಧನುಷ್​-ಐಶ್ವರ್ಯಾ ಲವ್​ ಮ್ಯಾಟರ್​ ಗೊತ್ತಾದಾಗ ರಜನಿ ಮಾಡಿದ್ದೇನು? ಅಪ್ಪ ಅಂದ್ರೆ ಆಕಾಶ ಅನ್ನೋದು ಇದಕ್ಕೆ ನೋಡಿ..!

ಧನುಷ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ ತಿಳಿಸಿದ್ದ ರಜನಿ, ಇಬ್ಬರನ್ನೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರು. 18 ವರ್ಷಗಳ ಹಿಂದೆ ಇದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

ರಜನಿಕಾಂತ್​, ಐಶ್ವರ್ಯಾ, ಧನುಷ್​

ರಜನಿಕಾಂತ್​, ಐಶ್ವರ್ಯಾ, ಧನುಷ್​

  • Share this:
ಸಮಂತಾ(Samantha) ಹಾಗೂ ನಾಗಚೈತನ್ಯ(Naga Chaitanya) ದೂರಾದ ವಿಷಯವನ್ನೇ ಇನ್ನೂ ಯಾರಿಂದಲೂ ಅರಗಸಿಕೊಳ್ಳಲು ಆಗುತ್ತಿಲ್ಲ. ಪ್ರೀತಿಸಿ ಮದುವೆಯಾದವರು ಹೀಗೆ ಡಿವೋರ್ಸ್(Divorce) ನೀಡದ್ದನ್ನು ಕಂಡು ಫ್ಯಾನ್ಸ್​ ಬೇಸರಗೊಂಡಿದ್ದರು. ಇದೀಗ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಬಳಿಕ ಮತ್ತೊಂದು ತಾರಾ ಜೋಡಿ ದೂರವಾಗಿದೆ. ಸ್ಟಾರ ನಟ(Star Hero) ಏಕಾಏಕಿ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾರೆ. ಅದು ತಮಿಳು ಸೂಪರ್​ ಸ್ಟಾರ್(Tamil Super Star)​ ತಲೈವಾ ಪುತ್ರಿ ಐಶ್ವರ್ಯಾ ರಜನಿಕಾಂತ್(Rajinikanth)​ ಹಾಗೂ ಧನುಷ್(Dhanush) ದೂರಾಗಿದ್ದಾರೆ. ಹೌದು, ಶಾಕಿಂಗ್(Shocking) ಎಂಬಂತೆ ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ಇಬ್ಬರ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. 18 ವರ್ಷಗಳ ಸಂಸಾರ ನಡೆಸಿದ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ತಮಿಳು ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದವರು ಧನುಷ್​ ಹಾಗೂ ಐಶ್ವರ್ಯಾ(Aishwarya). ಈ ವಿಷಯ ರಜನಿಕಾಂತ್​ ಅವರ ಅಭಿಮಾನಿಗಳಿಗೆ ಸಖತ್​ ಖುಷಿ ತಂದಿತ್ತು. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ನಟ ಧನುಷ್ ಜೊತೆ ದಾಂಪತ್ಯಕ್ಕೆ ದಾಂಪತ್ಯಕ್ಕೆ ಕಾಲಿಟ್ಟಿದ್ದು ದೊಡ್ಡ ಸಂಭ್ರಮವೇ ಆಗಿತ್ತು. ಧನುಷ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ ತಿಳಿಸಿದ್ದ ರಜನಿ, ಇಬ್ಬರನ್ನೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರು. 18 ವರ್ಷಗಳ ಹಿಂದೆ ಇದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. 

ಒಂದು ಪ್ರಶ್ನೆ ಕೇಳದೇ.. ಓಕೆ ಎಂದಿದ್ದ ತಲೈವಾ!

ಅಪ್ಪ ಅಂದರೆ ಆಕಾಶ ಅನ್ನುವುದು ಸುಳ್ಳಲ್ಲ. ಮಕ್ಕಳ ಸಂತಸದಲ್ಲೇ ತಾನೂ ಸಂತಸಪಡುವ ಏಕೈಕ ವ್ಯಕ್ತಿ ಅಂದರೆ ಅದು ಅಪ್ಪ. ರಜನಿಕಾಂತ್​ ಅವರು ಕೂಡ ಹಾಗೆ. ತನ್ನ ಮಗಳ ಲವ್​ ವಿಚಾರ ತಿಳಿದು ಏನು ಪ್ರಶ್ನೆ ಮಾಡಿರಲಿಲ್ಲ. ಇಬ್ಬರು ಖುಷಿಯಾಗಿರುತ್ತೀರಾ ಎಂದರೆ ಮದುವೆಯಾಗಿ ಎಂದು ತಲೈವಾ ಹೇಳಿದ್ದರಂತೆ. ಇವರಿಬ್ಬರ ಲವ್​ ವಿಚಾರ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಗಿತ್ತು. ಕೇವಲ ಆರು ತಿಂಗಳಲ್ಲಿಯೇ ಇಬ್ಬರ ಪ್ರೀತಿ ಬೆಳಕಿಗೆ ಬಂದಿತ್ತು. ಇದು ಸೂಪರ್‌ಸ್ಟಾರ್ ರಜನಿಕಾಂತ್ ಕಿವಿಗೂ ಬಿತ್ತು. ಹೀಗಾಗಿ ತಕ್ಷಣವೇ ಮಗಳ ಮದುವೆ ಮಾಡಲು ನಿರ್ಧರಿಸಿದ್ದರು. ಆಗ ಧನುಷ್‌ಗೆ ಕೇವಲ 21 ವರ್ಷ. ಐಶ್ವರ್ಯಾಗೆ 23 ವರ್ಷ. ತನ್ನ ಮಗಳಿಗಿಂತ ಎರಡು ವರ್ಷ ಚಿಕ್ಕವನಾಗಿದ್ದರೂ ರಜನಿ ಒಪ್ಪಿಗೆ ನೀಡಿದ್ದರು. ತನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು ರಜನಿಕಾಂತ್​.

ಇದನ್ನು ಓದಿ: 18 ವರ್ಷ ದಾಂಪತ್ಯ ಅಂತ್ಯಗೊಳಿಸಿದ Dhanush ಮತ್ತು ಐಶ್ವರ್ಯಾ ರಜನಿಕಾಂತ್, ಅಭಿಮಾನಿಗಳಿಗೆ ಆಘಾತ!

'ಕಾದಲ್ ಕೊಂಡೈನ್' ನೋಡಿ ಫಿದಾ ಆಗಿದ್ದ ಐಶ್ವರ್ಯಾ!

ಧನುಷ್‌ ಅಭಿನಯಿಸಿದ್ದ 'ಕಾದಲ್ ಕೊಂಡೈನ್' ಸಿನಿಮಾ ನೋಡಿ ಐಶ್ವರ್ಯಾ ಫಿದಾ ಆಗಿದ್ದರು. ಸಿನಿಮಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಹೀಗಾಗಿ ಈ ಸಿನಿಮಾವನ್ನು ನೋಡುವುದಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಕೂಡ ಬಂದಿದ್ದರು. ಈ ಸಿನಿಮಾ ನೋಡಿದ ಬಳಿಕ ಧನುಷ್ ಅಭಿನಯ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ತುಂಬಾನೇ ಇಷ್ಟ ಆಗಿತ್ತಂತೆ.  ಈ ಸಿನಿಮಾ ನೋಡಿದ ಬಳಿಕವೇ ಐಶ್ವರ್ಯಾಗೆ ಧನುಷ್​ ಮೇಲೆ ಪ್ರೀತಿ ಮೂಡಿತ್ತಂತೆ.

ಇದನ್ನು ಓದಿ: ವಿಮಾನದ ಮೇಲೂ ಈಗ ಸೋನು ಚಿತ್ರ, ತನ್ನ ಫೋಟೋ ಇರೋ ಪ್ಲೇನ್​ನಲ್ಲೇ ರಿಯಲ್ ಹೀರೋ ಪ್ರಯಾಣ!

ಪ್ರೀತಿಸಿ ಮದುವೆಯಾಗಿ ಅರೇಂಜ್ಡ್​ ಮ್ಯಾರೇಜ್​ ಎಂದಿದ್ದ ಐಶ್ವರ್ಯಾ!

ಐಶ್ವರ್ಯಾ ಧನುಷ್​ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ,2013ರಲ್ಲಿ ಐಶ್ವರ್ಯಾ ನೀಡಿದ್ದ ಸಂದರ್ಶನವೊಂದಲ್ಲಿ ಇಬ್ಬರದ್ದೂ ಲವ್ ಸ್ಟೋರಿ ಅಲ್ಲ ಅಂತ ಹೇಳಿದ್ದರು. ಮನೆಯವರು ನಿರ್ಧರಿಸಿ ಮದುವೆ ಮಾಡಿದ್ದಾರೆ ಎಂದು ಹೇಳಿದ್ದರು.ನುಷ್ ಸಹೋದರಿ ಮತ್ತು ನಾನು ಸ್ನೇಹಿತೆಯಾಗಿದ್ದೆವು. ಅಲ್ಲಿಂದ ಪರಿಚಯ ಬಿಟ್ಟರೆ. ಧನುಷ್ ಹಾಗೂ ನನ್ನ ಮದುವೆ ಲವ್ ಮ್ಯಾರೇಜ್ ಅಲ್ಲ.. ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿಕೆ ನೀಡಿದ್ದರು. 
Published by:Vasudeva M
First published: