Rathnan Prapancha Official Trailer: ರತ್ನಾಕರನ ಪ್ರಪಂಚದ ಸ್ಯಾಂಪಲ್​ ಹೇಗಿದೆ ನೋಡಿ...!

ಟ್ರೇಲರ್​ನಲ್ಲಿ ರತ್ನಾಕರನ ಮಧ್ಯಮ ವರ್ಗದ ಜೀವನ, ಅದರಲ್ಲಿ ಎದುರಾಗುವ ಸಮಸ್ಯೆಗಳನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಇನ್ನು ಅಮ್ಮ-ಮಗನ ಜೋಡಿಯ ಕಾಮಿಡಿ ನೋಡುಗರನ್ನು ಆಕರ್ಷಿಸುತ್ತಿದೆ.

ರತ್ನನ್​ ಪ್ರಪಂಚ ಸಿನಿಮಾದಲ್ಲಿ ಧನಂಜಯ ಹಾಗೂ ಶ್ರುತಿ

ರತ್ನನ್​ ಪ್ರಪಂಚ ಸಿನಿಮಾದಲ್ಲಿ ಧನಂಜಯ ಹಾಗೂ ಶ್ರುತಿ

  • Share this:
ಡಾಲಿ ಧನಂಜಯ (Dhananjaya) ಅವರ ಬಹುನಿರೀಕ್ಷಿತ ಸಿನಿಮಾ ರತ್ನನ್ ಪ್ರಪಂಚ  (Rathnan Prapancha) ಶೀರ್ಷಿಕೆ, ಪೋಸ್ಟರ್​, ಟೀಸರ್​ನಿಂದಲೇ ಸಿನಿಪ್ರಿಯರಲ್ಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಬಹುತಾರಾಗಣದ ಈ ಸಿನಿಮಾದಲ್ಲಿ ಧನಂಜಯ್ ಅವರು ರತ್ನಾಕರನಾಗಿ ಕಾಣಿಸಿಕೊಂಡಿದ್ದಾರೆ. ದಯವಿಟ್ಟು ಗಮನಿಸಿ ಸಿನಿಮಾದ ಮೂಲಕ ನಿರ್ದೇಶಕರಾದ ರೋಹಿತ್ ಪದಕಿ ಅವರು ರತ್ನನ್ ಪ್ರಪಂಚ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ ಅವರು ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾಗಿ ನಟಿಸಿದ್ದಾರೆ. ಉಮಾಶ್ರೀ ಅವರು ಧನಂಜಯ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದು, ಅಮ್ಮ-ಮಗನ ಜೋಡಿ ಸಖತ್​ ಕ್ರೇಜಿಯಾಗಿದೆ. 

ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದು ಸಿನಿಮಾ ರಿಲೀಸ್​ಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೆ ಅವರ ಅಭಿನಯದ ಸಿನಿಮಾ ‘ರತ್ನನ್ ಪ್ರಪಂಚ’ (Rathnan Prapancha) ರಿಲೀಸ್ ದಿನಾಂಕ ಪ್ರಕಟವಾಗಿದೆ. ಈ ಸಿನಿಮಾ ಇದೇ ತಿಂಗಳ 22ರಂದು ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಈ ವಿಷಯವನ್ನು ನಟ ಡಾಲಿ ಧನಂಜಯ್ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.








View this post on Instagram






A post shared by Karthik Gowda (@karthik_krg)






ಒಂದು ಈ ಸಿನಿಮಾದ ರಿಲೀಸ್​ ಡೇಟ್​ ಹೊರ ಬಿದ್ದ ಖುಷಿ ಒಂದು ಕಡೆಯಾದರೆ ಮತ್ತೊಂದು ಕಡೆ ಬೆಳ್ಳಿಪರದೆ ಬದಲಾಗಿ ಒಟಿಟಿ ಮೂಲಕ ಧನಂಜಯ್ ಅವರನ್ನು ನೋಡುವ ಬೇಸರ ಅಭಿಮಾನಿಗಳಲ್ಲಿದೆ. ಈ ವಿಷಯ ಕೊಂಚ ಅಚ್ಚರಿಯೂ ಮೂಡಿಸಿದೆ. ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಚಿತ್ರತಂಡ ಟ್ರೇಲರ್ ರಿಲೀಸ್​ ಮಾಡಿದೆ.








View this post on Instagram






A post shared by Karthik Gowda (@karthik_krg)






ಟ್ರೇಲರ್​ನಲ್ಲಿ ರತ್ನಾಕರನ ಮಧ್ಯಮ ವರ್ಗದ ಜೀವನ, ಅದರಲ್ಲಿ ಎದುರಾಗುವ ಸಮಸ್ಯೆಗಳನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಇನ್ನು ಅಮ್ಮ-ಮಗನ ಜೋಡಿಯ ಕಾಮಿಡಿ ನೋಡುಗರನ್ನು ಆಕರ್ಷಿಸುತ್ತಿದೆ. ರತ್ನಾಕರನ ಮಿಡಲ್ ಕ್ಲಾಸ್​ ಜೀವನದ ಸ್ಯಾಂಪಲ್​ ಈ ಟ್ರೇಲರ್​ನಲ್ಲಿದೆ.

ಇದನ್ನೂ ಓದಿ: Rathnan Prapancha: ಧನಂಜಯ ಅಭಿನಯದ ರತ್ನನ್​ಪ್ರಪಂಚ ಚಿತ್ರಕ್ಕೆ ಸಿಕ್ತು ಕಿಕ್​ ಸ್ಟಾರ್ಟ್​..!

ರೋಹಿತ್​ ಪದಕಿ ನಿರ್ದೇಶನದ 'ರತ್ನನ್​ ಪ್ರಪಂಚ' ಚಿತ್ರವನ್ನು ಕಾರ್ತಿಕ್​ ಹಾಗೂ ಯೋಗಿ ಜಿ. ರಾಜ್​ ಅವರು ನಿರ್ಮಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ಗೆ ನಾಯಕಿಯಾಗಿ ರೆಬಾ ಜಾನ್ ನಟಿಸುತ್ತಿದ್ದಾರೆ. ಧನಂಜಯ್​ ಅವರ ಹುಟ್ಟುಹಬ್ಬದಂದು ಫಸ್ಟ್​ಲುಕ್​ ಪೋಸ್ಟ್​ ರಿಲೀಸ್ ಮಾಡಲಾಗಿತ್ತು.

'ರತ್ನನ್​ ಪ್ರಪಂಚ' ಸಿನಿಮಾದ ಮುಹೂರ್ತ ಕಳೆದ ವರ್ಷ ನೆರವೇರಿತ್ತು. ನಿರ್ದೇಶಕ ಪ್ರಶಾಂತ್​ ನೀಲ್​ ಸಹ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕ್ಯಾಮೆರಾಗೆ ಚಾಲನೆ ನೀಡಿದ್ದರು ಹಾಗೂ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಕ್ಲಾಪ್​ ಮಾಡಿ ಶುಭ ಹಾರೈಸಿದ್ದರು.

ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಡವ ರಾಸ್ಕಲ್​, ಮಾನ್ಸೂನ್ ರಾಗ, ಟ್ವೆಂಟಿ ಒನ್ ಹಾರ್ಸ್​ ಸೇರಿದಂತೆ ಹೆಡ್​ ಬುಷ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಧನಂಜಯ್ ಅಭಿನಯದ ಹೆಡ್​ ಬುಷ್​ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್​ವುಡ್​ ಕಡೆ ಮುಖ ಮಾಡಿದ್ದಾರೆ. ಹೌದು, ಹೆಡ್ ಬುಷ್​ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ಶ್ರುತಿ ಹರಿಹರನ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Rathnan Prapancha: ಧನಂಜಯ ಅಭಿನಯದ ರತ್ನನ್​ಪ್ರಪಂಚ ಚಿತ್ರಕ್ಕೆ ಸಿಕ್ತು ಕಿಕ್​ ಸ್ಟಾರ್ಟ್​..!

ಹೆಡ್ ಬುಷ್ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಶೂನ್ಯ ಅವರು ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೆಡ್​ ಬುಷ್​ ಸಿನಿಮಾ ಧನಂಜಯ್ ಅವರ ಹೋಮ್ ಬ್ಯಾನರ್ ಡಾಲಿ ಪ್ರೊಡಕ್ಷನ್​ನಲ್ಲಿ ನಿರ್ಮಾಣವಾಗುತ್ತಿದೆ.ಬೆಂಗಳೂರಿನ ಮೊದಲ ಭೂಗತ ಲೋಕದ ಡಾನ್​ ಆಗಿದ್ದ ಎಂ. ಪಿ. ಜಯರಾಜ್​ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಹೀಗಾಗಿಯೇ ಈ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.ಮದುವೆ ಹಾಗೂ ಮಗು ಅಂತ ಕುಟುಂಬದ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದ ಶ್ರುತಿ ಈಗ ಮತ್ತೆ ಸ್ಯಾಂಡಲ್​ವುಡ್​ ಸಿನಿಮಾದತ್ತ ಗಮನ ಹರಿಸಿದ್ದಾರೆ. ಹೆಡ್ ಬುಷ್​ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಮತ್ತೆ ಕಮ್​ ಬ್ಯಾಕ್​ ಮಾಡುತ್ತಿದ್ದಾರೆ.
Published by:Anitha E
First published: