ಡಾಲಿ ಧನಂಜಯ ಅಭಿನಯದ Rathnan Prapancha ಸಿನಿಮಾ ಒಟಿಟಿಯಲ್ಲಿ ರಿಲೀಸ್​: ದಿನಾಂಕ ಪ್ರಕಟಿಸಿದ ಚಿತ್ರತಂಡ

ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರತ್ನನ್​ ಪ್ರಪಂಚ' ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.

ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರತ್ನನ್​ ಪ್ರಪಂಚ' ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.

ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರತ್ನನ್​ ಪ್ರಪಂಚ' ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.

  • Share this:
ಸ್ಯಾಂಡಲ್​ವುಡ್​ನಲ್ಲಿ ನಾಯಕನಾಗಿ ನಟಿಸಿದರೂ ಈ ನಟನಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ವಿಲನ್ ಪಾತ್ರ. ಹೀಗಾಗಿಯೇ ಆ ಪಾತ್ರದ ಹೆಸರಿನಿಂದಲೇ ತುಂಬಾ ಜನರು ಇವರನ್ನು ಗುರುತಿಸುತ್ತಾರೆ. ಅವರೇ ಡಾಲಿ ಧನಂಜಯ್ (Dhananjaya)​. ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದು ಸಿನಿಮಾ ರಿಲೀಸ್​ಗೆ ಸಜ್ಜಾಗುತ್ತಿದೆ. ಹೀಗಿರುವಾಗಲೇ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ  ‘ರತ್ನನ್ ಪ್ರಪಂಚ’ (Rathnan Prapancha) ರಿಲೀಸ್ ದಿನಾಂಕ ಪ್ರಕಟವಾಗಿದೆ. ಒಂದು ಕಡೆ ಅಭಿಮಾನಿಗಳಿಗೆ ಖುಷಿಯ ವಿಷಯವಾದರೂ ಈ ವಿಷಯ ಕೊಂಚ ಅಚ್ಚರಿ ಮೂಡಿಸಿದೆ. ಹೌದು, ಅದಕ್ಕೂ ಕಾರಣವಿದೆ. ಡಾಲಿ ಧನಂಜಯ್ ಅವರು ಈ ಸಿನಿಮಾ ಚಿತ್ರಮಂದಿರದ ಬದಲಾಗಿ ಒಟಿಟಿಯಲ್ಲಿ ತೆರೆ ಕಾಣಲಿದೆ. 

ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರತ್ನನ್​ ಪ್ರಪಂಚ' ಚಿತ್ರದ ಟ್ರೇಲರ್​, ಪೋಸ್ಟರ್​ಗಳು ರಿಲೀಸ್ ಆಗಿದ್ದು, ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಈಗ ಈ ಸಿನಿಮಾ ಇದೇ ತಿಂಗಳ 22ರಂದು ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಈ ವಿಷಯವನ್ನು ನಟ ಡಾಲಿ ಧನಂಜಯ್ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


View this post on Instagram


A post shared by Dhananjaya (@dhananjaya_ka)


'ರತ್ನನ್​ ಪ್ರಪಂಚ' ಸಿನಿಮಾದ ರಿಲೀಸ್​ ಕುರಿತಾಗಿ ಪೋಸ್ಟ್​ ಮಾಡಲಾಗಿದ್ದು, ಈ ಸಿನಿಮಾದಲ್ಲಿ 9 ಪಾತ್ರಗಳು ಹಾಗೂ ಒಂದು ಆಸಕ್ತಿಕರ ಸ್ಠೋರಿ ಅನ್ನೋ ಶೀರ್ಷಿಕೆಯನ್ನು ಅಮೆಜಾನ್ ಪ್ರೈಂ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದೆ.ರೋಹಿತ್​ ಪದಕಿ ನಿರ್ದೇಶನದ 'ರತ್ನನ್​ ಪ್ರಪಂಚ' ಚಿತ್ರವನ್ನು ಕಾರ್ತಿಕ್​ ಹಾಗೂ ಯೋಗಿ ಜಿ. ರಾಜ್​ ಅವರು ನಿರ್ಮಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ಗೆ ನಾಯಕಿಯಾಗಿ ರೆಬಾ ಜಾನ್ ನಟಿಸುತ್ತಿದ್ದಾರೆ. ಧನಂಜಯ್​ ಅವರ ಹುಟ್ಟುಹಬ್ಬದಂದು ಫಸ್ಟ್​ಲುಕ್​ ಪೋಸ್ಟ್​ ರಿಲೀಸ್ ಮಾಡಲಾಗಿತ್ತು.

ಇದನ್ನೂ ಓದಿ: Stop Hindi Imposition: ಹಿಂದಿ ಹೇರಿಕೆ ಸಲ್ಲದು ಎಂದ ನಟ ಧನಂಜಯ್​-ನಿರ್ದೇಶಕ ಸಿಂಪಲ್​ ಸುನಿ..!

'ರತ್ನನ್​ ಪ್ರಪಂಚ' ಸಿನಿಮಾದ ಮುಹೂರ್ತ ಕಳೆದ ವರ್ಷ ನೆರವೇರಿತ್ತು.  ನಿರ್ದೇಶಕ ಪ್ರಶಾಂತ್​ ನೀಲ್​ ಸಹ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕ್ಯಾಮೆರಾಗೆ ಚಾಲನೆ ನೀಡಿದ್ದರು ಹಾಗೂ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಕ್ಲಾಪ್​ ಮಾಡಿ ಶುಭ ಹಾರೈಸಿದ್ದರು.

ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಡವ ರಾಸ್ಕಲ್​, ಮಾನ್ಸೂನ್ ರಾಗ, ಟ್ವೆಂಟಿ ಒನ್ ಹಾರ್ಸ್​ ಸೇರಿದಂತೆ ಹೆಡ್​ ಬುಷ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಧನಂಜಯ್ ಅಭಿನಯದ ಹೆಡ್​ ಬುಷ್​ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್​ವುಡ್​ ಕಡೆ ಮುಖ ಮಾಡಿದ್ದಾರೆ. ಹೌದು, ಹೆಡ್ ಬುಷ್​ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ಶ್ರುತಿ ಹರಿಹರನ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Dhananjaya: ಸೂಲಿಬೆಲೆ ವಿವಾದ: ಸುಂದರ ಕವಿತೆ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ ಡಾಲಿ ಧನಂಜಯ್

ಹೆಡ್ ಬುಷ್ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಶೂನ್ಯ ಅವರು ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೆಡ್​ ಬುಷ್​ ಸಿನಿಮಾ ಧನಂಜಯ್ ಅವರ ಹೋಮ್ ಬ್ಯಾನರ್ ಡಾಲಿ ಪ್ರೊಡಕ್ಷನ್​ನಲ್ಲಿ ನಿರ್ಮಾಣವಾಗುತ್ತಿದೆ.ಬೆಂಗಳೂರಿನ ಮೊದಲ ಭೂಗತ ಲೋಕದ ಡಾನ್​ ಆಗಿದ್ದ ಎಂ. ಪಿ. ಜಯರಾಜ್​ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಹೀಗಾಗಿಯೇ ಈ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.ಮದುವೆ ಹಾಗೂ ಮಗು ಅಂತ ಕುಟುಂಬದ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದ ಶ್ರುತಿ ಈಗ ಮತ್ತೆ ಸ್ಯಾಂಡಲ್​ವುಡ್​ ಸಿನಿಮಾದತ್ತ ಗಮನ ಹರಿಸಿದ್ದಾರೆ. ಹೆಡ್ ಬುಷ್​ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಮತ್ತೆ ಕಮ್​ ಬ್ಯಾಕ್​ ಮಾಡುತ್ತಿದ್ದಾರೆ.
Published by:Anitha E
First published: