Dhananjay: ನಟ ಧನಂಜಯ್​ಗೆ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಸ್ಪೆಷಲ್​ ವಿಶ್; ಡಾಲಿ ಅಭಿಮಾನಿಗಳಿಗೆ ಬರ್ತಡೇ ಗಿಫ್ಟ್​!

ಹುಟ್ಟುಹಬ್ಬ ಸಂಭ್ರಮದಲ್ಲೇ 'ಉತ್ತರಕಾಂಡ' ಎನ್ನುವ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಸಿನಿಮಾ ತೆರೆಗೆ ಬರ್ತಿದ್ದು, ಡಾಲಿ ಧನಂಜಯ್ ಬರ್ತಡೇ ದಿನವೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಧನಂಜಯ್ ಮೂವಿ ಪೋಸ್ಟರ್​

ಧನಂಜಯ್ ಮೂವಿ ಪೋಸ್ಟರ್​

  • Share this:
ನಟ ಡಾಲಿ ಧನಂಜಯ್ (Dhananjay) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪುನೀತ್​ ರಾಜ್​ ಕುಮಾರ್ (Puneeth Rajkumar)​ ಅಗಲಿಕೆಯಿಂದ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ವಿಡಿಯೋ ಸಂದೇಶ ನೀಡಿದ್ದ ಧನಂಜಯ್​ ಅವರಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕವೇ ಶುಭಾಶಯಗಳನ್ನು ತಿಳಿಸಿದ್ದಾರೆ. ಸದ್ಯ ಧನಂಜಯ್ ಕೈಯಲ್ಲಿ ಏಳಕ್ಕೂ ಹೆಚ್ಚು ಸಿನಿಮಾಗಳು ಇವೆ. ಸ್ಯಾಂಡಲ್​ವುಡ್​ನ ಬ್ಯುಸಿ ಹೀರೋಗಳ ಪೈಕಿ ಧನಂಜಯ್ ಕೂಡ ಒಬ್ಬರು. ಹುಟ್ಟುಹಬ್ಬ ಸಂಭ್ರಮದಲ್ಲೇ 'ಉತ್ತರಕಾಂಡ' ಅನ್ನುವ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಸಿನಿಮಾ ತೆರೆಗೆ ಬರ್ತಿದ್ದು, ಡಾಲಿ ಧನಂಜಯ್ ಬರ್ತಡೇ ದಿನವೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಕೆಆರ್‌ಜಿ ಬ್ಯಾನರ್‌ನಲ್ಲಿ ಉತ್ತರಕಾಂಡ

ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಉತ್ತರಕಾಂಡ ಸಿನಿಮಾ ನಿರ್ಮಾಣವಾಗಲಿದೆ. ಕಳೆದ ವರ್ಷವೇ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ ಯಾರು ಹೀರೊ ಆಗಿ ನಟಿಸ್ತಾರೆ ಅನ್ನುವುದು ಪಕ್ಕಾ ಆಗಿರಲಿಲ್ಲ. ಡಾಲಿ ಬರ್ತ್‌ಡೇಗೆ ಸಿನಿಮಾ ಘೋಷಿಸಿ ಕೆಆರ್‌ಜಿ ಬ್ಯಾನರ್ ಸರ್‌ಪ್ರೈಸ್‌ ಕೊಟ್ಟಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಉತ್ತರದ ದರೋಡೆಕೋರರ ಕಥೆ ಇದಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಬೇಕಿತ್ತು. ಧನಂಜಯ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಕೆಆರ್‌ಜಿ ಸಂಸ್ಥೆಯ 'ಹೊಯ್ಸಳ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಹಾಗಾಗಿ ಉತ್ತರಕಾಂಡ ಸಿನಿಮಾ ತಡವಾಗುತ್ತಿದೆ.

ಕೆಆರ್‌ಜಿ ಕಾಂಬಿನೇಷನ್‌ನಲ್ಲಿ ಇದು 2ನೇ ಚಿತ್ರ

ಧನಂಜಯ್‌, ರೋಹಿತ್ ಪದಕಿ ಹಾಗೂ ಕೆಆರ್‌ಜಿ ಕಾಂಬಿನೇಷನ್‌ನಲ್ಲಿ ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಸಕ್ಸಸ್ ಕಂಡಿತ್ತು.  ರತ್ನನ್ ಪ್ರಪಂಚ ಚಿತ್ರವನ್ನು ಓಟಿಟಿಯಲ್ಲಿ ನೋಡಿದವರೆಲ್ಲಾ ಸಿನಿಮಾ ಕುರಿತು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ರು. ಡಾಲಿಯನ್ನು ಮಾಸ್​ ಲುಕ್​ನಲ್ಲಿ ನೋಡಿದ ​ ಪ್ರೇಕ್ಷಕರಿಗೆ, ಮಿಡಲ್ ಕ್ಲಾಸ್​ ಯುವಕನ ಪಾತ್ರದಲ್ಲೂ ಧನಂಜಯ್ ಇಷ್ಟವಾದ್ರು. ವಿಮರ್ಶಕರು ಸಹ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಉತ್ತರಕಾಂಡ ಪೋಸ್ಟರ್​ನಲ್ಲಿ ಡಾಲಿ ಖಡಕ್ ಲುಕ್​

'ರತ್ನನ್ ಪ್ರಪಂಚ'ದಲ್ಲಿ ಡಾಲಿ ಧನಂಜಯ್​ರನ್ನು ಮುಗ್ಧ ರತ್ನಾಕರನಾಗಿದ್ದ ತೋರಿಸಿದ್ದ ರೋಹಿತ್ ಪದಕಿ 'ಉತ್ತರಕಾಂಡ' ಚಿತ್ರದಲ್ಲಿ ಸಿಕ್ಕಾಪಟ್ಟೆ ಖಡಕ್‌ ರೋಲ್‌ನಲ್ಲಿ ತೋರಿಸೋಕೆ ಹೊರಟಿದ್ದಾರೆ. 'ಇನ್ ಮ್ಯಾಲಿಂದ ಫುಲ್ ಗುದ್ದಾಂ ಗುದ್ದಿ' ಅನ್ನುವ ಟ್ಯಾಗ್‌ಲೈನ್ ಕೊಟ್ಟು 'ಉತ್ತರಕಾಂಡ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಡೆದ ಸನ್‌ಗ್ಲಾಸ್, ಒಮ್ಮೆಲೆ ಬೀಡಿ ಹಾಗೂ ಸಿಗಾರ್ ಸೇದುತ್ತಾ ರಕ್ತಸಿಕ್ತ ಮುಖದಲ್ಲಿ ಧನಂಜಯ್‌ನ ತೋರಿಸಲಾಗಿದೆ. ಉದ್ದನೆಯ ಗಡ್ಡ ಬಿಟ್ಟು ಸಿಕ್ಕಾಪಟ್ಟೆ ಡಾಲಿ ರಗಡ್‌ ಲುಕ್‌ನಲ್ಲಿರುವ 'ಉತ್ತರಕಾಂಡ' ಪೋಸ್ಟರ್ ವೈರಲ್ ಆಗಿದೆ.

ಇದನ್ನೂ ಓದಿ: Top Heroes: ದಾಖಲೆ ಬರೆದ ರಾಕಿಂಗ್ ಸ್ಟಾರ್! ಭಾರತದ ಟಾಪ್​ ಹೀರೋಗಳ ಪಟ್ಟಿಯಲ್ಲಿ ಯಶ್​ಗೆ ಎಷ್ಟನೇ ಸ್ಥಾನ?

ಡಾಲಿ ಧನಂಜಯ್​ಗೆ ರಮ್ಯಾ ಸ್ಪೆಷಲ್ ವಿಶ್​​

ನಟ ಧನಂಜಯ್​ಗೆ ಟ್ವೀಟ್​ ಮಾಡೋ ಮೂಲಕ ರಮ್ಯಾ ಶುಭಾಶಯ ತಿಳಿಸಿದ್ದಾರೆ. Happy Birthday Dhanu ಎಂದು ಸ್ವೀಟ್​ ಆಗಿ ನಟಿ ರಮ್ಯಾ ವಿಶ್​ ಮಾಡಿದ್ದಾರೆ. ಉತ್ತರಕಾಂಡ  ಪೋಸ್ಟರ್‌ ನೋಡಿ ಸ್ಯಾಂಡಲ್‌ವುಡ್ ಕ್ವೀನ್ ಮೆಚ್ಚುಗೆ ವ್ಯಕ್ತಪಡಿಸಿ ಪೊಸ್ಟರ್​ ಶೇರ್ ಮಾಡಿದ್ದಾರೆ. ಈ ಹಿಂದೆ ಧನು ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನೋಡಿ ರಮ್ಯಾ ಕೊಂಡಾಡಿದ್ದರು. ಇತ್ತೀಚೆಗೆ ಧನಂಜಯ್ ನಟನೆಯ 'ಹೊಯ್ಸಳ' ಸಿನಿಮಾ ಸೆಟ್‌ಗೂ ಭೇಟಿ ಕೊಟ್ಟಿದ್ದರು. ಇನ್ನು ಧನು- ರೋಹಿತ್ ಪದಕಿ ಜೋಡಿಯ 'ಉತ್ತರಕಾಂಡ' ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.
Published by:Pavana HS
First published: