ಡಾಲಿ ಧನಂಜಯ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದ್ಯ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಲಗ ಹಾಗೂ ಬಡವ ರಾಸ್ಕಲ್ ತೆರೆಗೆ ಬರಲು ಸಿದ್ಧವಾಗಿವೆ. ಆದರೆ ಲಾಕ್ಡೌನ್ನಿಂದಾಗಿ ಸದ್ಯಕ್ಕೆ ಯಾವ ಹೊಸ ಸಿನಿಮಾಗಳೂ ತೆರೆಗೆ ಬರುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ಸ್ಯಾಂಡಲ್ವುಡ್ನಲ್ಲಿ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಹೌದು, ಶಿವರಾಜ್ಕುಮಾರ್, ಧನಂಜಯ್ ಹಾಗೂ ಪೃಥ್ವಿ ಅಂಬರ್ ಅಭಿನಯದ ಹೊಸ ಸಿನಿಮಾ ಇತ್ತೀಚೆಗಷ್ಟೆ ಅನೌನ್ಸ್ ಆಗಿತ್ತು. ವಿಜಯ್ ಮಿಲ್ಟನ್ ನಿರ್ದೇಶನದ ಈ ಹೊಸ ಸಿನಿಮಾ ಬಗ್ಗೆ ಧನಂಜಯ್ ಸಹ ಖುಷಿಯಿಂದ ಪೋಸ್ಟ್ ಮಾಡಿದ್ದರು. ನಿನ್ನೆಯಷ್ಟೆ ಈ ಸಿನಿಮಾದ ಟೈಟಲ್ ಪ್ರಕಟಿಸುವುದರ ಜೊತೆಗೆ ಮುಹೂರ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಆದರೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಡಾಲಿ ಧನಂಜಯ್ ಮಾತ್ರ ಗೈರಾಗಿದ್ದರು.
ಶಿವಪ್ಪನಾಗಿ ಶಿವರಾಜ್ಕುಮಾರ್ ಕಾಣಿಸಿಕೊಳ್ಳಲಿರುವ ಸಿನಿಮಾದ ಮುಹೂರ್ತ ನಿನ್ನೆಯಷ್ಟೆ ನೆರವೇರಿದೆ. ಈ ವೇಳೆ ಧನಂಜಯ್ ಭಾಗಿಯಾಗಿರಲಿಲ್ಲ. ಅದಕ್ಕಾಗಿ ಬೇಸರದಿಂದ ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
View this post on Instagram
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ